ಎಕ್ವಡೊರ್ ಧರ್ಮಸಭೆಯಿಂದ ಗರ್ಭಪಾತವಾದ ಅನಾಥ ಶಿಶುಗಳ ಅಂತ್ಯಸಂಸ್ಕಾರ


ಎಕ್ವಡೊರ್ ನ ಕ್ವಿಟೊ ಧರ್ಮಕ್ಷೇತ್ರವು ಪೆÇೀಷಕರು ತೊರೆದ ಗರ್ಭಪಾತವಾದ ಅನಾಥ ಶಿಶುಗಳ ಕ್ರೈಸ್ತ ಅಂತ್ಯ ಸಂಸ್ಕಾರ ಕಾರ್ಯವನ್ನು ಕೈಗೊಂಡಿದೆ.

ವ್ಯಾಟಿಕನ್ ನ್ಯೂಸ್ ಸಿಬ್ಬಂಧಿ ವರದಿಗಾರನಿಂದ

2017 ರಿಂದ ಇದುವರೆಗೂ ಎಕ್ವಡೊರ್‍ನಲ್ಲಿ, ಗರ್ಭಪಾತಗೊಂಡ 116 ಮುಗ್ಧ ಅನಾಥ ಶಿಶುಗಳು “ಬೇಬೀಸ್ ಇನ್ ಹೆವನ್” ಯೋಜನೆಯ ಮೂಲಕ ಗೌರವಾನ್ವಿತ ಅಂತ್ಯ ಸಂಸ್ಕಾರವನ್ನು ಪಡೆದುಕೊಂಡಿವೆ.

ಕ್ವಿಟೊ ಧರ್ಮಕ್ಷೇತ್ರದ ಈ ಕಾರ್ಯವನ್ನು ಎಕ್ವಡೊರ್‍ನ ರಾಷ್ಟ್ರೀಯ ಪೆÇಲೀಸ್ ಇಲಾಖೆಯ ಕಾನೂನು ಔಷಧ ಮತ್ತು ವಿಧಿವಿಜ್ಞಾನ ವಿಭಾಗದ ಸಂಯೋಗದಲ್ಲಿ ನಡೆಸಲಾಗುತ್ತಿದೆ.

ಅನಾಥ ಶಿಶುಗಳು

ಧರ್ಮಕ್ಷೇತ್ರದ ಪ್ರಕಾರ, ಅಂತ್ಯ ಸಂಸ್ಕಾರ ಪಡೆದ ಈ ಗರ್ಭಪಾತಗೊಂಡ ಅನಾಥ ಶಿಶುಗಳ ದೇಹಗಳನ್ನು ಹಲವಾರು ವರ್ಷಗಳಿಂದ ಇಲಾಖೆಯು ಇರಿಸಿಕೊಂಡಿತ್ತು. ರಾಜಧಾನಿಯ ಬೀದಿಗಳಲ್ಲಿ ಎಸೆದದ್ದೂ ಸೇರಿದಂತೆ, ಇನ್ನೂ ಕೆಲವು ದೇಹಗಳು ವಿವಿಧ ಸಂದರ್ಭಗಳಲ್ಲಿ ಪತ್ತೆಯಾಗಿದ್ದವು.

ಕ್ವಿಟೊದ ದಕ್ಷಿಣ ಭಾಗದಲ್ಲಿರುವ ಸಾಂತ ರೋಸ ಪಾರ್ಕ್‍ನ ಸ್ಯಾಂಟೋ ಜರ್ದಿನ್ಸ್‍ನಲ್ಲಿ ಈ ಶಿಶುಗಳನ್ನು ಸಮಾಧಿ ಮಾಡಲಾಗಿದೆ.

2017 ರಲ್ಲಿ “ಬೇಬೀಸ್ ಇನ್ ಹೆವನ್” ಯೋಜನೆಯನ್ನು ಪ್ರಾರಂಭಿಸಿದಾಗ, 51 ಶಿಶುಗಳನ್ನು ಸಮಾಧಿ ಮಾಡಲಾಯಿತು, 2018ರಲ್ಲಿ ಇನ್ನೂ 40 ಶಿಶುಗಳನ್ನು ಗೌರವಯುತವಾಗಿ ಸಮಾಧಿ ಮಾಡಲಾಯಿತು.

ಪ್ರತಿ ಮನಷ್ಯ ಜೀವದ ಮೌಲ್ಯ

ಗರ್ಭಪಾತಗೊಂಡ ಇನ್ನೂ 25 ಅನಾಥ ಶಿಶುಗಳ ಅಂತ್ಯ ಸಂಸ್ಕಾರವನ್ನು ಧರ್ಮಾಧ್ಯಕ್ಷ ಡ್ಯಾನಿಲೊ ಎಚೆವರಿಯ ಇತ್ತೀಚೆಗೆ ನೆರವೇರಿಸಿದರು.

"ಜೀವಗಳು, ಅದರಲ್ಲೂ ಮುಗ್ಧ, ರಕ್ಷಣೆಯಿಲ್ಲದ ಜೀವಿಗಳ ಜೀವವು ಲೆಕ್ಕಾಚಾರದ ಸರಕಾಗಿ ಮಾರ್ಪಟ್ಟಿದ್ದು, ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳಲಾರಂಭಿಸಿದೆ” ಎಂದು ಕ್ವಿಟೊದ ಸಹಾಯಕ ಧರ್ಮಾಧ್ಯಕ್ಷರು ಹೇಳಿದರು.


"ನಾವು ದುಬಾರಿಯಾದ ಹಾಗೂ ಹೆಚ್ಚಿನ ಆರ್ಥಿಕ ಮೌಲ್ಯ ಹೊಂದಿರುವ ವಸ್ತುಗಳನ್ನು ಮಾತ್ರ ಗೌರವಿಸುತ್ತಾ, ಉಚಿತ ಉಡುಗೊರೆಯಾಗಿ ದೊರಕಿರುವುದನ್ನು ಹಿಂದಿನ ಸಾಲಿನಲ್ಲಿ ಉಳಿಸಿಕೊಳ್ಳುತ್ತಿರುವುದು ಇಂದಿನ ಜಗತ್ತಿನ ನೋವಿನ ವಾಸ್ತವಗಳಲ್ಲಿ ಒಂದು” ಎನ್ನುವುದರ ಮೇಲೆ ಅವರು ಒತ್ತು ನೀಡಿದರು.

ಮುಗ್ದ ಜೀವಿಗಳ ಹಕ್ಕೊತ್ತಾಯ

ತಮ್ಮ ಪ್ರಭೋದನೆಯಲ್ಲಿ, ಬಿಷಪ್ ಎಚೆವರಿಯರವರು “ಬೇಬೀಸ್ ಇನ್ ಹೆವೆನ್” ಯೋಜನೆಯಲ್ಲಿ ಭಾಗಿಯಾಗಿರುವವರನ್ನು ಶ್ಲಾಘಿಸಿದರು.

“ತನ್ನ ಹಕ್ಕುಗಳನ್ನು ಮಂಡಿಸಲು ಧ್ವನಿಯಿಲ್ಲದ ಮತ್ತು ತಮ್ಮ ಇರುವಿಕೆಯ ಬಗ್ಗೆ ಗಮನ ಸೆಳೆಯಲಾಗದ ಮಾನವ ಜೀವಿಗಳ ಹಕ್ಕುಗಳನ್ನು ಪ್ರತಿಪಾದಿಸಲು ವಿಶಾಲ ಹೃದಯ ಮತ್ತು ಆಳವಾದ ಘನತೆಯ ಪ್ರಜ್ಞೆಯುಳ್ಳ ಜನರ ಅಗತ್ಯವಿದೆ. ಈ ಜಗದೊಳಗೆ ಬರಲು ಪಡೆದಿರುವ ಈ ಅಸಾಧಾರಣ ಉಡುಗೊರೆಯನ್ನು ಪ್ರತಿಪಾದಿಸಲು ಸಹ ಈ ಕಾರ್ಯಗಳ ಅಗತ್ಯವಿದೆ” ಎಂದರು.

ಬಲಿಪೂಜೆಯನ್ನು ಮುಕ್ತಾಯಗೊಳಿಸುತ್ತಾ, ಕ್ವಿಟೊದ ಸಹಾಯಕ ಧರ್ಮಾಧ್ಯಕ್ಷರು “ಮಾನವ ಜೀವವು ಪವಿತ್ರವಾಗಿದೆ ಹಾಗೂ ಯಾವುದೇ ವ್ಯಕ್ತಿಯ, ಅದರಲ್ಲೂ ಒಂದು ಮುಗ್ದ ಮಗುವಿನ ಘನತೆಯ ಉಲ್ಲಂಘನೆಯಾಗಬಾರದು" ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಎಕ್ವಡೊರ್‍ನ ಜನರ ಹೃದಯವನ್ನು ಪರಿವರ್ತಿಸಿರಿ ಎಂದು ದೇವರಲ್ಲಿ ಕೇಳಿಕೊಂಡರು.

28 ಮೇ 2021, 13:02

ಕನ್ನಡಕ್ಕೆ: ಪ್ರಶಾಂತ್ ಇಗ್ನೇಷಿಯಸ್

23 views0 comments