ಕಥೋಲಿಕ ಸಂಸ್ಥೆಗಳು ಧರ್ಮಾಧ್ಯಕ್ಷರುಗಳ ಪಾಲನಾ ನೈತಿಕ ನಾಯಕತ್ವವನ್ನು ಅಪೇಕ್ಷಿಸುತ್ತವೆ.


ಯು.ಎಸ್, ಮೆಕ್ಸಿಕೊ ಮತ್ತು ಮಧ್ಯ ಅಮೇರಿಕದಲ್ಲಿನ ಜನರ ವಲಸೆಯ ವಿಚಾರವಾಗಿ ಹಲವಾರು ಕಥೋಲಿಕ ಸಂಸ್ಥೆಗಳು ಕಥೋಲಿಕ ಧರ್ಮಾಧ್ಯಕ್ಷರುಗಳು ತುರ್ತು ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸುತ್ತಿವೆ.


ವ್ಯಾಟಿಕನ್ ನ್ಯೂಸ್‌ನ ಸಿಬ್ಬಂದಿ ಬರಹಗಾರರಿಂದ.


ಯು.ಎಸ್, ಮೆಕ್ಸಿಕೊ ಮತ್ತು ಮಧ್ಯ ಅಮೇರಿಕದಲ್ಲಿನ ಸುಮಾರು ೧೬೨ ಕಥೋಲಿಕ ಸಂಸ್ಥೆಗಳು, ತಮ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ವಲಸೆ ಹಾಗು ಪಲಾಯನದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರುಗಳಿಗೆ ನಮ್ಮ ಸಹೋದರ ಸಹೋದರಿಯರ ಕೂಗಿಗೆ ತಮ್ಮ ದಿಟ್ಟ ನಾಯಕತ್ವದೊಂದಿಗೆ ಪ್ರತಿಕ್ರಿಯಿಸುವಂತೆ ಕೇಳಕೊಳ್ಳುತ್ತಿವೆ.


ಹಲವಾರು ಸಂಸ್ಥೆಗಳ ಒಕ್ಕೂಟವು ಒಮ್ಮತದಿಂದ ಸಹಿಮಾಡಿದ ಪತ್ರದಲ್ಲಿ, ಯು.ಎಸ್ ನ ಧರ್ಮಾಧ್ಯಕ್ಷರುಗಳು, ಮೆಕ್ಸಿಕೊದ ಕಾರ್ಡಿನಲ್ ರೊಗೇಲಿಯೊ ಕ್ಯಾಬ್ರೆರಾ ಲೊಪೇಜ್ ಗ್ವಾಟೆಮಾಲದ ಮಹಾಧರ್ಮಾಧ್ಯಕ್ಷ ಗುನ್ಸಾಲೋ ಡೆ ವಿಲ್ಲಾ ವ್ಯಾಸ್ಕೇಜ, ಹೊಂದುರಸ್‌ನ ಮಹಾಧರ್ಮಾಧ್ಯಕ್ಷ ಏಂಜೆಲ್ ಗರಾಚನಾ ಪರೇಜ ಮತ್ತು ಎಲ್ ಸೆಲ್ವಡೋರ್‌ನ ಮಹಾಧರ್ಮಾಧ್ಯಕ್ಷ ಜೋಸ್ ಲುಯೀಸ್ ಎಸ್ಕೋಬರ್ ಅಲಾಸ್ ಹಾಗು ಹಲವಾರು ಧರ್ಮಾಧ್ಯಕ್ಷರಲ್ಲಿ ಮನವಿ ಸಲ್ಲಿಸಲಾಯಿತು.


ಯು.ಎಸ್‌ನಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ವಲಸಿಗರ ನೋವು ಹಾಗು ದುಖ಼ವನ್ನು ನಿವಾರಿಸುವ ನಿಟ್ಟಿನಲ್ಲಿ, ವಲಸೆಯ ಮೂಲ ಕಾರಣಗಳನ್ನು ಮಾನವೀಯವಾಗಿ ಪರಿಹರಿಸಿ ಅವರನ್ನು ಪೌರತ್ವವದ ಹಾದಿಯಲ್ಲಿ ನಡೆಯುವಂತೆ ಮಾಡುವ ಯು.ಎಸ್‌ನ ಗುರಿಯನ್ನು ಸಂಸ್ಥೆಗಳು ಎತ್ತಿ ತೋರಿಸುತ್ತಿವೆ.


ಈ ಬೇಸಿಗೆ ಹಾಗು ಶರತ್ಕಾಲದಲ್ಲಿ ಕಥೋಲಿಕ ವಲಸೆಯ ಆಧ್ಯತೆಗಳಲ್ಲಿ ಪ್ರಗತಿ ಸಾಧಿಸುವ ಒಂದು ಉತ್ತಮ ಅವಕಾಶವಿದೆ, ಈ ಮಹತ್ವದ ಕಾರ್ಯಕ್ಕೆ ಪಾಲನೆಯುಳ್ಳ ಹಾಗು ನೈತಿಕ ನಾಯಕತ್ವದ ಬೆಂಬಲ ಅವಶ್ಯಕ ಮತ್ತು ಈ ಯೋಜನೆಯ ನಿಟ್ಟಿನಲ್ಲಿ ದೇವಾಲಯಗಳ ಪ್ರಾದೇಶಿಕ, ಜಾಗತಿಕ ಐಕ್ಯತೆಯ ಅವಶ್ಯಕತೆಯೂ ಇದೆಯೆಂದು ವಿಶ್ಲೇಶಿಸಲಾಗಿದೆ.