ಕಡಿಮೆ ಮತ್ತು ಮಧ್ಯಮ -ಆದಾಯದ ದೇಶಗಳಲ್ಲಿ ೮೦೦ ದಶಲಕ್ಷಕ್ಕೂ ಹೆಚ್ಚಿನ ಸಂಬಂಧಿಕರನ್ನು ಬೆಂಬಲಿಸಲು ೨೦೦ ದಶಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಕುಟುಂಬ ಹಣ ರವಾನೆಯಲ್ಲಿ ಪ್ರತಿ ವರ್ಷ ಟ್ರಿಲಿಯನ್ ಡಾಲರ್ ಗಳನ್ನು ಕಳುಹಿಸಲಾಗುತ್ತದೆ.
ರಾಬಿನ್ ಗೇಮ್ಸ್ ರವರಿಂದ
ವಿಶ್ವಸಂಸ್ಥೆಯ ಕಾರ್ಯದರ್ಶಿ - ಜನರಲ್ ಆಂಟೋನಿಯೋ ಗುಟೆರೆಸ್ ಬುಧವಾರ ಕುಟುಂಬ ಹಣ ರವಾನೆಯ ಅಂತರಾಷ್ಟ್ರೀಯ ದಿನಾಚರಣೆಯ ತಮ್ಮ ಸಂದೇಶದಲ್ಲಿ, ಕೋವಿಡ್-೧೯ ಸಾಂಕ್ರಾಮಿಕದ ನಕರಾತ್ಮಕ ಪ್ರಭಾವದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ, ವಿಶ್ವಾದಾದ್ಯಂತ ಕುಟುಂಬಗಳಿಗೆ ಸಹಾಯ ಹಸ್ತ ನೀಡುವ ನಿರೀಕ್ಷೆಗಿಂತ ಹೆಚ್ಚು ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಸಾಬೀತಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ ವಲಸಿಗರ ತ್ಯಾಗದಿಂದಾಗಿ " ತಮ್ಮ ಕುಟುಂಬದ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಿ, ವೈಯಕ್ತಿಕ ಬಳಕೆಯನ್ನು ಮೊಟಕುಗೊಳಿಸಿ ಉಳಿತಾಯದ ಮೇಲೆ ನಿಗಾವಹಿಸಲಾಗಿದೆ." ಹಾಗಾಗಿ ಯುಎನ್ ಜನರಲ್ ಅಸೆಂಬ್ಲಿಯು ಜೂನ್ ೧೬ ರಂದು ವಾರ್ಷಿಕ ದಿನವನ್ನಾಗಿ ಅಂಗೀಕರಿಸಿ ,ಆಚರಿಸಲಾಗುತ್ತದೆ
ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕೋವಿಡ್-೧೯ ಜಾಗತಿಕ ಕುಟುಂಬ ಹಣ ರವಾನೆಯು ಅಸಾಧಾರಣ ಪರೀಕ್ಷೆಯಾಗಿದೆ ಎಂದು ಗುಟೆರೆಸ್ ಗಮನಿಸಿದರು. ವಿಶ್ವ ಬ್ಯಾಂಕಿನ ೨೦೨೧ ರ ವರದಿಯು ೨೦೨೦ ರಲ್ಲಿ ಯಾವುದೇ ಬೆಳವಣಿಗೆಯನ್ನು ದಾಖಲಿಸದಿದ್ದರೂ, ಜಾಗತಿಕ ಹಣ ರವಾನೆಯು ಸರಾಗವಾಗಿ, ಪ್ರಾಯೋಗಿಕವಾಗಿ ಹರಿದು ಬಂದು, ಡಾಲರ್ ೫೪೦ ಬಿಲಿಯನ್ ನಷ್ಟೇ ಇತ್ತು. ಒಟ್ಟಾರೆಯಾಗಿ ೨೦೧೯ ರ ಒಟ್ಟು ಪ್ರಮಾಣಕ್ಕಿಂತ ೧.೬% ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.
ವಲಸಿಗರಿಗೆ ಬೆಂಬಲ
ವಲಸಿಗರಿಗೆ ಕಾರ್ಮಿಕರ ತ್ಯಾಗದ ಹೊರತಾಗಿ, ಹಣ ರವಾನೆಯ ಸ್ಥಿತಿಸ್ಥಾಪಕತ್ವಕ್ಕೆ ಮತ್ತೊಂದು ಕಾರಣವನ್ನು ಗುಟೆರೆಸ್ ಗಮನಿಸಿದರು. ಮುಂದಾಳತ್ವವನ್ನು ವಹಿಸಿರುವ ರಾಷ್ಟ್ರಗಳಲ್ಲಿನ ಹಣಕಾಸಿನ ಕ್ರಮಗಳು, ವಲಸೆಹೋಗುವ ಜನರಿಗೆ ಹಣವನ್ನು ಮನೆಗೆ ತಲುಪಿಸಲು ತೆಗೆದುಕೊಳ್ಳುವ ನಿಲುವುಗಳು, ಜೊತೆಗೆ " ವಲಸಿಗರನ್ನು ಬೆಂಬಲಿಸುವ ಮತ್ತು ರಕ್ಷಿಸುವ ಪ್ರಯತ್ನಗಳನ್ನು ಇನ್ನೂ ಮುಂದುವರೆಸಬೇಕು" ಎಂದು ಅವರು ಕೋರಿದರು. ಅವರು ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ಸ್ಪಷ್ಟಪಡಿಸಿದರು- ಅಗತ್ಯ ಸೇವೆಗಳನ್ನು ಮತ್ತು ಆರ್ಥಿಕತೆಯನ್ನು ಅನೇಕ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಸುವಲ್ಲಿ ಇಂತಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ವಿಷಯದಲ್ಲಿ ಒಂದು ಪ್ರಮುಖ ಹೆಜ್ಜೆಯೆಂದರೆ "ಕಾನೂನು ಬದ್ಧ ವಲಸೆ ಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ವಲಸಿಗರನ್ನು ಕೋವಿಡ್-೧೯ ಲಸಿಕೆ ವಿತರಣಾ ಯೋಜನೆಗಳಲ್ಲಿ ಸೇರಿಸಿಕೊಳ್ಳಲಾಗಿದೆ”. ಇದು "ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗೆ ನಿರ್ಣಾಯಕವಾಗಿದೆ" ಎಂದು ತಿಳಿಸಿದರು.
ವರ್ಗಾವಣೆಯ ವೆಚ್ಚವನ್ನು ಕಡಿಮೆಮಾಡುವುದು
ಹಣ ರವಾನೆ ವರ್ಗಾವಣೆಯ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮುಂದುವೆಸಬೇಕೆಂದು ಯುಎನ್ ಮುಖ್ಯಸ್ಥರು ಒತ್ತಾಯಿಸಿದರು- ಸುಸ್ಥಿತ ಅಭಿವೃದ್ಧಿಗಾಗಿ ೨೦೩೦ರ ಕಾರ್ಯಸೂಚಿಗೆ ಅನುಗುಣವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದರ್ಜೆಯ ಜೀವನಾಡಿಯು ಶೂನ್ಯಕ್ಕೆ ಹತ್ತಿರದಲ್ಲಿದೆ ಮತ್ತು ವಲಸಿಗರ ಆರ್ಥಿಕ ಸೇರ್ಪಡೆಗೆ ಉತ್ತೇಜನ ನೀಡುತ್ತದೆ . ಅವರು ಕುಟುಂಬಗಳು, ವಿಶೇಷವಾಗಿ ಬಡಗ್ರಾಮೀಣ ಪ್ರದೇಶಗಳಲ್ಲಿವೆ. ಈ ನಿಟ್ಟಿನಲ್ಲಿ, "ಸುರಕ್ಷಿತ, ಕ್ರಮಬದ್ಧ ಮತ್ತು ನಿಯಮಿತ ವಲಸೆಗಾಗಿ ಗ್ಲೋಬಲ್ ಕಾಂಪ್ಯಾಕ್ಟ್ ಅಂತಹ ಕಾರ್ಯಗಳಿಗೆ ಏಕೀಕೃತ ಚೌಕಟ್ಟನ್ನು ನೀಡುತ್ತದೆ" ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಮೂಲಸೌಕರ್ಯಗಳು
ಇದರ ಮಧ್ಯೆ, ಯುಎನ್ ನ ಅಂತರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿ (ಪಿಎಫ್ಎಡಿ) ಗಮನ ಸೆಳೆದಿದ್ದು, ಕೋವಿಡ್-೧೯ ಸಾಂಕ್ರಾಮಿಕ ರೋಗದಿಂದಾಗಿ ಡಿಜಿಟಲ್ ವರ್ಗಾವಣೆಯ ಮೂಲಕ ಹಣವನ್ನು ಮನೆಗೆ ಕಳುಹಿಸುವ ವಲಸಿಗರ ಸಂಖ್ಯೆ ಭಾರೀ ಏರಿಕೆಯಾಗಿದ್ದರೂ, ಅವರ ಮಿಲಿಯನ್ ಕುಟುಂಬಗಳು ಮತ್ತು ಗ್ರಾಮೀಣ- ದೂರದ ಪ್ರದೇಶಗಳು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರವೇಶಿಸಲು ಹೆಣಗಾಡುತ್ತಿವೆ. ಅವರನ್ನು ಬಡತನದಿಂದ ಮೇಲಕ್ಕೆತ್ತಲು ಮುಂದಾಗಿದೆ.
ಬಡ ಗ್ರಾಮೀಣ ಜನರಲ್ಲಿ ಬಡತನ, ಹಸಿವು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೆಲಸ ಮಾಡುವ ಐಎಫ್ಎಡಿ , ಮೊಬೈಲ್ ಹಣರವಾನೆ ಕಳೆದ ವರ್ಷ ಶೇಕಡ ೬೫ ರಷ್ಟು ಹೆಚ್ಚಾಗಿದೆ. ಇದು ಡಾಲರ್೧೨.೭ ಬಿಲಿಯನ್ ಏರಿದೆ. ಈ ಬದಲಾವಣೆಯನ್ನು ಹಣದಿಂದ ಡಿಜಿಟಲ್ ವರ್ಗಾವಣೆಗೆ ಬದಲಾಯಿಸುವ ಮೂಲಕ ನಡೆಸಲಾಗುತ್ತದೆ.
ಆದಾಗ್ಯೂ, ಅನೇಕ ದೇಶಗಳಲ್ಲಿನ ದೂರದ ಗ್ರಾಮೀಣ ಪ್ರದೇಶದ ಜನರು ಬ್ಯಾಂಕಿಂಗ್ ಸೇವೆಗಳಿಗೆ ಕಡಿಮೆ ಪ್ರವೇಶಗಳನ್ನು ಹೊಂದಿದ್ದಾರೆ, ಸೀಮಿತ ಮೊಬೈಲ್ ಸಂಪರ್ಕ ಅಥವಾ ನಗದು ಹಣದಂತಹ ಮೊಬೈಲ್ ಹಣ ಸೇವೆಯನ್ನು ನೀಡುವ ದಲ್ಲಾಳಿಗಳ ಲಭ್ಯತೆ ಇದೆ ಎಂದು ಅದು ಗಮನಿಸಿದೆ. ಇದರರ್ಥ , ಲಕ್ಷಾಂತರ ಬಡ ಗ್ರಾಮೀಣ ಜನರು ತಮ್ಮ ವಲಸೆ ಕುಟುಂಬ ಸದಸ್ಯರಿಂದ ಡಿಜಿಟಲ್ ನಲ್ಲಿ ಕಳುಹಿಸಿದ ಹಣವನ್ನು ಸ್ವೀಕರಿಸಲು ಪಟ್ಟಣಗಳು ಅಥವಾ ನಗರಗಳಿಗೆ ಬಹಳ ದೂರ ಪ್ರಯಾಣಿಸ ಬೇಕಾಗುತ್ತದೆ.
ಹೀಗಾಗಿ, ಕುಟುಂಬ ಹಣರವಾನೆ ಐಎಫ್ಎಡಿ ಅಧ್ಯಕ್ಷರು ಅಂತರಾಷ್ಟೀಯ ದಿನಾಚರಣೆಯ ಪ್ರತ್ಯೇಕ ಸಂದೇಶದಲ್ಲಿ, ಗಿಲ್ಬರ್ಟ್ ಎಫ್. ಹ್ಯುಂಗ್ ಬೊ ಗ್ರಾಮೀಣ ಕುಟುಂಬಗಳನ್ನು ಹಿಂದುಳಿಯದಂತೆ ನೋಡಿಕೊಳ್ಳಲು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಡಿಜಿಟಲ್ ಮೂಲಸೌಕರ್ಯ ಮತ್ತು ಮೊಬೈಲ್ ಸೇವೆಗಳಲ್ಲಿ ತುರ್ತುಹೂಡಿಕೆ ಮಾಡುವಂತೆ ಕರೆನೀಡಿದರು. ಗ್ರಾಮೀಣ ಸಮುದಾಯಗಳಿಗೆ ನಗದು ಮಳಿಗೆಗಳನ್ನು ಪ್ರವೇಶಿಸಲು ಅಥವಾ ಮೊಬೈಲ್ ಖಾತೆಗಳಂತಹ ಹೆಚ್ಚು ಅನುಕೂಲಕರ ಪರ್ಯಾಯಗಳನ್ನು ಪ್ರವೇಶಿಸಲು ಗ್ರಾಮೀಣ ಡಿಜಿಟಲ್ ಮೂಲಕ ಸೌಕರ್ಯದಲ್ಲಿ ತುರ್ತಾಗಿ ಹೂಡಿಕೆ ಮಾಡಲು ಅವರು ಸರ್ಕಾರಗಳು ಮತ್ತು ಖಾಸಗಿ ವಲಯಕ್ಕೆ ಕರೆ ನೀಡಿದರು.
ವಿಶ್ವದಾದ್ಯಂತ ಕುಟುಂಬಗಳಿಗೆ ಹಣ ರವಾನೆ
ಪ್ರತೀ ವರ್ಷ ೨೦೦ ಮಿಲಿಯನ್ ಹೆಚ್ಚು ವಲಸೆ ಕಾರ್ಮಿಕರು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ೮೦೦ ಮಿಲಿಯನ್ ಸಂಬಂಧಿಕರನ್ನು ಬೆಂಬಲಿಸಲು ಹಣರವಾನೆ ಮಾಡುತ್ತಾರೆ. ಪ್ರತೀ ವರ್ಷ ೧ ಟ್ರಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೊತ್ತ ಕುಟುಂಬಕ್ಕೆ ಹಣ ರವಾನೆಯಾಗುತ್ತದೆ .
೧ ಬಿಲಿಯನ್ ಗಿಂತಲೂ ಹೆಚ್ಚು ಜನರ ಅಥವಾ ಭೂಮಿಯ ಮೇಲಿನ ಏಳು ವ್ಯಕ್ತಿಗಳಲ್ಲಿ ಒಬ್ಬರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಒಟ್ಟಾರೆಯಾಗಿ, ಹಣರವಾನೆ ಅಧಿಕೃತ ಅಭಿವೃದ್ಧಿ ನೆರವಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಮತ್ತು ವಿದೇಶಿ ನೇರ ಹೂಡಿಕೆಯನ್ನು ಮೀರಿಸುತ್ತಿದೆ. ೨೦೧೯ರಲ್ಲಿ, ಸುಮಾರು ೨೦೦ ಮಿಲಿಯನ್ ವಲಸೆ ಕಾರ್ಮಿಕರು ೪೦ಕ್ಕೂ ಹೆಚ್ಚು ಉನ್ನತ ಆದಾಯದ ದೇಶಗಳಲ್ಲಿ ಪ್ರಮುಖ ಆರ್ಥಿಕ ಕ್ಷೇತ್ರಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದರು ಮತ್ತು ೧೨೫ಕ್ಕೂ ಹೆಚ್ಚು ದೇಶಗಳಲ್ಲಿ ಮನೆಗೆ ಹಿಂದುರುಗಿದ ಅಂದಾಜು ೮೦೦ ಮಿಲಿಯನ್ ಸಂಬಂಧಿಕರನ್ನು ಬೆಂಬಲಿಸಲು ಅಗತ್ಯವಾದ ಆರ್ಥಿಕ ಸಂಪನ್ಮೂಲಗಳನ್ನು ಕಳುಹಿಸುತ್ತಿದ್ದರು. ಆ ಕುಟುಂಬಗಳಲ್ಲಿ ಅರ್ಧದಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಹಣ ರವಾನೆ "ಹೆಚ್ಚು ಎಣೆಕೆ"ಯಾಗುತ್ತಿದೆ ಎಂದರೆ ತಪ್ಪಾಗಲಾರದು.
ವಾರ್ಷಿಕವಾಗಿ ರವಾನೆಯಾಗುವ ೧ ಟ್ರಿಲಿಯನ್ ಡಾಲರಗಳಲ್ಲಿ ಅರ್ಧದಷ್ಟು ಗ್ರಾಮೀಣ ಪ್ರದೇಶಗಳಿಗೆ ಕಳುಹಿಸಲಾಗುತ್ತದೆ. ಅನೇಕರು ಹಣವನ್ನು ಆಹಾರ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಅಗತ್ಯಗಳಿಗಾಗಿ ಬಳಸುತ್ತಾರೆ. ಸುಮಾರು ೨೫% ಕುಟುಂಬಗಳಿಗೆ ಉದ್ಯಮಶೀಲತೆಗೆ ಹೂಡಿಕೆ ಮಾಡಲಾಗಿದೆ. ವಿಶ್ವದ ೭೦ಕ್ಕೂ ಹೆಚ್ಚು ದೇಶಗಳಲ್ಲಿ ಹಣರವಾನೆ ನಿರ್ಣಾಯಕವಾಗಿದೆ. ಏಕೆಂದರೆ ಈ ನಿಧಿಗಳು ತಮ್ಮ ಜಿಡಿಪಿಗೆ ಕನಿಷ್ಠ ೪% ರಷ್ಟು ಕೊಡುಗೆ ನೀಡುತ್ತವೆ. ಕೆಲವು ದೇಶಗಳಲ್ಲಿ, ಹಣರವಾನೆ ಹೆಚ್ಚು ಸ್ಥಿತಿಸ್ಥಾಪಕತ್ವವನ್ನು ಸಾಬೀತುಪಡಿಸಿದೆ ಮತ್ತು ಪಾಕಿಸ್ತಾನ, ಮೆಕ್ಸಿಕೋ,
ಬಾಂಗ್ಲಾದೇಶ, ಕೀನ್ಯಾ ಮತ್ತು ಜಮೈಕಾದಂತಹ ದೇಶಗಳು ಹೆಚ್ಚಿನ ದಾಖಲೆಗಳನ್ನು ದಕ್ಕಿಸಿಕೊಂಡಿವೆ.
16 ಜೂನ್ 2021, 13:45
ಕನ್ನಡಕ್ಕೆ: ಗಾಯತ್ರಿ
Comments