top of page

ಕೆನಡಾದ ವಸತಿನಿಲಯ ಶಾಲೆಯಲ್ಲಿ ನಡೆದಿರುವ ದುರ್ಘಟನೆ


ಕೆನಡಾದ ವಸತಿನಿಲಯ ಶಾಲೆಯಲ್ಲಿ ನಡೆದಿರುವ ದುರ್ಘಟನೆಯ ಆವಿಷ್ಕಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾ, ಎಲ್ಲರೂ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಕೆನಡಾದ ಸುದ್ದಿಗೆ ಸ್ಪಂದಿಸಿ ನೋವನ್ನು ವ್ಯಕ್ತಪಡಿಸಿದ ವಿಶ್ವಗುರುಗಳು ಅಲ್ಲಿನ ಹಿಂದಿನ ವಸತಿ ನಿಲಯ ಶಾಲೆಯೊಂದರಲ್ಲಿ ಸ್ಥಳೀಯ ಮಕ್ಕಳ ಸಾಮೂಹಿಕ ಹತ್ಯೆಯ ಕುರಿತು ಅತೀವ ವಿಷಾದವನ್ನು ವ್ಯಕ್ತಪಡಿಸುವುದರೊಂದಿಗೆ, ರಾಜಕೀಯ ಮತ್ತು ಧಾರ್ಮಿಕ ಅಧಿಕಾರಿಗಳು ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇದರತ್ತ ಗಮನಹರಿಸಿ ಸಹಕರಿಸುವಂತೆಯೂ ಮತ್ತು ಸಮನ್ವಯ ಹಾಗೂ ಗುಣಪಡಿಸುವ ಹಾದಿಗೆ ತಮ್ಮನ್ನೇ ತೊಡಗಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ವರದಿ: ಲಿಂಡಾ ಬೊರ್ದೊನಿ

ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಕಮ್ಲೂಪ್ಸ್ ಭಾರತೀಯ ವಸತಿ ಶಾಲೆಯಲ್ಲಿ 215 ವಿದ್ಯಾರ್ಥಿಗಳ (ಮಕ್ಕಳ ) ಅವಶೇಷಗಳು ದೊರೆತಿರುವುದು ಆಘಾತಕಾರಿ ಹಾಗೂ 'ಅಮಾನವೀಯ ಕೃತ್ಯ' ಎಂದು ವಿಶ್ವಗುರು ಫ್ರಾನ್ಸಿಸ್ ರವರು ಭಾನುವಾರದ ಪೂಜಾವಿಧಿಯಲ್ಲಿ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ದೇವದೂತನ ಸಂದೇಶ ತ್ರಿಕಾಲ ಪ್ರಾರ್ಥನೆಯ ನಂತರ ಭಕ್ತಾದಿಗಳನ್ನು ಉದ್ದೇಶಿಸಿ ವಿಶ್ವಗುರುಗಳು ಕೆನಡಾದ ಧರ್ಮಾದ್ಯಕ್ಷರುಗಳನ್ನೊಳಗೊಂಡು ಹಾಗೂ ಕೆನಡಾದ ಎಲ್ಲ ಕಥೋಲಿಕ ದೇವಾಲಯವೂ ಸೇರಿದಂತೆ ಈ ರೀತಿಯ ಆಘಾತಕಾರಿ ಸುದ್ದಿಯಿಂದ ಅಪಘಾತಕ್ಕೆ ಒಳಗಾಗಿರುವ ಎಲ್ಲಾ ಕೆನಡಾದ ಜನರೊಂದಿಗೆ ತಮ್ಮ ನಿಕಟತೆಯನ್ನು ವ್ಯಕ್ತಪಡಿಸಿದರು ಭರವಸೆಯ ಮಾತುಗಳನ್ನಾಡಿದರು.

ವಿಶ್ವಗುರುಗಳು ಮುಂದುವರೆದು ಈ ನೋವಿನ ಸಂಗತಿಯ ವಿಚಾರವು ಹಿಂದಿನ ಮತ್ತು ಅಸಹನಿಯ ಸಂಕಟಗಳ ಮೇಲೆ ಬೆಳಕು ಚೆಲ್ಲುತ್ತಾ ನೋವಿನ ಆಳವನ್ನು ಇನ್ನಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳಲು ತಿಳುವಳಿಕೆ ಹೆಚ್ಚಿಸುತ್ತದೆ ಮತ್ತು ಇದೇ ಸಂದರ್ಭದಲ್ಲಿ

ಅವರು ರಾಜಕೀಯ ಮತ್ತು ಧಾರ್ಮಿಕ ಅಧಿಕಾರಿಗಳನ್ನು ಉದ್ದೇಶಿಸಿ ಈ ಅಮಾನವೀಯ ಕೃತ್ಯದ ದುಃಖಕರ ಘಟನೆಯ ಬಗ್ಗೆ ಒಟ್ಟಾಗಿ ಸೇರಿ ಬೆಳಕು ಚೆಲ್ಲುವ ದೃಢ ನಿಶ್ಚಯದೊಂದಿಗೆ ಕೆಲಸ ನಿರ್ವಹಿಸುವುದರ ಜೊತೆಗೆ ಅತ್ಯಂತ ನಮ್ರತೆಯಿಂದ ಸಮನ್ವಯ ಹಾಗೂ ಗುಣಪಡಿಸುವ ಹಾದಿಗೆ ತಮ್ಮನ್ನೇ ವಿನಮ್ರರಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ವಸತಿ ನಿಲಯ ಶಾಲೆಯಲ್ಲಿ ನಡೆದ ಸಾಮೂಹಿಕ ಸಮಾಧಿ ಹೃದಯ ವಿದ್ರಾವಕ ಘಟನೆಯ ಬಗ್ಗೆ ಕೆನಡಾದ ಧರ್ಮಾಧ್ಯಕ್ಷರುಗಳು ತಮ್ಮ ಅತೀವ ದುಃಖವನ್ನು ವ್ಯಕ್ತಪಡಿಸಿದರು.

ಈ ಕಷ್ಟದ ಸಮಯದಲ್ಲಿ ನಮ್ಮ ಎಲ್ಲಾ ವೈಯಕ್ತಿಕ ವಸಹಾತುಶಾಯಿ ಮಾದರಿಯಿಂದ ಹಾಗೂ ಸೈದ್ಧಾಂತಿಕ ವಸಹಾತುಶಾಯಿಗಳಿಂದ ದೂರವಿದ್ದು ಕೆನಡಾದ ಎಲ್ಲಾ ಗಂಡು,ಹೆಣ್ಣು ಮಕ್ಕಳೊಂದಿಗೆ ನಾವೆಲ್ಲರೂ ಗೌರವಾನ್ವಿತವಾಗಿ ಅವರೊಟ್ಟಿಗೆ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಪರಸ್ಪರ ಗೌರವ ಮತ್ತು ಅವರ ಹಕ್ಕುಗಳನ್ನು ಗುರುತಿಸುವ ಹಾಗೂ ಅವರ ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳೋಣ ಎಂದರು.

ಕೆನಡಾದ ವಸತಿ ಶಾಲೆಯಲ್ಲಿ ಮರಣಹೊಂದಿದ ಎಲ್ಲಾ ಮಕ್ಕಳ ಆತ್ಮವನ್ನು ಭಗವಂತನಿಗೇ ಸಮರ್ಪಿಸುತ್ತಾ ಸಂತ್ರಸ್ತರ ಕುಟುಂಬಗಳಿಗಾಗಿಯೂ ಹಾಗೂ ಸ್ಥಳೀಯ ಸಮುದಾಯ ವರ್ಗದವರಿಗಾಗಿಯೂ ವಿಶ್ವಗುರುಗಳು ವಿಶೇಷವಾಗಿ ಪ್ರಾರ್ಥಿಸಿದರು.

ವಸತಿ ಶಾಲಾ ವ್ಯವಸ್ಥೆ

ವಸತಿ ಶಾಲಾ ವ್ಯವಸ್ಥೆ ಸುಮಾರು ಹದಿನೈದು ಸಾವಿರ ಮಕ್ಕಳನ್ನು ತಮ್ಮ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸಿತು. ಸರ್ಕಾರ ಮತ್ತು ವಿವಿಧ ಕಥೋಲಿಕ ದೇವಾಲಯಗಳು ನಡೆಸುತ್ತಿರುವ ಈ ವಸತಿ ಶಾಲೆಗಳ ಮುಖ್ಯ ಉದ್ದೇಶ ಸ್ಥಳೀಯ ಮಕ್ಕಳನ್ನು ಒಟ್ಟುಗೂಡಿಸುವುದು.

ನೆಲ ನುಗ್ಗುವ ರೇಡರ್ ಗಳನ್ನು ಬಳಸಿ ಕಮ್ಲೂಪ್ಸ್ ಭಾರತೀಯ ವಸತಿ ಶಾಲೆಗಳಲ್ಲಿ 215 ಶಾಲಾ ಮಕ್ಕಳ ಗುರುತು ಹಾಕದ ಸಮಾಧಿಗಳನ್ನು ಕಂಡುಹಿಡಿದಿದ್ದರು ಇದರ ಬೆನ್ನಲ್ಲೇ ಪತ್ತೆಯಾದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುವಂತೆಯೂ, ಈ ಸಾವುಗಳ ಸುತ್ತಮುತ್ತಲಿನ ಸಂದರ್ಭಗಳು ಮತ್ತು ಜವಾಬ್ದಾರಿಗಳ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆಯೂ ಮತ್ತು ಕಾಣೆಯಾದ ಮಕ್ಕಳನ್ನು ಗುರುತಿಸಲು ಮತ್ತು ಅದನ್ನು ನೊಂದಾಯಿಸಲು ಅಧಿಕಾರಿಗಳಿಗೆ ಒತ್ತಾಯಿಸಿದರು, ಕಾರ್ಯಾಚರಣೆ ಆರಂಭಿಸಲು ಆಗ್ರಹಪಡಿಸಿದರು.

1978 ರಲ್ಲಿ ಶಾಶ್ವತವಾಗಿ ಮುಚ್ಚುವ ಮುನ್ನ ಬ್ರಿಟಿಷ್ ಕೊಲಂಬಿಯಾದ ಕಮ್ಲೂಪ್ಸ್ ಭಾರತೀಯ ವಸತಿ ಶಾಲೆಯನ್ನು 1890 ರಿಂದ 1969 ರವರೆಗೆ ಒಟ್ಟಾವ ಪರವಾಗಿ ಕಥೋಲಿಕ ಚರ್ಚ್ ನಿರ್ವಹಿಸುತ್ತಿತ್ತು.

ಜೂನ್ ೦೬, ೨೦೨೧, ೧೨:೫೮

ಕನ್ನಡಕ್ಕೆ: ಮೇರಿ ಲತಾ

64 views0 comments

Comentarios


bottom of page