top of page

ಕಾರಾಗೃಹದಲ್ಲಿ ನನ್ನ ಮೇಲೆ ಆಪಾದನೆ ಹೊರಿಸಿದವರನ್ನು ಕ್ಷಮಿಸಿದೆ, ನನ್ನ ನಂಬಿಕೆ ನನ್ನನ್ನು ಉಳಿಸಿತು: ಕಾರ್ಡಿನಲ್ ಪೆಲ್

Updated: Jun 11, 2021


ವ್ಯಾಟಿಕನ್ ನ್ಯೂಸ್‍ಗೆ ನೀಡಿದ ಪುಟ್ಟ ಸಂದರ್ಶನದಲ್ಲಿ ಇಂದು ತಮ್ಮ 80 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರವ ಕಾರ್ಡಿನಲ್ ಜಾರ್ಜ್ ಪೆಲ್ ತಮ್ಮ ಪುಸ್ತಕ “ಪ್ರಿಸನ್ ಜರ್ನಲ್” ನಲ್ಲಿ ತಮ್ಮ 8 ತಿಂಗಳ ಸೆರೆವಾಸದ ಅನುಭವಗಳನ್ನು ತೆರೆದಿಟ್ಟಿದ್ದಾರೆ. “ನನ್ನ ನೋವುಗಳನ್ನು ಕ್ರಿಸ್ತರ ನೋವುಗಳೊಂದಿಗೆ ಪರಿಭಾವಿಸಿದಾಗ ನಾನು ನನ್ನ ನೋವುಗಳನ್ನು ಸಂತೋಷವಾಗಿ ಅನುಭವಿಸಲು ಆಯಿತು. ನನ್ನ ಜೀವನದಲ್ಲಾಗುತ್ತಿರುವ ಎಲ್ಲದರ ಹಿಂದೆ ದೇವರಿದ್ದಾರೆ ಎಂದು ನಾನು ಬಲವಾಗಿ ನಂಬಿದ್ದೆ.”


ವರದಿ: ಫ್ಯಾಬಿಯೋ ಕೊಲಂಗ್ರಾದೆ


ಕಾರ್ಡಿನಲ್ ಜಾರ್ಜ್ ಪೆಲ್, ವ್ಯಾಟಿಕನ್ ಆರ್ಥಿಕ ವಿಭಾಗೀಯ ಪೀಠದ ಮಾಜಿ ಕಾರ್ಯದರ್ಶಿ, ಕಳೆದ ಹದಿನಾಲ್ಕು ತಿಂಗಳಿಂದ ಸ್ವತಂತ್ರರಾಗಿದ್ದಾರೆ. ಇಂದು 8 ಜೂನ್ 2021 ಕಾರ್ಡಿನಲ್ ಜಾರ್ಜ್ ಪೆಲ್, ತಮ್ಮ ಹುಟ್ಟೂರಾದ ಆಸ್ಟ್ರೇಲಿಯದಲ್ಲಿ ಎಂಬತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿದಾಗ ಅವರು ಕೋವಿಡ್ ಕಾರಣ ಪ್ರತ್ಯೇಕ ಕೊಠಡಿಯಲ್ಲಿದ್ದರು. ನಮ್ಮ ಸಂಭಾಷಣೆ ಅವರೊಂದಿಗೆ ಫೋನ್ ಮೂಲಕ ಪಬ್ಲಿಷಿಂಗ್ ಹೌಸ್ ಬಿಡುಗಡೆ ಮಾಡಿದಂತೆ 400 ಪುಟವುಳ್ಳ ಇಟಾಲಿಯನ್ ಭಾμÉಯಲ್ಲಿ ಪ್ರಕಟವಾದ "ಪ್ರಿಸನ್ ಜರ್ನಲ್" ವಾಲ್ಯೂಮ್ 1 ಪುಸ್ತಕದ ಮೂಲಕ ಆರಂಭವಾಯಿತು.


ಫೆಬ್ರವರಿ 27ರಿಂದ 13 ಜುಲೈ 2019 ರವರೆಗೆ ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಮೆಲ್ಬಾನ್ ಕಾರಾಗೃಹದಲ್ಲಿ ಬಂಧಿತರಾಗಿದ್ದಾಗ ತಮ್ಮ ಡೈರಿಯಲ್ಲಿ ಅವರು ಬರೆದ ಸಂಗತಿಗಳನ್ನು ಆಧರಿಸಿ ಈ ಪುಸ್ತಕವನ್ನು ಮುದ್ರಿಸಲಾಗಿದೆ. 2020 ರ ಏಪ್ರಿಲ್‍ನಲ್ಲಿ ಹೈಕೋರ್ಟ್ ನೀಡಿದ ತೀರ್ಪಿನಿಂದ ಅವರನ್ನು ನಿರಾಪರಾಧಿ ಎನ್ನಲಾಯಿತು. ಪೆಲ್ ಅವರಿಗೆ 2019 ರ ಮಾರ್ಚ್ ನಲ್ಲಿ 6 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ವಿಕ್ಟೋರಿಯಾ ಸುಪ್ರೀಂಕೋರ್ಟಿಗೆ ಅವರ ವಕೀಲರ ಮನವಿಯನ್ನು ಆ ವರ್ಷದ ಆಗಸ್ಟ್ ತಿಂಗಳಲ್ಲಿ ಮೂವರು ನ್ಯಾಯಾಧೀಶರಲ್ಲಿ ಇಬ್ಬರು ವಜಾಗೊಳಿಸದರು. ನಂತರ ಹೈಕೋರ್ಟ್‍ಗೆ, ಸಲ್ಲಿಸಿದ ಮೇಲ್ಮನವಿಯ ನಂತರ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಯಿತು. ಕಾರ್ಡಿನಲ್ ಪೆಲ್ ತಾವು ನಿರಪರಾಧಿ ಹಾಗೂ ತಮ್ಮ ಮೇಲೆ ಆರೋಪಿಸಲಾಗಿದೆ ಆರೋಪ ಅತ್ಯಂತ ಭಯಾನಕ ಹಾಗೂ ಅಸಹನೀಯ ಆರೋಪ ಎಂದಿದ್ದಾರೆ. ಆಸ್ಟ್ರೇಲಿಯಾ ನ್ಯಾಯಾಲಯವು ಕಾರ್ಡಿನಲ್ ಪೆಲ್ ಅವರನ್ನು ನಿರಾಪರಾಧಿ ಎಂದು ಘೋಷಿಸಿತು ಹಾಗೂ ಪರಮ ಪೀಠವು ಈ ತೀರ್ಪನ್ನು ಸಂತೋಷವಾಗಿ ಸ್ವೀಕರಿಸಿ, ನಮಗೆ ಆಸ್ಟ್ರೇಲಿಯಾ ನ್ಯಾಯಾಂಗದ ಮೇಲೆ ನಂಬಿಕೆಯಿತ್ತು ಎಂದು ಹೇಳಿದ್ದರು. ಮತ್ತೆ ಅಕ್ಟೋಬರ್ 12, 2020 ರಲ್ಲಿ ಕಾರ್ಡಿನಲ್ಲಿ ಪೆಲ್ ವ್ಯಾಟಿಕನ್‍ನಲ್ಲಿ ನುಡಿದ ಸಾಕ್ಷಿಗೆ, ಪೆÇೀಪ್ ಫ್ರಾನ್ಸಿಸ್ ರವರು ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.


ನಿಮ್ಮ ಜೀವನದಲ್ಲಿ, ಕಾರಾಗೃಹದ ಅನುಭವಗಳು ಸೇರಿರುತ್ತವೆ ಎಂದು ನೀವು ಎಂದಿಗಾದರೂ ಉಹಿಸಿದ್ದಿರಾ?

ಇಲ್ಲ ಇಂದಿಗೂ ಕಲ್ಪಿಸಿಕೊಂಡಿಲ್ಲ. ನಾನು ತುಂಬಾ ಕಷ್ಟ ಪಟ್ಟೆ ಈ ಆಪಾದನೆಗಳಿಂದ ಮುಕ್ತಗೊಳ್ಳಲು ಆದರೆ ಆಗಲಿಲ್ಲ. ಸಂದರ್ಭಗಳು, ಸುಳ್ಳು ಸಾಕ್ಷಿಗಳು ನನ್ನನ್ನು ಸಿಲುಕಿಸಿತು. ಆದರೂ ಕೊನೆಗೆ ನಾನು ನಿರಾಪರಾಧಿ ಎಂದು ಘೋಷಿಸಲಾಯಿತು. ಸುಪ್ರೀಂಕೋರ್ಟಿಗೆ ನನ್ನ ಧನ್ಯವಾದಗಳು.


13 ತಿಂಗಳುಗಳ ಡೈರಿ ಯಾಕೆ?

ಹಲವಾರು ಕಾರಣಗಳಿಗೆ. ಕಷ್ಟದಲ್ಲಿ ಇರುವವರಿಗೆ ಹಾಗೂ ನನ್ನ ಹಾಗೆ ಕಷ್ಟದ ಸಮಯದಲ್ಲಿರುವವರಿಗೆ ಸಹಾಯವಾಗಬಹುದು ಎಂದು ನೆನೆದೆ. ಇತಿಹಾಸಕ್ಕೂ ಇದು ಒಳ್ಳೆಯ ಕೊಡಗೆ ಆಗಬಹುದು ಏಕೆಂದರೆ, ಕಾರ್ಡಿನಲ್‍ಗಳಿಗೆ ಕಾರಾಗೃಹದ ಅನುಭವಗಳಿರದು. ಅನೇಕರು ಕಾರಾಗೃಹದಲ್ಲಿ ಬರೆಯುವುದಕ್ಕೆ ತಮ್ಮನ್ನೇ ತೊಡಗಿಸಿಕೊಳ್ಳುತ್ತಿದ್ದರು. ಸಂತ ಪೌಲರು ಅದರಲ್ಲಿ ಒಬ್ಬರು. ಕಾರಾಗೃಹದಲ್ಲಿ ಬರೆಯುವುದು ಒಂದು ಒಳ್ಳೆಯ ಚಿಕಿತ್ಸೆ.


ಈ ಜೈಲು ಶಿಕ್ಷೆಯಿಂದ ಆದ ಅವಮಾನ ಅಸ್ವಸ್ಥತೆಗೆ ಪ್ರಾರ್ಥನೆ ಎಷ್ಟು ಸಹಕಾರಿಯಾಗಿತ್ತು?

ನಂಬಿಕೆ ಮತ್ತು ಪ್ರಾರ್ಥನೆ ಎರಡು ಮೂಲಭೂತಗಳು. ಇವು ಆ ದಿನಗಳಲ್ಲಿ ನನ್ನ ದೃಷ್ಟಿಕೋನವನ್ನೆ ಬದಲಾಯಿಸಿತು. ಇಂದು ನಾನು ಎಲ್ಲರಿಗೂ ಹೇಳುತ್ತೇನೆ, ಕಾರಾಗೃಹದಲ್ಲಿ ಕ್ರಿಸ್ತನ ಮೌಲ್ಯಗಳು ಕೆಲಸ ಮಾಡುತ್ತವೆ ಎಂದು ದೃಢೀಕರಿಸುತ್ತೇನೆ. ನನ್ನ ಅನುಭವದಲ್ಲಿ ಹೇಳುತ್ತೇನೆ ದೇವಾಲಯದಲ್ಲಿ ಹೇಳಿಕೊಟ್ಟ ಪಾಠಗಳು, ಪ್ರಾರ್ಥನೆಗಳು ಹಾಗೂ ದೇವರ ಅನುಗ್ರಹವು ಎಲ್ಲಾ ನನಗೆ ಸಹಕರಿಸಿತು. ಯೇಸುಕ್ರಿಸ್ತರು ಪಟ್ಟ ಕಷ್ಟಕ್ಕಿಂತ ನಮ್ಮ ಕಷ್ಟಗಳು ಅತ್ಯಂತ ಹಗುರ ಎಂದು ತಿಳಿದಾಗ ನಾವು ಬದುಕಬಲ್ಲೆವು. ಕ್ರೈಸ್ತರಾಗಿ ನಮಗೆ ಗೊತ್ತಿದೆ ನಮ್ಮೆಲ್ಲರ ಉದ್ಧಾರ ಪರಮ ತಂದೆಯ ಒಬ್ಬನೇ ಮಗನ ಶಿಲುಬೆ ಮರಣ ಮತ್ತು ಪುನರುತ್ಥಾನದಿಂದ ಎಂದು. ಈ ಮೌಲ್ಯಗಳನ್ನು ತಿಳಿದಾಗ, ನೀವು ನನ್ನ ಪರಿಸ್ಥಿತಿಯಲ್ಲಿದ್ದರೂ ಎಲ್ಲವೂ ಬದಲಾಗುತ್ತದೆ.


ಕಾರಾಗೃಹದಲ್ಲಿ ಅನ್ಯ ಆರೋಪಿಗಳ ನಡುವೆ ಸಂಬಂಧ ಹೇಗಿತ್ತು. ನೀವು ಬರೆದಿದ್ದೀರಿ ಅವರ ನೋವನ್ನು ನಾನು ಅನುಭವಿಸಿದೆ ಎಂದು.

ನನ್ನ ವೈಯಕ್ತಿಕ ರಕ್ಷಣೆಗಾಗಿ ನಾನು ಒಬ್ಬಂಟಿಗನಾಗಿದ್ದೆ. ನನ್ನೊಂದಿಗೆ ಇದ್ದ ಇತರ 11 ಆರೋಪಿಗಳನ್ನು ನಾನು ನೋಡಲೇ ಇಲ್ಲ. ನನ್ನ ಕೊನೆಯ ನಾಲ್ಕು ತಿಂಗಳಲ್ಲಿ ಮೂರು ಆರೋಪಿಗಳನ್ನು ಮಾತನಾಡಿಸಿದೆ. ಆದರೆ ಅವರೊಂದಿಗೆ ನನಗೆ ಯಾವ ಸಂಬಂಧವೇ ಇರದಿದ್ದರೂ, ಅವರ ಕೋಪ ಮತ್ತು ನೋವು ನನಗೆ ಕೇಳಿಸುತ್ತಿತ್ತು.


ನಿಮ್ಮ ಕೊಠಡಿಯಲ್ಲಿ ಮುಸ್ಲಿಂ ಸಹೋದರರು ಮಾಡುತ್ತಿದ್ದ ಪ್ರಾರ್ಥನೆಯನ್ನು ಆಲಿಸುತ್ತಿದ್ದೆ ಎಂದು ಡೈರಿಯಲ್ಲಿ ಬರೆದಿದ್ದೀರಿ. ಆ ಪ್ರಾರ್ಥನೆಗಳನ್ನು ಕೇಳಿ ಏನನಿಸಿತು?

ನನ್ನ ಪ್ರಕಾರ ದೇವರು ಒಬ್ಬರೇ. ನಾವು ಏಕ ದೇವರನ್ನು ಆರಾಧಿಸುವವರು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ದೈವ ಶಾಸ್ತ್ರಗಳು ವಿಭಿನ್ನವಾಗಿರಬಹುದು. ಆದರೆ ನಾವೆಲ್ಲಾ ಏಕ ದೇವನಿಗೆ ವಿಭಿನ್ನ ರೀತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತೇವೆ. ಮುಸ್ಲಿಂರ ದೇವರು, ಕ್ರಿಶ್ಚಿಯನ್ನರ ದೇವರು, ಅನ್ಯಧರ್ಮದ ದೇವರೆಂದು ಎಂದಿಗೂ ಇಲ್ಲ. ಎಲ್ಲರಿಗೂ ದೇವರು ಒಬ್ಬರೇ.


ಪ್ರತಿದಿನ ಕಾರಾಗೃಹದಲ್ಲಿ ನಿಮಗೆ ವಿರುದ್ಧವಾಗಿ ಸಾಕ್ಷಿ ನೀಡಿದ ವ್ಯಕ್ತಿಗಳನ್ನು ಕ್ಷಮಿಸಿ ಅವರಿಗಾಗಿ ಪ್ರಾರ್ಥಿಸಿ, ಆಶೀರ್ವದಿಸಿದೆ ಎಂದು ಡೈರಿಯಲ್ಲಿ ಬರೆದಿದ್ದೀರಿ. ಒಬ್ಬರಿಂದ ಕ್ಷಮಿಸುವುದು ಕಷ್ಟವೇ?


ಹೌದು ಕೆಲವೊಮ್ಮೆ ಕಷ್ಟವಾಗುತ್ತದೆ. ಆದರೆ ಕ್ಷಮಿಸಬೇಕೆಂದು ನಿರ್ಣಯ ಮಾಡಿದಮೇಲೆ ಎಲ್ಲವೂ ಸುಗಮವಾಗುತ್ತದೆ. ನನಗೆ ಅμÉ್ಟೀನೂ ಕಷ್ಟವಾಗಿಲ್ಲ ಏಕೆಂದರೆ ನನಗೆ ಗೊತ್ತಿತ್ತು ನನ್ನ ವಿರುದ್ಧ ಸಾಕ್ಷಿ ಹೇಳಿದವನು ಯಾವುದೋ ನೋವಿನಿಂದ ಬಳಲುತ್ತಿದ್ದು ಹಾಗೂ ಗೊಂದಲದಲ್ಲಿದ್ದ ಎಂದು.


ಕಾರಾಗೃಹದಲ್ಲಿ ನಿಮಗೆ ಸಾವಿರಾರು ಕಾಗದಗಳು ಬಂದಿದ್ದವು. ಅವುಗಳು ಹೇಗೆ ನಿಮ್ಮ ಮೇಲೆ ಪರಿಣಾಮ ಬೀರಿದವು.

ತುಂಬ ಅಗಾಧವಾದ ಪರಿಣಾಮ ಬೀರಿದವು. ಆಸ್ಟ್ರೇಲಿಯಾದಿಂದ ತುಂಬಾ ಕಾಗದಗಳು ಬಂದಿದ್ದವು, ಯುನೈಟೆಡ್ ಸ್ಟೇಟ್ಸ್ ಹಾಗೂ ಇತರ ದೇಶಗಳಿಂದ ಕಾಗದಗಳು ಬಂದಿದ್ದವು. ಇಟಲಿ, ಜರ್ಮನಿ, ಇಂಗ್ಲೆಂಡ್, ಐಲ್ಯಾರ್ಂಡ್ ನಿಂದಲೂ ಸಹ ಬಂದಿದ್ದವು. ಇವುಗಳು ನನ್ನನ್ನು ತುಂಬಾ ಪೆÇ್ರೀತ್ಸಾಹಿಸಿದವು.


ಕಾರಾಗೃಹದಲ್ಲಿ ದೇವರು ನಿಮ್ಮೊಂದಿಗೆ ಇರುವರೆಂದು ನಂಬಿದಿರಾ?

ಹೌದು, ಕೆಲವು ಸಲ ನಮಗೆ ದೇವರ ಯೋಜನೆಗಳು ಎಂಥದೆಂದು ಅರ್ಥವಾಗದು. ಆದರೂ ನಾನು, ನನ್ನ ಎಲ್ಲಾ ಕಷ್ಟಗಳ ಹಿಂದೆ ದೇವರಿದ್ದಾರೆ ಎಂದು ನಂಬುತ್ತಿದ್ದೆ.


ಈ 13 ತಿಂಗಳು, ನಿಮಗೆ ಏನನ್ನು ಕಲಿಸಿದೆ?

ಸರಳ ಜೀವನ, ನಂಬಿಕೆ, ಪರಿಶ್ರಮ, ಕ್ಷಮಿಸುವುದು, ದುಃಖದಿಂದ ವಿಮೋಚನೆ. ನೀವು ಕಾರಾಗೃಹದಲ್ಲಿ ಇರುವಾಗ ಜೀವನದ ಮೂಲಭೂತ ಸಮಸ್ಯೆಗಳು, ಸರಳ ಹಾಗೂ ಮೂಲಭೂತ ವಿಷಯಗಳನ್ನು ಎದುರಿಸಲು ಹೇಳಿಕೊಡಲಾಗುತ್ತದೆ. ಇವು ನನಗೂ ಆಗಿದೆ. ನಾನು ಬದುಕುಳಿದಕ್ಕೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.


ಲೈಂಗಿಕ ಕಿರುಕುಳ ಹಗರಣವು ಚರ್ಚಿನ ವಿಕಾರಕ್ಕೆ ಒಂದು ಅವಕಾಶವಾಗಬಹುದು?

ಕಡ್ಡಾಯವಾಗಿ. ನಾವು ಒಂದೇ ಧಾಟಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಇದು ಒಂದು ರೀತಿಯ ಆಧ್ಯಾತ್ಮಿಕ ಮತ್ತು ನೈತಿಕ ಕ್ಯಾನ್ಸರ್ ಆಗಿದೆ. ಆಸ್ಟ್ರೇಲಿಯಾದಲ್ಲಿ ನಾವು ಅದನ್ನು ನಿರ್ಮೂಲನೆ ಮಾಡಲು ಗಂಭೀರವಾಗಿ ಕೆಲಸ ಮಾಡಿದ್ದೇವೆ ಎಂದು ನನಗೆ ತೋರುತ್ತದೆ, ಆದರೆ ಈ ಹಗರಣಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದು ಎಲ್ಲ ಗುರುಗಳು ಮತ್ತು ಜಗತ್ತಿನ ಎಲ್ಲ ಬಿಷಪ್‍ಗಳ ಕರ್ತವ್ಯವಾಗಿದೆ. ನಾವು ಯೇಸುವಿನ ಬೋಧನೆಗಳನ್ನು ಹೆಚ್ಚಾಗಿ ಅನುಸರಿಸಲಿಲ್ಲ ಎಂದು ಮತ್ತೊಮ್ಮೆ ತೋರಿಸುತ್ತದೆ. ನಾವು 10 ಆಜ್ಞೆಗಳನ್ನು ಅನುಸರಿಸಿದ್ದರೆ, ಇದು ಯಾವುದೂ ಸಂಭವಿಸುವುದಿಲ್ಲ.


08 ಜೂನ್ 2021, 16:07


ಕನ್ನಡಕ್ಕೆ: ಅನಿಲ್

62 views0 comments

Comments


bottom of page