ಪೋಪ್ ಫ್ರಾನ್ಸಿಸ್‍ರವರು ಸೋಮವಾರ ರೋಮ್ನಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿರುವ ಫ್ರೆಂಚಿನ ಯಾಜಕ ಗುರುಗಳೊಂದಿಗೆ ಸಮಾಲೋಚನೆ ನಡೆಸಿ, ಭವಿಷ್ಯದಲ್ಲಿ ಸಮುದಾಯಕ್ಕೆ ಆಧ್ಯಾತ್ಮಿಕವಾಗಿ ಸೇವೆ ಸಲ್ಲಿಸುವ ಸಾಕ್ಷಿಗಳಾಗಬೇಕೆಂದು ಭೋದಿಸಿದರು.
ವರದಿ: ರಾಬಿನ್ ಗೋಮ್ಸ್
ಪೋಪ್ ಫ್ರಾನ್ಸಿಸ್‍ರವರು ಸೋಮವಾರ ಒಬ್ಬ ಒಳ್ಳೆಯ ಗುರು ಹೇಗಿರಬೇಕು ಎಂಬುದರ ಕುರಿತು ಮಾತನಾಡುತ್ತಾ ನೆರೆದಿದ್ದ ಗುರುಗಳಿಗೆ “ಅದ್ಭುತವಾದ ಆಧ್ಯಾತ್ಮಿಕ ಭೋದನೆಯಲ್ಲಿ ಕುರಿಗಾಹಿಗಳಾಗಿ, ಹಾಗೆಯೇ ನಿಮ್ಮಲ್ಲಿ ಕುರಿಗಳ ಸುವಾಸನೆಯೂ ಇರಲಿ” ಎಂದು ಭೋದಿಸಿದರು. ರೋಮ್ನಲ್ಲಿರುವ ಸೆಂಟ್ ಲೂಯಿಸ್ ಆಫ್ ದಿ ಫ್ರೆಂಚ್ ದೇವಾಲಯದ ವಸತಿನಿಲಯದಲ್ಲಿ ವಾಸವಾಗಿರುವ ಎಲ್ಲಾ ಫ್ರೆಂಚ್ ಯಾಜಕ ಗುರುಗಳನ್ನು ಉದ್ದೇಶಿಸಿ ಮಾತನಾಡಿದರು.
ಕುರಿಗಳ ಸುವಾಸನೆ
“ರೋಮ್‍ನ ಸುಮಾರು ವಿಶ್ವವಿದ್ಯಾಲಯಗಳಲ್ಲಿ ನೀವು ಪಡೆಯುತ್ತಿರುವ ವ್ಯಾಸಾಂಗವು ಭವಿಷ್ಯದಲ್ಲಿ ಪ್ರಭು ಕ್ರಿಸ್ತರ ಸಂದೇಶವನ್ನು ಜಗತ್ತಿಗೆಲ್ಲ ಸಾರಲು ಆಧ್ಯಾತ್ಮಿಕವಾಗಿಯೂ ಆಂತರಿಕವಾಗಿಯೂ ಬಲಿಷ್ಟಗೊಳಿಸುತ್ತದೆ” ಎಂದು ಇಟಲಿಯ ರಾಜಧಾನಿಯಲ್ಲಿರುವ ರಾಷ್ಟ್ರೀಯ ಫ್ರೆಂಚ್ ದೇವಾಲಯದ ಯಾಜಕರೆಲ್ಲರನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಹೇಳಿದರು. “ತಾವು ವಿಶ್ವವಿದ್ಯಾಲಯಗಳಲ್ಲಿ ಕಲಿತ ಪ್ರಮೇಯಗಳನ್ನೆಲ್ಲಾ ತಾವು ಭೋಧಿಸಲಿರುವ ಸ್ಥಳದ ವಾತಾವರಣವನ್ನು ಅರ್ಥಮಾಡಿಕೊಳ್ಳುವ ಮೊದಲೇ ಪ್ರಯೋಗಿಸಬಾರದು” ಎನ್ನುತ್ತಾ “ಕುರಿಗಳ ವಾಸನೆಯನ್ನು ಗ್ರಹಿಸುವ ಕುರಿಗಾಹಿಗಳು ನೀವಾಗಬೇಕು” ಎಂದರು. ಪೋಪ್ ಫ್ರಾನ್ಸಿಸ್ ತಾವು ವಿಶ್ವಗುರುವಾಗಿ ಆಯ್ಕೆಯಾದ ನಂತರ ತೈಲ ಪವಿತ್ರೀಕರಣ ಬಲಿಪೂಜೆಯಲ್ಲಿ ಇದೇ ಕುರಿಗಾಹಿಯ ಉದಾಹರಣೆಯನ್ನು ಬಳಸಿದ್ದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.
“ಯಾಜಕರು ಈ ಸಂವಹನ ಪ್ರಧಾನ ಸಮಾಜದಲ್ಲಿ ಬದುಕುತ್ತಿರುವ ಎಲ್ಲಾ ಜನರೊಂದಿಗೆ, ನಗುವ, ಅಳುವ, ಬದುಕುವ, ಸಾವು ನೋವಿನ ಎಲ್ಲಾ ಪರಿಸ್ಥಿಗಳಲ್ಲಿ ಅವರೊಂದಿಗಿರಬೇಕು” ಎಂದರು. ಯಾಜಕತ್ವದ ಕುರಿತು ಒಮ್ಮೊಮ್ಮೆ ಚಿಂತನೆಗಳೂ ಹಾಗೂ ಆಲೋಚನೆಗಳು “ಈ ಗುರು, ಆ ಗುರು” ಎಂಬಂತೆ ಪ್ರಯೋಗಾಲಯದ ವಸ್ತುಗಳಾಗುವ ಕುರಿತು ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್, “ಜನರೊಡನೆ ಸಂಪರ್ಕ ಕಳೆದುಕೊಂಡ ಯಾಜಕತ್ವ ಎನ್ನುವುದು ಕಥೋಲಿಕವೂ ಆಗಿರುವುದಿಲ್ಲ ಹಾಗೂ ಕ್ರೈಸ್ತವೂ ಆಗಿರುವುದಿಲ್ಲ,” ಎಂದರು.
ಈವರೆಗೂ ನಿಮ್ಮೊಳಗೆ ನೀವು ಅಂದುಕೊಂಡಿರುವ ಆಲೋಚನೆಗಳು, ಮಹಾನ್ ವ್ಯಕ್ತಿಗಳಾಗಬೇಕು ಎಂಬ ಮಹತ್ವಾಕಾಂಕ್ಷೆಯ ಕನಸುಗಳು, ನಾನು ಎಂಬ ಸ್ವ-ಪ್ರತಿಪಾದನೆಯನ್ನು ತೊರೆದು, ದೇವರು ಮತ್ತು ಜನರನ್ನು ನಿಮ್ಮ ದೈನಂದಿನ ಆಲೋಚನೆಯ ಕೇಂದ್ರವನ್ನಾಗಿಸಿಕೊಳ್ಳಬೇಕು,” ಎಂದರು ಪೋಪ್ ಫ್ರಾನ್ಸಿಸ್.
ಸಮುದಾಯಿಕ ಜೀವನ
ಪೋಪ್ ಫ್ರಾನ್ಸಿಸ್‍ರವರು ಫ್ರೆಂಚಿನ ಯಾಜಕ ಗುರುಗಳಿಗೆ ಸಮುದಾಯಿಕ ಜೀವನದ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ವ್ಯಕ್ತಿತ್ವ, ಸ್ವಯಂ ಪ್ರತಿಪಾದನೆ ಹಾಗೂ ಉದಾಸೀನತೆ ಇವೆಲ್ಲವೂ ಒಟ್ಟಿಗೆ ವಾಸಿಸುವ ಸವಾಲುಗಳು ಎಂದರು. ಸಣ್ಣ ಸಣ್ಣ ಗುಂಪುಗಳನದನ್ನು ಮಾಡುವುದು ಹಾಗೂ ಅಲ್ಲಿ ಅನಾವಶ್ಯಕ ವಿಚಾರಗಳಬಗ್ಗೆ ಚರ್ಚಿಸುವುದು, ಪ್ರತ್ಯೇಕತೆಯನ್ನು ಪ್ರದರ್ಶಿಸುವುದು, ಇತರರನ್ನು ಟೀಕಿಸಿ ಮಾತನಾಡುವುದು, ತನ್ನನ್ನು ತಾನೇ ಶ್ರೇಷ್ಟ ಮತ್ತು ಬುಧ್ಧಿವಂತ ಎಂದು ಪ್ರದರ್ಶಿಸಬಾರದು ಎಂದು ಕೂಡ ಸೂಚಿಸಿದರು.
ಪೋಪ್ ಫ್ರಾನ್ಸಿಸ್‍ರವರು, ಸಣ್ಣ ಸಣ್ಣ ಗುಂಪುಗಳ ಅನಾವಶ್ಯಕ ವಿಚಾರಗಳಬಗ್ಗೆ ಚರ್ಚೆಯಾಗುತ್ತವೆ, ಎಲ್ಲರನ್ನು ದುರ್ಬಲಗೊಳಿಸುವ, ಇತರರನ್ನು ಅಪಪ್ರಚಾರ ಮಾಡುವಂತಹುದವೆಲ್ಲವನ್ನು ಬಿಟ್ಟು, ದೇವರ ಕರುಣೆಯನ್ನು ಅಪೇಕ್ಷಿಸಬೇಕು, ಬ್ರಾತೃತ್ವದ ಸತ್ಯದಲ್ಲಿ, ಸಂಭಂದಗಳ ಪ್ರಾಮಾಣಿಕತೆಯಲ್ಲಿ ಮತ್ತು ಪ್ರಾರ್ಥನೆಯ ಜೀವನದಲ್ಲಿ ನಾವು ಒಂದು ಆಶೀರ್ವಾದಿತ ಸಮುದಾಯವನ್ನು ರಚಿಸಬಹುದಾಗಿದೆ. ಅದರಲ್ಲಿ ನಾವು ಸಂತೋಷದ ಮತ್ತು ಮೃದುತ್ವದ ಗಾಳಿಯಿಂದ ಉಸಿರಾಡಬಹುದಾಗಿದೆ ಎಂದರು.
ತಂದೆಯಾದ ದೇವರು ಸಂತೋಷವನ್ನು ಹಂಚುವ ಹಾಗು ಪ್ರಾರ್ಥನೆಯುಳ್ಳ ಸಮುದಾಯವನ್ನು ರಚಿಸಲು ಆಶೀರ್ವದಿಸಿದ್ದಾರೆ. ಯಾಜಕರು ಸುವಾರ್ತೆಯ ಬೆಳಕಿನಲ್ಲಿ, ದೇವರ ಆಶೀರ್ವಾದವನ್ನು ತಮ್ಮ ಸುತ್ತಲೆಲ್ಲ ಹರಡುತ್ತಾರೆ. ಮತ್ತು ಪ್ರಕ್ಷುಬ್ದ ಮನಸ್ಸುಗಳಿಗೆ ಭರವಸೆಯನ್ನು ನೀಡುತ್ತಾರೆ. ವೈವಿಧ್ಯವಾದ ಬ್ರಾತೃತ್ವದ ಬೆಂಬಲದೊಂದಿಗೆ ಸುವಾರ್ತೆಯ ಮೌಲ್ಯಗಳನ್ನು ಸಂವಹನ ಮಾಡಬಹುದು. ಅದರಿಂದ ಅವರಲ್ಲಿ ದೇವರು ಪ್ರೀತಿ, ನಿಷ್ಟೆ ಹಾಗು ನಿಕಟತೆಯನ್ನು ಆಶೀರ್ವದಿಸುತ್ತಾನೆ ಎಂದರು.
ಸಂತ ಜೋಸೇಫರು
“ಈ ನಿಟ್ಟಿನಲ್ಲಿ ಪೋಪ್ ಅವರಿಗೆಲ್ಲಾ ಸಂತ ಜೋಸೇಫರ ಮಾದರಿಯನ್ನು ಮನವರಿಸಿದರು. ವಿಶ್ವಾಸದ ಮುಖವನ್ನು ಹೊಂದಿರುವ ಇವರನ್ನು ಪಾಲಿಸಿರಿ, ಸಂತ ಜೋಸೇಫರು ಹೇಳಿದ್ದಾರೆ, ದೇವರ ಮೇಲಿನ ನಂಬೆಕೆಯೇ ನಮ್ಮ ಭಯಗಳು. ಇವುಗಳಿರುವಾಗ ನಾವು ನಮ್ಮ ದೌರ್ಬಲ್ಯಗಳೊಂದಿಗೂ ನಮಗೆ ಕೆಲಸ ಮಾಡಲು ಶಕ್ತಿ ನೀಡುತ್ತದೆ” ಎಂದರು.
ನಮ್ಮ ದೌರ್ಭಲ್ಯಗಳು ತಂದೆಯಾದ ದೇವರನ್ನು ಸಂದರ್ಶಿಸುವ ದೇವತಾಶಾಸ್ತ್ರದ ಕೊಂಡಿಗಳು, ದುರ್ಬಲವಾದ ಯಾಜಕರು ತಮ್ಮ ದೌರ್ಭಲ್ಯಗಳನ್ನು ವಿಮರ್ಶಿಸಿಕೊಂಡು ತಂದೆಯಾದ ದೇವರಲ್ಲಿ ಪ್ರಾರ್ಥಿಸುತ್ತಾರೆ. ನಾನೇ ಶ್ರೇಷ್ಟ ಎನ್ನುವ ಯಾಜಕರು ಬಹಳ ಕೆಟ್ಟದಾಗಿ ಕೊನೆಗೊಳ್ಳುತ್ತಾರೆ. ಸಂತ ಜೋಸೇಫರೊಂದಿಗೆ, ಅವರ ಮೃದುತ್ವ, ಸರಳ ಜೀವನ ಶೈಲಿಯುತ ಕ್ರಿಯಾವೃತ್ತಿಯನ್ನು ಆಳವಡಿಸಿಕೊಳ್ಳಲು ನಿಮ್ಮನ್ನು ಸ್ವಾಗತಿಸುತ್ತೇನೆ,” ಎಂದರು ಪೋಪ್ ಫ್ರಾನ್ಸಿಸ್.
ಸಂತೋಷ ಹಾಗೂ ಹಾಸ್ಯಪ್ರಜ್ಞೆ.
“ಹೆಚ್ಚು ಭ್ರಾತೃತ್ವದ ಒಗ್ಗಟ್ಟಿನ ಮತ್ತು ಸೇವಾ ಮನೋಭಾವನೆಯ ದೇವಾಲಯಗಳನ್ನು ಕಟ್ಟುವಂತೆ ಫ್ರೆಂಚ್ ಯಾಜಕರನ್ನು ಒತ್ತಾಯಿಸಿದರು. ಸಂತೋಷದ ಅಪೋಸ್ತಲರಾಗದೆ ಶ್ರಮಿಸುವ ಎಲ್ಲಾ ಸಹೋದರ ಸಹೋದರಿಗೆ ದೇವಾಲಯಕ್ಕಾಗಿ ಸಲ್ಲಿಸಿದ ಸೇವೆಗಾಗಿ ಕೃತಜ್ಞತರಾಗಿರಬೇಕೆಂದು ಅಪೇಕ್ಷಿಸಿದರು. ದೈವೀಕ ವಾರ್ತೆ ಸಾರುವದರೊಂದಿಗೆ ಹಾಸ್ಯ ಪ್ರಜ್ಞೆ ಮುಖ್ಯವಾಗಿರುತ್ತದೆ, ಇಲ್ಲಿರುವ ಪ್ರತಿಯೊಂದು ಯಾಜಕರು ದೀಕ್ಷೆಯನ್ನು ನೆನಪಿನಲ್ಲಿರಿಸಿಕೊಂಡು ಸಂತೋಷದ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟಿರುತಾರೆ. ಕ್ರೈಸ್ತರಲ್ಲಿ ವಿಶ್ವಾಸಿಸುವವರು ಮಾತ್ರ ಹೃದಯವನ್ನು ಗೆಲ್ಲುವರು.” ಎಂದು ಪೋಪ್ ಫ್ರಾನ್ಸಿಸ್ ಒಳ್ಳೆಯ ಕುರಿಹಾಗಿಯಾಗುವ ನಿಟ್ಟಿನಲ್ಲಿ ಗುರುಗಳಿಗೆ ಕಿವಿಮಾತನ್ನು ಹೇಳಿದರು.
ಕೃತಜ್ಞತೆ
ಗುರುಗಳು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದ ಪೋಪ್ ಫ್ರಾನ್ಸಿಸ್ “ದೇವರಿಗೆ ಕೃತಜ್ಞತೆ” ಸಲ್ಲಿಸುವ ಸದ್ಗುಣವನ್ನು ಬೆಳೆಸಿಕೊಳ್ಳಬೇಕೆಂದೂ ಸಹ ಹೇಳಿದರು. ಮೇಲಿಂದ ಸದಾ ಒಬ್ಬರು ನಿಮ್ಮನ್ನು ಪ್ರೀತಿಯಿಂದ ನೋಡುತ್ತಿರುತ್ತಾರೆ ಎಂದು ಹೇಳುತ್ತಾ “ಕೃತಜ್ಞತೆಯು ಒಂದು ಶಕ್ತಿಯುತ ಆಯುಧ. ಇದು ನಿರುತ್ಸಾಹ, ಒಂಟಿತನದ ಕ್ಷಣಗಳಲ್ಲಿ ಭರವಸೆಯ ಜ್ವಾಲೆಯನ್ನು ಉರಿಯುವಂತೆ ಮಾಡುತ್ತದೆ ಎಂದರು.
07 ಜೂನ್ 2021, 12:13
ಕನ್ನಡಕ್ಕೆ: ಆನಂದ್ ದೊಡ್ಡಮನಿ
留言