top of page
Search

ಕಾರಿತಸ್ ಯುರೋಪ: ವಿಶ್ವ ನಿರಾಶ್ರಿತರ ದಿನದಂದು, ನಿರಾಶ್ರಿತರನ್ನು ರಕ್ಷಿಸಿ ಉತ್ತೇಜಿಸಿ ಮತ್ತು ಸ್ವಾಗತಿಸಿ


ವಿಶ್ವಸಂಸ್ಥೆಯು ಇದೇ ಭಾನುವಾರ ತನ್ನ 20ನೇ ವಿಶ್ವ ನಿರಾಶ್ರಿತರ ದಿನವನ್ನು ಗುರುತಿಸಿದೆ. ದಿನವನ್ನು ಎದುರು ನೋಡುತ್ತಾ ಕಾರಿತಸ್ ಯುರೋಪ ವಿಶ್ವದಾದ್ಯಂತ ಸಹಸ್ರಾರು ಜನರು ಎದುರಿಸುತ್ತಿರುವ ಅವ್ಯವಸ್ಥೆಯನ್ನು ವಿವರಿಸುತ್ತದೆ. ಅನೇಕ ನಿರಾಶಿತರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವವರನ್ನು ಆಶ್ರಯಿಸುವ ಆಶಯವನ್ನು ಇದು ಹೊಂದಿದೆ ಹಾಗೂ ಅವರನ್ನು ಮರಳಿ ವಾಪಸ್ಸು ತಮ್ಮ ಸ್ವಂತ ನಾಡಿಗೆ ಕಳುಹಿಸಿಕೊಡುವ ಪ್ರಯತ್ನವನ್ನು ವಿಶ್ವಸಂಸ್ಥೆ ಎದುರುನೋಡುತ್ತಿದೆ.


ವರದಿ: ಫ್ರಾಂಚೆಸ್ಕ ಮೆರ್ಲೊ


ದ್ವಿದಶ ವಿಶ್ವ ನಿರಾಶ್ರಿತರ ದಿನವನ್ನು ಜೂನ್ 20 ಭಾನುವಾರ ಯುಎನ್ ಮತ್ತು ವಿಶ್ವದ ಇತರ ದೇಶಗಳು ಆಚರಿಸಲಿದೆ, 1951ರ ನಿರಾಶ್ರಿತರ ಸಮಾವೇಶ ನಡೆದು 20 ವರ್ಷಗಳ ನಂತರ ಈ ಆಚರಣೆಯು ಮರುಕಳಿಸುತ್ತಿದೆ. ಕಾರಿತಸ್ ಯುರೋಪ ಜೂನ್ 18ರಂದು ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ ದಿನವನ್ನು ಹೊಸ ನೀತಿ ನಿರೂಪಿಸುವ ಸಲುವಾಗಿ ಕರೆ ನೀಡಿದೆ, “ಆಶ್ರಯದ ಹಕ್ಕನ್ನು ಮತ್ತು ವಲಸೆಗೆ ಹೋದವರ ಘನತೆಯನ್ನು ರಕ್ಷಿಸುವುದು ಮತ್ತು ಆ ಸಮುದಾಯದವರ ಬೆಳೆದಿರುವಂತಹ ಮಧ್ಯೆ ಗೋಡೆಗಳ ಹೊಡೆದು ಮಾನವ ಚಲನವಲನಕ್ಕೆ ಅನುಕೂಲವಾಗುವಂತೆ” ನೀತಿ ರೂಪಕ ಕರೆ ಹೂಡುತ್ತಿದೆ.


ಹುಡುಕಾಟ


ವಿಶ್ವ ನಿರಾಶ್ರಿತರ ದಿನ ದಂದು ಪತ್ರಿಕಾ ಪ್ರಕಟಣೆಯಲ್ಲಿ ಕಾರಿತಸ್ ಯುರೋಪ, “ಈಗ ವಿಶ್ವದಾದ್ಯಂತ 82.4 ಮಿಲಿಯನ್ ಜನರು ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಂಡು ಯುರೋಪಿನಲ್ಲಿ ತಂಗುವುದು ಅಪಾಯಕಾರಿಯಾಗಿದೆ," ಎಂಬ ಕಳವಳವನ್ನು ವ್ಯಕ್ತಪಡಿಸುತ್ತದೆ. ಲಕ್ಷಾಂತರ ನಿರಾಶಿತರು ಆಂತರಿಕವಾಗಿ ಸ್ಥಳಾಂತರಗೊಂಡ ಜನರೊಂದಿಗೆ ಮತ್ತು ಯುದ್ಧ ಹಾನಿಗೆ ಒಳಗಾದ ಯುರೋಪಿನ ಸಂತ್ರಸ್ತರಿಗೆ ಪ್ರಥಮ ರಕ್ಷಣೆ ನೀಡಲಾಗುತ್ತದೆ ಎಂದು ಕಾರಿತಸ್ ಯುರೋಪ ಹೇಳಿಕೆ ನೀಡಿದೆ. ಆ ಆಂತರಿಕ ಸ್ಥಿತಿ ಮತ್ತು ಬಿಕ್ಕಟ್ಟಿನ ಹೊರತಾಗಿಯೂ, ಯುರೋಪಿನ ರಾಷ್ಟ್ರಗಳು, “ಅಕ್ರಮ ಹಿಂಪಡೆಯಲು ಮತ್ತು ತೀವ್ರ ಹಿಂಸಾಚಾರವನ್ನು ರಕ್ಷಣೆಗಾಗಿ ಹಾತೊರೆಯುವವರ ಮೇಲೆ ಬೀರುತ್ತಾ, ಅವರನ್ನು ವಾಪಸ್ಸು ಕಳುಹಿಸದೆ ಪ್ರಕರಣಗಳನ್ನು ಮುಚ್ಚಿ ಹಾಕುವ ಸಲುವಾಗಿ ಕಾರ್ಯನಿರ್ವಹಿಸಿದೆ.


ಬಾಲ್ಕನ್ ಮಾರ್ಗ


ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಕಾರಿತಸ್ ಯುರೋಪ, ಬಾಲ್ಕನ್ ಮಾರ್ಗವನ್ನು ಕೇಂದ್ರೀಕೃತವಾದ ಪ್ರಕರಣವೆಂದು ಉಲ್ಲೇಖಿಸಿದೆ. ಕ್ರೊಯೇಷಿಯಾ ಮತ್ತು ಬೋಸ್ನಿಯಾ-ಹರ್ಜೆಗೊವಿನಾ ನಡುವಿನ ಗಡಿಗಳಲ್ಲಿ ಕಂಡುಬರುವ ಕಠಿಣ ವಾಸ್ತವವೆಂದರೆ ಜನರು ಗಡಿಗಳನ್ನು ದಾಟದಂತೆ ತಡೆಯುವ ಮೂಲಕ ಅವಮಾನಿಸಲಾಗುತ್ತಿದೆ. ವಲಸಿಗರನ್ನು ಬೆತ್ತಲೆಯಾಗಿಸಿ ಕಾಡಿನಲ್ಲಿ ಬಿಟ್ಟುಬಿಡಲಾಗುತ್ತದೆ, ಅವರನ್ನ, ಹಿಂಸಿಸಲಾಗೆ, ದರೋಡೆ ಮಾಡಲಾಗಿ ಮತ್ತು ನಾಯಿಗಳಿಂದ ಹಲ್ಲೆ ಮಾಡಲಾಗುತ್ತದೆ ಎಂದು ಹೇಳಿಕೆಗಳು ತಿಳಿಸಿವೆ.


ಮೆಡಿಟರೇನಿಯನ್


ಕಾರಿತಾಸ್ ಹೀಗೆಂದು ಹೇಳಿಕೆ ನೀಡಿದೆ, 'ಬಾಲ್ಕನ್ ಮಾರ್ಗ' ಒಂದು ಪ್ರತ್ಯೇಕ ಪ್ರಕರಣವಲ್ಲ. ಪ್ರತಿದಿನ, ಯುರೋಪನ್ನು ತಲುಪಲು ಪ್ರಯತ್ನಿಸುತ್ತಿರುವಾಗ ಜನರು ತುಲನಾತ್ಮಕವಾಗಿ ಉದಾಸೀನತೆಯಿಂದ ನಮ್ಮ ಕಣ್ಣಮುಂದೆ ಸಾಯುತ್ತಾರೆ. "2021 ರಲ್ಲಿ, ಮೆಡಿಟರೇನಿಯನ್ ನೀರಿನಲ್ಲಿ ಈಗಾಗಲೇ 800 ಕ್ಕೂ ಹೆಚ್ಚು ಜನರು ಕಣ್ಮರೆಯಾಗಿದ್ದಾರೆ, ಮತ್ತು 13,000 ಕ್ಕೂ ಹೆಚ್ಚು ಜನರನ್ನು ತಡೆಹಿಡಿದು ಲಿಬಿಯಾಕ್ಕೆ ಹಿಂತಿರುಗಿಸಲಾಗಿದೆ, ಅಲ್ಲಿ ಭೀಕರ ಸಂಕಟಗಳು ಅವರಿಗೆ ಕಾಯುತ್ತಿವೆ". ಲಿಬಿಯಾದ ವಲಸಿಗರಿಗೆ ನಾಟಕೀಯ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ, ಯುರೋಪಿಗೆ ಜನರು ಬರುವುದನ್ನು ತಡೆಯಲು ಯುರೋಪಿಯನ್ ರಾಷ್ಟ್ರಗಳು ಉತ್ತರ ಆಫ್ರಿಕಾದ ದೇಶದೊಂದಿಗೆ ಸಹಕರಿಸುತ್ತಲೇ ಇವೆ ಎಂದು ಕಾರಿತಾಸ್ ಬಾಲ್ಕನ್ ಮಾರ್ಗ

ತನ್ನ ಪತ್ರಿಕಾ ಪ್ರಕಟಣೆಯಲ್ಲಿ, ಕ್ಯಾರಿಟಾಸ್ ಯುರೋಪಾ ಬಾಲ್ಕನ್ ಮಾರ್ಗವನ್ನು ಒಂದು ಸಂದರ್ಭದಲ್ಲಿ ಉಲ್ಲೇಖಿಸುತ್ತದೆ. ಕ್ರೊಯೇಷಿಯಾ ಮತ್ತು ಬೋಸ್ನಿಯಾ-ಹರ್ಜೆಗೊವಿನಾ ನಡುವಿನ ಗಡಿಗಳಲ್ಲಿ ಕಂಡುಬರುವ ಕಠಿಣ ವಾಸ್ತವವೆಂದರೆ ಜನರು ಗಡಿಗಳನ್ನು ದಾಟದಂತೆ ತಡೆಯುವ ಮೂಲಕ ಅವಮಾನಿಸಲಾಗುತ್ತಿದೆ. ವಲಸಿಗರನ್ನು ಬೆತ್ತಲೆಯಾಗಿ ತೆಗೆದುಹಾಕಿ ಕಾಡಿನಲ್ಲಿ ಬಿಟ್ಟುಬಿಡಲಾಗುತ್ತದೆ, ಅವರನ್ನು ಥಳಿಸಲಾಗುತ್ತದೆ, ಹಿಂಸಿಸಲಾಗುತ್ತದೆ, ದರೋಡೆ ಮಾಡಲಾಗುತ್ತದೆ ಮತ್ತು ನಾಯಿಗಳಿಂದ ಹಲ್ಲೆ ಮಾಡಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.


ಉದಾಸೀನತೆಯ ಜಾಗತೀಕರಣವು ನಿಲ್ಲಬೇಕು ಮತ್ತು ಯುರೋಪಿಯನ್ ರಾಷ್ಟ್ರಗಳು ಈ ಕ್ರಮದಲ್ಲಿ ಜನರ ಹಕ್ಕು ಮತ್ತು ಘನತೆಯನ್ನು ಗೌರವಿಸಬೇಕು. ಹಿಂಸಾಚಾರವನ್ನು ಕೊನೆಗೊಳಿಸುವ ನಿರಾಶ್ರಿತರ ಸಮಾವೇಶ ಮತ್ತು ಇ.ಯು ಸ್ಥಾಪಿಸಿದ ಮೌಲ್ಯಗಳನ್ನು ಗೌರವಿಸಲು ಮತ್ತು ಎತ್ತಿಹಿಡಿಯಲು ಸ್ಥಿರವಾದ ಕ್ರಿಯೆಗಳು ಕೇವಲ ಉದ್ದೇಶಗಳನ್ನು ಬದಲಿಸಬೇಕು, ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.


ನಿರಾಶ್ರಿತರೊಂದಿಗೆ ಜಾಗತಿಕ ಒಗ್ಗಟ್ಟು ಮತ್ತು ಅವರಿಗೆ ಆತಿಥ್ಯವಹಿಸು ಅಗತ್ಯವಿದೆ ಎಂದು ಹೇಳಿಕೆ ನೀಡಲಾಗಿದೆ. ಸಾಮರ್ಥ್ಯದ ಹೊರತಾಗಿಯೂ, ಅಭಿವೃದ್ಧಿ ಹೊಂದಿದ ದೇಶಗಳು ವಿಶ್ವದ ನಿರಾಶ್ರಿತರಲ್ಲಿ ಕೇವಲ 15 ಪ್ರತಿಶತದಷ್ಟು ಮಾತ್ರ ಆತಿಥ್ಯ ವಹಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ನಿರಾಶ್ರಿತ ರೊಂದಿಗೆ ಆತಿತ್ಯವಹಿಸಬೇಕಾಗಿದೆ.


ತನ್ನ ಹೇಳಿಕೆಯನ್ನು ಮುಕ್ತಾಯಗೊಳಿಸಿದ ಕಾರಿತಸ್ ಯುರೋಪಾ, ಯುರೋಪಿಯನ್ ನೀತಿ ನಿರೂಪಕರು, ತಮ್ಮ ಉದಾಸೀನತೆಯನ್ನು ಪುನರ್ವಿಮರ್ಶಿಸುವಂತೆ ಒತ್ತಾಯಿಸುತ್ತಾರೆ ಮತ್ತು ಈ ಕ್ರಮದಲ್ಲಿ ಜನರನ್ನು ರಕ್ಷಿಸುವ, ಉತ್ತೇಜಿಸುವ, ಸ್ವಾಗತಿಸುವ ಮತ್ತು ಸಂಯೋಜಿಸುವ ಅಗತ್ಯವನ್ನು ಪುನರುಚ್ಚರಿಸಿದ್ದಾರೆ.


18 June 2021, 15:49


ಕನ್ನಡಕ್ಕೆ: ಸಹೋ. ಅಂತೋಣಿ ನವೀನ್, ಬೆಂಗಳೂರು

64 views

Comments

Couldn’t Load Comments
It looks like there was a technical problem. Try reconnecting or refreshing the page.
bottom of page