ಕೋವಿಡ್-೧೯ರ ಬಿಕ್ಕಟ್ಟಿನಲ್ಲಿ ಬಳಲುತ್ತಿರುವವರ ಸಹಾಯಕ್ಕೆ ವಿಯೆಟ್ನಾಂ ಧರ್ಮಸಭೆ


ವಿಯೆಟ್ನಾಂನಲ್ಲಿ ಪರಿಸ್ಥಿತಿ ಹದಗೆಡುತ್ತಿರುವಾಗ ಅಲ್ಲಿನ ಕಥೋಲಿಕ ಸಮುದಾಯದವರು ಕೋವಿಡ್-೧೯ರ ಪೀಡಿತರಿಗೆ ನೆರವಿನ ಕಾರ್ಯವನ್ನು ಮುಂದುವರೆಸಿದ್ದಾರೆ.


ವ್ಯಾಟಿಕನ್ ಸಿಬ್ಬಂದಿ ವಾರ್ತಾ ಬರಗಾಹರರಿಂದ


ಪ್ರಪಂಚದ ಅನೇಕ ದೇಶಗಳು ಕೋವಿಡ್-೧೯ರ ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಿದ ಮೇಲೆ ವಿಯೆಟ್ನಾಂನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ. ಕಳೆದ ಸೋಮವಾರ ೧೩,೪೮೩ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ೧೭೧೪ ಪ್ರಕರಣಗಳು ಹೋ ಚಿ ಮಿನ್‌ಹ್ ನಗರದಲ್ಲಿ ದಾಖಲಾಗಿದೆ. ಸ್ಥಳೀಯ ಧರ್ಮಪ್ರಾಂತ್ಯದ ಕಥೋಲಿಕ ಸಮುದಾಯದವರು ತಮ್ಮ ಸಹಕಾರ ನೀಡಲು ಮುಂದಾಗಿದ್ದಾರೆ.


ಟಾನ್ ಟಾಂಗ್ ಧರ್ಮಕೇಂದ್ರ


ಟಾನ್ ಟಾಂಗ್ ಧರ್ಮಕೇಂದ್ರದ ಧರ್ಮಗುರು ಫಾದರ್ ಜೋಸೆಫ್ ಐನ್ ವಾನ್ ಥಾ ರವರು ಪ್ರಾರ್ಥನೆಯೊಂದಿಗೆ ದಾನಕಾರ್ಯಗಳನ್ನು ಕೈಗೊಳ್ಳುವಂತೆ ಶ್ರದ್ಧಾಳುಗಳಿಗೆ ಕರೆ ನೀಡಿದ್ದಾರೆ. ಹೆಚ್ಚು ಅಗತ್ಯ ಇರುವವರಿಗೆ ಧರ್ಮಕೇಂದ್ರವು ಆಹಾರ ವಿತರಣೆಯನ್ನು ಆಯೋಜಿಸಿದೆ. ಇದರಲ್ಲಿ ಕಸ ಸಂಗ್ರಹಕಾರರು, ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಬಡತನದ ಪ್ರದೇಶದಲ್ಲಿ ವಾಸಿಸುವವರು ಒಳಗೊಂಡಿದ್ದಾರೆ. “ಅನೇಕ ಕುಟುಂಬಗಳು ಬೃಹತ್ ಸವಾಲುಗಳನ್ನು ಎದುರಿಸುತ್ತಿವೆ. ಆದರೂ ದೇವರಲ್ಲಿ ಸದಾ ನಂಬಿಕೆ ಹೊಂದಿದ್ದೇವೆ. ಸಾಂಕ್ರಾಮಿಕ ರೋಗದ ಅಂತ್ಯಕ್ಕಾಗಿ ಹಾಗು ಎಲ್ಲರಲ್ಲಿ ಶಾಂತಿ ನೆಲೆಸುವುದಕ್ಕಾಗಿ ಪ್ರಾರ್ಥಿಸುತ್ತೇವೆ. ಪ್ರೀತಿ ಔದಾರ್ಯತೆಯಿಂದ ದಾನ ಮತ್ತು ಸಹಕಾರ ನೀಡಿದವರಿಗೆ ಧನ್ಯವಾದಗಳು” ಎಂದು ಫಾದರ್ ಜೋಸೆಫ್ ತಿಳಿಸಿದ್ದಾರೆ.


ಸಂತ ಮಾರ್ಟಿನ್ಸ್ ಧರ್ಮಕೇಂದ್ರ


ಸಂತ ಮಾರ್ಟಿನ್ಸ್ ಧರ್ಮಕೇಂದ್ರದ ಧರ್ಮಗುರು ಫಾದರ್ ಪೀಟರ್ ವಿ ಮಿನ್‌ಹ್ ಹಾಂಗ್ ರವರು ಅದಾಗಲೇ ೨೦೧೬ರಲ್ಲಿ ಕ್ವಾನ್ ಕಾಮ್ ೨೦೦೦ನ್ನು ತೆರೆದಿದ್ದು ಕ್ಯಾಂಟೀನ್‌ನಲ್ಲಿ ಬಡವರು ೨೦೦೦ ಡಾಂಗ್‌ಗೆ (ಯುಎಸ್ ಸೆಂಟ್ಸ್ ದರಕ್ಕೆ ಸಮಾನ) ಒಂದು ಪ್ಲೇಟ್ ಊಟವನ್ನು ಪಡೆಯಬಹುದಿತ್ತು. ಆದರ