ಕೋವಿಡ್ - 19: ಯು.ಕೆ ದೈನಂದಿನ ಪ್ರಕರಣಗಳಲ್ಲಿ ಭಾರೀ ಏರಿಕೆಯನ್ನು ದಾಖಲಿಸಿದೆ.


ಫೆಬ್ರವರಿಯ ನಂತರ ಮೊದಲ ಬಾರಿಗೆ ಯು.ಕೆ 10000 ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಸ್ತುತ ಸೋಂಕಿನ ಹೆಚ್ಚಳವು ಭಾರತದಲ್ಲಿ ಮೊಟ್ಟಮೊದಲು ಕಂಡುಬಂದಿದ್ದರಿಂದ ಭಾರತ ದೇಶವನ್ನು ಆರೋಪಿಸಲಾಗಿದೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ.


ಸರಿಸುಮಾರು ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ದೈನಂದಿನ ಸೋಂಕಿನ ಪ್ರಮಾಣ 10, 000 ಹೆಚ್ಚಾಗಿದೆ ಎಂದು ಗುರುವಾರ ಸರ್ಕಾರ ವರದಿ ನೀಡಿದೆ.


ಈ ಸೋಂಕಿನಿಂದ ಪರೀಕ್ಷೆಗೆ ಒಳಗಾಗಿ ಪಾಸಿಟಿವ್ ಎಂದು ಕಂಡು ಬಂದವರಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಈ ಪ್ರಸ್ತುತತೆಯನ್ನು ಸಾವಿನ ಅಂಕಿಅಂಶಗಳು ತೋರಿಸಿಕೊಟ್ಟಿವೆ. ಇದು ಮೇ ಹನ್ನೊಂದರ ನಂತರದ ದೈನಂದಿನ ಸೋಂಕಿನ ಸಾವಿನ ಸಂಖ್ಯೆ.


ಯೂರೋಪಿನಲ್ಲಿರುವ ಯು.ಕೆಯಲ್ಲಿ ಸುಮಾರು 128, 000 ಹೆಚ್ಚು ಸಾವುಗಳನ್ನು ಕಂಡಿದೆ.


ಡೆಲ್ಟ ಬಿನ್ನತೆ

ಪ್ರಸ್ತುತ ಪ್ರಕರಣಗಳ ಹೆಚ್ಚಳವನ್ನು ಡೆಟ್ಟಾ ಭಿನ್ನತೆಯಿಂದ ಆಗಿದೆ ಎಂದು ಆರೋಪಿಸಲಾಗಿದೆ. ಈ ಸೋಂಕಿನ ಹೆಚ್ಚಳವನ್ನು ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟಿದೆ ಹಾಗೂ ಈ ಸೋಂಕಿನ ಹೊಸ ಪ್ರಕರಣಗಳಲ್ಲಿ ಗರಿಷ್ಠ 95 % ಯು.ಕೆ ಪ್ರದೇಶದಲ್ಲಿ ಕಂಡುಬಂದಿದೆ.


ಸರ್ಕಾರದ ಮುಖ್ಯ ವೈದ್ಯ ಸಲಹೆಗಾರ ಪ್ರೊಫೆಸರ್ ಕ್ರಿಸ್ ವಿಟಿ ಅವರು, “ ಪ್ರಸ್ತುತ ಕೊರೋನಾ ಸೋಂಕಿನ ವೈರಾಣು ಮತ್ತಷ್ಟು ಉಲ್ಬಣವಾಗಿ ಅದರ ಎತ್ತರವು ಇನ್ನೂ ಅನಿಶ್ಚಿತವಾಗಿ ಉಳಿದಿದೆ” ಎಂದು ಹೇಳಿದ್ದಾರೆ.


ಈ ಚಳಿಗಾಲದ ವೈರಾಣು ಉಲ್ಬಣಕ್ಕೆ ದೇಶವು ಪಟ್ಟಿ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.