ಕೋವಿಡ್ -19 : ಹೆಚ್ಚಾಗುತ್ತಿರುವ ಕೋವಿಡ್ 19 ಪ್ರಕರಣಗಳಿಂದಾಗಿ ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು ಭಾರತದ ನೆರವ


ಭಾರತದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು ಕೋವಿಡ್ ಪೀಡಿತರ ಸಹಾಯಕ್ಕಾಗಿ ದೇಣಿಗೆಗಾಗಿ ಮನವಿಯ ಮಾಡಲು ಪ್ರಾರಂಭಿಸಿತು.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ವರದಿಗಾರ


ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಲಗಾಮಿಲ್ಲದೆ ಸಾಗುತ್ತಿದೆ. ಇದುವರೆಗೆ 29 ದಶಲಕ್ಷ ಸೋಂಕುಗಳು ವರದಿಯಾಗಿವೆ. ಭಾರತವು ಗುರುವಾರ ಒಂದು ದಿನದ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ದಾಖಲಿಸಿ ಸುಮಾರು 360 ಸಾವಿರ ಸಾವುಗಳ ಭಯಾನಕ ಸಂಖ್ಯೆಯನ್ನು ಮುಟ್ಟಿದೆ.


ವೀಡಿಯೊ ಸಾಕ್ಷ್ಯ

ಇದರಿಂದಾಗಿ ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು (ಸಿಐ) ತಮಿಳುನಾಡು ರಾಜ್ಯದ ದಿಂಡಿಗಲ್‌ನ ಧರ್ಮಕ್ಷೇತ್ರದ ಧರ್ಮಕ್ಷೇತ್ರದ ಕಾರಿತಾಸ್ ಸಿಬ್ಬಂದಿ ಜಾಕೋಬ್ ರವರ ಮನಮುಟ್ಟುವ ವಿಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿತು.


ಈ ಸಣ್ಣ ವೀಡಿಯೊದಲ್ಲಿ, ಅವರು ಸ್ಥಳೀಯ ಜನರು ಎದುರಿಸುತ್ತಿರುವ ವಿಷಮ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಹಿನ್ನೆಲೆಯಲ್ಲಿ ರೋಗದಿಂದ ಬಳಲುವ ಜನರು ಕಷ್ಟಕರ ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಕಾಣುತ್ತವೆ.


ಇಂತಹ ಪರಿಸ್ಥಿತಿಯಲ್ಲೂ ದೃಢವಾದ ಭರವಸೆಯ ಕಿರಣಗಳು ಹೊರಹೊಮ್ಮುತ್ತಾ ಸ್ಥಳೀಯ ಜನರ ನೆರವಿಗೆ ನಿಂತ ಕಾರಿತಾಸ್ ನ ಬದ್ಧತೆಯನ್ನು ಈ ವಿಡಿಯೋ ಒತ್ತಿ ಹೇಳುತ್ತದೆ.