top of page

ಜೆನಿಸಿಸ್ ಫೌಂಡೇಶನ್ ಸಂಸ್ಥಾಪಕ ಸಂತ ಜಾನ್ ಹೆನ್ರಿ ನ್ಯೂಮನ್‍ರ ಸ್ಮರಣಾರ್ಥ ಸಂಗೀತ ಕಾರ್ಯಕ್ರಮದ ಪ್ರಕಟಣೆ


ಸಂಯುಕ್ತ ಸಂಸ್ಥಾನ ಮೂಲದ ಜೆನಿಸಿಸ್ ಫೌಂಡೇಶನ್ 2019ರಲ್ಲಿ ಪೋಪ್ ಫ್ರಾನ್ಸಿಸ್ ಅವರಿಂದ ಸಂತರಪದವಿಗೇರಿದ ಕಾರ್ಡಿನಾಲ್ ಜಾನ್ ಹೆನ್ರಿ ನ್ಯೂಮನ್‍ರ ಜೀವನ ಮತ್ತು ಬರಹಗಳಿಂದ ಪ್ರೇರಿತವಾದ ವಿಶೇಷ ಸಂಗೀತ ಕಾರ್ಯಕ್ರಮವನ್ನು ಘೋಷಿಸಿದೆ. ನ್ಯೂಮನ್‍ರ ಧ್ಯಾನ ಮತ್ತು ಸಾಧನೆ ಎಂಬ ಸಂಗೀತ ಕಛೇರಿ ಗುರುವಾರ ಜೂನ್ 10 ರಂದು ಸಂಜೆ 7.00 ಗಂಟೆಗೆ ಲಂಡನ್‍ನ ಮೇಫೇರ್ ಫಾರಮ್ ಸ್ಟ್ರೀಟ್‍ನ ಅಮಲೋದ್ಭವ ಜೆಸ್ವಿಟ್ ದೇವಾಲಯದಲ್ಲಿ ನಡೆಯಲಿದೆ.

ಕರೋಣ ವೈರಾಣು ಸಮಯದಲ್ಲಿ ಸಂಗೀತ ಕಛೇರಿಗೆ ಪ್ರವೇಶ

ಜೆನಿಸಿಸ್ ಫೌಂಡೆಶನ್‍ನ ಕ್ಲಾಸಿಕ್ ಎಫ್‍ಎಂನ ಫೇಸ್ ಬುಕ್ ಪುಟದಲ್ಲಿ ಲೈವ್ ಸಂಗೀತ ಕಛೇರಿಯನ್ನು ನೇರ ಪ್ರಸಾರ ಮಾಡಲಾಗುವುದು ಮತ್ತು ಬೇಡಿಕೆಯ ಮೇರೆಗೆ ಒಂದು ತಿಂಗಳ ಕಾಲದ ವರೆಗೆ ವಿಸ್ತರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಹ್ಯಾರಿ ಕ್ರಿಸ್ಟೋಫರ್ಸ್ ಸಿಬಿಇ ಅಂಡ್ ಸಿಕ್ಸ್ಟೀನ್ ಕ್ಟೀನ್ ಹಾಗು ಸರ್ ಜೇಮ್ಸ್ ಮ್ಯಾಕ್ಮಿಲನ್ ಮತ್ತು ವಿಲ್ ಟಾಡ್ ಅವರ ಎರಡು ಹೊಸ ಜೆನಸಿಸ್ ಫೌಂಡೇಶನ್‍ನ ಕೋರಲ್ ಆಯೋಗಗಳ ವಿಶ್ವ ಪ್ರಥಮ ಪ್ರದರ್ಶನಗಳನ್ನು ಈ ಗೋಷ್ಠಿ ಹೊಂದಿರುತ್ತದೆ. ಅದರೊಂದಿಗೆ ಕ್ಲಾಸಿಕ್ ಎಫ್‍ಎಂನ ಪ್ರಮುಖ ಪ್ರಾಥಃಕಾಲ ಕಾರ್ಯಕ್ರಮದ ನಿರೂಪಕ ಅಲೆಕ್ಸಾಂಡರ್ ಆರ್ಮ್ ಸ್ಟ್ರಾಂಗ್‍ರವರು ಕಾರ್ಡಿನಾಲ್ ನ್ಯೂಮನ್‍ರವರ ಹಾಗು ಕವಿ ಧರ್ಮಸಭೆಯ ವಿಶ್ವಾಸಿ ಜಾನ್ ಡೊನ್ನೆರವರ ವಾಕ್ಯಗಳನ್ನು ಪಠಿಸುವರು,

ಹದಿನಾರು ಮಂದಿ ಸಮೂಹಗಾನ ಹಾಗು ನಿಯತಕಾಲಿಕ ವಾದ್ಯವೃಂದ: ನವೋದಯ ವ್ಯಾಖ್ಯಾನುಕಾರರು, ವಿನೂತನ ಮತ್ತು ಆಧುನಿಕ ಮೇಳಗಳು ಒಳಗೊಂಡಿದ್ದು ಇವರು ವಿಶ್ವದಾಧ್ಯಂತ ಪ್ರಶಂಶಿಲ್ಪಟ್ಟವರು. ಇದರ ಸಂಸ್ಥಾಪಕ ಹ್ಯಾರಿ ಕ್ರಿಸ್ಟೋಫರ್ ಸಿಬಿಇ.

ಸಂಯುಕ್ತ ಸಂಸ್ಥಾನದ ಕ್ಲಾಸಿಕ್ ಎಫ್‍ಎಂ ಅತ್ಯಂತ ಜನಪ್ರಿಯ ಶಾಸ್ತ್ರೀಯ ಸಂಗೀತ ಕೇಂದ್ರವಾಗಿದ್ದು ಇದು ಪ್ರತಿ ವಾರ 5.5 ದಶಲಕ್ಷದಷ್ಟು ಪ್ರೇಕ್ಷಕರನ್ನು ತಲುಪುತ್ತದೆ.

ಜೆನಿಸಿಸ್‍ನ ಸ್ಥಾಪಕ (ಫೌಂಡೇಶನ್)

2001 ರಲ್ಲಿ ಜಾನ್ ಸ್ಟಡ್ಜ್ ಜೆನ್ಸಿ ಅವರಿಂದ ಜೆನಸಿಸ್ ಫೌಂಡೇಶನ್ ಸ್ಥಾಪನೆಗೊಂಡಿತು. ಕಳೆದ 20 ವರ್ಷಗಳಲ್ಲಿ ಫೌಂಡೇಶನ್ ಕಲೆಗಳಿಗೆ 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ದೇಣಿಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದನಸಹಾಯ ಮತ್ತು ಪಾಲುದಾರಿಕೆ ಮಾದರಿಯ ಮೂಲಕ ಅದು ಅವಕಾಶಗಳನ್ನು ಶಕ್ತಗೊಳಿಸಿದೆ. ರಂಗಭೂಮಿ ಮತ್ತು ಸಂಗೀತದಲ್ಲಿ ಸಾವಿರಾರು ಯುವ ಕಲಾವಿದರಿಗೆ ಅನುಭವ ಮತ್ತು ಸ್ಥಿತಿ ಸ್ಥಾಪಕತ್ವ ಎರಡನ್ನೂ ನಿರ್ಮಿಸುತ್ತದೆ.

ಜಾನ್ ಹೆನ್ರಿ ನ್ಯೂಮನ್‍ರ ಮೇಲೆ

1840ರ ದಶಕದ ಉತ್ತರಾರ್ಧದಲ್ಲಿ ನ್ಯೂಮನ್ ಬರೆದ ಧ್ಯಾನದ ವಾಕ್ಯಗಳನ್ನು ಪ್ರಾರಂಭಗೊಂಡ ಹೊಸ ಆಯೋಗಗಳು ಸೆಳೆದಿವೆ. ”ದೇವರು ತವiಗಾಗಿ ಕೆಲವು ನಿರ್ದಿಷ್ಟ ಸೇವೆ ಮಾಡಲು ನನ್ನನ್ನು ಸೃಷ್ಟಿಸಿದ್ದಾನೆ” ಮ್ಯಾಕ್ ಮಿಲನ್ ಮತ್ತು ಟಾಡ್ ಈಗಾಗಲೇ ಜೆನೆಸಿಸ್ ಫೌಂಡೇಶನ್‍ಗಾಗಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇದು ತನ್ನ 20 ವರ್ಷಗಳ ಇತಿಹಾಸದಲ್ಲಿ 25ಕ್ಕೂ ಹೆಚ್ಚು ಪವಿತ್ರ ಮೇಳಗಳ ಸಂಗೀತವನ್ನು ಆಯೋಜಿಸಿದೆ. ಏಪ್ರಿಲ್ 2018ರಲ್ಲಿ ವಿಶ್ವದ ಮೊದಲ ಸಂಯುಕ್ತ ಸಂಸ್ಥಾನದ ಅತ್ಯಂತ ಜನಪ್ರಿಯ ಶಾಸ್ತ್ರೀಯ ಸಂಗೀತ ಕೇಂದ್ರವಾದ ಕ್ಲಾಸಿಕ್ ಎಫ್‍ಎಂ ಮ್ಯಾಕ್ಮಿಲ್ ಅವರ 50 ನಿಮಿಷಗಳ ಸ್ಟಾಬ್ಯಾಟ್ ಮೇಟರ್ ಗೀತೆಗಳನ್ನು, ‘ದಿ ಸಿಕ್ಸ್‍ಟೀನ್ ಮತ್ತು ಹ್ಯಾರಿ ಕ್ರಿಸ್ಟೋಫರ್ಸ್’ ನಿರ್ವಹಿಸಿದ ಜೆನಸಿಸ್ ಪೌಂಡೇಶನ್ ಆಯೋಗವು ವ್ಯಾಟಿಕನ್‍ನ ಸಿಸ್ಟೈನ್ ಚಾಪಲ್‍ನಿಂದ ನೇರ ಪ್ರಸಾರ ಮಾಡಿತೆಂಬ ವರದಿ ಇದೆ.

ಸಂತ ಜಾನ್ ಹೆನ್ರಿ ನ್ಯೂಮನ್ ರವರು ಕಥೋಲಿಕ ಧರ್ಮಸಭೆಯ ಜಾಗತಿಕ ಮಟ್ಟದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಮತ್ತು ಆಂಗ್ಲಿಕನ್ ಸಭೆಯಿಂದ ಗೌರವಾನ್ವಿತರು. ಯಾಜಕರಾಗಿ, ದೇವತಾಶಾಸ್ತ್ರಜ್ಞರಾಗಿ, ಶಿಕ್ಷಣತಜ್ಞರಾಗಿ ಆಂಗ್ಲಿಕನ್ ಸಭೆಯಲ್ಲಿ ತಮ್ಮ ಜೀವನ ಪ್ರಾರಂಭಿಸಿದರು. 1845ರಲ್ಲಿ ಅವರು ಕಥೋಲಿಕ ಧರ್ಮಸಭೆಗೆ ಸೇರಿದ ಬಳಿಕ 1879ರಲ್ಲಿ ಅವರು ಕಾರ್ಡಿನಲ್ ಪದವಿಗೇರಿದರು. ಲಂಡನ್‍ನಲ್ಲಿ ಜನಸಿದ ಅವರು ನಂತರ ಆಕ್ಷ್ ಫೋರ್ಡ್ ಹಾಗು ಬರ್ಮಿಂಗ್ ಹ್ಯಾಮ್‍ನಲ್ಲಿ ನೆಲೆಸಿದ್ದರು. ಬರ್ಮಿಂಗ್ ಹ್ಯಾಮ್‍ನಲ್ಲಿ ಒರೆಟರಿ ಮತ್ತು ಒರೆಟರಿ ಸ್ಕೂಲ್‍ನ್ನು ಸ್ಥಾಪಿಸಿ ಅಲ್ಲಿ 30 ವರ್ಷಗಳನ್ನು ಕಳೆದರು. 50 ವರ್ಷಗಳ ಅವಧಿಯಲ್ಲಿ ಸಂತ ಪದವಿಗೆ ಏರಿದ ಪ್ರಥಮ ಆಂಗ್ಲ ವ್ಯಕ್ತಿ. ನ್ಯೂಮನ್‍ರವರು ಅಪಾರ ದೈವ ಭಕ್ತರು, ಬ್ರಿಟನ್‍ನ ಶ್ರೇಷ್ಠ ವ್ಯಕ್ತಿ ಹಾÀಗು ನಾವು ಈಗ ಗೌರವಿಸುವ ಮಹಾನ್ ಸಂತರು. ಸಂಪ್ರದಾಯಗಳ ನಡುವಿನ ಮಹಾನ್ ವ್ಯಕ್ತಿ ಎಂದೆಲ್ಲ ವೇಲ್ಸ್‍ನ ರಾಜಕುಮಾರಿ ಬಣ್ಣಿಸಿದ್ದಾರೆ. ಸಂಗೀತಲೋಕದಲ್ಲಿ 1900ರಲ್ಲಿ ಸರ್ ಎಡ್ವರ್ಡ್ ಎಲ್ಲಾತ್ ರವರು ಸಂಯೋಜಿಸಿ ಅಳವಡಿಸಿದ “ದಿ ಡ್ರೀಮ್ ಆಪ್ ಜೆರೋಟಿಯಸ್’ ಎಂಬ ಮಹಾ ಕಾವ್ಯದ ಲೇಖಕರಾಗಿ “ ಪ್ರೈಸ್ ಟು ದಿ ಹೋಲಿಯಸ್ಟ್ ಇನ್ ದಿ ಹೈಟ್’ ಗೀತೆಗಳು ಹಾಗು ‘ಬೆಳಕಿನೆಡೆಗೆ ನಡೆಸು ಕರುನಾಳು’ ಎಂದೆಲ್ಲ ಹೊಗಳಿಕೆ ಅವರು ಪಾತ್ರರು.

ಸಂಗೀತ ಕಛೇರಿ

16ನೇ ಶತಮಾನದಲ್ಲಿ ಇಂಗ್ಲಿಷ್ ಸುಧಾರಣೆಯ ಅವಧಿ (ರಾಬರ್ಟ್ ಪಾರ್‍ಸನ್ಸ್-ಕ್ರಿಸ್ಟೋಫರ್ ಟೈ ಮತ್ತು 20ನೇ ಶತಮಾನದಲ್ಲಿ ವಿಲಿಯಮ್ ಹ್ಯಾರಿಸ್ ಆಂಗ್ಲಿಕನ್ ಸಂಗೀತಗಾರ ಮತ್ತು ಫರ್ನಾಂಡ್ ಲಾಲೌಕ್ಸ್ ಫಾರಮ್ ಸ್ಟ್ರೀಟ್ ದೇವಾಲಯದಲ್ಲಿ) ಆರ್ಮ್‍ಸ್ಟ್ರಾಂಗ್ ನ್ಯೂಮನ್‍ರ ಮೂಲ ದ್ಯಾನ ಮತ್ತು 1627ರ ಫೆಬ್ರುವರಿ 29 ರಂದು ವೈಟ್-ಹಾಲ್‍ನಲ್ಲಿ ನೀಡಿದ ಜಾನ್ ಡೊನ್ನೆ ಅವರ ಧರ್ಮೋಪದೇಶದ ಸಾರವು ಒಳಗೊಂಡಿದೆ.

“ದೂರದ ಪ್ರದರ್ಶನವು ಸಾಮಾಜಿಕವಾಗಿ ಪಾರಮ್ ಸ್ಟ್ರೀಟ್ ದೇವಾಲಯದ ಸುಂದರವಾದ ಗೋಥಿಕ್ ರಿವೈವಲ್‍ನ ಸುತ್ತಮುತ್ತಲಿನ ಆಹ್ವಾನಿತ ಅಲ್ಪ ಪ್ರಮಾಣದ ಪ್ರೇಕ್ಷಕರ ಮುಂದೆ ನಡೆಯಲಿದೆ, ಜೆಸ್ವಿಟ್‍ನ ಅಮಲೋದ್ಭವ ದೇವಾಲಯದ ಧರ್ಮಗುರು ಡೊಮಿನಿಕ್ ರಾಬಿನ್‍ಸನ್ ರವರಿಗೆ ಧನ್ಯವಾದಗಳು. ಅಲ್ಲಿನ ಪಾರಂ ಸ್ಟ್ರೀಟ್ ಒಂದು ಸಮುದಾಯವಾಗಿ ಗುರುತಿಸಿದ್ದು ಅದು ಸಂಗೀತ ಮತ್ತು ಕಲÉಯನ್ನು ಸಕ್ರಿಯವಾಗಿ ಪೋಷಿಸುವ ಪ್ರತಿಪಾದಿಸುವ ಸಮುದಾಯ”

09 ಜೂನ್ 2019, 9:42

ಕನ್ನಡಕ್ಕೆ: ಎಲ್. ಚಿನ್ನಪ್ಪ

15 views0 comments

Commentaires


bottom of page