top of page
Writer's pictureBangaloreArchdiocese

ಜೈಲಿನಲ್ಲಿರುವ ಭಾರತೀಯ ಜೆಸುವಿಟ್ ಗುರು ದವಾಖಾನೆಗಿಂತಲೂ ಬಂಧಿಖಾನೆಯ ಯಾತನೆಯನ್ನೇ ಆಯ್ಕೆ ಮಾಡಿದ್ದಾರೆ.


ಪೂಜ್ಯ ಸ್ಟಾನ್ ಸ್ವಾಮಿ ಎಸ್.ಜೆ.ರವರು ಶುಕ್ರವಾರದಂದು ಮುಂಬಯಿ ಉಚ್ಛ ನ್ಯಾಯಾಲಯಕ್ಕೆ, ತಮ್ಮ ಆರೋಗ್ಯ ಕಾರಾಗೃಹದಲ್ಲಿ ಹೇಗೆ ಕ್ಷೀಣಿಸುತ್ತಿದೆ ಎಂದು ಹೇಳಿದರು. ಆದ್ದರಿಂದ ರಾಂಚಿಯ ನಿವಾಸಕ್ಕೆ ಹಿಂತಿರುಗಬೇಕಾಗಿದೆ. ಹಾಗಾಗಿ ತಮಗೆ ತಾತ್ಕಾಲಿಕ ಜಾಮೀನಿನ ಹೊರತು ಬೇರೇನೂ ಬೇಡ ಎಂದಿದ್ದಾರೆ.


ವರದಿ: ರಾಬಿನ್ ಗೋಮ್ಸ್


ಮುಂಬೈ ಉಚ್ಛ ನ್ಯಾಯಾಲಯವು, 84 ವರ್ಷ ವಯಸ್ಸಿನ ಪೂಜ್ಯ ಫಾದರ್ ಸ್ಟಾನ್ ಸ್ವಾಮಿಯವರ ಪ್ರಕರಣದ ಜಾಮೀನು ಪ್ರತಿವಾದವನ್ನು ಮುಂದಿನ ತಿಂಗಳಿಗೆ ಮುಂದೂಡಿದೆ. ಅರ್ಥಾತ್ ಗುರುವರ್ಯರು ತಮ್ಮ ಆರೋಗ್ಯ ಕ್ಷೀಣಿಸುತ್ತಿದ್ದರೂ, ಕಾರಾಗೃಹದಲ್ಲೇ ಉಳಿಯಬೇಕಾಗಿದೆ. ಭೀಮಾ - ಕೋರೆಗಾಂವ್ ಎಲ್ಗರ್ ಪರಿಷದ್ ವಿಷಯದಲ್ಲಿ ವಿಚಾರಣೆ ಎದುರಿಸುತ್ತಿರುವ ಅವರು ನ್ಯಾಯಾಲಯದಲ್ಲಿ ತಮ್ಮ ಅನಾರೋಗ್ಯದ ಆಧಾರದ ಮೇಲೆ ರಾಂಚಿಯ ತಮ್ಮ ನಿವಾಸಕ್ಕೆ ತೆರಳಲು ತಾತ್ಕಾಲಿಕ ಜಾಮೀನಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಮಹಾರಾಷ್ಟ್ರ ಸರ್ಕಾರ ಮೇ 21 ರಂದು ಅದಕ್ಕೆ ಬದಲಾಗಿ ರಾಜ್ಯ ರಾಜಧಾನಿ ಮುಂಬಯಿಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸುವುದಾಗಿ ನಿವೇದಿಸಿತ್ತು.


ಹದಗೆಡುತ್ತಿರುವ ಆರೋಗ್ಯ


ನ್ಯಾಯಾಲಯದ ನಿವೇದನೆಗೆ ಪ್ರತಿಕ್ರಿಯಿಸಿದ ಪೂಜ್ಯ ಸ್ವಾಮಿಯವರು ಮೇ 19ರಂದು ವಿಡಿಯೋ ಸಭೆಯಲ್ಲಿ ವಿವರಣೆ ನೀಡುತ್ತಾ, ಮುಂಬಯಿಯ ತಲೋಜಾ ಕೇಂದ್ರ ಕಾರಾಗೃಹದಲ್ಲಿ ತಮ್ಮ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ. ಅಕ್ಟೋಬರ್ 9, 2020 ರಿಂದ, ತಮ್ಮನ್ನು ರಾಂಚಿಯಲ್ಲಿ ದಸ್ತಗಿರಿ ಮಾಡಿದ ಮಾರನೇ ದಿನದಿಂದ ಬಂಧಿಸಲಾಗಿದೆ. ಗುರುಗಳು ಪಾರ್ಕಿನ್ಸನ್ ಕಾಯಿಲೆಯಿಂದಲೂ, ಶ್ರವಣ ದೋಷದಿಂದಲೂ ಹಾಗೂ ಇತರ ವಯೋಸಂಬಂಧಿ ರೋಗಗಳಿಂದಲೂ ಯಾತನೆ ಅನುಭವಿಸುತ್ತಿದ್ದಾರೆ. ಅವರ ವಿವರಣೆಯಲ್ಲಿ ಕಾರಾಗೃಹಕ್ಕೆ ಬಂದಾಗ ಅವರ ದೈಹಿಕ ವ್ಯವಸ್ಥೆ ಸರಾಗವಾಗಿತ್ತು. ಆದರೆ ಈ 7 ತಿಂಗಳ ಕಾರಾಗೃಹ ವಾಸದ ಅವಧಿಯಲ್ಲಿ ತಮ್ಮ ದೇಹ ಸ್ಥಿತಿ ಕೆಳ ಮಟ್ಟಕ್ಕಿಳಿದು ಏಕಪ್ರಕಾರವಾಗಿದೆ. ಆದ್ದರಿಂದ ತಲೋಜಾ ಕಾರಾಗೃಹದ ಪರಿಸ್ಥಿತಿ ತಮ್ಮನ್ನು ಯಾವ ದುಃಸ್ಥಿತಿಗೆ ತಲುಪಿಸಿದೆ ಎಂದರೆ ಬರವಣಿಗೆ ಬರೆಯುವುದಾಗಲಿ, ಸ್ವತಃ ನಡೆದಾಡುವದಕ್ಕಾಗಲಿ ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ." ನಾನು ಸ್ವತಃ ತಿನ್ನುವುದಕ್ಕೂ, ಬರೆಯುವುದಕ್ಕೂ, ನಡೆದಾಡುವುದಕ್ಕೂ ಹಾಗೂ ಸ್ನಾನ ಮಾಡುವುದಕ್ಕೂ ಸಾಧ್ಯವಿತ್ತು. ಆದರೆ ಈಗ ಒಂದೊಂದಾಗಿ ಅಸಾಧ್ಯವಾಗುತ್ತಿದೆ. ಈಗ ನನಗೆ ಇನ್ನೊಬ್ಬರು ಊಟಮಾಡಿಸಬೇಕಿದೆ. ಅವರ ಸ್ಥಿತಿಯನ್ನು ಅವಲೋಕಿಸಿ, ಅದನ್ನು ಪರಿಗಣಿಸಬೇಕೆಂದು ನ್ಯಾಯಲಯಕ್ಕೆ ಮನವಿ ಮಾಡಿಕೊಂಡರು.


ಆಸ್ಪತ್ರೆ ಚಿಕಿತ್ಸೆಯ ಆಯ್ಕೆ


ರಾಜ್ಯ ಸರ್ಕಾರದ ಜೆ.ಜೆ. ಆಸ್ಪತ್ರೆಯಲ್ಲಿ ದಾಖಲಾಗಲು ಆಯ್ಕೆ ಇರಿಸಿದಾಗ ಪೂಜ್ಯ ಸ್ಟಾನ್ ಸ್ವಾಮಿಯವರು ನಿರಾಕರಿಸಿ ಈ ರೀತಿ ಹೇಳಿದರು. “ನಾನು ಕಾರಾಗೃಹವನ್ನೇ ಆಯ್ಕೆ ಮಾಡುತ್ತೇನೆ. ಅಲ್ಲಿಗೆ ಹೋಗುವುದಿಲ್ಲ. ಅಲ್ಲಿನ ಸ್ಥಿತಿಗತಿಗಳ ಅರಿವಿದೆ. ನನಗೆ ಇಲ್ಲಿ ದಾಖಲಾಗಲು ಬೇಕಿಲ್ಲ. ಬದಲಾಗಿ ನಾನು ಯಾತನೆಯಿಂದ ಬಹುಶಃ ಇದೇ ರೀತಿ ಸಾಗಿದರೆ ಸಾವು ಇಲ್ಲಿಯೇ ಸಂಭವಿಸಬಹುದು. ನಾನು ಜೆ.ಜೆ. ಆಸ್ಪತ್ರೆಗೆ ಬದಲಾಗಿ ಇಲ್ಲೇ ಇರುವೆ. ಇದು ನನಗೆ ಅತ್ಯಂತ ವಿಷಮ ಗಳಿಗೆ ಎಂದು ಹೇಳಿದರು.”


ಅದಕ್ಕೆ ನ್ಯಾಯಾಲಯವು ಈ ಸಮಯದಲ್ಲಿ ಅವರನ್ನು ರಾಂಚಿಗೆ ಕಳುಹಿಸಲಾಗುವುದಿಲ್ಲ, ಆದರೆ ಉತ್ತಮ ಚಿಕಿತ್ಸೆಗಾಗಿ ಮುಂಬೈನ ಕಥೋಲಿಕ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಬಹುದೇ ಎನ್ನಲು, ಪೂಜ್ಯರು ಯಾವುದೇ ಆಸ್ಪತ್ರೆಯೆ ಚಿಕಿತ್ಸೆಯನ್ನು ನಿರಾಕರಿಸಿ, ಇವುಗಳಲ್ಲಿ ಯಾವ ವ್ಯತ್ಯಾಸವಿಲ್ಲ. ತಮಗೆ ರಾಂಚಿಯ ತಮ್ಮ ಸ್ವಂತ ಜನರೊಡನೆ ಇರಬೇಕು' ಎಂದು ನುಡಿದರು.


ಅವರ ಆರೋಗ್ಯ ಸ್ಥಿತಿಯ ವ್ಯತಿರಿಕ್ತವಾದ ವರದಿಯನ್ನು ಕೇಳಿದ ಮುಂಬೈ ಉಚ್ಛ ನ್ಯಾಯಾಲಯ, ಬುಧವಾರದಂದು ಗುರುಗಳ ಆರೋಗ್ಯ ತಪಾಸಣೆಗಾಗಿ ಜೆ.ಜೆ.ಆಸ್ಪತ್ರೆಗೆ ಆದೇಶ ನೀಡಿತು. ಅದರ ವರದಿಯನ್ನು ಶುಕ್ರವಾರದಂದು ನ್ಯಾಯಾಲಕ್ಕೆ ಒಪ್ಪಿಸಿತು. ನ್ಯಾಯಾಲಯವು ಕಾರಾಗೃಹದ ಅಧಿಕಾರಿಗಳಿಗೆ ಪೂಜ್ಯ ಸ್ವಾನ್ ಸ್ವಾಮಿಯವರನ್ನು ಸೂಕ್ತವಾಗಿ ಲಕ್ಷಿಸುವಂತೆ ಮತ್ತು ಅದರ ಶಿಫಾರಸ್ಸುಗಳನ್ನು ನಿಶ್ಚಿತವಾಗಿ ಅನುಸರಿಸುವಂತೆ ಆದೇಶಿಸಿತು.


ಪೂಜ್ಯ ಸ್ಟಾನ್ ಸ್ವಾಮಿಯವರ ವಿರುಧ್ದದ ಸಂಗತಿ


ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಎಂಬುದು ಭಯೋತ್ಪಾದನೆ ಚಟುವಟಿಕೆಗಳ ವಿರುದ್ಧ ಹೋರಾಡುವ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಇದು ಅಕ್ಟೋಬರ್ 8, 2020 ರಂದು ರಾಂಚಿಯಲ್ಲಿ, ಪೂಜ್ಯ ಸ್ಟಾನ್ ಸ್ವಾಮಿಯವರನ್ನು ದಸ್ತಗಿರಿ ಮಾಡಿತು. ಕಾರಣ, ಭೀಮಾ ಕೋರೆಗಾಂವ್. ಇದು ಮಹಾರಾಷ್ಟ್ರದ ಜನುವಾ ಜಿಲ್ಲೆಯ ಒಂದು ಹಳ್ಳಿ. ಈ ಹಳ್ಳಿಯಲ್ಲಿ 2018ರಲ್ಲಿ ಮಾವೊವಾದಿಗಳ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಮೃತನಾಗಿದ್ದ. ಎನ್.ಐ.ಎ. ತಂಡವು ಸ್ಟಾನ್ ಸ್ವಾಮಿಯವರನ್ನು ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆಪಾದನೆ ಮೇರೆಗೆ ಬಂಧಿಸಲಾಯಿತು. ಇವರೊಂದಿಗೆ 15 ಮಂದಿ ಮಾನವಹಕ್ಕು ಹೋರಾಟಗಾರರನ್ನು ಈ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಾರೆಂದು, ಕಠಿಣ ಜಾಮೀನುರಹಿತ ಪೂರ್ವ ಸಿದ್ಧತೆಗಳೊಂದಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ ಅಡಿಯಲ್ಲಿ ದಸ್ತಗಿರಿ ಮಾಡಲಾಯಿತು.


ತಮ್ಮ ಬಂಧನ ಸನ್ನಿಹಿತವಾದದನ್ನು ಅರಿತ ಸ್ಟಾನ್ ಸ್ವಾಮಿಯವರು ಒಂದು ವಿಡಿಯೋ ತುಣುಕನ್ನು ಬಿಡುಗಡೆಗೊಳಿಸಿ, "ಅಲೆಮಾರಿಗಳು, ನಿರಾಶ್ರಿತರು, ಬಡವರು ತಮ್ಮ ಭೂಮಿ ಹಕ್ಕುಗಳಿಂದ ವಂಚಿತರಾದವರ ಹಕ್ಕು ಭಾದ್ಯತೆಗಳಿಗೆ ತಾವು ಬದ್ಧರಾಗಿರುವರೆಂದು, ಜಾರ್ಖಂಡ್ ರಾಜ್ಯ ಸರ್ಕಾರದ ವಿರುದ್ಧ, ಜಾಖರ್ಂಡ್ ಉಚ್ಛನ್ಯಾಯಾಲಯದ ಮೊರೆ ಹೋಗಿ ವಿವರಣೆ ನೀಡಿದ್ದಾರೆ. ತಮ್ಮ ಮೇಲಿನ ಆಪಾದನೆ ಕುರಿತು ಭೀಮಾ ಕೋರೆಗಾಂವ್ ಹಿಂಸಾಚಾರದ ಸಂಬಂಧವನ್ನು ಉಲ್ಲೇಖಿಸಿ, "ಆ ಸ್ಥಳಕ್ಕೆ ಇದುವರೆಗೂ ನನ್ನ ಜೀವನದಲ್ಲಿ ಹೋಗಿಲ್ಲ" ಎಂದು ಹೇಳಿದ್ದಾರೆ.


ವಿಚಾರಣೆಯನ್ನು ಜೂನ್ 7ಕ್ಕೆ ಮುಂದೂಡಲಾಗಿ, ಉಚ್ಛ ನ್ಯಾಯಾಲಯವು ಪೂಜ್ಯ ಸ್ಟಾನ್ ಸ್ವಾಮಿಯವರಿಗೆ ಆಸ್ಪತ್ರೆ ದಾಖಲಾತಿಗೆ ಒಪ್ಪಿದರೆ ನ್ಯಾಯಾಲಯವನ್ನು ಸಂಪರ್ಕಿಸಬಹುದಾದ ಸ್ವಾತಂತ್ರ್ಯವನ್ನು ನೀಡಿದೆ. ಉಚ್ಛ ನ್ಯಾಯಾಲಯವು ಎನ್.ಐ.ಎ. ಯ ತಾತ್ಕಾಲಿಕ ತುರ್ತು ಜಾಮೀನು ತಳ್ಳಿ ಹಾಕಿದ ವಿರುದ್ಧ ಅವರ ಮೊರೆಯನ್ನು ಆಲಿಸಿತು.


ವಿಶ್ವ ಸಂಸ್ಥೆ


ಪೂಜ್ಯರ ಬಂಧನದ ನಂತರ ಕೂಡಲೇ ವಿಶ್ವಸಂಸ್ಥೆ ಪ್ರಮುಖರು ಭಾರತ ಸರ್ಕಾರಕ್ಕೆ ಮೊರೆ ಹೋಗಿ ‘ಮಾನವ ಹಕ್ಕುಗಳ ಹೋರಾಟಗಾರರು, ಮತ್ತು ಸರ್ಕಾರೇತರ ಸಂಸ್ಥೆಗಳು (ಓಉಔ) ಇಂತಹ ಕಷ್ಟಕರವಾದ ಕೆಲಸವನ್ನು ಮತ್ತು ಅವರ ಸಾಮಥ್ರ್ಯವನ್ನು ಮುಂದುವರಿಸಲು ಅವರಿಗೆ ಸರ್ಕಾರದ ರಕ್ಷಣೆ ಮನ್ನಣೆ ನೀಡತಕ್ಕದ್ದು ಎಂದಿದೆ.


ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಪ್ರಧಾನ ಆಯುಕ್ತರಾದ ಮಿμÉಲ್ ಬ್ಯಾಚ್ಲೆಟ್‍ರವರು ಈ ಕುರಿತು ತಮ್ಮ ಕಳಕಳಿ ವ್ಯಕ್ತಪಡಿಸಿದ್ದೇನೆಂದರೆ “ಮೂರು ಅಸ್ಪಷ್ಟ ವಿಶ್ಲೇಷಿತ ಕಾನೂನುಗಳನ್ನು” ಇಂತಹ ದನಿಗಳನ್ನು ಉಸಿರುಗಟ್ಟಿಸುವ ಸಲುವಾಗಿ ಬಳಸಲಾಗುತ್ತಿದೆ.' ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ಟೀಕಿಸುತ್ತಾ, ಈ ಕಾಯ್ದೆಯಲ್ಲಿನ ಅಂತರಾಷ್ಟ್ರೀಯ ಮಟ್ಟದ ಕೊರತೆಯನ್ನು ಪ್ರಸ್ತಾಪಿಸಿದರು. ಬ್ಯಾಚ್ಲೆಟ್ ಕಛೇರಿಯಿಂದ “ಪೂಜ್ಯ ಸ್ಟಾನ್ ಸ್ವಾಮಿಯವರು ದೀರ್ಘ ಕಾಲದ ಹೋರಾಟಗಾರರು. ಬಡಬಗ್ಗರ, ದರಿದ್ರರ, ಗುಂಪುಗಳ ಮಾನವ ಹಕ್ಕುಗಳಿಗಾಗಿ ಚಳುವಳಿಯಲ್ಲಿ ನಿರತರಾದವರು. ಈಗ ಆರೋಪಿ ಎಂದು ವರದಿ ನೀಡಿ, ಅವರನ್ನು ಬಂಧನದಲ್ಲಿರಿಸಲಾಗಿದೆ. ಅದೂ ಅವರ ಆರೋಗ್ಯವನ್ನು ಸಹ ನಿರ್ಲಕ್ಷಿಸಿ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಬಂಧಿತವಾಗಿರುವ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ಏಕೆಂದರೆ ಮೂಲತಃ ಮಾನವ ಹಕ್ಕುಗಳನ್ನು ಅವರು ನಿಷ್ಕಪಟವಾಗಿ ಬಳಸಿರುತ್ತಾರೆ. ಆದ್ದರಿಂದ ಭಾರತ ಸರ್ಕಾರ ಅವರ ರಕ್ಷಣೆಗೆ ಬದ್ಧತೆ ಹೊಂದಿರಬೇಕು ಎಂದು ಹೇಳಿದ್ದಾರೆ.


21 ಮೇ 2021, 18:43

85 views0 comments

Comments


bottom of page