ತಂದೆಯ ನಿಜವಾದ ಪರಿಚಯ ಮಾಡಿಕೊಳ್ಳಲು ಬಡವರು ನಮಗೆ ಸಹಾಯ ಮಾಡುತ್ತಾರೆ: ವಿಶ್ವಗುರು ಫ್ರಾನ್ಸಿಸ್ವಿಶ್ವಗುರು ಫ್ರಾನ್ಸಿಸ್ ರವರು ಐದನೇ ವಿಶ್ವ ಬಡವರ ದಿನಾಚರಣೆಯಂದು ತಮ್ಮ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದೇಶದಲ್ಲಿ ಅವರು ಪರಿವರ್ತನೆಯ ಅಗತ್ಯವನ್ನು ಮತ್ತು ಜಗತ್ತಿನಲ್ಲಿ ವಿವಿಧ ರೀತಿಯ ಬಡತನವನ್ನು ಎದುರಿಸುವ, ತಮ್ಮ ತಮ್ಮ ಸಾಮರ್ಥ್ಯಗಳಿಗೆ ಅನುಗುಣವಾಗಿ ಸ್ವತಂತ್ರ್ಯವಾಗಿ ಜೀವನವನ್ನು ನಡೆಸಲು ಬೇಕಾದ ಒಂದು ವಿಧಾನವನ್ನು ಎತ್ತಿ ತೋರಿಸುತ್ತಾರೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ

ಐದನೇ ವಿಶ್ವ ಬಡವರ ದಿನಾಚರಣೆಯಂದು ಮಾರ್ಕನ ಶುಭಸಂದೇಶದಿಂದ ಆಯ್ದುಕೊಂಡಿರುವ ವಸ್ತುವಿಷಯ “ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ” ವಿಶ್ವಗುರು ಫ್ರಾನ್ಸಿಸ್ ರವರು ಈ ಆಚರಣೆಯ ಸ್ಮರಣೆಯ ದಿನವಾದ ಧರ್ಮಸಭೆಯ ಪಂಚಾಂಗದ ಮೂವತ್ತಮೂರನೇ ಸಾಮಾನ್ಯ ಭಾನುವಾರ ನವೆಂಬರ್ 14ಕ್ಕಿಂತ ಮುಂಚಿತವಾಗಿ ಸೋಮವಾರ ವಾರ್ಷಿಕ ಆಚರಣೆಯ ಸಂದೇಶವನ್ನು ಬಿಡುಗಡೆ ಮಾಡಿದರು.


ಎರಡು ವಿಶ್ಲೇಷಣೆಗಳು

ವಿಶ್ವಗುರು ಫ್ರಾನ್ಸಿಸ್ ರವರು ಮಾರ್ಕ 14 :7 ರಿಂದ ಪ್ರೇರಿತರಾಗಿ, ಬೆಥಾನಿಯಾದಲ್ಲಿ ಪಾಸ್ಖ ಹಬ್ಬಕ್ಕೆ ಕೆಲ ದಿನಗಳ ಮುಂಚೆ ಕುಷ್ಠರೋಗಿಯಾದ ಸಿಮೋನನ ಮನೆಯಲ್ಲಿ ಭೋಜನಕೂಟವೊಂದರಲ್ಲಿ ಯೇಸುಸ್ವಾಮಿ ಹೇಳಿದ ಮಾತುಗಳನ್ನು ಟಿಪ್ಪಣಿಸುತ್ತಾರೆ. ಒಬ್ಬ ಮಹಿಳೆ ಅಮೂಲ್ಯವಾದ ಸುಗಂಧ ದ್ರವ್ಯ ಹೊಂದಿದ್ದ ಪಾತ್ರೆಯೊಂದಿಗೆ ಬಂದು ಅದನ್ನು ಯೇಸುವಿನ ತಲೆಯ ಮೇಲೆ ಸುರಿದದ್ದು ಎಲ್ಲರಿಗೂ ಬಹಳ ಆಶ್ಚರ್ಯವನ್ನುಂಟುಮಾಡಿತು ಮತ್ತು ಎರಡು ವ್ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿತು.


ಮೊದಲನೆಯದು ಅಸಮಾಧಾನ. ಶಿಷ್ಯರನ್ನೊಳಗೊಂಡು ಅಲ್ಲಿ ನೆರೆದಿದ್ದ ಹಲವರು, ಆ ಸುಗಂಧ ದ್ರವ್ಯದ ಮೌಲ್ಯವನ್ನು ಪರಿಗಣಿಸಿ, ಇದನ್ನು ಮಾರಾಟ ಮಾಡಬೇಕಾಗಿತ್ತು ಮತ್ತು ಅದರ ಆದಾಯವನ್ನು ಬಡವರಿಗೆ ಹಂಚಬೇಕಾಗಿತ್ತು ಎಂದು ಭಾವಿಸಿದರು. ವಿಶೇಷವಾಗಿ ಜುದಾಸ್ ಈ ಬಗ್ಗೆ ಸ್ವರ ಎತ್ತಿದನು. "ಅವನಿಗೆ ಬಡವರ ಬಗ್ಗೆ ಕಾಳಜಿಯೇನೂ ಇರಲಿಲ್ಲ, ಅದಕ್ಕೆ ಕಾರಣ ಅವನು ಕಳ್ಳನಾಗಿದ್ದ" ಮತ್ತು ಹಣದ ಪೆಟ್ಟಿಗೆಯಲ್ಲಿರುವುದನ್ನು ತೆಗೆದುಕೊಳ್ಳಲು ಬಯಸಿದ್ದ.