ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರುಗಳ ಅಂಬೋಣ : ವಿಶ್ವಾಸದಿಂದಿದ್ದು, ನಿರಾಯಾಸತೆಯಲ್ಲಿ ಸರ್ವೇಶ್ವರರನ್ನು ಅರಸಿರಿವಿಶ್ವಗುರು ಫ್ರಾನ್ಸಿಸ್ ಭಾನುವಾರದ ಶುಭಸಂದೇಶದ ವಾಕ್ಯವೃಂದದ ನಿರೂಪಣೆಯನ್ನು, 'ಕ್ರಿಸ್ತರು ಬಿರುಗಾಳಿಯನ್ನು ಶಾಂತಗೊಳಿಸಿದ ಭಾಗವನ್ನು ನಮ್ಮದೈನಂದಿನ ಜೀವನದ ಸಂಕಷ್ಟಗಳ ಅಬ್ಬರಿಸುವ ಅಲೆಗಳಿಗೂ, ಭರದಿಂದ ಬೀಸುವ ಬಿರುಗಾಳಿಗೂ' ಉಪಮೀಕರಿಸಿದರು. "ವಿಶ್ವಾಸವೆಂಬ ಅನುಗ್ರಹಕ್ಕಾಗಿ ಸರ್ವೇಶ್ವರರಲ್ಲಿ ಯಾಚಿಸಿರಿ, ಇದರಿಂದ ಅವರನ್ನು ಅರಸುವತ್ತ ನಿರಾಯಾಸರಾಗಿರಿ." ಎ೦ದರು. ಅವರು ಸರ್ವೆಶ್ವರರು ಸದಾ ನಮ್ಮ ಸನಿಹದಲ್ಲಿದ್ದು, ನಮಗಾಗಿ ಕಾದಿರುವುದಾಗಿ ಖಾತ್ರಿಪಡಿಸಿದರು.


ವ್ಯಾಟಿಕನ್ ವಾರ್ತಾ ಸಿಬ್ಬಂದಿ ಬರಹಗಾರರಿಂದ:


ವಿಶ್ವ ಗುರು ಫ್ರಾನ್ಸಿಸ್ ಭಾನುವಾರದ ಶುಭ ಸಂದೇಶ, 'ಕ್ರಿಸ್ತರು ತಮ್ಮ ಶಿಷ್ಯರೊಂದಿಗೆ ದೋಣಿಯಲ್ಲಿ ಸಮುದ್ರ ದಾಟುತ್ತಿರುವಾಗ, ಅಬ್ಬರಿಸುವ ಅಲೆಗಳನ್ನೂ, ಬಿರುಗಾಳಿಯನ್ನು ಶಾಂತಗೊಳಿಸಿದ' ಪ್ರಸಂಗದ ಕಥನವನ್ನು ತೇಜಕೇಂದ್ರವಾಗಿಸಿಕೊಂಡು ಅದಕ್ಕೆ ತಮ್ಮ ಪ್ರತಿಛಾಯೆಯನ್ನು ಬೀರಿದರು. ಎಚ್ಚರರಾಗಿದ್ದ ಶಿಷ್ಯರು, ನಿದ್ರಿಸುತ್ತಿದ್ದ ಕ್ರಿಸ್ತರನ್ನು ಎಬ್ಬಿಸಿ, ನಿಷ್ಟುರತೆಯಿಂದ ಸಹಾಯಕ್ಕಾಗಿ ಮೊರೆಯಿಟ್ಟರು ಎಂದು ನುಡಿದರು.


ವಿಶ್ವಗುರುಗಳು, ಶಿಷ್ಯರ ಭಯ ಮತ್ತು ಆತಂಕಭರಿತ ಗಾಬರಿಯನ್ನು ನಮ್ಮ ಸ್ವಂತ ಬದುಕಿಗೆ ಉಪಮೀಯುಸುತ್ತಾ, ನಾವು ನಮ್ಮ ಕಷ್ಟ ಕೋಟಲೆಗಳಲ್ಲಿ ಸರ್ವ ಶಕ್ತರಲ್ಲಿ ಮೊರೆದಾಗ 'ದೇವರೇಕೆ ಮೌನಿಯಾಗಿರುವರು? 'ಮತ್ತು 'ಏನನ್ನೂ ಮಾಡಲಾರರೇ?' ಎಂದೆಲ್ಲಾ ಭಾವಿಸುತ್ತೇವೆ. ಹಲವು ಸನ್ನಿವೇಶಗಳಲ್ಲಿ, ನಿರುದ್ಯೋಗ, ಆರೋಗ್ಯ ಸಮಸ್ಯೆಗಳು, ಸುರಕ್ಷತೆ ರಹಿತ ಬಾಳು, ಪಶ್ಚಾತಾಪರಹಿತ ಕಾರುಣ್ಯದ ಹಂಗಿನಲ್ಲಿ, ದಡವೇ ಗೋಚರಿಸದ ಆತಂಕಭರಿತ ಅಲೆಗಳ ಅಬ್ಬರದಲ್ಲಿ ಮುಳುಗುವ ಭಾವನೆ ಹೊಂದಿರುತ್ತೇವೆ ಎಂದು ನುಡಿದರು.