top of page

“ನಮ್ಮ ಭರವಸೆಗೆ ಕಾರಣಗಳು” ಯೋಜನೆಯು ಕ್ರೈಸ್ತ ಹಾಗೂ ಮುಸ್ಲಿಂ ಸಂಭಾಷಣೆಯನ್ನು ಉತ್ತೇಜಿಸುತ್ತದೆ


‘ಓಯಸಿಸ್ ಇಂಟರ್‍ನ್ಯಾಷನಲ್ ಪ್ರತಿಷ್ಠಾನ’ ಮತ್ತು ‘ಮೆಕ್ಗ್ರಾತ್ ಇನ್ಸ್ಟಿಟ್ಯೂಟ್ ಫಾರ್ ಚರ್ಚ್ ಲೈಫ್’ ಸಂಸ್ಥೆಗಳು ಉತ್ತೇಜಿಸಿರುವ “ನಮ್ಮ ಭರವಸೆಯ ಕಾರಣಗಳು” ಯೋಜನೆಯು “ಮುಸ್ಲಿಂ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಕ್ರೈಸ್ತರು ತಮ್ಮ ವಿಶ್ವಾಸವನ್ನು ಹೊಸದಾಗಿ ಅರ್ಥೈಸಿಕೊಳ್ಳಬೇಕು” ಎಂಬ ನಿಟ್ಟಿನಲ್ಲಿ ನೆರವಾಗುವ ಗುರಿಯನ್ನು ಹೊಂದಿದೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂಧಿ ಬರಹಗಾರರಿಂದ


ಕ್ರೈಸ್ತ ಧರ್ಮದ ಬಗ್ಗೆ ಮುಸ್ಲಿಂ ಧರ್ಮದವರು ಹೊಂದಿರುವ ಪ್ರಶ್ನೆಗಳು ಮತ್ತು ಪೂರ್ವಾಗ್ರಹಗಳ ಕುರಿತು ಮಾತನಾಡಲು ಹಾಗೂ ಈ ಕುರಿತು ಪರಸ್ಪರ ವಿನಿಮಯದ ಹಾದಿಗಳನ್ನು ತೆರೆಯಲು ಓಯಸಿಸ್ ಇಂಟರ್‍ನ್ಯಾಷನಲ್ ಪ್ರತಿಷ್ಠಾನವು ಮೆಕ್ಗ್ರಾತ್ ಇನ್ಸ್ಟಿಟ್ಯೂಟ್ ಫಾರ್ ಚರ್ಚ್ ಲೈಫ್ ಸಂಸ್ಥೆಯ ಸಹಯೋಗದೊಂದಿಗೆ “ನಮ್ಮ ಭರವಸೆಯ ಕಾರಣಗಳು” ಯೋಜನೆಯನ್ನು ಪ್ರಾರಂಭಿಸಿದೆ.


ಈ ಯೋಜನೆಯಲ್ಲಿನ ವೀಡಿಯೋ ಸರಣಿಗಳು “ಕ್ರೈಸ್ತರು ಏಕೆ ಕ್ರೈಸ್ತರಾಗಿಯೇ ಉಳಿಯುತ್ತಾರೆ” ಎಂಬ ವಿಷಯದ ಕುರಿತು ಬೆಳಕು ಚೆಲ್ಲುವುದಲ್ಲದೆ ಆ ಕುರಿತು “ನಮ್ಮ ಭರವಸೆಯ ಕಾರಣ” ಗಳನ್ನೂ ಸಹ ಹಂಚಿಕೊಳ್ಳುತ್ತದೆ. ಇದೇ ಸಮಯದಲ್ಲಿ “ಮುಸ್ಲಿಂ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಕ್ರೈಸ್ತರು ತಮ್ಮ ವಿಶ್ವಾಸವನ್ನು ಹೊಸದಾಗಿ ಅರ್ಥೈಸಿಕೊಳ್ಳಬೇಕು” ಎನ್ನುವಲ್ಲಿ ನೆರವನ್ನು ನೀಡಲು ಈ ಯೋಜನೆಯು ಹಂಬಲಿಸುತ್ತದೆ.


2004 ರಲ್ಲಿ ವೆನೀಸ್ ನಗರದಲ್ಲಿ ಕಾರ್ಡಿನಲ್ ಏಂಜಲೋ ಸ್ಕೋಲಾ ಅವರಿಂದ ಸ್ಥಾಪಿಸಲ್ಪಟ್ಟ ‘ಓಯಸಿಸ್ ಇಂಟರ್‍ನ್ಯಾಷನಲ್ ಪ್ರತಿಷ್ಠಾನ’ ವು ನಾಗರೀಕತೆಗಳು ಹಾಗೂ ಸಂಸ್ಕøತಿಗಳ ಬೆರಕೆಯ ತೀವ್ರ ಗುಣಲಕ್ಷಣಗಳನ್ನು ಹೊಂದಿರುವ ಈ ಪ್ರಪಂಚದಲ್ಲಿ ಕ್ರೈಸ್ತರು ಹಾಗೂ ಮುಸ್ಲಿಮರ ನಡುವಿನ ಪ್ರತಿಕ್ರಿಯೆಯ ಅಧ್ಯಯನ ನಡೆಸುತ್ತದಲ್ಲದೆ ಉಭಯ ಧರ್ಮದವರ ಪರಸ್ಪರ ಹೊಂದಾಣಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.


ಪೋಪ್ ಸಂತ ದ್ವಿತೀಯ ಜಾನ್‍ಪೌಲ್ ಸ್ಪೂರ್ತಿ


ಈ ಯೋಜನೆಯ ಗುರಿಯ ಕುರಿತು ಮತ್ತಷ್ಟು ವಿವರಿಸುವುದಾದರೆ, ಈ ಪ್ರತಿಷ್ಠಾನವು “ನೊವೊ ಮಿಲೆನಿಯೊ ಇನ್ಯುಂತೆ” (ನವ ಸಹಸ್ರಮಾನದ ಆರಂಭದಲ್ಲಿ) (55 – 56) ಎಂಬ ಪ್ರೇಷಿತ ಪತ್ರದಲ್ಲಿ ಪೋಪ್ ಸಂತ ದ್ವಿತೀಯ ಜಾನ್‍ಪೌಲರು ಸಮಸ್ತ ಕಥೋಲಿಕರನ್ನುದ್ದೇಶಿಸಿ ನುಡಿದ ಮಾತುಗಳಿಂದ ಸ್ಪೂರ್ತಿ ಪಡೆದಿದೆ. ತಮ್ಮ ಈ ಪ್ರೇಷಿತ ಪತ್ರದಲ್ಲಿ ಸಂತ ದ್ವಿತೀಯ ಜಾನ್‍ಪೌಲರು ಹೊಸ ಸಹಸ್ರಮಾನದಲ್ಲಿ ಧರ್ಮಸಭೆಯ ಆಧ್ಯತೆಗಳ ಕುರಿತು ಸವಿಸ್ತಾರವಾಗಿ ಮಾತನಾಡಿದ್ದಾರೆ.


ಸಂವಾದಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದ ಸಂತ ದ್ವಿತೀಯ ಜಾನ್‍ಪೌಲರು “ಸಂವಾದವು ಶಾಂತಿ ಸ್ಥಾಪನೆಗಾಗಿ ಖಚಿತತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಅಲ್ಲದೆ ಮಾನವ ಇತಿಹಾಸವನ್ನು ರಕ್ತಸಿಕ್ತವಾಗಿಸಿದ ಧರ್ಮಯುಧ್ಧಗಳ ಭೀಕರ ತರಂಗಗಳನ್ನು ನಿರ್ನಾಮ ಪಡಿಸುವಲ್ಲಿಯೂ ಸಹ ಪ್ರಮುಖ ಪಾತ್ರವನ್ನು ವಹಿಸಿದೆ. ಈ ಕುರಿತು ಮುಂದುವರೆಸಿ ತಮ್ಮ ಪ್ರೇಷಿತ ಪತ್ರದಲ್ಲಿ ಮಾತನಾಡಿರುವ ಸಂತ ದ್ವಿತೀಯ ಜಾನ್‍ಪೌಲರು “ಸಂವಾದ ಎನ್ನುವುದು ಎಂದೂ ಧಾರ್ಮಿಕ ಉದಾಸೀನತೆಯ ಆಧಾರದ ಮೇಲೆ ನಡೆಯುವುದಿಲ್ಲ,” ಎಂದೂ ಸಹ ಎಚ್ಚರಿಸುತ್ತಾರೆ. “ಬದಲಿಗೆ, ಕ್ರೈಸ್ತರು ಸಂವಾದಿಸುವಾಗ, ಇತರರ ಸಂವಾದವನ್ನು ಆಲಿಸಲು ಆಳವಾದ ಇಚ್ಛೆಯನ್ನು ಹೊಂದಿ, ನಮ್ಮೊಳಗಿನ ಭರವಸೆಗೆ ಸ್ಪಷ್ಟ ಸಾಕ್ಷಿಗಳಾಗಲು ಕರ್ತವ್ಯಬದ್ಧರಾಗಿದ್ದಾರೆ.” ಎನ್ನುತ್ತಾರೆ ಸಂತ ದ್ವಿತೀಯ ಜಾನ್‍ಪೌಲ್.


“ತನ್ನ ಇಚ್ಛೆಗನುಸಾರ ಬೀಸುವ ಹಾಗೂ ಕ್ರಿಸ್ತರ ಹಿಂಬಾಲಕರು ಹೊಂದಿರುವ ಸಂದೇಶವನ್ನು ಆಳವಾಗಿ ಅರ್ಥೈಸಿಕೊಳ್ಳಲು ನೆರವಾಗುವ ದೇವರ ಆತ್ಮರಲ್ಲಿ ನಂಬಿಕೆಯನ್ನಿಡುತ್ತಾ, ಕ್ರೈಸ್ತ ವಿಶ್ವಾಸಿಗಳು ಎಚ್ಚರಿಕೆಯ ವಿವೇಚನೆಯೊಂದಿಗೆ ಮುಕ್ತತೆಯ ವರ್ತನೆಯನ್ನು ರೂಢಿಸಿಕೊಳ್ಳಬೇಕು.” ಎಂದಿದ್ದಾರೆ ಪೋಪ್ ಸಂತ ದ್ವಿತೀಯ ಜಾನ್‍ಪೌಲ್. ಇದನ್ನು ದ್ವಿತೀಯ ವ್ಯಾಟಿಕನ್ ಮಹಾಸಮ್ಮೇಳದ ಸಮಿತಿಯು ಇತರೆ ಧರ್ಮಗಳ ಕುರಿತ ಸಂಬಂಧದ ವಿಷಯದ ಕುರಿತು ಆಳವಡಿಸಿಕೊಂಡಿತ್ತು.


ವೀಡಿಯೋ ಸರಣಿಗಳು


ಈಗಾಗಲೇ ಬಿಡುಗಡೆಯಾಗಿರುವ ಮೂರು ಪ್ರಾರಂಭಿಕ ವೀಡಿಯೋಗಳಲ್ಲಿ ಈ ಯೋಜನೆಯು ಬೈಬಲ್ ಮತ್ತು ಖುರಾನ್ ಗ್ರಂಥಗಳ ಹಿನ್ನೆಲೆಯಲ್ಲಿ ಪ್ರಮುಖ ಪ್ರಶ್ನೆಗಳನ್ನು ನಿಭಾಯಿಸಿ, ಅವುಗಳ ಮಾದರಿಗಳನ್ನು ಪ್ರಸ್ತುತ ಪಡಿಸುತ್ತದೆ.


ಮೊದಲ ವೀಡಿಯೋ ಬೈಬಲ್ ಮತ್ತು ಖುರಾನ್ ಗ್ರಂಥಗಳ ಪ್ರಸ್ತುತಿಯಲ್ಲಿ ಯೇಸು ಮತ್ತು ಆತನ ಧ್ಯೇಯದ ಕುರಿತ ಭಿನ್ನತೆಗಳು ಹಾಗೂ ಸಾಮ್ಯತೆಗಳ ಕುರಿತು ಮಾತನಾಡುತ್ತದೆ.


ಎರಡನೇ ವೀಡಿಯೋ ಇಸ್ಲಾಂ ಹೇಗೆ ಇತಿಹಾಸವನ್ನು ಅರ್ಥೈಸುತ್ತದೆ, ಆ ಕುರಿತು ಕಾನೂನುಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂದು ತಿಳಿಸುತ್ತಲೇ, ಖುರಾನ್ ಗ್ರಂಥದಲ್ಲಿ ಯೇಸುವಿನ ಸ್ಥಾನ ಯಾವುದು ಹಾಗೂ ಅಲ್ಲಿ ಯೇಸು ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಇನ್ನು ಮೂರನೇ ವಿಡಿಯೋ, ಬೈಬಲ್ ಶ್ರೀಗ್ರಂಥದಲ್ಲಿ ನಮ್ಮ ರಕ್ಷಕ ಯೇಸು ಕ್ರಿಸ್ತರ ಸ್ಥಾನವನ್ನು ವಿವರಿಸುತ್ತದೆ.


ಮುಂದಿನ ದಿನಗಳಲ್ಲಿ ಈ ಕುರಿತ ಮತ್ತಷ್ಟು ವೀಡಿಯೋಗಳನ್ನು ಬಿಡುಗಡೆ ಮಾಡಲಾಗುವುದು.


ಜೂನ್ 02, 2021, 13:43


ಕನ್ನಡಕ್ಕೆ: ಗಾಯತ್ರಿ

17 views0 comments

Comentarios


bottom of page