ಲುತೆರ್ನ್ ವರ್ಲ್ಡ್ ಫೆಡರೇಶನ್ನಿನ ಪ್ರತಿನಿಧಿಗಳನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್ ರವರು, ಲುತೆರನಿಯರು ಮತ್ತು ಕಥೋಲಿಕರು ಸಂಘರ್ಷ ಮರೆತು ಪರಮಪ್ರಸಾರದದ ಹಾದಿ ಹಿಡಿಯಲು ಪ್ರೋತ್ಸಾಹಿಸಿದರು.
ವಿಶ್ವಗುರು ಫ್ರಾನ್ಸಿಸ್ರರವರು ಲುತೆರ್ನ್ ವರ್ಲ್ಡ್ ಫೆಡರೇಶನ್ನನ ಸದಸ್ಯರನ್ನು "Augsburg confession"ವಿನ ೪೯೧ನೇಯ ವಾರ್ಷಿಕೋತ್ಸವದ ಸಂದರ್ಭದಂದು ವ್ಯಾಟಿಕನಲ್ಲಿ ಭೇಟಿಯಾದರು. ವಿಶ್ವಗುರು ಪ್ರತಿನಿಧಿಗಳನ್ನು ಉದ್ದೇಶಿಸುವಾಗ "Augsburg confession" ವಾರ್ಷಿಕೋತ್ಸವದ ಟಿಪ್ಪಣಿ ತೆಗೆದುಕೊಳ್ಳುತ್ತಾ ಲುತೆರನಿಯರು "ನಮ್ಮ ಮತ್ತು ಅವರ ಐಕ್ಯತೆಯ ಕಾಳಜಿವಹಿಸಿ" ರೋಮಿನ ವರೆಗೂ ಆಗಮಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ತಮ್ಮ ಮಾತುಗಳನ್ನು ಮುಂದುವರಿಸಿದ ವಿಶ್ವಗುರುಗಳು "ಮೊದಲ ಬಾರಿಗೆ Augsburg confession ಸಭೆ ನಡೆಸಿದ ಉದ್ದೇಶ ಪಾಶ್ಚಾತ್ಯ ಕ್ರೈಸ್ತರ ನಡುವೆ ಬಿರುಕು ಮೂಡುವುದನ್ನು ನಿಯಂತ್ರಿಸಲು ಹಾಗಿತ್ತು, ಕಾಲಕ್ರಮೇಣ ಈ ಸಭೆ ಲುತೆರನಿಯರು ವಿಶ್ವಾಸಿಸುವ , ಪ್ರಭೋದಿಸುವ ಮತ್ತು ಅವರು ಒಪ್ಪಿಕೊಳ್ಳುವ ವಿಚಾರಗಳ ದಾಖಲಾತಿಯಾಹಿತು. ೧೯೮೦ರಲ್ಲಿ ಕಥೋಲಿಕರು ಮತ್ತು ಲುತೆರನಿಯರು ಜೊತೆಯಾದಾಗ, ನಮ್ಮಿಬ್ಬರ "ಒಂದೇ ದೇಹ, ಒಂದೇ ದೀಕ್ಷಾಸ್ನಾನ ಮತ್ತು ಒಂದೇ ದೇವರು" ಎಂಬುದೇ ಎನ್ನುವುದನ್ನು ಗುರುತಿಸಲು"ಎಂದು ನುಡಿದರು.
ಒಂದೇ ದೇವರು
ನಂತರ ಪೂಜ್ಯ ವಿಶ್ವಗುರು ಫ್ರಾನ್ಸಿಸ್ ರವರು ಈ ಮೇಲಿನ ಮೂರು ವಿಷಯಗಳನ್ನು ಕುರಿತು ಮಾತನಾಡಿದರು. ಒಂದೇ ದೇವರು ಎಂಬ ವಿಷಯದ ಬಗ್ಗೆ ಚಿಂತಿಸುತ್ತಾ, ೩೨೫ಕ್ರಿ.ಶ ರಲ್ಲಿ ನಡೆದ "ನೈಸೀಯ ಸಮ್ಮೇಳನ"ದಲ್ಲಿ ಅಭಿವ್ಯಕ್ತ ಮಾಡಲಾದ ಪರಮತ್ರಿತ್ತ್ವದ ಕುರಿತು ಮಾತನಾಡುತ್ತ, " ನಮ್ಮೆಲ್ಲರ ನಂಬಿಕೆಗಳು ತ್ರೈಯೆಕ ದೇವರ ಮೇಲೆ ಆಗಿದ್ದು, ಆ ನಂಬಿಕೆ ನಮ್ಮೆಲ್ಲರನ್ನು ಒಂದಾಗಿ ಮಾಡುತ್ತಿದೆ, ಕೇವಲ ಕಥೋಲಿಕ ಮತ್ತು ಲುತೆರನಿಯರಿಗೆ ಅಲ್ಲದೆ, ವಿಶ್ವದ ವಿವಿಧ ಕ್ರೈಸ್ತ ಸಮುದಾಯಗಳನ್ನು ಒಂದು ಮಾಡುವ ಅಮೂಲ್ಯ ವಿಧಿ ಪರಮತ್ರಿತ್ತ್ವವಾಗಿದೆ" ಎಂದು ನುಡಿದರು.
ಒಂದೇ ದೀಕ್ಷಾಸ್ನಾನ
ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ " ಪಾಪಗಳನ್ನು ಕ್ಷಮಿಸುವ ಒಂದೇ ದೀಕ್ಷಾಸ್ನಾನ ಸಂಸ್ಕಾರ" ಎಲ್ಲಾ ಕ್ರೈಸ್ತರನ್ನು ಐಕ್ಯಗೊಳಿಸುತ್ತದೆ.
"ನಮ್ಮ ಎಲ್ಲಾ ಧಾರ್ಮಿಕ ಪ್ರಯತ್ನಗಳು ಮತ್ತು ಸಂಪೂರ್ಣ ಐಕ್ಯತೆ ಸಾಧಿಸುವ ನಮ್ಮ ಬದ್ಧತೆಗೆ ದಿವ್ಯ ದೀಕ್ಷಾಸ್ನಾನ ಆದಿಸ್ವರೂಪದ ದೈವಿ ಉಡುಗೊರೆಯಾಗಿದೆ. ನಮ್ಮ ನಡುವೆ ಇರುವ ಎಲ್ಲಾ ಬಿರುಕುಗಳನ್ನು, ಕಹಿ ನೆನಪುಗಳನ್ನು ಮರೆತು, ಸಾಮರಸ್ಯ ಸ್ಥಾಪಿಸಲು ದೀಕ್ಷಾಸ್ನಾನ ಮುಖ್ಯವಾಗಿದೆ".
"ನಮ್ಮ ಐಕ್ಯತೆ ಕೇವಲ ಮಾನವರ ನಡುವಿನ ಸಮಾಲೋಚನೆ ಮತ್ತು ಒಪ್ಪಂದಗಳ ಮೇಲೆ ಆಧಾರಿತವಾಗಿರದೆ, ಅದು ಮುಖ್ಯವಾಗಿ ದೇವರ ಅನುಗ್ರಹವಾಗಿದೆ. ದೇವರ ಅನುಗ್ರಹ ನಮ್ಮ ಹೃದಯಗಳನ್ನು ಪರಿಶುದ್ಧಗೊಳಿಸಿ, ಎಲ್ಲಾ ಒಡಕುಗಳ ನಡುವೆ ಸಾಮರಸ್ಯದಿಂದ ಬದುಕಲು ಅನುವು ಮಾಡಿಕೊಡುತ್ತದೆ".
ಒಂದೇ ದೇಹ
ವಿಶ್ವಗುರು ಫ್ರಾನ್ಸಿಸ್ ರವರು ಪ್ರಭು ಕ್ರಿಸ್ತರ " ಪವಿತ್ರ ದೇಹ"ವನ್ನು ಪ್ರತಿಬಿಂಬಿಸುತ್ತಾ. "ನಾವು ನಮ್ಮ ನಡುವಿರುವ ಬಿರುಕುಗಳಿಂದ ಕ್ರಿಸ್ತರ ದೇಹವನ್ನು ಗಾಯಗೊಳಿಸಿದ್ದೇವೆ. ಪ್ರಭು ಕ್ರಿಸ್ತರಿಗೆ ತಮ್ಮ ಶಿಷ್ಯಂದಿರು ಬೇರ್ಪಟ್ಟಿರುವದನ್ನು ನೋಡುವಾಗ ಯಾವ ರೀತಿ ನೋವುಂಟಾಗುವುದೊ, ಇಂದು ನಮ್ಮ ನಡುವೆಯಿರುವ ಬಿರುಕುಗಳಿಂದ ಅದೇ ರೀತಿ ನೋವಾಗುತ್ತಿದೆ" ಎಂದರು.
ಸಂಘರ್ಷದಿಂದ ಪರಮ ಪ್ರಸಾದದಡೆಗೆ
ನಂತರ ವಿಶ್ವಗುರು ಫ್ರಾನ್ಸಿಸ್ ರವರು "ಇತಿಹಾಸದಲ್ಲಿ ಅನೇಕ ಕಾರಣಗಳಿಂದ ನಮ್ಮ ನಡುವೆ ಬಿರುಕುಗಳು ಮೂಡಿರುವುದನ್ನು ಇಂದು ನಾವು ಬದಲಾಯಿಸಲಾಗದಾಗಿದೆ. ಆ ಬಿರುಕುಗಳು ಮೂಡಲು ಕಾರಣಗಳೇನು ಎಂಬುದನ್ನು ಅರಿತು, ಇಂದು ಅವುಗಳನ್ನು ಸರಿದೂಗಿಸುತ್ತ , ಎಲ್ಲರೂ ಐಕ್ಯತೆಯಿಂದ ಸಾಮರಸ್ಯದಿಂದ ಸಂಘರ್ಷಗಳನ್ನು ತೊರೆದು ಪರಮಪ್ರಸಾದದೆಡೆಗೆ ಸಾಗಬೇಕು" ಎಂದು ನೆರೆದಿರುವವರನ್ನು ಉದ್ದೇಶಿಸಿ ನೋಡಿದರು.
ಪ್ರಭು ಕ್ರಿಸ್ತರು ನಮ್ಮ ಜೊತೆಯಲ್ಲಿ
ಕೊನೆಯದಾಗಿ ವಿಶ್ವಗುರು ಫ್ರಾನ್ಸಿಸ್ " ರವರು ಕಥೋಲಿಕರು ಮತ್ತು ಲುತೆರನಿಯರು ಸಂಘರ್ಷದಿಂದ ಪರಮಪ್ರಸಾದದ ಹಾದಿಯಲ್ಲಿ ಒಂಟಿಯಲ್ಲ, ನಮ್ಮ ಈ ಪಯಣದಲ್ಲಿ ಪ್ರಭು ಕ್ರಿಸ್ತರು ಜೊತೆಯಾಗುವರು" ಎಂದು ನುಡಿಯುತ್ತಾ ನೆರೆದಿರುವ ಎಲ್ಲರಿಗೂ ವಿಶ್ವದ ಎಲ್ಲಾ ಕ್ರೈಸ್ತರ ನಡುವೆ ಐಕ್ಯತೆಯನ್ನು ಪುರ್ನಸ್ಥಾಪಿಸುವ ಸಲುವಾಗಿ ಪ್ರಭು ಕ್ರಿಸ್ತರು ಕಲಸಿಕೊಟ್ಟ ಪ್ರಾರ್ಥನೆಯನ್ನು ಹೇಳಲು ಆಹ್ವಾನಿಸಿದರು
ಕನ್ನಡಕ್ಕೆ: ಸುಜಯ್ ಕಾಣಿಕ್ ರಾಜ್
25 ಜೂನ್ 2021, 11:56
Comments