ಮಹಾಧರ್ಮಾಧ್ಯಕ್ಷ ಟಿಟೋ ಯಲ್ಲಾನಾ ಅವರನ್ನು ವಿಶ್ವಗುರು ಪೆÇೀಪ್ ಫ್ರಾನ್ಸಿಸ್ ಅವರು ಇಸ್ರೇಲ್ ಮತ್ತು ಸೈಪ್ರೆಸ್ ಗೆ ನೂತನ ಪ್ರೇಷಿತ ರಾಯಭಾರಿಯನ್ನಾಗಿ ಹಾಗೂ ಪ್ರೇಷಿತ ಪ್ರತಿನಿಧಿಯಾಗಿ ಜೆರುಸಲೇಂ ಮತ್ತು ಪ್ಯಾಲೇಸ್ತೀನಿಗೆ ನೇಮಕ ಮಾಡಿದ್ದಾರೆ.
ವ್ಯಾಟಿಕನ್ ವಾರ್ತೆ ಸಿಬ್ಬಂದಿ ಬರಹಗಾರರಿಂದ
"ಕಾರ್ಪುಸ್ ಕ್ರಿಸ್ತಿ" (ಯೇಸುವಿನ ಪೂಜ್ಯ ಶರೀರ ಮತ್ತು ರಕ್ತದ) ಮಹೋತ್ಸವವನ್ನು ವ್ಯಾಟಿಕನ್ ಆಚರಿಸುವ ದಿನದಂದು ಮಹಾಧರ್ಮಾಧ್ಯಕ್ಷ ಅಡಲ್ಫೋ ಟಿಟೋ ಯಲ್ಲಾನಾರನ್ನು ಇಸ್ರೇಲ್ ಮತ್ತು ಸೈಪ್ರೆಸ್ ಗೆ ನೂತನ ಪ್ರೇಷಿತ ರಾಯಭಾರಿಯಾಗಿ ಜೆರುಸಲೇಂ ಮತ್ತು ಪ್ಯಾಲೇಸ್ತೀನಿಗೆ ಪ್ರೇಷಿತ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ.
ಪವಿತ್ರ ಪೀಠವನ್ನು 4 ಭೂಖಂಡಗಳಲ್ಲಿ ಪ್ರತಿನಿಧಿಸಿದ್ದಾರೆ. ಇದೀಗ ವಿಶ್ವಗುರು ಪೆÇೀಪ್ ಫ್ರಾನ್ಸಿಸ್ ರವರು ಇವರಿಗೆ ಪವಿತ್ರ ಭೂಮಿಯಲ್ಲಿ ತಮ್ಮ ಸೇವೆಯನ್ನು ನೀಡಲು ವಿಶೇಷ ಕರೆ ನೀಡಿದ್ದಾರೆ.
ಇದಕ್ಕೂ ಮುಂಚಿತವಾಗಿ 70 ವರ್ಷದ ಮಹಾಧರ್ಮಧ್ಯಕ್ಷ ಯಲ್ಲಾನಾ ಅವರು ಆಸ್ಟ್ರೇಲಿಯಾದ ಪ್ರೇಷಿತ ರಾಯಭಾರಿಯಾಗಿ ಸೇವೆಸಲ್ಲಿಸುತ್ತಿದ್ದರು. ಇವರು ಮಾರ್ಚ್ ತಿಂಗಳಲ್ಲಿ ಭಾರತದ ಪ್ರೇಷಿತ ರಾಯಭಾರಿಯಾಗಿ ನೇಮಕಗೊಂಡ ಮಹಾಧರ್ಮಾಧ್ಯಕ್ಷ ಲಿಯೋಪೆÇೀಲ್ಡೊ ಗಿರೆಲ್ಲಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ನೂತನ ಪ್ರೇಷಿತ ರಾಯಭಾರಿಯವರ ಕಿರು ಜೀವನ ಚರಿತ್ರೆ
ಅಡಲ್ಫೋ ಟಿಟೋ ಅವರು 6ನೇ ಫೆಬ್ರುವರಿ 1948 ರಲ್ಲಿ ಫಿಲಿಪಿಯನ್ಸ್ ದೇಶದ ನಾಗ ಎಂಬ ನಗರದಲ್ಲಿ ಜನಿಸಿದರು. 19ನೇ ಮಾರ್ಚ್ 1972ರಲ್ಲಿ ಯಾಜಕದೀಕ್ಷೆ ಪಡೆದರು. ರೋಮನ್ ಪೆÇಂತಿಫಿಕಲ್ ಲ್ಯಾಟರನ್ ವಿಶ್ವವಿದ್ಯಾಲಯದಲ್ಲಿ "ಡಾಕ್ಟರ್ ಜ್ಯೂರಿಸ್ ಉತ್ರೀಯಾಸ್ಕ" (ಆoಛಿಣoಡಿ oಜಿ boಣh ಐಚಿತಿs) ಪದವಿ ಪಡೆದಿರುತ್ತಾರೆ. ಅವರ ಧರ್ಮಪಾಂಡಿತ್ಯ ಅಧ್ಯಯನ ಈ ಸಂಸ್ಥೆಯಲ್ಲಿ ಕೊನೆಗೊಂಡಾಗ, ನಂತರ 1984 ರಲ್ಲಿ ಅವರು ಪವಿತ್ರ ಪೀಠದ ರಾಜತಾಂತ್ರಿಕ ಸೇವಾಕಾರ್ಯಕ್ಕೆ ಪ್ರವೇಶಿಸಿದರು. ಘಾನ, ಶ್ರೀಲಂಕಾ, ಟರ್ಕಿ, ಲೆಬೆನಾನ್, ಹಂಗೇರಿ ಮತ್ತು ತೈವಾನ್ ನಲ್ಲಿನ ವಿಶ್ವ ಗುರುಗಳ ಪ್ರತಿನಿಧಿಗಳಾಗಿ ಸತತ ಸೇವೆ ಸಲ್ಲಿಸಿದರು. ಡಿಸೆಂಬರ್ 2001ರಲ್ಲಿ ವಿಶ್ವಗುರು ದ್ವಿತೀಯ ಸಂತ ಜಾನ್ ಪಾಲ್ ಅವರು ಇವರನ್ನು ಪಪುವಾ ನ್ಯೂಗಿನಿಯ ಪ್ರೇಷಿತ ರಾಯಭಾರಿಯನ್ನಾಗಿ ನೇಮಕ ಮಾಡಿದರು ಮತ್ತು 6ನೇ ಜನವರಿ 2002 ಸಂತ ಪೇತ್ರ ಮಹಾ ದೇವಾಲಯದಲ್ಲಿ ಧರ್ಮಾಧ್ಯಕ್ಷದೀಕ್ಷೆ ನೀಡಿದರು. ನಂತರ ಅವರು ಸಲೋಮೊನ್ ದ್ವೀಪಗಳಲ್ಲಿ ಪೆÇೀಪ್ ರವರ ರಾಯಭಾರಿಗಳಾಗಿ ನಾಯಕತ್ವವನ್ನು ವಹಿಸಿಕೊಂಡರು. ವಿಶ್ವಗುರು 16ನೇ ಬೆನದಿಕ್ತರು ಇವರನ್ನು ಪಾಕಿಸ್ತಾನದ ಪ್ರೇಷಿತ ರಾಯಭಾರಿಯನ್ನಾಗಿ 2006ರಲ್ಲಿ, ಹಾಗೂ ಕಾಂಗೋ ಪ್ರಜಾಪ್ರಭುತ್ವೀಯ ಗಣರಾಜ್ಯದ ಪ್ರೇಷಿತ ರಾಯಭಾರಿಯನ್ನಾಗಿ 2010ರಲ್ಲಿ ನೇಮಕ ಮಾಡಿದರು. ಫೆಬ್ರವರಿ 2015ರಲ್ಲಿ ಪೆÇೀಪ್ ಫ್ರಾನ್ಸಿಸ್ ಅವರು ಇವರನ್ನು ಆಸ್ಟ್ರೇಲಿಯಾಗೆ ಪ್ರೇಷಿತ ರಾಯಭಾರಿಯನ್ನಾಗಿ ನೇಮಿಸಿದರು.
03 ಜೂನ್ 2021, 11:27
ಕನ್ನಡಕ್ಕೆ: ಸಹೋ. ಅಂತೋಣಿ ನವೀನ್
Commentaires