top of page
Writer's pictureBangaloreArchdiocese

ಭಾರತದ ಮಹಿಳಾ ಆರೋಗ್ಯ ಕೇಂದ್ರಕ್ಕೆ ದೇಣಿಗೆ ನೀಡಿದ ಪೋಪ್ ಫ್ರಾನ್ಸಿಸ್


ಅಭಿವೃದ್ಧಿ, ಕಲಿಕೆ ಮತ್ತು ಸಹಯೋಗದ ಅಂತರಾಷ್ಟ್ರೀಯ ಕೇಂದ್ರವಾದ ಶಾಂತಿ ಆಶ್ರಮ ಕೇಂದ್ರಕ್ಕೆ ಹಣ ಸಂಗ್ರಹಿಸಲು ಕಥೋಲಿಕ ವಿಶ್ವವಿದ್ಯಾಲಯ ಹಾಗೂ ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಐಕ್ಯಮತ್ಯ ಕೇಂದ್ರ ಉತ್ತೇಜಿಸಿದ ಮ್ಯಾರಾಥಾನ್ ಆಫ್ ಸಾಲಿಡಾರಿಟಿ (ಐಕ್ಯಮತ್ಯ ಮ್ಯಾರಾಥಾನ್) ಸಮ್ಮೇಳನಕ್ಕೆ ಪೋಪ್ ಫ್ರಾನ್ಸಿಸ್ ಅವರು ಸ್ಪಂದಿಸಿ, ತಮ್ಮ ಬೆಂಬಲವನ್ನು ನೀಡಿದರು.


ವ್ಯಾಟಿಕನ್ ವರದಿ


ಪೋಪ್ ಫ್ರಾನ್ಸಿಸ್ ಅವರು ಭಾರತದ ಕೊಯಮತ್ತೂರಿನಲ್ಲಿರುವ ಶಾಂತಿ ಆಶ್ರಮ ಮಹಿಳಾ ಆರೋಗ್ಯ ಮತ್ತು ಸಾಮಾಜಿಕ ಕೇಂದ್ರವನ್ನು ಬೆಂಬಲಿಸಲು ಸುಮಾರು 20,000 ಯೂರೋಗಳನ್ನು ದೇಣಿಗೆ ನೀಡಿದ್ದಾರೆ. ಈ ಆಶ್ರಮವು ಮೂಲತಃ ಮಹಿಳಾ ಉದ್ಯಮಿಗಳಿಗೆ ಆಹಾರ ಮತ್ತು ವೈದ್ಯಕೀಯ ನೆರವು ಹಾಗೂ ತರಭೇತಿ ಸೌಲಭ್ಯಗಳ ಮೂಲಕ ಉಪಖಂಡದ ದಕ್ಷಿಣದಲ್ಲಿರುವ ತಮಿಳುನಾಡು ರಾಜ್ಯದ ಕೊಯಮತ್ತೂರು ನಗರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 50,000 ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಶಾಂತಿ ಆಶ್ರಮ ಸಹಾಯಮಾಡುತ್ತದೆ.


ಪ್ರಖ್ಯಾತ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ವೈದ್ಯರು ಒಟ್ಟಾಗಿ ಸೇರಿ ಶಾಂತಿ ಆಶ್ರಮಕ್ಕೆ ಸುಮಾರು 60,000 ಯೂರೋಗಳನ್ನು ಸಂಗ್ರಹಿಸುವ ಸಲುವಾಗಿ ಆರ್ಥಿಕವಾಗಿ ಅದನ್ನು ಸಧೃಡಗೊಳಿಸಲು ಶನಿವಾರದಂದು ಅಂತರಾಷ್ಟ್ರೀಯ ಆನ್ಲೈನ್ ಸಮ್ಮೇಳನವನ್ನು ಏರ್ಪಡಿಸಿದ್ದರು. ಇದಕ್ಕೆ ಸ್ಪಂದಿಸಿದ ಪೋಪ್‍ರವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ದೇಣಿಗೆ ನೀಡಲಿದ್ದಾರೆ ಎಂದು ಪೋಪ್ ರವರ ದಾನ ಧರ್ಮಗಳ ಉಸ್ತುವಾರಿಯಾದ ಕಾರ್ಡಿನಲ್ ಕೊನ್ರಾಡ್ ಕ್ರಜೇವ್ಸ್ಕಿರವರು ಘೋಷಿಸಿದರು.


“ಮ್ಯಾರಥಾನ್ ಫಾರ್ ಸಾಲಿಡಾರಿಟಿ” ನಿಧಿ ಸಂಗ್ರಹಣವು ರೋಮ್ ನಗರದ ಕ್ಯಾಥೋಲಿಕ್ ವಿಶ್ವವಿದ್ಯಾಲಯದ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಪ್ರಾಧ್ಯಾಪಕ ಪ್ರೊಫೆಸರ್ ಅಂಟೋನಿಯ ತೆಸ್ತಾರರ ಪ್ರೇರಣೆಯಾಗಿದೆ. ಎರಡು ವರ್ಷಗಳ ಹಿಂದೆ ಆಕೆ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಶಾಂತಿ ಆಶ್ರಮದ ಅಧ್ಯಕ್ಷೆ ಹಾಗೂ ಮಕ್ಕಳ ವೈದ್ಯರಾದ ಕೆಜೆವಿನೊ ಅರಾಮ್ ಅವರನ್ನುಭೇಟಿಯಾಗಿದ್ದರು. ಕೆಜೆವಿನೊ ಅರಾಮ್ ಅವರು ಸಹಯಕ್ಕಾಗಿ ವಿನಂತಿಯೊಂದಿಗೆ ನನ್ನನ್ನು ಜನವರಿ ತಿಂಗಳಲ್ಲಿ ಸಂಪರ್ಕಿಸಿದರು ಎಂದು ತೆಸ್ತಾ ತಿಳಿಸಿದರು. ಆಕೆ ನನ್ನನ್ನು ಭೇಟಿಯಾದಾಗ ತಿಳಿಸಿದ್ದೇನೆಂದರೆ ಎಂಟು ತಿಂಗಳುಗಳಲ್ಲಿ ಲಾಕ್‍ಡೌನ್ ನಂತರ ನಮ್ಮಲ್ಲಿದ್ದ ಎಲ್ಲಾ ಸಂಪನ್ಮೂಲಗಳು ಖಾಲಿಯಾಗಿವೆ ಮತ್ತು ಈ ರೀತಿಯ ತೀವ್ರವಾದ ಬಡತನವನ್ನು ಎಂದೂ ಕಂಡಿರಲಿಲ್ಲ ಎಂದು ಹೇಳಿದರು. ಕೆಜೆವಿನೊರವರ ಪ್ರಕಾರ ಜೂನ್ 2021 ರ ಮುಂಚೆ ಪರಿಸ್ಥಿತಿಯು ಸುಧಾರಿಸುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಮೇ ತಿಂಗಳಿನಲ್ಲಿ ಕಂಡಂತಹ ವಿನಾಶಕಾರಿ ಪರಿಸ್ಥಿತಿಯನ್ನು ಅವರು ಎಂದಿಗೂ ಯೋಚಿಸಲಿಲ್ಲ ಎಂದು ಹೇಳಿದರು. ಮುಂದಿನ 5 ತಿಂಗಳ ಮಟ್ಟಿಗೆ ಆರೈಕೆ ಕೆಲಸಗಳ ವೆಚ್ಚಗಳನ್ನು ಭರಿಸಲು ಅವರು ಆರ್ಥಿಕ ಬೆಂಬಲವನ್ನು ಅಪೇಕ್ಷಿಸುತ್ತಿದ್ದಾರೆ ಎಂದು ತೆಸ್ತಾರವರು ತಿಳಿಸಿದರು.


ಪ್ರೊಫೆಸರ್ ತೆಸ್ತಾ ಅವರು ಮ್ಯಾರಥಾನ್ ಆಫ್ ಸಾಲಿಡಾರಿಟಿ ಮೂಲವನ್ನು ಈ ರೀತಿಯಾಗಿ ವಿವರಿಸಿದರು. ಈಗ ಶಾಂತಿ ಆಶ್ರಮಕ್ಕೆ ಸಹಾಯಮಾಡುವ ಸಲುವಾಗಿ ನನ್ನ ಸಹೊದ್ಯೋಗಿಗಳು ಮತ್ತು ನಮ್ಮ ವ್ಯವಹಾರಗಳನ್ನು ಐಕ್ಯಮತ್ಯದ ಸ್ತ್ರೀರೋಗ ಶಾಸ್ತ್ರದ ಮ್ಯಾರಾಥಾನ್‍ನಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಇದು ವಾಸ್ತವಿಕ ಘಟನೆಯಾಗಿದ್ದು, ಸುಮಾರು 10 ಗಂಟೆಗಳ ಕಾಲದ ಸುಧೀರ್ಘ ಸಂಭಾಷಣೆಗೆ ಮತ್ತು ಅನುಭವಗಳನ್ನು ಹಂಚಿಕೊಳ್ಳುತ್ತದೆ. ಫೆಬ್ರವರಿ ಅಂತ್ಯದಿಂದ ಭಾರತದಲ್ಲಿ ಸೋಂಕುಗಳು ಮತ್ತು ಸಾವುಗಳು ಘಾತೀಯ ಹೆಚ್ಚಳದಿಂದ ಮತ್ತಷ್ಟು ಉಲ್ಬಣಗೊಂಡಿರುವ ಈ ಸಾಂಕ್ರಮಿಕ ಭಿಕ್ಕಟ್ಟಿನಲ್ಲಿ ಭಾರತೀಯ ಸಮುದಾಯಗಳ ಅಭಿವೃಧ್ಧಿಯನ್ನು ಬೆಂಬಲಿಸುವ ಸಲುವಾಗಿ ಈ ಕ್ಷೇತ್ರದ ಪ್ರಖ್ಯಾತ ತಜ್ಞರು ಆಗಿರುವ 20 ಸಹೋದ್ಯೋಗಿಗಳ ಈ ಯೋಜನೆಯನ್ನು ಸ್ವೀಕರಿಸಿ ಭಾಗಿಯಾಗಿದ್ದಾರೆ.


ಶನಿವಾರದ ಕಾರ್ಯಕ್ರಮದಲ್ಲಿ ಸುಮಾರು 40 ಸಾವಿರ ಯೂರೋಗಳನ್ನು ಸಂಗ್ರಹಿಸಿದ್ದೆವು. ನಮ್ಮ ಗುರಿ ತಲುಪಲು ಇನ್ನು 20 ಸಾವಿರ ಯೂರೋಗಳು ಸಂಗ್ರಹವಾಗಬೇಕಿತ್ತು. ತುಸು ನಿರಾಸೆ ಮೂಡಿಸಿತ್ತು. ಆದರೆ ಸಮ್ಮೇಳನದ ನಂತರ ಅಚ್ಚರಿಯೆಂಬಂತೆ ಒಂದು ದೂರವಾಣಿ ಕರೆ ಬಂದಿತು. ಕಾರ್ಡಿನಾಲ್ ಕ್ರೆಜೆವ್ಸ್ಕಿರವರು ತೆಸ್ತಾರವರಿಗೆ ದೂರವಾಣಿ ಮೂಲಕ ಮಾತನಾಡಿ, ಪೋಪ್‍ರವರು ನಿಮಗೆ ಮಿಕ್ಕ 20 ಸಾವಿರ ಯೂರೋಗಳನ್ನು ಉಡುಗೊರೆ (ದೇಣಿಗೆಯಾಗಿ) ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಉಡುಗೊರೆಯು ಶಾಂತಿ ಆಶ್ರಮವು ದಕ್ಷಿಣ ಭಾರತದ ಜನರಿಗಾಗಿ ತನ್ನ ಕೆಲಸವನ್ನು ಮುಂದುವರೆಸಲು ಅನುವುಮಾಡಿಕೊಟ್ಟಿತು.



50 views0 comments

Comentarios


bottom of page