top of page

ಮ್ಯಾನ್ಮಾರ್ ನಿರಾಶ್ರಿತರ ಬದುಕಿಗಾಗಿ ಸಹಾಯ ಹಸ್ತ ಕೋರಿ ವಿಶ್ವಗುರುಗಳ ಮನವಿ


ವಿಶ್ವಗುರು ಫ್ರಾನ್ಸಿಸರವರು ಮ್ಯಾನ್ಮಾರ್ ನ ಸಹಸ್ರಾರು ನಿರಾಶ್ರಿತರೂ, ಹಸಿವೆಯಿಂದ ಬಳಲುತ್ತಿರುವವರ ನೆರವಿಗಾಗಿ, ಅಲ್ಲಿನ ಧರ್ಮಾಧ್ಯಕ್ಷರುಗಳ ಸಹಾಯವಾಣಿಯ ಮೊರೆಗೆ ತಮ್ಮ ಸ್ವರವನ್ನು ಒಗ್ಗೂಡಿಸುತ್ತಾ 'ನಮ್ಮ ಹೃದಯಗಳನ್ನು ನಿರಾಶ್ರಿತ ಬಂಧುಗಳಿ'ಗಾಗಿ ತೆರೆಯಲು ಕರೆ ನೀಡಿದ್ದಾರೆ.


ವಿಶ್ವಗುರು ಫ್ರಾನ್ಸಿಸರವರು ಭಾನುವಾರದ ತ್ರಿಕಾಲ ಪ್ರಾರ್ಥನೆಯ ಮುಕ್ತಾಯ ವಿಧಿಯಲ್ಲಿ, ಮ್ಯಾನ್ಮಾರ್ ದೇಶದ ಧರ್ಮಾಧ್ಯಕ್ಷರುಗಳು ತಮ್ಮ ದೇಶದ ಹತಾಶರಾದ ಸಹಸ್ರಾರು ನಿರಾಶ್ರಿತರ ಅವಸ್ಥೆಯತ್ತ ಗಮನ ಸೆಳೆಯಲು ಕೈಗೊಂಡ ಮನವಿಯ ಸ್ವರಗಳ ಚಾಲನೆಗೆ ತಮ್ಮ ಸ್ವರವನ್ನು ಒಗ್ಗೂಡಿಸಿರುವರು.


ವಿಶ್ವಗುರುಗಳು, ಮ್ಯಾನ್ಮಾರ್ ಧರ್ಮಾದ್ಯಕ್ಷರುಗಳು ಸಹಾಯ ಹಸ್ತಕ್ಕಾಗಿ ಮೊರೆಯಿಟ್ಟಿರುವುದಾಗಿ ಹೇಳುತ್ತಾ 'ಮಾನವೀಯತೆಯ ಮುಖಮಂಟಪಗಳಾದ, ಚರ್ಚ್ ಗಳು, ಪಗೋಡಗಳು, ಮಸೀದಿಗಳು, ಶಿಶುವಿಹಾರಗಳು, ದೇವಸ್ಥಾನಗಳು, ಅಂತೆಯೇ ಶಾಲೆಗಳು ಮತ್ತು ಔಷಧಾಲಯಗಳು ಎಲ್ಲವೂ ನಿರಾಶ್ರಿತರಿಗೆ ನಿಷ್ಪಕ್ಷಪಾತ ನೆಲೆಗಳು' ಎಂದರು. ಮತ್ತು 'ಕ್ರಿಸ್ತರ ದಿವ್ಯಹೃದಯವು ಎಲ್ಲರ ಹೃದಯ ಕಮಲಗಳಲ್ಲಿ ಸಂಚಲನ ಮೂಡಿಸಿ, ಮ್ಯಾನ್ಮಾರ್ ನಾಡಿನಲ್ಲಿ ಶಾಂತಿ ತರುವಂತಾಗಲಿ' ಎ೦ದು ನುಡಿದರು.


ವಿಶ್ವ ನಿರಾಶ್ರಿತರ ದಿನ


ಭಾನುವಾರದಂದು ವಿಶ್ವಸಂಸ್ಥೆಯು 'ವಿಶ್ವ ನಿರಾಶ್ರಿತರ ದಿನ' ಎಂದು ಹಾಗೂ ಅದರ ವಸ್ತು ವಿಷಯ' ಒಟ್ಟಾಗಿ ನಮ್ಮ ಸ್ವಾಸ್ಥ್ಯತೆ, ಕಲಿಕೆ, ಮತ್ತು ಹೊಳೆಯುವಿಕೆ' ಎಂಬಂದನ್ನು ಎಲ್ಲರಲ್ಲಿ ನೆನಪಿಗೆ ತಂದರು.


ವಿಶ್ವಗುರುಗಳು ನಮ್ಮಲ್ಲಿ 'ನಿರಾಶ್ರಿತರಿಗಾಗಿ ನಮ್ಮ ಹೃದಯ ತೆರೆಯೋಣ' ಮತ್ತು ಅವರ ನೋವು ನಲಿವಿನಲ್ಲಿ ಪಾಲುದಾರರಾಗೋಣ. ಅವರ ಸ್ಥಿತಿಸ್ಥಾಪಕತ್ವ ಧೈರ್ಯದಿಂದ ಪ್ರೇರಣೆಗೊಂಡು ಹೆಚ್ಚು ಮಾನವೀಯ ಸಹಸಾಮ್ಯತೆಯ ಒಂದೇ ದೊಡ್ಡ ಕುಟುಂಬವಾಗೋಣ' ಎಂದು ಹೇಳಿದರು.


20 ಜೂನ್ 2021, 12:48


ಕನ್ನಡಕ್ಕೆ: ಮೇರಿ ಎಲಿಜಬೆತ್

15 views0 comments

Comentários


bottom of page