top of page

“ಯೇಸು ತಮ್ಮ ಶಿಷ್ಯರಿಗೆ ಪ್ರಾರ್ಥನೆಯ ಮಾದರಿಯಾಗಿದ್ದಾರೆ” - ಸಾರ್ವಜನಿಕ ಭೇಟಿಯಲ್ಲಿ ಪೋಪ್ ಫ್ರಾನ್ಸಿಸ್


ವಿಶ್ವಗುರುಗಳು ಕ್ರೈಸ್ತರ ಪ್ರಾರ್ಥನೆ ಕುರಿತು ನೆರೆದಿದ್ದ ಜನಸಾಮಾನ್ಯರಿಗೆ ಯೇಸು ತಮ್ಮ ಶಿಷ್ಯರೊಂದಿಗಿನ ಸಂಬಂಧದಲ್ಲಿ ಪ್ರಾರ್ಥನೆ ಮೂಲಭೂತವಾಗಿತ್ತು ಎಂದರು. ಕಳೆದ ಬುಧವಾರ ವಿಶ್ವಗುರುಗಳು, ನೆರೆದಿದ್ದ ಜನಸಾಮಾನ್ಯರೊಂದಿಗೆ ಕ್ರೈಸ್ತರ ಪ್ರಾರ್ಥನೆ ಕುರಿತು ಮಾತಾಡುತ್ತ, ಯೇಸು ತಮ್ಮ ಶಿಷ್ಯರೊಂದಿಗಿನ ಸಂಬಂಧದ ಮೂಲಭೂತವಾದ ಪ್ರಾರ್ಥನೆ ಕುರಿತು ಶುಭಸಂದೇಶದ ಕೆಲವು ವಾಕ್ಯಗಳ ಉದಾಹರಣೆಯನ್ನು ಉಲ್ಲೇಖಿಸಿದರು.

ವರದಿ: ರಾಬಿನ್ ಗೋಮ್ಸ್

ಶಿಷ್ಯರ ಆಯ್ಕೆ

ಯೇಸು ತಮ್ಮ ಶಿಷ್ಯರನ್ನು ಆಯ್ಕೆಮಾಡುವ ಮುನ್ನ ಅವರು ಪರ್ವತಕ್ಕೆ ಹೋಗಿ ಅಲ್ಲಿ ಇಡೀ ರಾತ್ರಿ ದೇವರೊಂದಿಗೆ ಪ್ರಾರ್ಥನೆಯಲ್ಲಿ ಕಳೆದರೆಂದು ಸಂತ ಲೂಕರು ತಮ್ಮ ಶುಭಸಂದೇಶದಲ್ಲಿ ಹೇಳಿದ್ದಾರೆ. ಪ್ರಾರ್ಥನೆಯು ಪಿತನೊಂದಿಗಿನ ಸಂಭಾಷಣೆಯಾಗಿದೆ ಎಂದು ಹೇಳಿದರಲ್ಲದೆÀ ಶಿಷ್ಯರ ಆಯ್ಕೆಗೆ ಮಾನದಂಡ ಪ್ರಾರ್ಥನೆಯೇ ಆಗಿತ್ತು. ಭವಿಷ್ಯದಲ್ಲಿ ವಿಶ್ವಾಸದ್ರೋಹಿಯಾಗಿ ಬದಲಾದ ಜೂದಾಸನಿಗೆ ಇದು ಸರಿ ಎಂದು ಕಂಡಿರಲಿಲ್ಲ. ಆದರೆ ಶಿಷ್ಯರ ಹೆಸರುಗಳನ್ನು ದೇವರ ಯೋಜನೆಯಲ್ಲಿ ಸೇರಿಸಲಾಗಿತ್ತು, ಎಂದು ವಿಶ್ವಗುರುಗಳು ವಿವರಿಸಿದರು. ಪ್ರೇಷಿತರೂ ಸಹ ಕೆಲವೊಮ್ಮೆ ಯೇಸು ಅವರ ಬಗ್ಗೆ ಆಸ್ಥೆ ವಹಿಸಲು ಕಾರಣರಾಗಿದ್ದರೆಂದು ವಿಶ್ವಗುರುಗಳು ಗಮನ ಸೆಳೆದರಲ್ಲದೆ ಅವರಲ್ಲಿ ಪಾಪದೋಷಗಳಿದ್ದಾಗ್ಯೂ ಅದನ್ನು ಪಿತ ದೇವರು ತಮ್ಮ ಹೃದಯದಲ್ಲಿ ಒಯ್ದರು ಮತ್ತು ಕ್ರಿಸ್ತರು ಬೀಳುವಾಗ ಅವರು ಪಿತನಿಂದ ಸ್ವೀಕೃತರಾದರು. ಆದ್ದರಿಂದ ಅವರ ಪ್ರಾರ್ಥನೆಯು ಯೇಸುವಿನ ಜೀವನದಲ್ಲಿ ನಿರಂತರವಾಗಿ ಅನಾವರಣಗೊಳ್ಳುತ್ತದೆ.

ಸಹನಾಶೀಲದಿಂದ ರೂಪಾಂತರದ ನಿರೀಕ್ಷೆ

ಒಬ್ಬ ಶಿಕ್ಷಕ ಹಾಗು ಗೆಳೆಯ ಪವಿತ್ರ ತಂದೆಯಾಗಿ ಮುಂದುವರೆದರೆ, ಯೇಸು ಶಿಷ್ಯರ ರೂಪಾಂತರಕ್ಕಾಗಿ ತಾಳ್ಮೆಯಿಂದ ಕಾದದ್ದು ಶಿಷ್ಯ ಪೇತ್ರನೊಂದಿಗಿನ ಕೊನೆಯ ಭೋಜನದೊಂದಿಗೆ ಇದು ಸ್ಪಷ್ಟವಾಯಿತು. ತಮ್ಮ ವಿಶ್ವಾಸ ವಿಫಲಗೊಳ್ಳದಿರಲು ಅವರು ಪ್ರಾರ್ಥಿಸಿದರು ಮತ್ತು ಅವರು ರೂಪಾಂತರ ಹೊಂದಿದ ಮೇಲೆ ತಮ್ಮ ಸೋದರರನ್ನು ದೃಡೀಕರಿಸಿದರು. ಶಿಷ್ಯರು ದೌರ್ಬಲ್ಯಕ್ಕೊಳಗಾದರೆ ಯೇಸುವಿನ ಪ್ರೀತಿ ನಿಲ್ಲದು, ಬದಲಾಗಿ ಅದು ಇನ್ನಷ್ಟು ತೀವ್ರವಾಗುವುದಲ್ಲದೆ ನಾವೆಲ್ಲರೂ ಅವರ ಪ್ರಾರ್ಥನೆಯ ಕೇಂದ್ರದೊಳಗಿದ್ದೇವೆ.

ಪರಿವರ್ತನೆಯ ಪ್ರಾರ್ಥನೆ

ನಿಕೃಷ್ಟ ಪಾಪಿಗಳನ್ನು, ಪಾಪಗಳ ಹೊಲಸುತನದಲ್ಲಿ ಮುಳುಗಿರುವವರನ್ನು ಯೇಸು ಪ್ರೀತಿಸುತ್ತಾರೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತಾರೆ ಎಂದು ವಿಶ್ವಗುರು ಫ್ರಾನ್ಸಿಸ್‍ರು ಕ್ರೈಸ್ತರಿಗೆ ವಿಶದಪಡಿಸಿದರು. ಪ್ರತಿಯೊಬ್ಬರಿಗೂ ನಮ್ಮ ಪಾರ್ಥನೆ ಮತ್ತು ಪ್ರೀತಿ ಎಂದಿಗೂ ಕೊನೆಗೊಳ್ಳುವುದಿಲ್ಲ, ಬದಲಿಗೆ ಅದು ಇನ್ನಷ್ಟು ತೀವ್ರಗೊಳ್ಳುವುದು. ಇಂತಹ ಸಂದರ್ಭದಲ್ಲಿ ಅವರು ನಮಗಾಗಿ ಪ್ರಾರ್ಥಿಸುತ್ತ ಪಿತನಿಗೆ ತಮ್ಮ ಗಾಯಗಳನ್ನು ತೋರಿಸುತ್ತ ನಮ್ಮ ರಕ್ಷಣಾ ಮೌಲ್ಯಗಳಿಗೆ ಭರವಸೆಂiÀi ಬೆಳಕಾಗಿದ್ದಾರೆ.

ಯೇಸು ಮತ್ತೆ ತಮ್ಮ ಶಿಷ್ಯರ ವಿಶ್ವಾಸದÀ ಶೋಧನೆಗಾಗಿ ಅವರು ಏಕಾಂತ ಪ್ರಾರ್ಥನೆಯಲ್ಲಿ ತೊಡಗಿದರು. ಅವರು ತಮ್ಮ ಶಿಷ್ಯರನ್ನುದ್ದೇಶಿಸಿ “ನೀವು ಯಾರನ್ನು ಕುರಿತು ಯೋಚಿಸುತ್ತಿದ್ದೀರಿ ಎಂದಾಗ ಪೇತ್ರನು ‘ಕ್ರಿಸ್ತ ಪ್ರಭು ದೇವರನ್ನು’ ಎಂದ”.

“ಯೇಸುವಿನ ಮಹತ್ವದ ಪರಿವರ್ತನೆಯು ಸದಾ ತೀವ್ರ ಹಾಗು ಸುದೀರ್ಘ ಸಮಯದ ಪ್ರಾರ್ಥನೆಯಿಂದ ಕೂಡಿದೆ” ಎಂದರು ವಿಶ್ವಗುರುಗಳು. ಶಿಷ್ಯನಿಗೆ ಈ ವಿಶ್ವಾಸದ ಶೋಧನೆಯು ನವೀಕರಣ ಪ್ರಾರಂಭದ ಹಂತವಾಗಿತ್ತು, ಏಕೆಂದರೆ ಆ ನಂತರ ಪಿತ ದೇವರು ಹೇಳಿದ್ದೇನೆಂದರೆ “ಯೇಸು ತಮ್ಮ ಶುಭಸಂದೇಶ ಕಾರ್ಯದಲ್ಲಿ ಮರುರೂಪ ಪಡೆದುಕೊಂಡರಲ್ಲದೆ ತಮ್ಮ ಯಾತನೆ ಮರಣ, ಮತ್ತು ಪುನರುತ್ಥಾನವನ್ನು ಕುರಿತು ಮಾತಾಡಿದರು”.

ಅವರು ತಮ್ಮ ಅಂತ್ಯವನ್ನು ಪ್ರಕಟಿಸುವ ಸಂದರ್ಭದಲ್ಲಿ ತಮ್ಮ ಶಿಷ್ಯರನ್ನು ಮತ್ತು ನಮ್ಮನ್ನು ಸಹಜ ಪ್ರವೃತ್ತಿಯಿಂದ ಪ್ರೇರೇಪಿಸಿದರು” ಎಂದರು ವಿಶ್ವಗುರುಗಳು. “ಪ್ರಾರ್ಥನೆಯೇ ಬೆಳಕು ಮತ್ತು ಶಕ್ತಿಯ ಮೂಲ. ರಸ್ತೆಯ ಉಬ್ಬು-ತಗ್ಗಿನಲ್ಲಿ ಪ್ರತಿ ಸಾರಿ ತಿರುವು ಪಡೆದುಕೊಳ್ಳುವಾಗ ಹೆಚ್ಚು ಗಾಢವಾಗಿ ಪ್ರಾರ್ಥಿಸುವುದು ಅವಶ್ಯಕ”

ರೂಪಾಂತರ

ಯೇಸು ಜೆರುಸಲೇಮ್‍ನಲ್ಲಿ ಸಾಕಷ್ಟು ಮಾತಾಡಿದ ಬಳಿಕ ರೂಪಾಂತರದ ವ್ಯಾಖ್ಯಾನವು ಪ್ರಾರಂಭವಾಗುತ್ತದೆ.

ಯೇಸು ಕ್ರಿಸ್ತರು ಪ್ರಾರ್ಥಿಸಿದಂತೆ ನಾವೂ ಪ್ರಾರ್ಥಿಸಬೇಕೆಂದು ಬಯಸುವುದೇನೋ ಸರಿ. ಆದರೆ, ನಮ್ಮ ಪ್ರಾರ್ಥನೆಯ ಪ್ರಯತ್ನಗಳು ಸಂಪೂರ್ಣ ವ್ಯರ್ಥ ಹಾಗು ನಿಷ್ಫಲವಾಗಿದ್ದರೂ ನಾವು ಯೇಸುಕ್ರಿಸ್ತರ ಪ್ರಾರ್ಥನೆಯಲ್ಲಿ ಸದಾ ಭರವಸೆ ಇಡಬಹುದಾಗಿದೆ.

ಯೇಸು ನಮಗಾಗಿ ಪ್ರಾರ್ಥಿಸುತ್ತಾರೆಂದು ಪುನರುಚ್ಚರಿಸಲು, ನೆನಪಿಸಿಕೊಳ್ಳಲು ಅವರು ಕ್ರೈಸ್ತರನ್ನು ಒತ್ತಾಯಿಸಿದರು.

ಸಂತ ಲೂಕರು ತಮ್ಮ ಶುಭಸಂದೇಶದಲ್ಲಿ ಹೇಳಿದಂತೆ ಪ್ರಭು ಯೇಸುಕ್ರಿಸ್ತರು ಪ್ರಾರ್ಥಿಸುವ ಸಲುವಾಗಿ ಯೋವಾನ ಮತ್ತು ಯಕೋಬನನ್ನು ಪರ್ವತಕ್ಕೆ ಕರೆದೊಯ್ದರು. ಯೇಸುವಿನ ಮುಖವು ಬದಲಾವಣೆ ಹೊಂದಿ ಅವರ ವಸ್ತ್ರವು ಬಿಳಿಯ ರೂಪದಲ್ಲಿ ಪ್ರಕಾಶಮಾನವಾಗಿ ಹೊಳೆಯತೊಡಗಿತು. ಮೋಶೆ ಮತ್ತು ಎಲಿಯರು ತಮ್ಮ ಮಹಿಮಾರೂಪದಲ್ಲಿ ಜೇರುಸಲೇಮ್‍ನಲ್ಲಿ ಸಂಭವಿಸಲಿರುವ ಯೇಸವಿನ ನಿರ್ಗಮನದ ಕುರಿತು ಸಮಾಲೋಚಿಸುತ್ತಿದ್ದರು.

“ಯೇಸುವಿನ ನಿರೀಕ್ಷಿತ ಘೋಷಣೆಯ ಪ್ರಕಟಣೆಯು ತಂದೆ ಮಗನೊಂದಿಗೆ ಅವರ ಪ್ರೀತಿ ಇಚ್ಛೆಯಂತೆ ರಕ್ಷಣಾ ಯೋಜನೆಗೆ ಭಾವೈಕ್ಯತೆಯಿಂದ ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವಾಗ ಜರುಗಿತು” ಎಂದು ವಿಶ್ವಗುರುಗಳು ವಿವರಿಸಿದರು.

ಯೇಸು ನಮ್ಮ ಪ್ರಾರ್ಥನೆಯನ್ನು ಪರಿಪೂರ್ಣಗೊಳಿಸುವರು

ಪ್ರಭು ಯೇಸು ಪ್ರಾರ್ಥಿಸಿದಂತೆ ನಾವೂ ಪ್ರಾರ್ಥಿಸಬೇಕೆಂದು ಬಯಸುವುದು ಮಾತ್ರವಲ್ಲ, ನಮ್ಮ ಪ್ರಾರ್ಥನೆಗಳು ವ್ಯರ್ಥವಾಗಿದ್ದರೂ, ನಿಷ್ಫರಿಣಾಮಾಕಾರಿಯಾಗಿದ್ದರೂ ನಾವು ಅವರ ಪ್ರಾರ್ಥನೆಯನ್ನು ಸದಾ ಪರಿಗಣಿಸಬಹುದಾಗಿದೆ. “ಯೇಸು ನಮಗಾಗಿ ಪ್ರಾರ್ಥಿಸುತ್ತಾರೆಂದು ಕ್ರೈಸ್ತರು ಪುನರಾವರ್ತಿಸಬೇಕು ಮತ್ತು ಸ್ಮರಿಸಬೇಕು” ಎಂದು ಅವರು ಕ್ರೈಸ್ತ ಶ್ರೀಸಾÀಮಾನ್ಯರಿಗೆ ಕರೆಕೊಟ್ಟರು. “ತೊಂದರೆಯಲ್ಲಿದ್ದಾಗ, ಚಂಚಲತೆಗೊಳಗಾದಾಗ, ಯೇಸು ನನಗಾಗಿ ಪ್ರಾರ್ಥಿಸುತ್ತಾರೆ” ಎಂದು ಹೇಳಿದರಲ್ಲದೆ ಪ್ರಭು ಕ್ರಿಸ್ತರೇ ಹೇಳಿರುವಂತೆ ನಮ್ಮ ಜೀವನದಲ್ಲಿ ಏನು ಆಧಾರವಾಗಿರುವುದೋ ಅದನ್ನು ನಾವು ಮರೆಯಬಾರದು. ಪ್ರತಿಯೊಬ್ಬರಿಗೂ ಯೇಸುವಿನ ಪ್ರಾರ್ಥನೆ, ಅವರ ಹೆಸರಿನೊಂದಿಗೆ, ಉಪಹೆಸರಿನೊಂದಿಗೆ ಪಿತನ ಮುಂದೆ ನಮ್ಮ ರಕ್ಷಣೆಗಾಗಿ ತಮ್ಮ ಗಾಯಗಳನ್ನು ಅವರು ತೋರಿಸುತ್ತಿದ್ದಾರೆ.

ಕೊನೆಯದಾಗಿ ವಿಶ್ವಗುರು ಫ್ರಾನ್ಸಿಸ್‍ರು ‘ನಮ್ಮ ಪ್ರಾರ್ಥನೆಗಳ ಭಾಗಿಲುಗಳು ಮುಚ್ಚಿದ್ದರೂ ನಮ್ಮ ಚಂಚಲತೆಯ ವಿಶ್ವಾಸದಿಂದ ರಾಜಿ ಮಾಡಿಕೊಂಡಿದ್ದರೂ ನಾವು ಅವರಲ್ಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು” ಎಂದರು.

“ನಮ್ಮ ಅಳುಕಿನ ಪ್ರಾರ್ಥನೆಗಳು ಯೇಸುವಿನ ಪ್ರಾರ್ಥನೆಯಿಂದ ಬೆಂಬಲಿತವಾಗಿದ್ದು ಹದ್ದಿನ ರೆಕ್ಕೆಯ ಮೇಲೆ ವಿಶ್ರಾಂತಿ ಪಡೆದು ಸ್ವರ್ಗಕ್ಕೇರುತ್ತದೆ” ಎಂದು ವಿಶ್ವಗುರುಗಳು ತಮ್ಮ ವ್ಯಾಖ್ಯಾನವನ್ನು ಮುಕ್ತಾಯಗೊಳಿಸಿದರು.

02 ಜೂನ್ 2021, 19:44

ಕನ್ನಡಕ್ಕೆ: ಎಲ್. ಚಿನ್ನಪ್ಪ

22 views0 comments

Comments


bottom of page