"ಯೇಸು ಶಿಲುಬೆಯಲ್ಲಿ ಪ್ರತಿಯೊಬ್ಬರಿಗಾಗಿ ಪ್ರಾರ್ಥಿಸಿದರು" - ಪೋಪ್ ಫ್ರಾನ್ಸಿಸ್


ವಿಶ್ವಗುರು ಫ್ರಾನ್ಸಿಸ್‌ರವರು ಕಳೆದ ಬುಧವಾರದಂದು ಪ್ರಾರ್ಥನೆ ಕುರಿತು ಕೇಂದ್ರೀಕರಿಸಿದ ಧಾರ್ಮಿಕ ಬೋಧನೆಯನ್ನು ನೆರೆದಿದ್ದ ಸಾಮಾನ್ಯ ಪ್ರೇಕ್ಷಕ ವೃಂದದವರೊಂದಿಗೆ ಸುದೀರ್ಘವಾದ ಪ್ರಬೋಧನೆಯ ಮೂಲಕ ವಿವರಿಸಿದರು.

ಪ್ರಾರ್ಥನೆ ಆವೃತ್ತಿ ಕುರಿತ ಧಾರ್ಮಿಕ ಬೋಧನೆಯು ಕಳೆದ ಒಂದು ವರ್ಷದ ಹಿಂದೆ ಮೇ ೨೦೨೦ರಲ್ಲಿ ಪ್ರಾರಂಭಗೊಂಡಿತ್ತು. ಇದನ್ನು ನೆನಪಿನಲ್ಲಿಡಬಹುದಾದ ಅತ್ಯಂತ ಸುಂದರವಾದ ವಿಷಯವೆಂದು ವಿಶ್ವಗುರು ಫ್ರಾನ್ಸಿಸ್‌ರವರು ಹೇಳಿದರು. ಪ್ರಾರ್ಥನೆ ಅನುಗ್ರಹವಲ್ಲದಿದ್ದರೂ ನಾವು ಪ್ರಾರ್ಥಿಸಲು ಮಾತಾಡುತ್ತೇವೆ. ತಂದೆಯೊಂದಿಗಿನ ಯೇಸುವಿನ ಸಂದೇಶವನ್ನು ಪವಿತ್ರಾತ್ಮರ ಸಂಪರ್ಕದ ಮೂಲಕ ನಾವು ಸ್ವೀಕರಿಸಿದ್ದೇವೆ.


ಯೇಸು ಕ್ರಿಸ್ತರ ಜೀವನದಲ್ಲಿ ಪ್ರಾರ್ಥನೆ ಎಂಬುದು ಅವರ ಹಲವು ವೈಷಿಷ್ಟ್ಯಗಳಲ್ಲಿ ಒಂದಾಗಿದೆ. ಏಕೆಂದರೆ ತಂದೆಯೊಂದಿಗಿನ ಸಂವಾದ ಅವರ ಪ್ರಕಾಶಮಾನವಾದ ಅಸ್ಥಿತ್ವದ ತಿರುಳು ಎಂದು ವಿಶ್ವಗುರುಗಳು ಹೇಳಿದರು.


ಕ್ರೈಸ್ತರ ಘೋಷಣೆಯ ಸಾರಾಂಶ


ಯೇಸು ತಮ್ಮ ಐಹಿಕ ಜೀವನದುದ್ದಕ್ಕೂ ಎಡೆಬಿಡದೆ ಪ್ರಾರ್ಥಸಿದರೆಂದು ಹೇಳಿದ ವಿಶ್ವಗುರುಗಳು ಕ್ರೈಸ್ತರ ಘೋಷಣೆಯ ಕೇಂದ್ರಿತ ಸಾರಾಂಶವು ಯೇಸು ಕ್ರಿಸ್ತರ ಜೀವನದ ಮೇಲೆ ಬೆಳಕು ಚೆಲ್ಲುವ ಅವರ ಉತ್ಸಾಹ ಮತ್ತು ಮರಣಕ್ಕೆ ಕಾರಣವಾದ ದಿನಗಳ ಸಮಯದಲ್ಲಿ ಅವರ ಪ್ರಾರ್ಥನೆ ಇನ್ನಷ್ಟು ಗಾಢವಾಯಿತು.


ಯೇಸು ಮಾನವರ ವೇದನೆ ಮತ್ತು ಅಸ್ವಸ್ಥೆಯ ಬಗ್ಗೆಯೇ ಕಾಳಜಿವಹಿಸಿದ ಮಾನವಪ್ರೇಮವಲ್ಲ; ಅದಕ್ಕೂ ಮಿಗಿಲಾದುದು. ಯೇಸು ನಮಗೆ ಸಂಪೂರ್ಣ ಜೀವೋದ್ಧಾರಕ ಹಾಗೂ ಲೋಕೋದ್ಧಾರಕರಾಗಿದ್ದು ಅವರ ಸಾವಿನ ಮೇಲೆ ಜೀವನದ ನಿರ್ಣಯತೆಯ ವಿಜಯದಲ್ಲಿ ಸಂಪೂರ್ಣ ಭರವಸೆ ನೀಡುತ್ತದೆ ಎಂದು ವಿಶ್ವಗುರುಗಳು ಹೇಳಿದರು.

ಅವರ ಅಂತಿಮ ಪಾಸ್ಖದ ದಿನಗಳಲ್ಲಿ ಯೇಸು ಸಂಪೂರ್ಣವಾಗಿ ಪ್ರಾರ್ಥನೆಯಲ್ಲಿ ತೊಡಗಿದರೆಂಬುದನ್ನು ನಾವು ಕಾಣುತ್ತೇವೆ. ಗೆತ್ಸೆಮನೆ ತೋಟದಲ್ಲಿ ಸಂಕಟದ ಯಾತನೆಯಲ್ಲಿರುವಾಗ ಅವರು ದೇವರನ್ನು ಅಪ್ಪಾ ತಂದೆ ಎಂದು ವಿಶ್ವಾಸದಿಂದ ಕರೆದರು. ಅನ್ಯೋನ್ಯತೆ ನಂಬಿಕೆ ಮತ್ತು ಶಿಲುಬೆಯಲ್ಲಿ ಹಾಗು ದೇವರ ಧ್ಯಾನದ ಮೌನದಲ್ಲಿ ತಲ್ಲೀನರಾಗಿ ತಂದೆಯಾದ ದೇವರನ್ನು ಮತ್ತೊಮ್ಮೆ ಕರೆದರೆಂದು ವಿಶ್ವಗುರು ಫ್ರಾನ್ಸಿಸ್‌ರವರು ವಿವರಿಸಿದರು.