ಕೊರೊನ ವೈರಸ್ ಕಾರಣ ಹೊಸ ಡೆಲ್ಟಾ ರೂಪಾಂತರದ ಬಗ್ಗೆ 9 ಸಾವಿರಕ್ಕೂ ಹೆಚ್ಚು ಸೋಂಕುಗಳ ಪ್ರಕರಣಗಳು ಮಾಸ್ಕೋನಲ್ಲಿ ವರದಿಯಾಗುತ್ತಿದ್ದಂತೆ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂಜರಿಯುತ್ತಿರುವ ಕಾರಣ ಕೋವಿಡ್19 ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ ಎಂದು ರಷ್ಯಾ ಸರ್ಕಾರ ರಷ್ಯನ್ನರನ್ನು ದೂಷಿಸಿದೆ
ವರದಿ: ಸ್ಟೆಫಾನ್ ಜೆ ಬಾಸ್
ಭಾರತ ದಲ್ಲಿ ಮೊದಲು ಕಂಡುಬಂದ ಡೆಲ್ಟಾ ವೈರಸ್ ರಷ್ಯನ್ನರಲ್ಲೂ ಹರಡಿ ಸಾವಿರಾರು ಮಂದಿ ಈ ಡೆಲ್ಟಾ ವೈರಸ್ ರೂಪಾಂತರ ಎಂದು ಕರೆಯಲ್ಪಡುವ ಸೋಂಕಿಗೆ ಒಳಗಾಗಿರುವುದನ್ನು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದೆ
ರಷ್ಯನ್ನರು ಈ ಹೊಸ ಡೆಲ್ಟಾ ವೈರಸ್ ರೂಪಾಂತರ ಸೋಂಕಿಗೆ ತುತ್ತಾಗಲು ರಷ್ಯಾದ ಸ್ಪುಟ್ನಿಕ್ ವಿ ಕೊರೊನ ವೈರಸ್ ಲಸಿಕೆ ಪಡೆಯಲು ಹಿಂಜರಿಯುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ವಕ್ತಾರ ಡಿಮಿಟ್ರಿ ಫೆಸ್ಕೋವ್ ದೂಷಿಸಿದರು.
ಲಸಿಕೆಯನ್ನು ಪಡೆಯಲು ನಾಗರಿಕರಲ್ಲಿರುವ ಧೋರಣೀಯ ನಿರಾಕರಣೆಯೇ ಕೋವಿಡ್ ಉಲ್ಬಣಕ್ಕೆ ಪ್ರಮುಖ ಕಾರಣವಾಗಿದೆ. ಯುರೋಪಿಯನ್ ಫುಟ್ಬಾಲ್ ಚಾಂಪಿಯನ್ಶಿಪ್ಗಾಗಿ ಸ್ಥಾಪಿಸಲಾದ ಅಭಿಮಾನಿ ವಲಯಗಳನ್ನು ಮುಚ್ಚುವುದು ಸೇರಿದಂತೆ ಈ ತಿಂಗಳು ವಿಧಿಸಿರುವ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ ಎಂದು ಮಾಸ್ಕೋದ ಮೇಯರ್ ಸೊಬ್ಯಾನಿನ್ ತಿಳಿಸುತ್ತಾ ತಮಗೆ ನಾಗರಿಕರ ಬಗ್ಗೆ ಇರುವ ಕಳವಳ ಹಂಚಿಕೊಂಡಿದ್ದಾರೆ. ಜೊತೆಗೆ ಸಾವಿರಕ್ಕೂ ಹೆಚ್ಚು ಮಂದಿ ಒಂದೆಡೆ ಸೇರುವಂತಹ ಸಮಾರಂಭಗಳನ್ನು ನಿಷೇಧಿಸುವುದರೊಂದಿಗೆ 11:00 ಗಂಟೆಗೆ ಮುಚ್ಚಲು ತಿಳಿಸಿದೆ.
13 ದಶಲಕ್ಷ ಜನರಿಗೆ ನೆಲೆಯಾಗಿರುವ ರಾಜಧಾನಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ವೇಗವಾಗಿ( ಕ್ಷಿಪ್ರವಾಗಿ) ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಕ್ಷೇತ್ರಗಳಾದ ಚಿಲ್ಲರೆ ವ್ಯಾಪಾರ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಇಲಾಖೆಯವರು ಲಸಿಕೆ ಪಡೆಯುವುದು ಕಡ್ಡಾಯವಾಗಿದೆ ಎಂದು ಮೇಯರ್ ಎಚ್ಚರಿಸಿದ್ದಾರೆ.
ಇಷ್ಟು ಕಳವಳ ವ್ಯಕ್ತಪಡಿಸಿದರು ಸಹ ರಷ್ಯನ್ನರು ಲಸಿಕೆ ಪಡೆಯುವಲ್ಲಿ ಅಂತಹ ಆಸಕ್ತಿ ಏನು ತೋರಿಸಿಲ್ಲ ಕೇವಲ 19.7 ಮಿಲಿಯನ್ ಜನರು ಮಾತ್ರ ಮೊದಲನೇ ಹಂತದ ಲಸಿಕೆಯನ್ನು ಪಡೆದಿದ್ದಾರೆ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಇದು ತೀರಾ ಕಡಿಮೆ ಇದು ಆತಂಕಕಾರಿ ವಿಷಯ ಎಂದಿದ್ದಾರೆ.
ಬ್ರಿಟನ್ ಸಂಬಂಧಿಸಿದಂತೆ
ಪರಿಸ್ಥಿತಿಯನ್ನು ಬ್ರಿಟನ್ ನಂತಹ ಇತರ ಯುರೋಪಿಯನ್ ರಾಷ್ಟ್ರಗಳಲ್ಲೂ ಸಹ ನಿಕಟವಾಗಿ ಅನುಸರಿಸಲಾಗುತ್ತಿದೆ ಮತ್ತು ಕರೋನ ವೈರಸ್ನ ಹೊಸ ಡೆಲ್ಟಾ ರೂಪಾಂತರವನ್ನು ನಿಭಾಯಿಸುವಲ್ಲಿ ಪರಿಶ್ರಮಿಸುತ್ತಿದೆ.
ಕರೋನವೈರಸ್ ನ ಸೋಂಕು ಪ್ರಾರಂಭವಾದಾಗಿನಿಂದ 66 ಮಿಲಿಯನ್ ನ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 127000 ಜನರು ಕರೋನ ವೈರಸ್ ಸೋಂಕಿಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ ಎಂದು ಈಗಾಗಲೇ ವರದಿಯಾಗಿರುವುದರಿಂದ ಮೂರನೇ ಅಲೆಯನ್ನು ನಿಯಂತ್ರಣ ಗೊಳಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದೆ.
ಡೆಲ್ಟಾ ರೂಪಾಂತರ ವೈರಸ್ಸಿನ ಸೋಂಕು ಹರಡುತ್ತಿದ್ದಂತೆಯೇ ಬ್ರಿಟನ್ ತನ್ನ ನಿರ್ಬಂಧನೆಗಳನ್ನು ವಿಸ್ತರಿಸಿದೆ. ಆದಾಗ್ಯೂ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಥವಾ ಅದರ ವಿರುದ್ಧ ಹೋರಾಡಲು ಲಸಿಕೆಗಳು ಉತ್ತಮ ಪರಿಣಾಮ ಬೀರುತ್ತದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಲಸಿಕೆ ಬಗೆಗಿನ ತಮ್ಮ ನಂಬಿಕೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ ನಮ್ಮಲ್ಲಿ 80 ಪ್ರತಿಶತದಷ್ಟು ವಯಸ್ಕರು ತಮ್ಮ ಮೊದಲನೇ ಹಂತದ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಈಗ 18 ವರ್ಷ ಮೇಲ್ಪಟ್ಟವರು ಲಸಿಕೆಯನ್ನು ಪಡೆಯಬೇಕೆಂದು ಕೇಳಿಕೊಳ್ಳುತ್ತೇನೆ, ಆಗ ಮಾತ್ರವೇ ನಾವು ಈ ನಿಟ್ಟಿನಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಲು ಸಾಧ್ಯ ಎಂದು ಒತ್ತಿ ಹೇಳಿದರು.
ರಷ್ಯಾಕ್ಕೆ ಹಿಂತಿರುಗಿ ಉತ್ತಮ ಸಂಪರ್ಕ ಹೊಂದಿದ ಅಧಿಕಾರಿಗಳು ಮತ್ತು ಶ್ರೀಮಂತ ವ್ಯಾಪಾರ ಗಣ್ಯರುಗಳು ಈಗಾಗಲೇ ರಷ್ಯಾದ ಸ್ಪುಟ್ನಿಕ್ ವಿ ಕರೋನವೈರಸ್ ಲಸಿಕೆಯ ಮೂರನೆಯ ಮತ್ತು ನಾಲ್ಕನೆಯ ಪ್ರಮಾಣವನ್ನು ಪಡೆದುಕೊಂಡಿದ್ದಾರೆ. ಕೋವಿಡ್-19 ರ ವಿರುದ್ಧ ಲಸಿಕೆ ಎಷ್ಟು ಸಮಯದವರೆಗೂ ರಕ್ಷಣೆ ನೀಡಬಲ್ಲದು ಮತ್ತೆ ಯಾವಾಗ ಅಥವಾ ಮತ್ತೊಮ್ಮೆ ಲಸಿಕೆ ಹಾಕಿಸಿ ಕೊಳ್ಳಬೇಕಾಗುತ್ತದೆ ಎಂಬ ಪ್ರಶ್ನೆಯ ಬಗ್ಗೆ ಈ ದೇಶಗಳು ಯೋಚಿಸುತ್ತಿದೆ.
ರಷ್ಯಾದ ಸಂಶೋಧನೆಗಳನ್ನು ಯುರೋಪ್ ಮತ್ತು ಅದರಾಚೆಗೆ ಅತಿ ಸೂಕ್ಷ್ಮವಾಗಿ ಗಮನಿಸಲಾಗುವುದು. ಅಧಿಕೃತವಾಗಿ ರಷ್ಯಾ ಸುಮಾರು ತನ್ನ ಒಟ್ಟು 142 ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು 129000 ಜನರು ಕೊರೊನ ವೈರಸ್ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
20 ಜೂನ್ 2021, 0:05
ಕನ್ನಡಕ್ಕೆ: ಮೇರಿ ಲತಾ ಎ
留言