top of page
Writer's pictureBangaloreArchdiocese

ವಲಸಿಗರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕು: ಇಂಗ್ಲೀಷ್ ಹಾಗೂ ಫ್ರೆಂಚ್ ಧರ್ಮಾಧ್ಯಕ್ಷರುಗಳು


ಇಂಗ್ಲೀಷ್ ಕಾಲುವೆಯ ಉಭಯ ಬದಿಗಳಲ್ಲಿರುವ ಧರ್ಮಾಧ್ಯಕ್ಷರುಗಳು ವಲಸಿಗರನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಳ್ಳಬೇಕೆಂದು ಪ್ರತಿಪಾದಿಸಿದರು.


ವರದಿ: ಲೀಸಾ ಜೆಂಗಾರಿನಿ


ಫ್ರಾನ್ಸ್ ದೇಶಕ್ಕೆ ಬಂದಿರುವ ಹಾಗೂ ಬ್ರಿಟನ್ ದೇಶಕ್ಕೆ ಹೊರಡಲಿಚ್ಛಿಸಿರುವ ಎಲ್ಲ ದಾಖಲೆರಹಿತ ದುರ್ಬಲ ವಲಸಿಗರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಬೇಕೆಂದು ಇಂಗ್ಲೀಷ್ ಕಾಲುವೆಯ ಉಭಯ ಬದಿಯಲ್ಲಿರುವ ಆಂಗ್ಲಿಕನ್ ಮತ್ತು ಕಥೋಲಿಕ ಧರ್ಮಾಧ್ಯಕ್ಷರುಗಳು ಮತ್ತೆ ತಮ್ಮ ಅಹವಾಲನ್ನು ನವೀಕರಿಸಿದರು.


ಸಹಾಯಕ್ಕೆ ಅರ್ಹರಾಗಿರುವ ನಮ್ಮ ಸಹಮಾನವರು


ಜೂನ್ 20 ರ ವಿಶ್ವ ನಿರಾಶ್ರಿತರ ದಿನದಂದು ನೀಡಿದ ಜಂಟಿ ಹೇಳಿಕೆಯಲ್ಲಿ ಇಂಗ್ಲೀಷ್ ಕಾಲುವೆಯ ಉಭಯ ಬದಿಗಳ ಧರ್ಮಾಧ್ಯಕ್ಷರು 'ಈ ಅಪರಿಚಿತರು “ತಮ್ಮ ತಾಯ್ನಾಡಿನಿಂದ ಗಡಿಪಾರು ಮಾಡಲ್ಪಟ್ಟವರು." “ಅವರು ಗೌರವಯುತವಾಗಿ ವಾಸಿಸುವ ಮತ್ತು ನಾಗರಿಕ ಸಮಾಜಕ್ಕೆ ಕೊಡುಗೆ ನೀಡುವ ಸ್ಥಳಗಳನ್ನು ಹುಡುಕಲು ಸಹಾಯ ಮಾಡಲು ಅರ್ಹರಾದ ಸಹ ಮಾನವರಾಗಿದ್ದಾರೆ." ಎಂದರು.


ದುಃಖತಪ್ತ ಮನೋಭಾವದಿಂದ ಮುಂದುವರೆದು ಮಾತನಾಡಿದ ಧರ್ಮಾಧ್ಯಕ್ಷರುಗಳು "ಭರವಸೆಯನ್ನು ಕಳೆದು ಕೊಂಡ ಕಾರಣ, ಯಾತನೆಯಿಂದ ಅವರು ಮಾನವ ಕಳ್ಳಸಾಗಣೆಗಾರರಿಗೆ ಬಲಿಪಶುಗಳಾಗಿ, ಆ ದುರುಳರ ಅಕ್ರಮ ಲಾಭದ ವಸ್ತುವಾಗುತ್ತಾರೆ" ಎಂದು ಅಭಿಪ್ರಾಯ ಪಟ್ಟರು.


ಪೂರ್ವಾಗ್ರಹವನ್ನು ನಿರ್ಲಕ್ಷಿಸುವ ಸ್ಥಳೀಯ ನಿವಾಸಿಗಳಿಂದ ಹೃತ್ಪೂರ್ವಕ ಬೆಂಬಲ


ಅದಾಗ್ಯೂ ಧರ್ಮಸಭೆಯ ನಾಯಕರು ಕೆಲವು ಸಕಾರಾತ್ಮಕ ಚಿಹ್ನೆಗಳಿಗೆ ನಮ್ಮ ಗಮನವನ್ನು ಸೆಳೆಯುತ್ತಾರೆ. ಅಂದರೆ "ತಮ್ಮ ಧಾರ್ಮಿಕ ಬದ್ಧತೆಗಳೇನೇ ಇದ್ದರೂ ಧಾರಾಳವಾಗಿ ಹಣ, ಪ್ರತಿಭೆ, ಆಶ್ರಯ ಮತ್ತು ಸಂಪನ್ಮೂಲಗಳ ನೆರವನ್ನು ನೋಡಿ ನಾವು ಮೂಕವಿಸ್ಮಿತರಾಗಿದ್ದೇವೆ" ಎಂದು ಹೇಳುತ್ತಾರೆ. ಈ ಜನರು "ಪೂರ್ವಾಗ್ರಹ ಮತ್ತು ಭಯಕ್ಕೆ ಕಾರಣವಾಗುವ ಪುರಾಣಗಳನ್ನು ನಿರ್ಲಕ್ಷಿಸುತ್ತಾರೆ. ಈ ಪೂರ್ವಗ್ರಹ ಮತ್ತು ಪುರಾಣಗಳು ಗಡಿನಾಡುಗಳನ್ನು ಮುಚ್ಚುವುದನ್ನು ಮೀರಿ ಮತ್ತು ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನೇಮಿಸುವ ಹೊರತಾಗಿ ರಾಜಕಾರಣಿಗಳು ಹೊಸ ಮತ್ತು ರಚನಾತ್ಮಕ ನೀತಿಗಳನ್ನು ರಚಿಸುವುದನ್ನು ತಡೆಯುತ್ತದೆ."


ಸ್ವಾಗತದ ವಾತಾವರಣವನ್ನು ಸೃಷ್ಟಿಸಲು ನಿವಾಸಿಗಳನ್ನು ಪ್ರೋತ್ಸಾಹಿಸುವ ಬದ್ಧತೆ


ಆರು ಧರ್ಮಾಧ್ಯಕ್ಷರುಗಳು "ಎಲ್ಲಾ ಮಾನವೀಯತೆಯ ಆಶಯಗಳು ಮತ್ತು ಅಗತ್ಯಗಳಲ್ಲಿ ಹಂಚಿಕೊಳ್ಳುವ ಅಪರಿಚಿತರಿಗೆ ಸ್ವಾಗತ ಮತ್ತು ತಿಳುವಳಿಕೆಯ ವಾತಾವರಣವನ್ನು ಸೃಷ್ಟಿಸಲು ನಿವಾಸಿಗಳನ್ನು ಪ್ರೋತ್ಸಾಹಿಸಲು" ತಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಾರೆ.


ಕ್ಯಾಲೈಸ್ನಲ್ಲಿನ ಶಿಬಿರಗಳ ಭಯಾನಕ ಪರಿಸ್ಥಿತಿಗಳು


ಯುನೈಟೆಡ್ ಕಿಂಗ್ಡಮ್ ತಲುಪಲು ಕಾಲುವೆ ದಾಟಲು ಪ್ರಯತ್ನಿಸಿದಾಗ ಫ್ರೆಂಚ್ ಅಧಿಕಾರಿಗಳು 80 ವಲಸಿಗರನ್ನು ಜೂನ್ 19 ರಂದು ರಕ್ಷಿಸಿದರು. 2020 ರಲ್ಲಿ ಸುಮಾರು 10 ಸಾವಿರ ವಲಸಿಗರು ಇಂತಹ ಪ್ರಯತ್ನವನ್ನು ಪ್ರಯತ್ನಿಸಿದ್ದಾರೆ. ಇದು 2019 ರ ಸಂಖ್ಯೆಯ ನಾಲ್ಕು ಪಟ್ಟು ಹೆಚ್ಚಾಗಿದೆ. ಈ ವಲಸಿಗರಲ್ಲಿ ಹೆಚ್ಚಿನವರು ತಾತ್ಕಾಲಿಕ ಟೆಂಟ್ ಕ್ಯಾಂಪ್‌ಗಳಲ್ಲಿ ವಾಸಿಸುವ ಕರಾವಳಿ ಪಟ್ಟಣವಾದ ಕ್ಯಾಲೈಸ್‌ನ ಚರ್ಚ್ ಆಸುಪಾಸಿನಲ್ಲಿ ಜೀವಿಸುವವರಾಗಿದ್ದಾರೆ. ಇಲ್ಲಿನ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ, ದನಿಯೆತ್ತಿದರೆ ಅವರ ದನಿಯನ್ನು ಪದೇ ಪದೇ ಖಂಡಿಸಲಾಗಿದೆ.


21 ಜೂನ್ 2021, 20:51


ಕನ್ನಡಕ್ಕೆ: ಅಜಯ್ ರಾಜ್

22 views0 comments

Comentarios


bottom of page