ರಾಷ್ಟ್ರೀಯ ಕಸಿ ಕೇಂದ್ರದ ಅನುಮತಿಯಿಂದ ನಡೆದ ಈ ಕಸಿಯು ವಿಶ್ವದ ಮೊದಲ ಬಾಲ್ಯ ಕಸಿ ಪ್ರಕರಣವಾಗಿದೆ. ಹೊಸ ಹೃದಯವನ್ನು ಪಡೆದ 15 ವರ್ಷದ ಬಾಲಕನಿಗೆ ಮೊನೊಕ್ಲೋನಲ್ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಲಾಯಿತು.
ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ
ಬಾಂಬಿನೋ ಗೆಸೆ ಆಸ್ಪತ್ರೆಯು ಸಾರ್ಸ್-CoV-2 ಸೋಂಕಿತ ದಾನಿಯಿಂದ ಸೋಂಕಿಲ್ಲದ ರೋಗಿಗೆ ಈ ರೀತಿಯ ವಿಶ್ವದ ಪ್ರಥಮ ಎನಿಸಿಕೊಂಡಿರುವ ಅಂಗಾಂಗ ಕಸಿ ಮಾಡಿದೆ.
ವ್ಯಾಟಿಕನ್ನ ಮಕ್ಕಳ ಆಸ್ಪತ್ರೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಕಸಿ ಹೃದಯವನ್ನು ಪಡೆದ 15 ವರ್ಷದ ಬಾಲಕನಿಗೆ ಕೋವಿಡ್ -19 ತಟ್ಟುವ ಅಪಾಯವನ್ನು ನಿವಾರಿಸಲು ಮೊನೊಕ್ಲೋನಲ್ ಪ್ರತಿಕಾಯಗಳೊಂದಿಗೆ ಚಿಕಿತ್ಸೆ ನೀಡಲಾಯಿತು. ಈ ಪ್ರಕ್ರಿಯೆಗೆ ರಾಷ್ಟ್ರೀಯ ಕಸಿ ಕೇಂದ್ರ (ಎನ್ಟಿಸಿ) ಮತ್ತು ಇಟಾಲಿಯನ್ ಫಾರ್ಮಾಸ್ಯುಟಿಕಲ್ ಏಜೆನ್ಸಿ (ಎಐಎಫ್ಎ) ರ ಅನುಮೋದನೆಯ ಅಗತ್ಯವಿತ್ತು ಎಂದು ಮಾಧ್ಯಮವು ವಿವರಿಸಿದೆ.
ಬಾಂಬಿನೋ ಗೆಸೆ ಆಸ್ಪತ್ರೆಯ ಪ್ರಾಧ್ಯಾಪಕ ಆಂಟೋನಿನೊ ಅಮೋಡಿಯೊ "ಕಸಿಗೆ ಹೊಂದಿಕೆಯಾಗುವ ಹೃದಯವನ್ನು ಪತ್ತೆ ಹಚ್ಚುವುದು ವಯಸ್ಕರಿಗಿಂತ ಮಕ್ಕಳ ಕ್ಷೇತ್ರದಲ್ಲಿ ಹೆಚ್ಚು ಕಷ್ಟವಾಗಿದೆ. ಸಾಂಕ್ರಾಮಿಕ ಮತ್ತು ವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಕಳೆದ ವರ್ಷದಲ್ಲಿನ ನಿರ್ಬಂಧಗಳಿಂದಾಗಿ, ಈ ತೊಂದರೆಯು ಮತ್ತಷ್ಟು ಹೆಚ್ಚಿದೆ. ಕಸಿಗಾಗಿ ಹೊಂದಾಣಿಕೆಯ ಹೃದಯವನ್ನು ಹುಡುಕುವುದು ಅನೇಕ ಸಂದರ್ಭಗಳಲ್ಲಿ ಒಂದು ಅಪರೂಪದ ಅವಕಾಶವಾಗಿದೆ. ಅದಕ್ಕಾಗಿಯೇ ಕಸಿಗಾಗಿ ಕಾದಿದ್ದ ಪಟ್ಟಿಯಲ್ಲಿದ್ದ ಹುಡುಗನು ಎದುರು ನೋಡುತ್ತಿದ್ದ ಅಂಗವನ್ನು ಪಡೆಯಲು ಬೇಕಾದ ಎಲ್ಲವನ್ನು ನಾವು ಮಾಡಿದ್ದೇವೆ. ಇದು ಜೀವನ ಮತ್ತು ಸಾವಿನ ನಡುವಿನ ವ್ಯತ್ಯಾಸವನ್ನು ತೆರೆದಿಡುವ ಆಯ್ಕೆಯಾಗಿತು." ಎಂದರು.
ಶಸ್ತ್ರ ಚಿಕಿತ್ಸೆ
ಹೃದಯ ಕಸಿಗೆ ಒಳಗಾದ 15 ವರ್ಷದ ರೋಗಿಯು ದೇಹಕ್ಕೆ ರಕ್ತವನ್ನು ಸಮರ್ಥವಾಗಿ ಸರಬರಾಜು ಮಾಡುವ ಅಥವಾ ತಳ್ಳುವ ಹೃದಯದ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಡೈಲೇಟೆಡ್ ಕಾರ್ಡಿಯೊಮಿಯೋಪತಿ ಎಂಬ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದನು. ಸಾಮಾನ್ಯ ವಯಸ್ಕ ಜನರಲ್ಲಿ ಈ ರೋಗವು 2,500 ಜನರಲ್ಲಿ ಒಬ್ಬರಲ್ಲಿ ಕಂಡು ಬರುತ್ತದೆ. ಆದರೆ ಮಕ್ಕಳಲ್ಲಿ ಇದನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ, ಪ್ರತಿ 100,000 ಮಕ್ಕಳಲ್ಲಿ 0.57 ಪ್ರಕರಣಗಳು ಕಂಡುಬರುತ್ತವೆ.
ಕಳೆದ ವರ್ಷದ ಸೆಪ್ಟೆಂಬರ್ನಿಂದ ಈ ಯುವಕನು ಕಸಿ ಮಾಡಿಸಿಕೊಳ್ಳ ಬಯಸುವವರ ಪಟ್ಟಿಯಲ್ಲಿದ್ದನು. ಅವನ ಪರಿಸ್ಥಿತಿಯು ಹದಗೆಟ್ಟಿದ್ದೂ ಹೊಂದಾಣಿಕೆಯಾಗುವ ಹೃದಯದ ಕಸಿಗಾಗಿ ಕಾಯುವ ಸಮಯದಲ್ಲಿ ಸಾಮಾನ್ಯವಾಗಿ ಒಳಗಾಗುವ ಕೃತಕ ಹೃದಯವನ್ನು ಅಳವಡಿಕೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನು.
2 ವಾರಗಳಲ್ಲಿ 6 ಹೃದಯಗಳ ಕಸಿ
ಕೇವಲ ಎರಡು ವಾರಗಳಲ್ಲಿ ಅಂದರೆ ಮೇ 4 ರಿಂದ 19 ರವರೆಗೆ, ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸೆ, ಹೃದಯಶಾಸ್ತ್ರ ಮತ್ತು ಹೃದಯ-ಶ್ವಾಸಕೋಶ ಕಸಿ ವಿಭಾಗದ ವೈದ್ಯಕೀಯ ತಂಡಗಳು ಒಟ್ಟು 6 ಹೃದಯ ಕಸಿಗಳನ್ನು ನಡೆಸಿದವು.
10 ಜೂನ್ 2021, 10:30
ಕನ್ನಡಕ್ಕೆ: ಪ್ರಶಾಂತ್ ಇಗ್ನೇಷಿಯಸ್
Comments