107 ನೇ ವಿಶ್ವ ವಲಸಿಗರ ಮತ್ತು ನಿರಾಶ್ರಿತರ ದಿನಾಚರಣೆಯ ಮುನ್ನ ಬಿಡುಗಡೆಯಾದ ದೃಶ್ಯ ಒಂದರಲ್ಲಿ ಧರ್ಮಕೇಂದ್ರದ ಸಮುದಾಯಕ್ಕೆ ಸ್ವಾಗತಿಸ್ಪಟ್ಟಾಗ ತಮ್ಮಗಾದ ವಯಕ್ತಿಕ ಅನುಭವಗಳನ್ನ ಹಲವಾರು ವಲಸಿಗರು ಹಂಚಿಕೊಂಡಿದ್ದಾರೆ.
ಸೆಪ್ಟಂಬರ್ 26 ರಂದು ನಿಗದಿಯಾಗಿರುವ ವಿಶ್ವ ವಲಸಿಗರ ಮತ್ತು ನಿರಾಶ್ರಿತರ ದಿನಾಚರಣೆಯಲ್ಲಿ, 2021 ವರ್ಷದ ಸಂದೇಶದಲ್ಲಿ ಸೋದರತ್ವ ಮತ್ತು ಒಗ್ಗೂಡುವಿಕೆಯ ಪ್ರಾಮುಖ್ಯತೆಯನ್ನು ವಿಶ್ವಗುರುಗಳು, ಎತ್ತಿತೋರಿಸಿದ್ದಾರೆ.
ನೀವು ಎಲ್ಲಿದ್ದರೂ ಮತ್ತು ಏತ್ತಕ್ಕಾಗಿ ಅಲ್ಲಿದ್ದರೂ ಪರವಾಗಿಲ್ಲ , ಜ್ಞಾನಸ್ನಾನ ಹೊಂದಿದ ಪ್ರತಿ ವ್ಯಕ್ತಿಯು ಸ್ಥಳಿಯ ಧರ್ಮಕೇಂದ್ರದ ಪೂರ್ಣ ಸದಸ್ಯ. ಒಂದೇ ಧರ್ಮಕೇಂದ್ರದ ಸದಸ್ಯ, ಒಂದೇ ಮನೆಯ ನಿವಾಸಿ ಮತ್ತು ಒಂದೇ ಕುಟುಂಬದ ಭಾಗವಾಗಿರುತ್ತಾನೆ.
ವಿಶ್ವ ವಲಸಿಗರ ಮತ್ತು ನಿರಾಶ್ರಿತರ ದಿನಾಚರಣೆಯ ವಿಶ್ವಗುರುಗಳ ಸಂದೇಶವನ್ನು ಮೇ ತಿಂಗಳ 3 ನೇ ತಾರೀಖಿನಂದು ಬಿಡುಗಡೆಗೊಳಿಸಲಾಯಿತು. ಪ್ರಪಂಚದಲ್ಲಿ ನಮ್ಮ ಸಾಮಾನ್ಯ ಪ್ರಯಾಣದ ಸ್ಪಷ್ಟ ದಿಗಂತವನ್ನು ಸೂಚಿಸುದರೊಂದಿಗೆ, ಎಂದೆಂದಿಗೂ ವಿಶಾಲವಾದ ನಾವುಗಳ ಕಡೆಗೆ ಎಂಬುದಾಗಿ ಅದರ ವಿಷಯವಾಗಿತ್ತು.
ನಾವು`ನ ಭಾಗವಾಗಿ
ಈ ಸಂದರ್ಭಕ್ಕೆ ಮುಂಚಿತವಾಗಿ ವ್ಯಾಟಿಕನ್‍ನ ವಲಸೆ ಮತ್ತು ನಿರಾಶ್ರಿತರ ವಿಭಾಗವು ಶುಕ್ರವಾರ ಒಂದು ದೇವಾಲಯ, ಒಂದು ಮನೆ , ಒಂದು ಕುಟುಂಬ ಎಂಬ ಶೀರ್ಷಿಕೆಯಡಿಯಲ್ಲಿ ವೀಡಿಯೋಗಳ ಸರಣಿಯನ್ನು ಬಿಡುಗಡೆ ಮಾಡಿತು.
ಧರ್ಮಕೇಂದ್ರದ ಸದಸ್ಯರಾಗಿ ಸ್ವಾಗತಗೊಂಡ ಹಲವಾರು ವಲಸಿಗರ ವಯಕ್ತಿಕ ಅನುಭವಗಳನ್ನ ಇದು ಕ್ರೂಢೀಕರಿಸಿದೆ.
ಸಂತ ಲೂಕರ ಧರ್ಮಕೇಂದ್ರದಲ್ಲಿರುವ ಕ್ವಿಬೆಕ್‍ನ ಜೀನ್ ಫ್ರಾಂಕೋಯಿಸ್‍ರವರು, ನಾನು ನನ್ನ ಮನೆಯಲ್ಲಿದಂತೆ ಇಲ್ಲಿದ್ದೇನೆ. ಇದು ನಿಜವಾಗಿ ಸಮುದಾಯಕ್ಕೆ ಸೇರಿರುವುದಾಗಿದೆ ಎನ್ನುತ್ತಾರೆ.
ನಮಗೆ ಯಾವಾಗಲು ಸ್ವಾಗತವಿದೆ ಮತ್ತು ನಾವು ಇತರ ಧರ್ಮಕೇಂದ್ರದವರಿಂದ ಬಿನ್ನವಾದವರು ಎಂದು ತೊರುವುದಿಲ್ಲ ಎಂಬುದಾಗಿ ಫಿಲಿಪೈನ್ಸ್ ನ ಮೈಲೀನ್ ರೆಯೆಸ್ ಹೇಳುತ್ತಾರೆ. ನಿಮಗೆ ಯಾವಾಗಲು ಆಶೀರ್ವಾದದ ನಗುಮುಖ, ಒಂದು ಅಪ್ಪುಗೆ ದೊರೆಯುತ್ತದೆ ಹಾಗೂ ನಾವು ಯಾರನ್ನಾದರೂ ಸಂಪರ್ಕಿಸಬಹುದು ಎನ್ನುತ್ತಾರೆ.
ಇದು ಒಂದು ವಿಶೇಷವಾದ ಧರ್ಮಕೇಂದ್ರ ನನ್ನ ಹಿನ್ನಲೆ ಏನು ಮತ್ತು ಯಾರೊಡನೆ ನಾನು ಮಾತನಾಡುತ್ತಿದ್ದೇನಾದರೂ ಪರವಾಗಿಲ್ಲ. ಏಕೆಂದರೆ ನಾವು ಧರ್ಮಕೇಂದ್ರಕ್ಕೆ ಸೇರಿದವರು ಎಂಬ ದೊಡ್ಡ ಭಾವವಿದೆ.
ಇಲ್ಲಿನ ಧರ್ಮಕೇಂದ್ರದ ಜನಗಳು ವಿವಿಧ ಸ್ಥಳಗಳಿಂದ ಬಂದಿದ್ದರೂ ಕೂಡ ಸಾಕಷ್ಟು ಬೆಳೆದಿದ್ದಾರೆ ಕಾರಣ ಇಲ್ಲಿರುವ ಬಹಳಷ್ಟು ವೈವಿಧ್ಯತೆ ಎಂದು ಕೊಲಂಬಿಯಾದ ಲಿನಾ ಮರಿಯಾ ಸೂಚಿಸುತ್ತಾರೆ.
ಅವರು ಮುಂದುವರಿಸುತ್ತ , ವಲಸೆಯು ಜನರನ್ನು ತಮ್ಮ ಮೂಲ ಸ್ಥಳದಿಂದ ಸಂಪರ್ಕ ಕಡಿತಗೊಳಿಸಿದರೂ ಸಹ , ನಿಜವಾದ ಸಹೋದರ ಅಥವಾ ಸಹೋದರಿಯರಂತಹ ಸ್ನೇಹಿತರನ್ನು ಅವರು ಧರ್ಮಕೇಂದ್ರದಲ್ಲಿ ಕಂಡುಕೊಳ್ಳುತ್ತಾರೆ, ಇದುವೇ ನಿಜವಾದ ಒಂದು ಕುಟುಂಬ ಮತ್ತ ಮನೆ ಎಂದು ತಿಳಿಸುತ್ತಾರೆ.
೬ ಜೂನ್ ೨೦೨೧
ಕನ್ನಡಕ್ಕೆ- ರಾಬರ್ಟ್ ಕೆನಡಿ
Comments