ವ್ಯಾಟಿಕನ್ ಸುದ್ದಿ
ಕಿಲ್ಲಾಲೋ ಧರ್ಮಕ್ಷೇತ್ರದ ಗುರುಗಳಾದ ಗೆರಾರ್ಡ್ ನ್ಯಾಶ್ ಅವರನ್ನು ಫರ್ನ್ಸ್ ನ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರನ್ನಾಗಿ ವಿಶ್ವಗುರು ನೇಮಕ ಮಾಡಿದ್ದಾರೆ. ಅವರು ಧರ್ಮಾಧ್ಯಕ್ಷ ಡೆನಿಸ್ ಬ್ರೆನ್ನನ್ ಅವರ ಉತ್ತರಾಧಿಕಾರಿಯಾಗಿದ್ದಾರೆ.
ಜೀವನಶೈಲಿ
ವಂ. ಗೆರಾರ್ಡ್ ನ್ಯಾಶ್ ಅವರು ಫೆಬ್ರುವರಿ 27, 1959 ರಂದು ಕೊಕ್ಲೇರಾದ ಟ್ಯೂಲ್ಲಾ ಧರ್ಮಕೇಂದ್ರದ ಗ್ಲಾಂದ್ರೆಯಲ್ಲಿ ಜನಿಸಿದರು. ಅವರ ತಂದೆ ತಾಯಿಯರು ಟಾಮಿ ಮತ್ತು ಮೇರಿ ಮೃತ ಹೊಂದಿದ್ದಾರೆ, ನ್ಯಾಶ್ ಅವರ ಇಬ್ಬರು ಸಹೋದರಿಯರಾದ ತೆರೇಸಾ ಮತ್ತು ಮಾರ್ಗರೇಟ್ ಜೀವಿಸುತ್ತಿದ್ದಾರೆ. 2008ರಲ್ಲಿ ಅವರ ಸಹೋದರಿ ಬರ್ನ್ನಿ ಮೃತ ಹೊಂದಿದ್ದಾರೆ.
ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯ ಡ್ರಮ್ಚಾರ್ಲೆಯ ಪ್ರಾರ್ಥಮಿಕ ಶಾಲೆಯಲ್ಲಿ ಮಾಡಿದರು. ನಂತರ ಟ್ಯೂಲ್ಲಾದಲ್ಲಿ ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದರು. ತಮ್ಮ ವಿದ್ಯಾಭ್ಯಾಸ ಮುಗಿಸಿದ ಪ್ರಮಾಣಪತ್ರವನ್ನು ಸ್ವೀಕರಿಸಿದ ನಂತರ ಅವರು ವ್ಯವಹಾರ ಅಧ್ಯಯನದ ಓದನ್ನು ಮುಗಿಸಿ ಹಲವಾರು ವರ್ಷಗಳು ಉತ್ಪಾದನಾ ಉದ್ಯಮದಲ್ಲಿ ಕೆಲಸ ಮಾಡಿದರು.
ಮೆನುತನ್ನಿನ ಸಂತ ಪ್ಯಾಟ್ರಿಕ್ ಕಾಲೇಜಿನಲ್ಲಿ ಕಿಲ್ಲಾಲೋ ಧರ್ಮಕ್ಷೇತ್ರಕ್ಕಾಗಿ ಓದಲು ಪ್ರೇರಣೆಗೊಂಡರು. ಅವರು 15ನೇ ಜೂನ್1991ರಲ್ಲಿ ಟ್ಯೂಲಾದ ಡ್ರಮ್ಚಾರ್ಲೆಯ ದೇವಾಲಯದಲ್ಲಿ ಧರ್ಮಾಧ್ಯಕ್ಷ ಮೈಕಲ್ ಹಾರ್ಟಿ ಅವರ ಪೂಜ್ಯ ಹಸ್ತದಿಂದ ಯಾಜಕದೀಕ್ಷೆಯನ್ನು ಪಡೆದರು.
ಯಾಜಕದೀಕ್ಷೆಯ ನಂತರ ಅವರನ್ನು ರೋಸ್ಕ್ರಿಯ ವೊಕೇಷನಲ್ ಸ್ಕೂಲ್ ನಲ್ಲಿ ಚಾಪ್ಲಿನ್ ಹಾಗೂ ಶಿಕ್ಷಕರಾಗಿ ನೇಮಕ ಮಾಡಿದರು. ಅವರು ರೋಸ್ಕ್ರಿಯ ಯುವ ಕೇಂದ್ರದ ಹೊಣೆಯನ್ನು ಸಹ ಹೊತ್ತರು.
ಕ್ಲೇರ್ಕೇರ್ ಮುಖ್ಯವ್ಯವಸ್ಥಾಪಕರಾಗಿ 1996 ರಲ್ಲಿ ನೇಮಕಗೊಂಡರು. ಕ್ಲೇರ್ಕೇರ್ ಸಂಸ್ಥೆಯು ಕೌಂಟಿಕ್ಲೇರ್ ಜನರ ಹಿತಕ್ಕಾಗಿ ಸಮಾಜ ಸೇವೆ ನೀಡುತ್ತಿದೆ. 1996 ರಲ್ಲಿ ಕೋರೊಫಿನ್ ನಲ್ಲಿ ಸಹಾಯಕ ಗುರುಗಳಾಗಿ ಸೇವೆಸಲ್ಲಿಸುತ್ತಿದ್ದರು. ಕೋರೊಫಿನ್ ನಲ್ಲಿ 2003ರಲ್ಲಿ ಯಾಜಕ ನಿವಾಸಿಯಾಗಿ ಕಿಲ್ಲೋಲ್ ಧರ್ಮಕ್ಷೇತ್ರದ ಮೊತ್ತಮೊದಲ ಧರ್ಮಕೇಂದ್ರಗಳ ಗುಂಪನ್ನು ನಿರ್ಮಿಸಲು ನೇಮಿಸಲಾಯಿತು.
11 ಜೂನ್ 2021, 12:01
ಕನ್ನಡಕ್ಕೆ: ಸಹೋ. ಅಂತೋಣಿ ನವೀನ್
Comentários