ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡುತ್ತಾ , ' ನಮ್ಮಲ್ಲಿ ಅಡಗಿರುವ ದೈವ ಸಮಕ್ಷಮ ಇರುವಿಕೆಯನ್ನು ಮತ್ತು ಜೀವನದ ಚರಿತ್ರೆ ಹಾಗೂ ಕಾರ್ಯಗಳತ್ತ ಗಮನೀಯ ದೃಷ್ಟಿ ಹರಿಸಬೇಕು.' ಎಂಬುದನ್ನು ನೆನಪಿಸಿದರು.
ವ್ಯಾಟಿಕನ್ ವಾರ್ತಾ ಸಿಬ್ಬಂದಿ ಬರಹಗಾರರಿಂದ :
ವಿಶ್ವಗುರು ಫ್ರಾನ್ಸಿಸ್ ರು ಭಾನುವಾರದ ತ್ರಿಕಾಲ ಪ್ರಾರ್ಥನೆ ಸಮಯದ ಬೋಧನೆಯಲ್ಲಿ, ಸಂತ ಪೀಟರ್ಸ್ ಚೌಕದ ಯಾತ್ರಿಕರನ್ನು ಉದ್ದೇಶಿಸಿ, ಅಂದಿನ ಶುಭಸಂದೇಶದಲ್ಲಿ ಕ್ರಿಸ್ತರು ಹೇಳಿದ ಎರಡು ದೃಷ್ಟಾಂತಗಳನ್ನು ಪ್ರತಿಬಿಂಬಿಸುತ್ತಾರೆ; ದೈವ ರಹಸ್ಯಗಳನ್ನು ಅರ್ಥ್ಯೆಸಲು ಹಾಗೂ ಮನುಕುಲದ ಘಟನೆಗಳನ್ನು ವಿವರಿಸುತ್ತ ಹೀಗೆಂದರು. "ನಿಮ್ಮನ್ನು ನೀವು ತೆರೆದುಕೊಳ್ಳಿರಿ. ಈ ದೃಷ್ಟಾಂತಗಳು ಪ್ರತಿನಿತ್ಯ ಜೀವನದಲ್ಲಿ, ಏಕತಾನತೆಯಲ್ಲಿ, ಅಥವಾ ಕಷ್ಟಕರವಾಗಿದೆ ಎಂದು ಅನಿಸಿದರೂ, ಇದರಲ್ಲಿ ಸದಾ ದೈವ ಸಮಕ್ಷಮತೆ ನೆಲೆಸಿರುತ್ತದೆ." ಎಂದು ಹೇಳುತ್ತ ಮುಂದುವರಿದು, " ದೇವರನ್ನು ಅರಸಿ, ಅವರ ಹುಡುಕಾಟದತ್ತ ನಮ್ಮ ಗಮನೀಯ ದೃಷ್ಟಿ ಹರಿಸಬೇಕು". ಎಂದು ಸೂಚಿಸಿದರು..
ನಮ್ಮ ಕಾರ್ಯಗಳಲ್ಲಿ ದೈವೀ ಸಾಮ್ರಾಜ್ಯದ ಸಾಕ್ಷಾತ್ಕಾರ
ಕ್ರಿಸ್ತರು ದೈವ ಸಾಮ್ರಾಜ್ಯವನ್ನು ಹೇಗೆಲ್ಲಾ ಹೋಲಿಸುತ್ತಿದ್ದರು. ಎಂದರೆ ' ದೇವರ ಸಮಕ್ಷಮತೆಯು ಎಲ್ಲಾ ವಸ್ತುಗಳ ಹೃದಯದಲ್ಲಿದ್ದು, ಅತಿ ಕಿರಿದಾದ ಸಾಸಿವೆ ಕಾಳು, ಎಲ್ಲಕ್ಕಿಂತ ಎತ್ತರವಾದ ಮರವಾಗಿ ಬೆಳೆಯುವುದು ಎಂಬುದನ್ನು ಜ್ಞಾಪಿಸುತ್ತಾ, 'ನಮ್ಮ ಜೀವನದಲ್ಲಿ ಹಾಗೂ ಪ್ರಪಂಚದಲ್ಲಿ ದೇವರು ಎಂತೆಂಥಾ ಕಾರ್ಯನಡೆಸುವರು' ಎಂದು ಹೇಳಿದರು. 'ಇದು ನಮ್ಮ ಕಾರ್ಯನಿರತ ಜೀವನದಲ್ಲಿ, ಹಲವು ಬಾರಿ ನೈಜಾಂಶಗಳನ್ನು ಕಾಣುವುದಕ್ಕೆ ಅಡ್ಡಿಪಡಿಸಿದೆ - ಆದರೆ "ದೇವರು ಕಾರ್ಯೋನ್ಮುಖರಾಗಿರುವರು. 'ಒಂದು ಸಣ್ಣ ಕಾಳು', ಮೌನವಾಗಿ, ನಿಧಾನವಾಗಿ, ಮೊಳೆತು ಸೊಂಪಾದ ಮರವಾಗಿ ಬೆಳೆದು, ಇತರರಿಗೆ ಜೀವವನ್ನು, ವಿಶ್ರಾಂತಿಯನ್ನೂ ನೀಡಬಲ್ಲದು ". ವಿಶ್ವಗುರುಗಳು ಮುಂದುವರೆದು ನಮ್ಮ ಸತ್ಕಾರ್ಯಗಳ ಕಾಳುಗಳು ಹೋಲಿಕೆಯಲ್ಲಿ ಚಿಕ್ಕದಾದರೂ, 'ಒಳಿತಾದವೆಲ್ಲವೂ ದೇವರಿಗೆ ಅನ್ವಯಿಸುತ್ತದೆ ' ; ಮತ್ತು ' ಒಳಿತು ನಮ್ಮಲ್ಲಿ ಅವಿತುಕೊಂಡು, ಅದೃಶ್ಯ ರೀತಿಯಲ್ಲಿ ದೀನತೆಯ ಬೆಳಸುತ್ತದೆ. ' ಎಂದರು
ದೈವ ಸಮಕ್ಷಮತೆಯನ್ನು ,ಅವಿಷ್ಕರಿಸಿರಿ :
ಈ ದೃಷ್ಟಾಂತಗಳು ನಮ್ಮಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ., ಎಂದು ನುಡಿದ ವಿಶ್ವಗುರು ಫ್ರಾನ್ಸಿಸ್ ಇದರ ಹೊರತಾಗಿಯೂ ಅನೇಕ ಬಾರಿ ತಪ್ಪಾಗಿ ಆಲೋಚಿಸಿ, 'ಒಳಿತು ದುರ್ಬಲ, ಕೆಡುಕಿಗೇ ಮೇಲು ಗೈ ' ಎಂದು ಪರಿತಪಿಸಿ, ಎದೆಗುಂದುತ್ತೇವೆ.
ಅದೇ ಪ್ರಕಾರದಲ್ಲಿ ಸಾಗಿ ಅವರು 'ನಾವು ಪರಿಶ್ರಮದಿಂದ ಕಾರ್ಯ ಮಾಡಿದರೂ, ಬಯಸಿದ ಫಲಿತಾಂಶ ಪಡೆಯ ದಾದಾಗ, ಬೇಕಾದ ಬದಲಾವಣೆ ಉಂಟಾಗದಾಗ, ನಾವು ಸಂಶಯದ ಸುಳಿಗೆ ಬಲಿಯಾಗಬಾರದು. ವಿಶಾಲ ದೃಷ್ಟಿಯಿಂದ ಸದೃಶವಾದವುಗಳಿಗಿಂತಲೂ ನಿಸ್ಸೀಮಿತವಾದ ನೈಜಾಂಶವನ್ನು ಕಂಡುಕೊಳ್ಳುವಂತೆ ಶುಭಸಂದೇಶವು ನಮಗೆ ಕರೆ ನೀಡುತ್ತಿದೆ ' ಎನ್ನುತ್ತಾ, "ನಮ್ಮ ಜೀವನದ ಮಣ್ಣಿನ, ಚರಿತ್ರೆಯಲ್ಲಿ ದೀನ ಪ್ರೀತಿಯ ಕನ್ನಡಿಯಾದ 'ಸದಾ ಕಾರ್ಯೋನ್ಮುಖರಾದ ಸರ್ವೇಶ್ವರರನ್ನು ಆವಿಷ್ಕರಿಸಬೇಕು' ಎಂದರು. ವಿಶ್ವಗುರುಗಳು ತಮ್ಮ
ಹೇಳಿಕೆ ಮುಂದುವರೆಸಿ, 'ಪ್ರತಿದಿನವೂ ನಾವು ಆತ್ಮಬಲದಿಂದ, ಸಹನೆಯಿಂದ, ಒಳಿತನ್ನು ಬಿತ್ತಿದರೆ, ಅದು ಫಲವಾಗಿ ಹೊರಹೊಮ್ಮುವುದು. ಈ ಸಾಂಕ್ರಾಮಿಕ ವ್ಯಾಧಿಯ ವ್ಯಾಪ್ತಿಯಲ್ಲಿ ಚೇತರಿಕೆ ಕಂಡುಕೊಳ್ಳಲು ಈ ಅನುಸಂಧಾನ, ಮತ್ತು ಮನೋಭೀಷ್ಟತೆ ಅತ್ಯಗತ್ಯ. 'ದೇವರ ಕರಗಳಲ್ಲಿ ನಾವಿದ್ದೇವೆ' ಎಂಬ ಆತ್ಮವಿಶ್ವಾಸವನ್ನು ಪುನರ್ ನಿರ್ಮಿಸಿ, ಸಂಯಮ ಮತ್ತು ಅವಿರತ ಪ್ರಯತ್ನಗಳಿಂದ ಜೀವನ ಪುನರಾರಂಭಿಸಬೇಕೆಂದು ಹೇಳಿದರು.
ನಮ್ಮ ಜೀವನದಲ್ಲಿ ದೈವೀ ಕಾರ್ಯ:
ವಿಶ್ವಗುರುಗಳು ಆವಲೋಕಿಸಿ ನುಡಿಯುತ್ತಾ, "ಕ್ರೈಸ್ತರ ಸಂಕಷ್ಟಗಳು ಮತ್ತು ಇತರ ಯೋಜನೆಗಳು, ಅಥವಾ ಉತ್ತಮ ಕೃತ್ಯಾರಂಭಕ್ಕೆ ಕಾಡುವ ವಿಘ್ನಗಳು, ಎಂಬ "ಸಂಶಯ "ಗಳ ಬಗ್ಗೆ ಎಚ್ಚರಿಕೆ ನೀಡಿದರು. "ಇಲ್ಲಿ ನಮ್ಮ ನೆರವಿಗೆ ಬರುವುದು, ಬಿತ್ತನೆಯ ಫಲಿತಾಂಶವನ್ನು ಅವಲಂಬಿಸಿಲ್ಲ, ಆದರೆ ದೈವೀ ಕಾರ್ಯವನ್ನು ಆವಲಂಬಿಸಿದೆ. ಮತ್ತು ನಮ್ಮ ಕಾಳಜಿ ಕೇವಲ
"ಪ್ರೀತಿ, ಸಮರ್ಪಣೆ, ಮತ್ತು ಸಂಯಮ" ಗಳಾಗಿವೆ. ಆ ಕಾಳಿನ ಬಲವು ದೈವೀ ಕಾರ್ಯವಾದದ್ದು, ಎಂದರು. ಪವಿತ್ರ ಬೈಬಲ್ ನ ಇನ್ನೊಂದು ದೃಷ್ಟಾಂತವನ್ನು ವಿವರಿಸುತ್ತಾ, 'ರೈತನೊಬ್ಬನು ಬೀಜದ ಕಾಳುಗಳನ್ನು ಬಿತ್ತುವ ಬಗೆ ಅಮೋಘವಾದದ್ದು. ಅದು ತಾನು ನಿರೀಕ್ಷಿಸಿದ್ದಕ್ಕಿಂತಲೂ ಮಿಗಿಲಾಗಿ ಸ್ವಶಕ್ತಿಯಿಂದ ದಿನರಾತ್ರಿಯಲ್ಲಿ ಬೆಳೆದು ನಿಂತಾಗ, ಬರಡು ಮಣ್ಣಿನಲ್ಲಿಯೂ 'ಭರವಸೆ ಸದಾ ನೆಲೆಸುವುದು' ಎಂದು ತೋರಿಸಿಕೊಡಲಾಗಿದೆ ' ಎಂದರು.
ಅಂತಿಮವಾಗಿ, ವಿಶ್ವಗುರುಗಳು 'ಪ್ರತಿನಿತ್ಯವೂ ಭರವಸೆ ಭರಿತ, ವಿಶ್ವಾಸಭರಿತರಾಗಿ ಉಳಿದುಕೊಂಡು, ಚಿಕ್ಕ ಚಿಕ್ಕ ವಿಷಯಗಳಲ್ಲಿ ಸರ್ವೇಶ್ವರರಾ ಮಹಾತ್ಕಾರ್ಯಗಳನ್ನು ಕಾಣಲು ಕಲಿಸುವಂತೆ ಪ್ರಭುವಿನ ದೀನದಾಸಿ ಮಾತೆ ಮರಿಯಮ್ಮನವರಲ್ಲಿ ಪ್ರಾರ್ಥಿಸಿದರು.
13 ಜೂನ್ 2021, 20:21
ಕನ್ನಡಕ್ಕೆ: ಮೇರಿ ಎಲಿಜಬೇತ್
תגובות