top of page

ಸತತವಾಗಿ ನಡೆಯುತ್ತಿರುವ ಗಣಿಗಾರಿಕೆಯು ಸ್ಥಳೀಯರಲ್ಲಿ ಆತಂಕ ಹಾಗೂ ಭಯ ಭೀತಿಯನ್ನು ಹೆಚ್ಚಿಸುತ್ತಿದೆ.


ಅಮೆಜಾನ್ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅನೇಕ ಜನರಲ್ಲಿ ಭಯಭೀತಿ ಹಾಗೂ ಆತಂಕವನ್ನು ಹುಟ್ಟಿಸುತ್ತಿದೆ ಹಾಗೂ ಈ ಪ್ರದೇಶ ಇನ್ನಷ್ಟು ಕಲುಷಿತ ಹಾಗೂ ನಾಶವಾಗುತ್ತಿದೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ವರದಿಗಾರರಿಂದ.


ಅಧ್ಯಕ್ಷ ಜೇರ ಬಾಡೋಣರೋ ರವರು 2019ನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಗಣಿಗಾರಿಕೆಗೆ ಮತ್ತು ಕೃಷಿಗೆ ಕೆಲವು ಪ್ರದೇಶಗಳನ್ನು ತೆರೆಯುವ ಯೋಜನೆಯನ್ನು ಪ್ರಕಟಿಸಿದರು,‌ ನಂತರ ಸ್ಥಳೀಯರಿಗೆ ತಿಳಿದಿರುವ ಕೆಲವು ಗಣಿಗಾರರು ಬ್ರೆಸಿಲ್ ಅಮೆಜಾನ್ ಪ್ರದೇಶದಲ್ಲಿರುವ ಸ್ಥಳೀಯ ಮೀಸಲು ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಒಳ ನುಗ್ಗುತ್ತಿದ್ದಾರೆ.


ದಾ ಇನ್ಸ್ಟಿಟ್ಯೂಟ್ ಆಫ್ ಸೋಕಮ ಡೀಟೇಲ್ಸ್ ( ಐ.ಎಸೆ. ಎ ) ವರದಿಯ ಅಂದಾಜಿನ ಪ್ರಕಾರ, ಯನೋಮಾಮಿ ಪ್ರಾಂತ್ಯದಲ್ಲೇ ಸುಮಾರು 20 ಸಾವಿರ ವೈಲ್ಡ್ ಕ್ಯಾಟ್ ಗಣಿಗಾರರು ಇರುವುದಾಗಿ ತಿಳಿದಿದೆ.ಯನೋಮಾಮಿ


ಯನೋಮಾಮಿಯ 35000 ಗುಂಪಿನೊಳಗೆ ಗುಂಡ ಜನರು ವೇ ನಿನ್ಸುಲಾ ಮತ್ತು ಬ್ರೆಸಿಲ್ ನಡುವಿನಲ್ಲಿರುವ ಅಮೆಜಾನ್ ಮಳೆಕಾಡಿನ ಭಾಗದಲ್ಲಿರುವ ಸುಮಾರು 200 ರಿಂದ 250 ಗ್ರಾಮಗಳಲ್ಲಿ ವಾಸಿಸುವರಾಗಿದ್ದಾರೆ.


ವಿಶ್ವದ ಅತಿದೊಡ್ಡ ಮಳೆಕಾಡು ಎಂದು ಕರೆಯಲ್ಪಡುವ ಅಮೆಜೋನಿಯಾ ಸ್ಥಳೀಯ ನಿಕ್ಷೇಪಗಳು ಅತ್ಯಂತ ಮಾರ್ಗಗಳಲ್ಲಿ ಒಂದಾಗಿವೆ ಹಾಗೂ ಜಾಗತಿಕ ತಾಪಮಾನ ಏರಿಕೆಯನ್ನು ನಿಧಾನಗೊಳಿಸಲು ಬೇಕಾದ ಇಂಗಾಲದ ಅಂಗಡಿಯೇ ಇದೆ. ಕಾಡನ್ನು ಸಾಮಾನ್ಯವಾಗಿ ವಿಶ್ವದ ಶ್ವಾಸಕೋಶ ಎಂದು ಕರೆಯಲಾಗುತ್ತದೆ.


ಹವಾಮಾನ ಬದಲಾವಣೆಯ ಸಂದೇಹವಾದಿಯಾಗಿರುವ ಅಧ್ಯಕ್ಷ ಬೋಲ್ಸನಾರೊ ರವರನ್ನು ಪ್ರಬಲ ಕೃಷಿ-ವ್ಯವಹಾರ ನಾಯಕರಿಂದಲೂ ಬೆಂಬಲಿಸ್ಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚು ಸ್ಥಳೀಯ ನಾಯಕರು ಇರುವ ಕಾರಣದಿಂದ ಅಲ್ಲಿನ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದು ತಮ್ಮ ಉದ್ದೇಶವನ್ನು ಹೊರಹಾಕಿದರು.


1992 ರಲ್ಲಿ ಅಪಾರ ಖನಿಜ ಸಂಪತ್ತು ಇರುವ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಯಿತು ಬೋಸ್ ನ್ಯಾರೋ ಅವರ ತಂದೆ ಗಣಿಗಾರಿಕಾರಾಗಿದ್ದರು ವಿಶೇಷವಾಗಿ ಎನುಮಾಮಿ ಪ್ರದೇಶದ ವಿಸ್ತರಣೆಯನ್ನು ಅವರು ಟೀಕಿಸಿದರು.


ದುರಂತ


ಐ.ಎಸ್.ಐ ವರದಿಯ ಪ್ರಕಾರ ಯನೋಮಾಮಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಸುಮಾರು 500 ಪುಟ್ಬಾಲ್ ಮೈದಾನಗಳಿಗೆ ಸಮವಾದ ವಸ್ತು ನಾಶವಾಗಿದೆ ಮತ್ತು ಈ ವರ್ಷ ಇನ್ನಷ್ಟು ನಾಶವಾಗಲು ಕಾರಣವಾಗುತ್ತದೆ ಎಂದು ತಿಳಿಸಿದರು.


ಗಣಿಗಾರರು ಚಿನ್ನವನ್ನು ಮಣ್ಣಿನಿಂದ ಬೇರ್ಪಡಿಸಲು ಬಳಸುತ್ತಿರುವ ಪಾದರಸದಿಂದ ಅಲ್ಲಿರುವ ನದಿಗಳು ಕಲುಷಿತಗೊಳ್ಳುತ್ತಿವೆ. ಇದರೊಂದಿಗೆ ಮದ್ಯ ಮತ್ತು ಮಾದಕ ವಸ್ತುಗಳು ಇಲ್ಲಿಗೆ ಬರುವಂತೆ ದಾರಿ ಮಾಡುತ್ತಿದೆ ಇತ್ತೀಚಿಗೆ ಬಂದ ಕೊರೊನಾ ಸೋಂಕು ಕೂಡ ಪ್ರಾಂತ್ಯದಲ್ಲಿ ಹರಡಲು ಕಾರಣವಾಯಿತು.


ಸರ್ಕಾರದಿಂದ ನೆರವು


ಬೋಲ್ಸನಾರೊ ಅವರ ಸರ್ಕಾರ ಹೊರಡಿಸಿದ ಯೋಜನೆಯ ಬೆನ್ನಲ್ಲಿ ಅಲ್ಲಿನ ವಿರೋಧಪಕ್ಷಗಳು ಅಮೆಜೋನಿಯಾ ಪ್ರದೇಶಕ್ಕೂ ಮತ್ತು ಅಲ್ಲಿ ನೆಲೆಸಿರುವ ಸ್ಥಳೀಯರಿಗೂ ಬಂದೊದಗುವ ಸಂಕಷ್ಟಗಳ ಬಗ್ಗೆ ಎಚ್ಚರಿಸಿದೆ.


ಡೆಪ್ಯೂಟಿ ಸದಸ್ಯರು ಒಮ್ಮತದಿಂದ ಈ ಮಸೂದೆಗೆ ಒಪ್ಪಂದವನ್ನು ನೀಡಿದಾಗ ಮಾತ್ರ ಸಾರ್ವಜನಿಕರ ಜಮೀನನ್ನೂ ಕಾನೂನುಬದ್ಧ ಗೊಳಿಸಬಹುದು. ಮತ್ತೊಂದು ಪ್ರಸ್ತಾವವು ಈಗಾಗಲೇ ಅಸ್ತಿತ್ವದಲ್ಲಿರುವ ಸ್ಥಳೀಯ ಪ್ರದೇಶಗಳನ್ನು ಕಡಿಮೆಮಾಡಲು ದಾರಿಮಾಡಿಕೊಡುತ್ತದೆ.


ಈ ವಾರದ ಆರಂಭದಲ್ಲಿ ಗ್ರಾಮ ಮತ್ತು ಸ್ಥಳೀಯರನ್ನು ರಕ್ಷಿಸಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯು ಹಾಗೂ ಆಯಾ ಪ್ರದೇಶದಲ್ಲಿರುವ ಗಣಿಗಾರರನ್ನು ತೆಗೆದುಹಾಕುವಂತೆಯು ಸುಪ್ರೀಂಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.


ಕನ್ನಡಕ್ಕೆ: ಸಹೋ. ಜೋಸೆಫ್ ಸುರೇಶ್


24 ಜೂನ್ 2021, 11:44

23 views0 comments

Comments


bottom of page