ಸಂತ ಪದವಿಯ ಹಾದಿಯಲ್ಲಿ ಯೂರೋಪಿನ ಐಕ್ಯತೆಯ ತಂದೆ ರಾಬರ್ಟ್ ಶೂಮೆನ್.


ಜಗದ್ಗುರು ಫ್ರಾನ್ಸಿಸ್ ರವರು ಯೂರೋಪಿನ ಗೌರವಾನ್ವಿತ ರಾಜಕಾರಣಿ ರಾಬರ್ಟ್ ಶೂಮೆನ್ ಮತ್ತು ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಸೋವಿಯತ್ ಸೈನ್ಯದಿಂದ ಹುತಾತ್ಮರಾದ ಹತ್ತು ಪೋಲ್ಯಾಂಡಿನ ಸನ್ಯಾಸಿಗಳನ್ನು ಸಂತ ಪದವಿಗೆ ಏರಿಸುವ ಕಾರಣಗಳನ್ನ ಕ್ರೋಢಿಕರಿಸಿ ಮುಂದಿಡುವುದಕ್ಕೆ ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ವೀರ ಸದ್ಗುಣಗಳುಳ್ಳ ಇನ್ನಿತರ ಹಲವಾರು ಸತ್ಪುರುಷರು ಮತ್ತು ಮಹಿಳೆಯರನ್ನೂ ಅಧಿಕೃತವಾಗಿ ಗುರುತಿಸಲಾಯಿತು.


ವ್ಯಾಟಿಕನ್ ಸುದ್ದಿ ಬರಹಗಾರರಿಂದ


ಧರ್ಮಸಭೆಯು ಯೂರೋಪಿನ ಐಕ್ಯತೆಯ ಪಿತಾಮಹರಲ್ಲಿ ಒಬ್ಬರಾದ ರಾಬರ್ಟ್ ಶೂಮೆನ್‌ರವರ ವೀರ ಸದ್ಗುಣಗಳನ್ನ ಗುರುತಿಸಿದೆ, ಆದ್ದರಿಂದ ಅವರನ್ನು "ಪೂಜ್ಯ" ಪದವಿಗೇರಿಸಲಾಗಿದೆ.


"ಸಂತರ ಕಾರಣ" ಎಂಬ ಸಭೆಯ ಮುಖ್ಯಸ್ಥರಿಗೆ ನಡೆದ ಸಮಾರಂಭದಲ್ಲಿ ಕಾರ್ಡಿನಲ್ ಮರ‍್ಸೆಲ್ಲೋ ಸೆಮಿರಾರೋ , ಜಗದ್ಗುರು ಫ್ರಾನ್ಸಿಸ್ ರವರು ರಾಬರ್ಟ್ ಶೂಮೆನ್ ಜೊತೆಗೆ ನಾಲ್ಕು ಇತರ ಪೂಜ್ಯರು ಮತ್ತು ಹನ್ನೊಂದು ಭವಿಷ್ಯದ ಆಶೀರ್ವದಿತರು , ಇವರೊಟ್ಟಿಗೆ ೧೯೪೫ ರಲ್ಲಿ ಸೋವಿಯತ್ ಪಡೆಗಳ ಆಕ್ರಮಣದಿಂದ ಪೋಲ್ಯಾಂಡ್ನಲ್ಲಿ ಓಡಿಯಮ್ ಫಿಡೈ(ವಿಶ್ವಾಸದ ದ್ವೇಶಕ್ಕಾಗಿ) ಕೊಲ್ಲಲ್ಪಟ್ಟ ಕನ್ಯಾಸ್ತ್ರೀ ಹುತಾತ್ಮರನ್ನು ಸಂತ ಪದವಿಗೆ ಏರಿಸುವ ಕಾರಣಗಳನ್ನ ಕ್ರೋಢೀಕರಿಸಿ ಮುಂದಿಡುವುದಕ್ಕೆ ಸಂತರನ್ನು ಘೋಷಿಸುವ ಪ್ರಕ್ರಿಯೆಯ ವ್ಯಾಟಿಕನ್ ವಿಭಾಗೀಯ ಕಚೇರಿಗೆ ಅಧಿಕೃತವಾಗಿ ಅನುಮತಿಸಿದರು.


ಶೂಮೆನ್: ರಾಜಕೀಯ ಧರ್ಮಪ್ರಚಾರಕ್ಕಾಗಿ ಹಾಗೂ ಸೇವೆಗಾಗಿ


ಫ್ರೆಂಚಿನ ಕಥೋಲಿಕರಾಗಿದ್ದ ರಾಬರ್ಟ್ ಶೂಮೆನ್ (೧೮೮೬-೧೯೬೩) ಅವರು ರಾಜಕೀಯಕ್ಕೆ ಬದ್ಧರಾಗಿ -ಧರ್ಮಪ್ರಚಾರ ಹಾಗೂ ಸೇವೆಗೆಂದು ಅರಿತು , ದೇವರ ಚಿತ್ತದ ವಿದೇಯತೆಯ ಕ್ರಿಯೆಯಾಗಿ -ಪ್ರಾರ್ಥನೆಯಲ್ಲಿ ಬಾಳುತ್ತ ಮತ್ತು ದಿನನಿತ್ಯ ಪರಮಪ್ರಸಾದದಲ್ಲಿ ಪೋಷಣೆಗೊಳ್ಳುತ್ತಿದ್ದರು. ಗೆಸ್ಟಪೋರವರು ೧೪ ಸೆಪ್ಟೆಂಬರ್ ೧೯೪೦ ರಿಂದ ೧೨ ಏಪ್ರಿಲ್ ೧೯೪೧ರ ವರೆಗೆ ಅವರನ್ನು ಬಂಧಿಸಿ, ಸೆರೆಮನೆಯಲ್ಲಿಟ್ಟಿದ್ದರು. ಅವರು ಅಲ್ಲಿಂದ ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತ ಯುದ್ಧ ಮುಗಿಯುವವರೆಗೂ ಕಣ್ಮರೆಯಾಗಿ ಜೀವಿಸುತ್ತ ಮುಖ್ಯವಾಗಿ ನಿರಾಶ್ರಿತರನ್ನು ಕಾನ್ವೆಂಟ್ ಗಳಿಗೆ ಹಾಗೂ ಮಠಗಳಿಗೆ ಕರೆತಂದರು. ಯುದ್ಧದ ಅಂತ್ಯದಲ್ಲಿ , ಅವರು ಫ್ರಾನ್ಸನ ಸಂವಿಧಾನ ಸಭೆಗೆ ೧೯೪೫ ಮತ್ತು ೧೯೪೬ರಲ್ಲಿ ಚುನಾಯಿತರಾದರು. ಫ್ರೆಂಚ್ ಸರಕಾರದ ಸಂಸತ್ತಿನ ಸದಸ್ಯರಾಗಿ ಹಣಕಾಸು ಮಂತ್ರಿ , ಪ್ರಧಾನ ಮಂತ್ರಿ , ವಿದೇಶಾಂಗ ವ್ಯವಹಾರಗಳ ಮಂತ್ರಿ , ನ್ಯಾಯಾಂಗ ಮಂತ್ರಿ ಎಂಬಂತಹ ಮುಖ್ಯವಾದ ಹುದ್ದೆಗಳನ್ನು ಅ