ಹಿರಿಯರ, ಅಜ್ಜ, ಅಜ್ಜಿಯರ ವಿಶ್ವದಿನ ಕುರಿತ ವಿಶ್ವಗುರು ಪ್ರಾನ್ಸಿಸ್ ರವರ ಸಂದೇಶವನ್ನು ಸ್ವಾಗತಿಸಿದ ಐರಿಶ್ ಧರ್ಮಾಧ್ಯಕ್


ಹಿರಿಯರ ಅಜ್ಜ,ಅಜ್ಜಿಯರ ಪ್ರಥಮ ವಿಶ್ವದಿನಾಚರಣೆಯ ಅಂಗವಾಗಿ ವಿಶ್ವಗುರು ಪ್ರಾನ್ಸಿಸ್ ರವರು ನೀಡಿದ ಸಂದೇಶವನ್ನು ಸ್ವಾಗತಿಸುತ್ತ ವಿವಾಹ ಮತ್ತು ಕುಟುಂಬ ಸಮಿತಿಯ ಐರಿಶ್ ಧರ್ಮಾಧ್ಯಕ್ಷ ಡೆನಿಸ್ ನಲ್ಟಿಯವರು, ಧರ್ಮಕೇಂದ್ರಗಳು ಈ ಸಂದರ್ಭವನ್ನು ಆಚರಿಸಲು ಉತ್ಸುಕವಾಗಿವೆ ಎಂದರು.


ವ್ಯಾಟಿಕನ್ ಸಿಬ್ಬಂದಿ ವಾರ್ತಾ ವರದಿಗಾರರಿಂದ


“ಸವಾಲುಗಳನ್ನು ಎದುರಿಸುವಾಗ ಅವರ ಸಾಮಾಜಿಕವಾದ, ಸಮಚಿತ್ತವಾದ ವಾಸ್ತವಿಕತೆಯನ್ನು ಬಹಳಷ್ಟು ನಾವು ಕಲಿತಿದ್ದೇವೆ”


ಕೊಂಡಾಡದ ನಾಯಕರು


“ಹಿರಿಯರು ಅಜ್ಜ ಅಜ್ಜಿಯರು ಹಾಗು ಹಿರಿಯ ಯಾಜಕರು, ಧಾರ್ಮಿಕರು ಸಾಂಕ್ರಾಮಿಕರೋಗವನ್ನು ಕೊಂಡಾಡÀದ ನಾಯಕರು” ಎಂಬುದು ವಿವಾಹ ಮತ್ತು ಕುಟುಂಬ ಸಮಿತಿಯ ಅಧ್ಯಕ್ಷ, ಧರ್ಮಾಧ್ಯಕ್ಷ ಡೆ ಡೆನಿಸ್ ನಲ್ಟಿ ಅವರ ಅಭಿಪ್ರಾಯದ ಮಾತುಗಳು. ಅಜ್ಜ ಅಜ್ಜಿಯರಿಗೆ ಮತ್ತು ಹಿರಿಯರಿಗೆ “ಲೋಕಾಂತ್ಯದವರೆಗೂ ಸದಾ ನಿಮ್ಮೊಡನೆ ಇರುತ್ತೇವೆ” (ಮತ್ತಾಯ ೨೮:೨೦) ಎಂಬ ವಿಷಯ ಕುರಿತು ಜುಲೈ ೨೫ ರಂದು ವಿಶ್ವದಿನವನ್ನು ಆಚರಿಸಲಾಗುವುದು. ಈ ವಿಶ್ವದಿನವನ್ನು ಗುರುತಿಸುವ ವಿಶ್ವಗುರು ಫ್ರಾನ್ಸಿಸ್ ರವರ ಸಂದೇಶವನ್ನು ಸ್ವಾಗತಿಸಿದ ಧರ್ಮಾಧ್ಯಕ್ಷ ಡೆನಿಸ್ ನಲ್ಟಿ ಅವರು ಈ ಸಾಂಕ್ರಾಮಿಕ ಸಮಯದಲ್ಲಿ ಇಡೀ ಧರ್ಮಸಭೆಯ ಎಲ್ಲ ಹಿರಿಯರು, ಅಜ್ಜ ಅಜ್ಜಿಯರು ಹತ್ತಿರದಲ್ಲಿರುವ ಅವಶ್ಯಕತೆಯನ್ನು ನೆನಪಿಸುತ್ತದೆ ಎಂದರು.


ನಿಯೋಗದಿಂದ ಪ್ರೋತ್ಸಾಹ