top of page

ಹಿರಿಯರಿಗೆ ವಿಶ್ವಗುರು: ನಿಮ್ಮ ಒಂಟಿತನವನ್ನು ಹೋಗಲಾಡಿಸಲು ದೇವರು ತಮ್ಮ ದೇವದೂತರನ್ನು ಕಳುಹಿಸುತ್ತಾರೆ


ವಿಶ್ವಗುರು ಫ್ರಾನ್ಸಿಸ್, ಮೊದಲ ವಿಶ್ವ ಹಿರಿಯರ ದಿನಾಚರಣೆಯ ಸಂದೇಶದಲ್ಲಿ ಅಜ್ಜ-ಅಜ್ಜಿಯರಿಗೆ ಮತ್ತು ಹಿರಿಯರಿಗೆ ದೇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ ಎಂದು ಭರವಸೆಯ ಮಾತುಗಳನ್ನಾಡುತ್ತಾರೆ.

ನಮ್ಮ ನಂಬಿಕೆಯೆಂಬ ಬೇರುಗಳನ್ನು ಉಳಿಸಿಕೊಂಡು, ಆ ನಂಬಿಕೆಯನ್ನು ಕಿರಿಯರಿಗೆ ತಲುಪಿಸುವ

ಕರ‍್ಯಗಳನ್ನು ಕೈಗೊಳ್ಳುವಂತೆ ಮುನ್ನೆಚ್ಚರಿಕೆವಹಿಸಬೇಕೆಂದು ನೆನಪಿಸಿದರು.


ವರದಿ: ಫಾದರ್ ಬೆನೆಡಿಕ್ಟ್ ಮಾಯಾಕಿ, ಎಸ್.ಜೆ.


ಜುಲೈ ೨೫ ರಂದು ನಡೆಯಲಿರುವ ವಿಶ್ವ ಹಿರಿಯರ ಆಚರಣೆಯ ದಿನಾಂಕಕ್ಕಿಂತ ಮುಂಚಿತವಾಗಿ ವಿಶ್ವಗುರು ಫ್ರಾನ್ಸಿಸ್ ಮಂಗಳವಾರ ಅಜ್ಜ-ಅಜ್ಜಿಯರಿಗೆ ಮತ್ತು ಹಿರಿಯರಿಗೆ ಮೊದಲ ವಿಶ್ವ ದಿನಾಚರಣೆಯ ಸಂದೇಶವನ್ನು ಬಿಡುಗಡೆ ಮಾಡಿದರು. ಉದ್ಘಾಟನಾ ಸ್ಮರಣಾರ್ಥ ವಿಶ್ವಗುರು ಪ್ರಾನ್ಸಿಸ್ ರವರು ರವರು ಆಯ್ಕೆ ಮಾಡಿಕೊಂಡ ವಿಷಯವೇನೆಂದರೆ “ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ” (ಮತ್ತಾಯ ೨೮:೩೦).


ಪವಿತ್ರ ತಂದೆಯು, ಸಂತ ಮತ್ತಾಯರು ಬರೆದು ಶುಭಸಂದೇಶದಿಂದ ಆರಿಸಿಕೊಂಡ ವಿಷಯವನ್ನು, ಅಲ್ಲಿ ನೆರೆದಿದ್ದ ಎಲ್ಲಾ ಅಜ್ಜ-ಅಜ್ಜಿಯರು ಮತ್ತು ವೃದ್ಧರಿಗೆ ಪ್ರಸ್ತಾಪಿಸುತ್ತಾ, "ದೇವರು ತಾನು ಸ್ವರ್ಗಕ್ಕೆ ಏರುವ ಮೊದಲು ತನ್ನ ಶಿಷ್ಯರಿಗೆ ನೀಡಿದ ವಾಗ್ದಾನ ಇದು ಎಂದು ನೆನಪಿಸಿದರು.


ವಿಶ್ವಗುರು, ಹಿರಿಯರನ್ನು ಉದ್ದೇಶಿಸಿ ಹೀಗೆಂದರು, ನಿಮ್ಮಲ್ಲಿ ನಾನು ಒಬ್ಬ "ಎಲ್ಲಾ ಚರ್ಚುಗಳು ನಿಮಗೂ-ನಮಗೂ ಮುಚ್ಚಲ್ಪಟ್ಟಿವೆ - ನಿಮ್ಮ ಬಗ್ಗೆ ಧರ್ಮಸಭೆ ಕಾಳಜಿ ವಹಿಸುತ್ತದೆ, ನಿಮ್ಮನ್ನು ಪ್ರೀತಿಸುತ್ತದೆ ಮತ್ತು ನಿಮ್ಮನ್ನು ಒಬ್ಬಂಟಿಯಾಗಿ ಬಿಡಲು ಬಯಸುವುದಿಲ್ಲ!" ಎಂದರು.



ಸಾಂಕ್ರಾಮಿಕದ ಮಧ್ಯೆ ಸಾಂತ್ವನ


ಕೋವಿಡ್ -೧೯ ಸಾಂಕ್ರಾಮಿಕದ ಸವಾಲಿನ ಸಮಯದ ಮಧ್ಯೆಯೂ ವಿಶ್ವಗುರು ಒಂದು ಸಂದೇಶವನ್ನು ಕಳುಹಿಸಿದರು, ಅದು ಎಲ್ಲರ ಮೇಲೆ ವಿಶೇಷವಾಗಿ, ವೃದ್ಧರ ಮೇಲೆ ಪರಿಣಾಮ ಬೀರಿತು. ವಿಶ್ವಗುರು ಫ್ರಾನ್ಸಿಸ್ ಗಮನಿಸಿದಂತೆ, "ಅನೇಕರು, ಅನಾರೋಗ್ಯಕ್ಕೆ ಒಳಗಾದರು,ಕೆಲವರು ಮರಣವನ್ನು ಹೊಂದಿದರು, ಕೆಲವರು ತಮ್ಮ ಸಂಗಾತಿಯರನ್ನು ಅಥವಾ ಪ್ರೀತಿ ಪಾತ್ರರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ, ಆದರೆ ಇನ್ನೂ ಇತರರು ತಮ್ಮನ್ನು ತಾವೇ ಪ್ರತ್ಯೇಕವಾಗಿರಿಸಿಕೊಂಡು ಏಕಾಂಗಿಯಾಗಿ ದರ‍್ಘಕಾಲ ಕಾಲಕಳೆಯುತ್ತಿದ್ದಾರೆ." ಎಂದರು.


"ಇಂತಹ ಸಂದಿಗ್ಧ ಸಮಯದಲ್ಲಿ ನಾವು ಅನುಭವಿಸುತ್ತಿರುವ ಎಲ್ಲಾ ನೋವುಗಳನ್ನು ದೇವರು ತಿಳಿದುಕೊಂಡಿದ್ದಾರೆ" ಎಂದು ವಿಶ್ವಗುರು ಹೇಳಿದರು," ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ತೀವ್ರವಾದ ನೋವಿಗೆ ಒಳಗಾದವರು ಪ್ರತ್ಯೇಕವಾಗಿ ಮತ್ತು ಒಂಟಿಯಾಗಿರುವವರಿಗೆ ದೇವರು ಹತ್ತಿರವಾಗುತ್ತಿದ್ದಾರೆ," ಇದನ್ನು ವಿವರಿಸುತ್ತಾ, ಸಂಪ್ರದಾಯದ ಪ್ರಕಾರ, ತಮ್ಮ ಸುತ್ತಮುತ್ತಲಿನವರಿಂದ ದೂರವಾಗಿದ್ದೇವೆಂದು ಭಾವಿಸುವವರಿಗೆ, ದೇವದೂತರು ಅಂತಹವರನ್ನು ಸಮಾಧಾನಪಡಿಸುತ್ತಾರೆ . ಇದನ್ನು ಯೇಸುವಿನ ಅಜ್ಜ ಸೇಂಟ್ ಜೋಕಿಮ್ ಅವರ ಕಥೆಯು ನಮಗೆ ತಿಳುವಳಿಕೆಯನ್ನು ನೀಡುತ್ತದೆ ಎಂದು ಹೇಳಿದರು.


ದೇವರು ತನ್ನ ಮಾತುಗಳ ಸಂದೇಶವನ್ನು ದೇವದೂತರ ಮೂಲಕ ಕಳುಹಿಸುತ್ತಾರೆ


ಕರಾಳ ಕ್ಷಣಗಳಲ್ಲಿಯೂ ಸಹ, ನಮ್ಮ ಒಂಟಿತನವನ್ನು ಹೋಗಲಾಡಿಸಿ, ನಮ್ಮನ್ನು ಸಮಾಧಾನಪಡಿಸಲು ಆತನು ಸದಾಕಾಲವು ನಮ್ಮೊಂದಿಗೆ ಇರುತ್ತಾರೆಂದು ತೋರ್ಪಡಿಸಲು ದೇವರು ದೇವದೂತರನ್ನು ನಮ್ಮ ಬಳಿಗೆ ಕಳುಹಿಸುತ್ತಲೇ ಇರುತ್ತಾರೆ ಎಂದು ವಿಶ್ವಗುರು ಭರವಸೆಯ ಮಾತುಗಳನ್ನಾಡಿದರು.


ತನ್ನ ಮಾತುಗಳನ್ನು ಮುಂದುವರೆಸುತ್ತಾ, ಈ ದೇವದೂತರು, ಕೆಲವೊಮ್ಮೆ ನಮ್ಮ ಮೊಮ್ಮಕ್ಕಳ ಮುಖವನ್ನು ಹೊಂದಿರುತ್ತಾರೆ, ಇನ್ನೂ ಕೆಲವು ಸಮಯಗಳಲ್ಲಿ, “ಕುಟುಂಬದ ಸದಸ್ಯರ ಮುಖ, ಬಾಲ್ಯಸ್ನೇಹಿತರು ಅಥವಾ ಈ ಸಮಯದಲ್ಲಿ ನಮ್ಮ ಜೊತೆಗೆ ಕೈಜೋಡಿಸಿದಂತಹ ಮುಖಗಳು, ಅತೀ ಮುಖ್ಯವಾಗಿ ನಾವು ಇತರರನ್ನು ಬೇಟಿಮಾಡಿದ ಕ್ಷಣಗಳು ಮತ್ತು ಪ್ರೀತಿಯ ಅಪ್ಪುಗೆಗಳು ಮುಖ್ಯವೆಂದು ನಾವು ಪ್ರತಿಯೊಬ್ಬರೂ ಕಲಿತುಕೊಂಡಿದ್ದೇವೆ ” ಎಂದರು


ಅದೇ ಸಮಯದಲ್ಲಿ, ಭಗವಂತನು “ಸದಾ ತನ್ನ ಕೈಯಲ್ಲಿರುವ ಮಾತಿನ ಸಂದೇಶವನ್ನು ದೇವದೂತರ ಮೂಲಕ ನಮಗೆ ಕಳುಹಿಸುತ್ತಾರೆ” ಎಂದು ವಿಶ್ವಗುರು ಗಮನಿಸಿದರು, ಹಿರಿಯರನ್ನು ಉದ್ದೇಶಿಸಿ “ಪ್ರತಿದಿನ ಶುಭಸಂದೇಶದ ಒಂದು ಪುಟವನ್ನು ಓದಲು ಪ್ರಯತ್ನಿಸಿರಿ, ಕೀರ್ತನೆಗಳೊಂದಿಗೆ ಪ್ರಾರ್ಥಿಸಲು,ಹಾಗೂ ಪ್ರವಾದಿಗಳ ಬಗ್ಗೆ ತಿಳಿದುಕೊಳ್ಳಲು ತಿಳಿಸಿದರು. "ಈಗಿನ ದಿನಗಳಿಗೆ ನಮ್ಮ ಜೀವನವನ್ನು ಹೇಗೆ ಹೊಂದಿಸಿಕೊಂಡು ನಡೆಯುವುದು ಎಂಬುದನ್ನು ಧರ್ಮಗ್ರಂಥಗಳು ನಮಗೆ ರ‍್ಥಮಾಡಿಸಲು ಸಹಾಯ ಮಾಡುತ್ತವೆ" ಎಂದು ಅವರು ಹೇಳಿದರು. ದೇವರು,ದಿನದ ಪ್ರತಿ ಗಂಟೆಯಲ್ಲೂ ಮತ್ತು ಜೀವನದ ಪ್ರತಿಯೊಂದು ಹಂತದಲ್ಲೂ, ಕಾರ್ಮಿಕರನ್ನು ತನ್ನ ದ್ರಾಕ್ಷಿತೋಟಕ್ಕೆ ಕಳುಹಿಸುತ್ತಲೇ ಇರುತ್ತಾರೆ.” ಎಂದು ಎಚ್ಚರಿಸಿದರು.


ವೃದ್ಧರ ವೃತ್ತಿ


“ಆದ್ದರಿಂದ ಹೋಗಿ ಎಲ್ಲಾ ಜನಾಂಗದವರನ್ನು ಶಿಷ್ಯರನ್ನಾಗಿ ಮಾಡಿ, ತಂದೆಯ ಮತ್ತು ಮಗನ ಮತ್ತು ಪವಿತ್ರಾತ್ಮ ಹೆಸರಿನಲ್ಲಿ ಎಲ್ಲರಿಗೂ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಅವರು ಆಚರಿಸಲು ಕಲಿಸಿ” (ಮತ್ತಾಯ ೨೮: ೧೯-೨೦) ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳನ್ನು ಪವಿತ್ರ ತಂದೆಯು ನೆನಪಿಸಿಕೊಂಡರು.


ಹಿರಿಯರನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು, “ನಮ್ಮ ನಂಬಿಕೆಯೆಂಬ ಬೇರುಗಳನ್ನು ಕಾಪಾಡಿಕೊಳ್ಳಲು, ಅದನ್ನು ಯುವಕರಿಗೆ ಮನದಟ್ಟುಪಡಿಸಲು ಮತ್ತು ಚಿಕ್ಕವರಿಗೆ ಇದನ್ನು ರ‍್ಥೈಸಲು, ಈ ಸಂದಿಗ್ಧ ಪರಿಸ್ಥಿತಿಯು ಯಾವ ವಯಸ್ಸನ್ನು ಲೆಕ್ಕಿಸದೆ, ಅವರು ತಮ್ಮ ವೃತ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಲೆಕ್ಕಿಸದೆ, ಅವರು ಏಕಾಂಗಿಯಾಗಿದ್ದಾರಾ ಅಥವಾ ಕುಟುಂಬವನ್ನು ಹೊಂದಿದ್ದಾರಾ, ಅವರು ಕೆಲಸ ಮಾಡುತ್ತಿದ್ದರಾ ಅಥವಾ ಇಲ್ಲವಾ, ಅವರು ಅಜ್ಜಿಯರಾಗಿದ್ದಾರಾ ಅಥವಾ ಇಲ್ಲವಾ ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ಸದಾವಕಾಶವನ್ನು ಕಲ್ಪಿಸಿಕೊಟ್ಟಿದೆ ಎಂದು ಒತ್ತಿ ಹೇಳಿದರು. ಹಾಗೆಯೇ ಮುಖ್ಯವಾಗಿ ಶುಭಸಂದೇಶವನ್ನು ಸಾರುವ ಮತ್ತು ಸಂಪ್ರದಾಯಗಳನ್ನು ಮೊಮ್ಮಕ್ಕಳಿಗೆ ಹಸ್ತಾಂತರಿಸಲು ಯಾವುದೇ ನರ‍್ಬಂಧನಗಳು ಅಥವಾ ಇದಕ್ಕೆ ಯಾವುದೇ ನಿವೃತ್ತಿಯ ವಯಸ್ಸಿಲ್ಲವೆಂದು ವಿಶ್ವಗುರು ಒತ್ತಿಹೇಳಿದರು.


ಹಿರಿಯರನ್ನು ಹುರಿದುಂಬಿಸುತ್ತಾ , ವಯಸ್ಸಾದವರಿಗೆ ಅವರು ಹೊಂದಿರಬಹುದಾದ ಅನುಮಾನಗಳು ಮತ್ತು ಪ್ರಶ್ನೆಗಳ ನಡುವೆಯೂ “ಹೊಸದನ್ನು ಹೊರಡಿಸಲು ಮತ್ತು ಕೈಗೊಳ್ಳಲು” ಪ್ರೋತ್ಸಾಹಿಸುತ್ತಾ, “ವಯಸ್ಸಾದ ಮನುಷ್ಯನು ಹೇಗೆ ಜನ್ಮವನ್ನು ನೀಡಲು ಸಾಧ್ಯ”(ಯೋವಾನ ೩: ೪) ಎಂದು ನಿಕೋದೆಮನು ಕೇಳಿದ ಪ್ರಶ್ನೆಯನ್ನು, ಯೇಸು ಕೇಳಿಸಿಕೊಂಡ ಅದೇ ರೀತಿಯ ಪ್ರಶ್ನೆಯನ್ನು ಹೇಳಿದನ್ನು ಅವರು ನೆನಪಿಸಿದರು.


“ನಾವು ಪವಿತ್ರಾತ್ಮದ ಕೆಲಸಕ್ಕೆ ನಮ್ಮ ಹೃದಯವನ್ನು ತೆರೆದರೆ, ಅವರ ಇಚ್ಛೆಯಂತೆ ನಮ್ಮ ಬಾಳು ಬೆಳಗುತ್ತದೆ. ಪವಿತ್ರಾತ್ಮರ ಇಚ್ಛೆಯಂತೆ ನಡೆದರೆ ಪವಿತ್ರಾತ್ಮರು ಎಲ್ಲೆಲ್ಲಿ ಇರುತ್ತಾರೋ ಅಲ್ಲೆಲ್ಲಾ ಅವರ ಬೆಳಕು ಪಸರಿಸುವಂತೆ ಮಾಡುತ್ತಾರೆ ” ಅವರಿಂದ ಎಲ್ಲವೂ ಸಾಧ್ಯ ಎಂದು ವಿಶ್ವಗುರು ಫ್ರಾನ್ಸಿಸ್ ರವರು ಒತ್ತಿ ಹೇಳಿದರು.


ಬಿಕ್ಕಟ್ಟಿನಿಂದ ಹೊರಹೊಮ್ಮುವಿಕೆ

ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸಲು ಸಾಮೂಹಿಕ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಮೊದಲಿನಂತೆ ಪ್ರಸ್ತುತ ಬಿಕ್ಕಟ್ಟುಗಳಿಂದ ಹೊರಹೊಮ್ಮುವುದು ಅಷ್ಟೊಂದು ಸುಲಭ ಸಾಧ್ಯವಲ್ಲ, ಆದರೆ ಈ ಪ್ರಯತ್ನಗಳು ಉತ್ತಮವಾಗಲೂ ಸಾಧ್ಯವಿದೆ ಹಾಗೆಯೇ ಕೆಟ್ಟದಾಗಿಯಾದರೂ ಪರಿಣಮಿಸಬಹುದು. ಅವರು ಗಮನಿಸಿದ ಮತ್ತೊಂದು ವಿಷಯ "ಯಾರಿಗು ಇದರಿಂದ ಉಳಿಗಾಲವಿಲ್ಲ" ಹಾಗಾಗಿ ನಾವೆಲ್ಲರೂ ಒಬ್ಬರಿಗೊಬ್ಬರು ಚಿರುಋಣಿಗಳಾಗಿ ಬಾಳಬೇಕಾಗಿದೆ ಏಕೆಂದರೆ " ನಾವೆಲ್ಲರೂ ಸಹೋದರ ಸಹೋದರಿಯರು" ಎಂಬುದನ್ನು ಮರೆಯುವಂತಿಲ್ಲ ಎಂದು ವಿಶ್ವಗುರು ಫ್ರಾನ್ಸಿಸ್ ರವರು ಒತ್ತಿಹೇಳಿದರು.


ಈ ನಿಟ್ಟಿನಲ್ಲಿ, ಹಿರಿಯರನ್ನು ಉದ್ದೇಶಿಸಿ, “ಭ್ರಾತೃತ್ವ ಮತ್ತು ಸಾಮಾಜಿಕ ಸ್ನೇಹಕ್ಕಾಗಿ, ನಾಳೆಯ ಜಗತ್ತನ್ನು ನರ‍್ಮಿಸಲು ಸಹಾಯ ಮಾಡುವ ಅಗತ್ಯವಿದೆ” ಆಗ ಮಾತ್ರ ಈ ಅಲೆಯು ಕಡಿಮೆಯಾದ ಬಳಿಕ ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ಬದುಕಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.


ನಾವೆಲ್ಲರೂ "ನಮ್ಮ ತೊಂದರೆಗೀಡಾದ ಸಮಾಜಗಳನ್ನು ನವೀಕರಿಸಲು ಮತ್ತು ಬೆಂಬಲಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು" ಹಿರಿಯರು ಯಾರಿಗಿಂತಲೂ ಕಡಿಮೆ ಏನಿಲ್ಲ, ಸ್ಮರಣೆ ಮತ್ತು ಪ್ರರ‍್ಥನೆಗಳ ಜೊತೆಗೆ "ಕನಸುಗಳು, ನೆನಪು ಮತ್ತು ಪ್ರರ‍್ಥನೆ" ಎಂಬ ಮೂರು ಅಂಶಗಳನ್ನು ಬೆಂಬಲಿಸುವ ಸ್ತಂಭಗಳನ್ನು ಸ್ಥಾಪಿಸುವ ಹೊಸ ಕನಸ್ಸುಗಳನ್ನು ಒಳಗೊಂಡಿರುವ ಹೊಸ ಕಟ್ಟಡವನ್ನು ನರ‍್ಮಿಸಲು ನಿಮ್ಮ ಸಹಾಯ ಅತೀ ಮುಖ್ಯವಾಗುತ್ತದೆ ಎಂದು ವಿಶ್ವಗುರುಗಳು ಹಿರಿಯರನ್ನು ಒತ್ತಾಯಿಸಿದರು.


ಕನಸುಗಳು, ನೆನಪು ಮತ್ತು ಪ್ರರ‍್ಥನೆ


ವಿಶ್ವಗುರು ಫ್ರಾನ್ಸಿಸ್ ವಿಶ್ವದ ಭವಿಷ್ಯವು ಯುವಕರು ಮತ್ತು ಹಿರಿಯರ ನಡುವಿನ ಒಡಂಬಡಿಕೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿತ್ತಾ, ಪ್ರವಾದಿ ಜೋಯೆಲ್ ಅವರ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. “ನಿಮ್ಮ ವೃದ್ಧರು ಕನಸ್ಸನ್ನು ಕಾಣುತ್ತಾರೆ, ಮತ್ತು ನಿಮ್ಮ ಯುವಕರು ದರ್ಶನವನ್ನು ಪಡೆಯುತ್ತಾರೆ” (ಜೋಯಲ್ ೩: ೧), ಅಂದರೆ ನೀವು ಯುವಕರಲ್ಲದಿದ್ದರೂ, ಹಿರಿಯರ ಕನಸ್ಸುಗಳನ್ನು ತೆಗೆದುಕೊಂಡು ಅವುಗಳನ್ನು ನನಸಾಗಿಸಬಹುದಲ್ಲವೇ? ” ಎಂದು ಬುದ್ಧಿ ಮಾತುಗಳನ್ನಾಡಿದರು.


ಇದು ಸಂಭವಿಸಬೇಕಾದರೆ, "ನಾವು ಕನಸ್ಸು ಕಾಣುವುದು ಅವಶ್ಯಕ," "ನಮ್ಮ ಸತ್ಯವಾದ ನ್ಯಾಯ, ಶಾಂತಿ, ಐಕಮತ್ಯದ ಕನಸ್ಸುಗಳು ನಮ್ಮ ಯುವಜನರಿಗೆ ಹೊಸ ದೃಷ್ಟಿಕೋನಗಳನ್ನು ಹೊಂದಲು ಸಾಧ್ಯವಾಗಿಸುತ್ತದೆ; ಈ ರೀತಿಯಾಗಿ, ಒಟ್ಟಾಗಿ, ನಾವು ಭವಿಷ್ಯವನ್ನು ನರ‍್ಮಿಸಬಹುದು. ” ಎಂದು ವಿಶ್ವಗುರು ಹೇಳಿದರು


ಮತ್ತಷ್ಟು ವಿವರಿಸಿದ ವಿಶ್ವಗುರು, "ಕನಸ್ಸುಗಳು ನೆನಪಿನೊಂದಿಗೆ ಹೆಣೆದುಕೊಂಡಿವೆ" ಎಂದು ಹೇಳಿದರು. ನಂತರ ವಿಶ್ವಗುರು ತನ್ನ ಆಲೋಚನೆಗಳನ್ನು ಯುದ್ಧದ ನೋವಿನ ನೆನಪು ಮತ್ತು ಶಾಂತಿಯ ಮೌಲ್ಯವನ್ನು ಕಲಿಯಲು ಯುವಕರಿಗೆ ಸಹಾಯ ಮಾಡುವ ಮಹತ್ವದ ಕಡೆಗೆ ಮನವೊಲಿಸಿದರು . ಯುದ್ಧದ ದುಃಖವನ್ನು ಅನುಭವಿಸಿದ ವೃದ್ಧರಲ್ಲಿ ಸಂದೇಶವನ್ನು ರವಾನಿಸಬೇಕು ಎಂದು ಅವರು ಒತ್ತಿಹೇಳಿದರು ಏಕೆಂದರೆ ಸ್ಮರಣೆಯನ್ನು ಜೀವಂತವಾಗಿರಿಸುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದು ಪ್ರತಿಯೊಬ್ಬ ಹಿರಿಯರ ನಿಜವಾದ ಧ್ಯೇಯವಾಗಿದೆ. ಎಂದರು


ಅಡಿಪಾಯವಿಲ್ಲದೆ, ನಾವು ಎಂದಿಗೂ ಮನೆ ನರ‍್ಮಿಸಲು ಸಾಧ್ಯವಿಲ್ಲ. ಅಂತೆಯೇ ಜೀವನದ ಅಡಿಪಾಯವೆಂದರೆ ಸ್ಮರಣೆ, ನಾವು ಏನೇ ಆಗಿರಲಿ, ಸ್ಮರಣೆಯಿಲ್ಲದೆ, ನಾವು ಎಂದಿಗೂ ಏನನ್ನೂ ನರ‍್ಮಿಸಲು ಸಾಧ್ಯವಾಗುವುದಿಲ್ಲ; ಎಂದು ಮನದಟ್ಟುಪಡಿಸಿದರು.


ಅಂತಿಮವಾಗಿ, ವಿಶ್ವಗುರು ಫ್ರಾನ್ಸಿಸ್ ಪ್ರರ‍್ಥನೆಯ ಕುರಿತು ಮಾತನಾಡುತ್ತಾ, ಪೋಪ್ ಬೆನೆಡಿಕ್ಟ್ ಘಿಗಿI ರ ಮಾತುಗಳನ್ನು ನೆನಪಿಸಿಕೊಂಡರು: “ಹಿರಿಯರ ಪ್ರಾರ್ಥನೆಯು ಜಗತ್ತನ್ನು ರಕ್ಷಿಸುತ್ತದೆ, ಮತ್ತು ಇತರರ ಹುಚ್ಚುತನದ ಚಟುವಟಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.” ಎಂದರು


ಹಿರಿಯರ ಪ್ರಾರ್ಥನೆ “ಬಹಳ ಅಮೂಲ್ಯವಾದ ಸಂಪನ್ಮೂಲ” ಎಂದು ಅವರು ನೆನಪಿಸಿದರು. ಧರ್ಮಸಭೆ ಮತ್ತು ಜಗತ್ತಿಗೆ ತುರ್ತಾಗಿ ಅಗತ್ಯವಿರುವ ಒಂದು ಆಳವಾದ ಉಸಿರು ”ಪ್ರಾರ್ಥನೆ". ವಿಶೇಷವಾಗಿ ಈ ಕಾಲದಲ್ಲಿ ನಾವು ಸಾಂಕ್ರಾಮಿಕ ರೋಗದ ಬಿರುಗಾಳಿಯ ಸಮುದ್ರದ ಉದ್ದಕ್ಕೂ ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ನಾವು ಅತೀ ಶೀಘ್ರದಲ್ಲೇ ದಡಕ್ಕೆ ಬರುತ್ತೇವೆ ಎಂಬ ಪ್ರಶಾಂತ ನಂಬಿಕೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ” ಪ್ರೇರೇಪಿಸಿದರು.


ಮುಕ್ತಾಯದಲ್ಲಿ, ಪವಿತ್ರ ತಂದೆಯು ಪೂಜ್ಯ ಚಾರ್ಲ್ಸ್ ಡಿ ಫೌಕಾಲ್ಡ್ ಅವರ ಉದಾಹರಣೆಯನ್ನು ಹಿರಿಯರಿಗೆ ಅವರ ಜೀವನದ ಕಥೆಯನ್ನು ವಿವರಿಸಿದರು "ಇಡೀ ಜಗತ್ತು ಸತ್ಯದಲ್ಲಿ, ಸಾರ್ವತ್ರಿಕ ಸಹೋದರ ಅಥವಾ ಸಹೋದರಿಯಾಗಲು, ಒಬ್ಬರ ಸ್ವಂತ ಮರುಭೂಮಿಯ ಏಕಾಂತತೆಯಲ್ಲಿಯೂ ಸಹ, ಬಡವರು ಬಡವರಿಗೆ ಮಧ್ಯಸ್ಥಿಕೆ ವಹಿಸುವುದು ಹೇಗೆ ಸಾಧ್ಯ ಎಂಬುದನ್ನು ತೋರಿಸುತ್ತದೆ” ಎಂದು ತಿಳಿಸಿದರು. ಆದುದರಿಂದ, ದೇವರನ್ನು ತನ್ನ ಉದಾಹರಣೆಯ ಮೂಲಕ, “ನಾವೆಲ್ಲರೂ ಬಡವರ ನೋವುಗಳಿಗೆ ಸಂವೇದನಾಶೀಲತೆಯಿಂದ ನಮ್ಮ ಹೃದಯಗಳನ್ನು ತೆರೆಯಬಹುದು ಮತ್ತು ಅವರ ಅಗತ್ಯಗಳಿಗಾಗಿ ಮಧ್ಯಸ್ಥಿಕೆ ವಹಿಸಬಹುದು” ಎಂದು ಪ್ರರ‍್ಥಿಸಿದರು.


"ಇಂದು ನಾವು ಮಾತನಾಡಿದ ಪ್ರತಿಯೊಂದು ಮಾತುಗಳು ನಮ್ಮೆಲ್ಲರಿಗೂ, ವಿಶೇಷವಾಗಿ ಯುವಕರಿಗೆ ಸಮಾಧಾನ ಮೂಡಿಸುವ ಮಾತುಗಳಂತೆ ಮರುಕಳಿಸಲಿ, "ನಾನು ಯಾವಾಗಲೂ ನಿಮ್ಮೊಂದಿಗೆಇರುತ್ತೇನೆ" ಯಾವಾಗಲೂ ಮುಂದೆ ಸಾಗುತ್ತಿರು, ದೇವರ ಆಶರ‍್ವಾದ ಸದಾಕಾಲ ನಿಮಗೆ ಲಭಿಸಲಿ ”ಎಂದು ವಿಶ್ವಗುರು ಹೇಳಿದರು.


ಕನ್ನಡಕ್ಕೆ: ಗಾಯತ್ರಿ ರಾಮಾಚಾರಿ


22 ಜೂನ್ 2021, 11:45

36 views0 comments

Komentarze


bottom of page