ಆಗಸ್ಟ್ ೨೦೨೦ರ ಬಾಂಬ್ ಸ್ಪೋಟದ ನಂತರ ಲೆಬನಾನ್‌ನ ರಾಜಧಾನಿ ಬೈರುತ್‌ನ ಸಂತ ಜೋಸೆಫರ ಜೆಸ್ವಿಟ್ ಚರ್ಚ್ ಮುಂದಿನ ತಿಂಗಳು ಮತ್ತೆ ಬಾಗಿಲು ತೆರೆಯಲಿದೆ.
ಲೆಬನಾನ್‌ನ ಬೈರುತ್‌ನಲ್ಲಿ ಜರುಗಿದ ವಿನಾಶಕಾರಿ ಬಾಂಬ್ ಸ್ಪೋಟದಿಂದ ಒಂದು ವರ್ಷ ಆಚರಣೆ ಸ್ತಗಿತಕ್ಕೆ ಕಾರಣವಾಗಿತ್ತು. ಹಾನಿಗೊಳಗಾಗಿದ್ದ ಐತಿಹಾಸಿಕ ಚರ್ಚ್ ಜೆಸ್ವಿಟ್‌ನವರು ನಡೆಸುತ್ತಿರುವ ಸಂತ ಜೋಸೆಫರ ದೇವಾಲಯವು ಮುಂದಿನ ತಿಂಗಳು ಮತ್ತೆ ತೆರೆಯಲಿದೆ.
ಮಹತ್ವದ ಬೆಂಬಲ
ಕಥೋಲಿಕರ ಔದಾರ್ಯತೆ ಹಾಗು ಅಗತ್ಯವಿರುವ ಚರ್ಚ್ಗೆ ಸಹಾಯ ಸಮಿತಿಯವರ (ಎಡ್ಸ್ ಟು ದಿ ಚರ್ಚ್ ಇನ್ ನೀಡ್–ಎಸಿಎನ್) ಸಹಾಯದಿಂದ ಚರ್ಚನ್ನು ಪುನರ್ ಸ್ಥಾಪಿಸಲಾಗಿದೆ. ಮುಂದಿನ ವಾರದ ಅಂತ್ಯದ ವೇಳೆಗೆ ಹೊಸ ಮರದ ಬಾಗಿಲುಗಳ ಪೂರೈಕೆ ಮತ್ತು ಸ್ಥಾಪನೆ ಪೂರ್ಣಗೊಳ್ಳಲಿದೆ ಎಂದು ಜೆಸ್ವಿಟ್‌ನ ಫಾದರ್ ಅಬೌಜೌಡೆ ಎಸಿಎನ್‌ಗೆ ತಿಳಿಸಿದ್ದಾರೆ.
ಪೆಯಿಂಟಿಂಗ್ ಮತ್ತು ವಿದ್ಯುತ್ ಕೆಲಸಗಳು ಮುಗಿಯುವ ಹಂತದಲ್ಲಿರುವುದರಿಂದ ಕಟ್ಟಡದ ಫಾಲ್ಸ್ಲಿಂಗ್ ಅಳವಡಿಕೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ಹಡಗುಕಟ್ಟೆ ಗೋದಾಮಿನಲ್ಲಿ ಜರುಗಿದ ಬಾಂಬ್ ಸ್ಪೋಟದಲ್ಲಿ ೨೭೫೦ಕ್ಕೂ ಹೆಚ್ಚು ಟನ್‌ಗಳ ಅಮೋನಿಯಂ ನೈಟ್ರೇಟ್ ಸಿಡಿದು ೨೦೦ ಜನರು ಸತ್ತು ಸಾವಿರಾರು ಮಂದಿ ಗಾಯಗೊಂಡಿದ್ದರು.
ಯೋಜನೆಯ ಪುನರ್‌ಸ್ಥಾಪನೆ
ಹೆಚ್ಚಿನ ಸಂಖ್ಯೆಯಲ್ಲಿ ಮರದ ಕಿಟಕಿಗಳು ಬಾಗಿಲುಗಳು ನಾಶವಾದವು, ತಾರಸಿಯು ತೀವ್ರ ಹಾನಿಗೊಳಗಾಯಿತೆಂದು ಚರ್ಚ್ನ ಪುನರ್ ಸ್ಥಾಪನೆ ಮೇಲ್ವಿಚಾರಕ ಇಂಜಿನಿಯರ್ ಫಾರಿದ್ ಹಕೈಮ್ ಹೇಳಿದ್ದಾರೆ. ಇತರೆ ಹಾನಿಗಳಲ್ಲಿ ಎಲ್ಲಾ ಮರಗೆಲಸಗಳ ಮೂಲ ಆಕರಗಳು ಬಾಂಬ್ ಸ್ಫೋಟದಿಂದ ಕಿತ್ತು ಬಂದಿವೆ. ಫಾಲ್ಸ್ ಸೀಲಿಂಗ್ ಮತ್ತು ಬೆಳಕಿನ ನೆಲೆಗಳಿಗೆ ಹಾನಿಯಾಗಿದೆ. ಜೊತೆಗೆ ತಾರಸಿಗೆ ಆಧಾರವಾಗಿದ್ದ ಮರದ ರಚನೆಗಳಿಗೆ ಹಾನಿಯಾಗಿದೆ. ತಾರಸಿ ಬಹುತೇಕ ಹೊದಿಕೆಗಳನ್ನೆಲ್ಲಾ ಕಳೆದುಕೊಂಡಿದೆ. ಚರ್ಚ್ನ ಮೇಲ್ಛಾವಣಿಯಲ್ಲಿ ಬಿಟ್ಟಿರುವ ಬಿರುಕುಗಳನ್ನು ಕಾಣಬಹುದು, ಹಾಗು ಇತರೆ ಪ್ರದೇಶಗಳಲ್ಲೂ ಸ್ಪೋಟದಿಂದ ಸಾಕಷ್ಟು ಹಾನಿಯಾಗಿದೆ ಎಂದರು.
ಎಸಿಎನ್‌ನ ವಚನಬದ್ದತೆ
ಎಸಿಎನ್ ಹೇಳಿರುವಂತೆ ೧೮೭೫ರಲ್ಲಿ ನಿರ್ಮಾಣಗೊಂಡ ಸಂತ ಜೋಸೆಫರ ಚರ್ಚ್ ವಿವಿದ ಸಮುದಾಯಗಳನ್ನು ಒಳಗೊಂಡಿದ್ದು, ಭಾನುವಾರ ಸಂಜೆ ಫ್ರೆಂಚ್ ಭಾಷೆಯಲ್ಲೂ ಬೆಳಿಗ್ಗೆ ಇಂಗ್ಲಿಷ್ ಹಾಗು ಅರೇಬಿಕ್ ಭಾಷೆಯಲ್ಲೂ ಮ್ಯಾನೋರೈಟ್ ಪೂಜಾವಿದಿಗಳ ಬಲಿಪೂಜೆ ಜರುಗುತ್ತಿವೆ.
ದೇಶದ ಪೌಂಡ್ ಚಲಾವಣೆ ಕುಸಿತದಿಂದ ಲೆಬನಾನ್‌ನ ಆರ್ಥಿಕ ಸ್ಥಿತಿ ತೀವ್ರವಾಗಿ ಕುಸಿದಿದ್ದು ಚರ್ಚ್ ದುರಸ್ತಿಗಾಗಿ ನಾಲ್ಕು ಲಕ್ಷ ಪೌಂಡ್‌ನ ಸಹಾಯವು ಹೆಚ್ಚು ಮಹತ್ವದ್ದಾಗಿದೆ.
ಆಗಸ್ಟ್ ೨೦೨೦ರ ಹಡಗುಕಟ್ಟೆ ಸ್ಪೋಟದ ಬಳಿಕ ತುರ್ತು ಸಹಾಯಕ್ಕಾಗಿ ಹಾಗು ಚರ್ಚ್ ಕಟ್ಟಡಗಳ ದುರಸ್ತಿಗಾಗಿ ಲೆಬನಾನ್‌ನ ಕ್ರೈಸ್ತ ಸಮುದಾಯಕ್ಕೆ ಬೆಂಬಲ ನೀಡುವಿಕೆಯನ್ನು ಮುಂದುವರೆಸಿದ್ದು ರಾಜಧಾನಿಯ ಕ್ರೈಸ್ತ ಸಮುದಾಯಕ್ಕೆ ಎಸಿಎನ್ ಐತಿಹಾಸಿಕ ನೆರವು ನೀಡಿದೆ.
16 ಜೂನ್ 14:29
ಕನ್ನಡಕ್ಕೆ: ಎಲ್. ಚಿನ್ನಪ್ಪ
Comments