top of page

8,500ಕ್ಕೂ ಹೆಚ್ಚು ಮಕ್ಕಳನ್ನು 2020ರಲ್ಲಿ ಸೈನಿಕರನ್ನಾಗಿ ಬಳಸಿಕೊಳ್ಳಲಾಗಿದೆ: ಯು.ಎನ್ ಸೆಕ್ರೆಟರಿ ಜನರಲ್ ಅಂತೋನಿಯೋ ಗ


ಯು.ಎನ್ ವರದಿಯ ಪ್ರಕಾರ ಸುಮಾರು 8,500ಕ್ಕೂ ಹೆಚ್ಚು ಮಕ್ಕಳನ್ನು 2020ರಲ್ಲಿ ಸೈನಿಕರನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಯು.ಎನ್ ಸೆಕ್ರೆಟರಿ ಜನರಲ್ ಅಂತೋನಿಯೋ ಗುಟೆರಸ್ ರವರು ಭದ್ರತಾ ಮಂಡಳಿಗೆ ನೀಡಿರುವ ಹೊಸ ವರದಿಯಲ್ಲಿ ಉಲ್ಲೇಖಿಸಿದ್ದಾರೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ


ಯು.ಎನ್ ಸೆಕ್ರೆಟರಿ ಜನರಲ್ ರವರು ಮಕ್ಕಳು ಮತ್ತು ಸಶಸ್ತ್ರ ಸಂಘರ್ಷದ ಬಗ್ಗೆ ಭದ್ರತಾ ಮಂಡಳಿಯ ನಿಟ್ಟಿನಲ್ಲಿ ಕಂಡುಹಿಡಿದಿರುವ ಸಂಶೋಧನೆಗಳು ಯು.ಎನ್ ವಾರ್ಷಿಕ ವರದಿಯಲ್ಲಿ ಪ್ರಕಟವಾಗುತ್ತಿದ್ದಂತೆ ನಿರ್ದಯತೆ ಹಾಗೂ ಭಯಾನಕತೆಯನ್ನು ಮನಸ್ಸಿನಲ್ಲಿ ಮೂಡಿಸಿದೆ. ವಿಶ್ವದಾದ್ಯಂತ ವಿವಿಧ ಸಂಘರ್ಷಗಳಲ್ಲಿ ಕಳೆದ ವರ್ಷ 8500 ಹೆಚ್ಚು ಮಕ್ಕಳನ್ನು ಸೈನಿಕರನ್ನಾಗಿ ಬಳಸಿಕೊಳ್ಳಲಾಗಿದ್ದು ಇದರಲ್ಲಿ ಸುಮಾರು 2700 ಇತರರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.


ಗಂಭೀರ ಉಲ್ಲಂಘನೆ


ಹೊಸ ವರದಿಯ ಪ್ರಕಾರ ಹತ್ಯೆ, ದುರ್ಬಲಗೊಳಿಸುವಿಕೆ ಮತ್ತು ಮಕ್ಕಳ ಮೇಲೆ ಲೈಂಗಿಕ ಕಿರುಕುಳ, ಅಪಹರಣ ಅಥವಾ ನೇಮಕಾತಿ ಮತ್ತು ನೆರವು ನೀಡಲು ನಕಾರ ಇವೆಲ್ಲವುದರ ಬಗ್ಗೆ ನಿಖರವಾದ ವಿವರವನ್ನು ಈ ವರದಿಯು ನೀಡುತ್ತದೆ. 19,379 ಮಕ್ಕಳ ವಿರುದ್ದ ಉಲ್ಲಂಘನಾ ಪ್ರಕರಣಗಳನ್ನು ಸಂಶೋಧನೆಗಳು ದೃಢಪಡಿಸಿವೆ. 2020 ರಲ್ಲಿ ಹೆಚ್ಚಿನ ಪ್ರಕಾರದ ಉಲ್ಲಂಘನೆಗಳು ಸೋಮಾಲಿಯಾ ಡೆಮಾಕ್ರಟಿಕ್ ರಿಪಬ್ಲಿಕನ್ ಆಫ್ ಕಾಂಗೋ ಆಫ್ಘಾನಿಸ್ತಾನ,ಸಿರಿಯಾ ಮತ್ತು ಯೆಮೆನ್ ನಿಂದ ವರದಿಯಾಗಿದೆ. ಇದಲ್ಲದೆ ಶಾಲೆ ಮತ್ತು ಆಸ್ಪತ್ರೆಗಳ ಮೇಲಿನ ದಾಳಿಗಳು ವಿಪರೀತವಾಗಿ ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ.


ಗಂಭೀರ ಉಲ್ಲಂಘನೆಗಳಿಗೆ ಒಳಗಾಗಿರುವ ಮಕ್ಕಳಲ್ಲಿ ಕಾಲುಭಾಗದಷ್ಟು ಹುಡುಗಿಯರಿದ್ದಾರೆ ಮತ್ತು ಇದರಲ್ಲಿ ಬಹುತೇಕ ಮಕ್ಕಳು ಅತ್ಯಾಚಾರ ಹಾಗೂ ಇತರ ರೀತಿಯ ಲೈಂಗಿಕ ದೌರ್ಜನ್ಯಗಳಿಗೆ ಬಾಧಿತರಾಗಿದ್ದಾರೆ ಎಂದು ವರದಿಯ ಮೂಲಗಳು ತಿಳಿಸಿವೆ. ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ವಿಶೇಷ ಪ್ರತಿನಿಧಿ ಸೆಕ್ರೆಟರಿ ಜನರಲ್ ವರ್ಜಿನಿಯ ಗಾಂಬಾರವರು ವರದಿಯ ಬಗ್ಗೆ ಮಾತನಾಡುತ್ತ 2020ರಲ್ಲಿ ವಯಸ್ಕರ ನಡುವೆ ನಡೆದ ಯುದ್ಧಗಳು ಮತ್ತೆ ಲಕ್ಷಾಂತರ ಮುಗ್ಧ ಬಾಲಕ ಮತ್ತು ಬಾಲಕಿಯರ ಬಾಲ್ಯವನ್ನು ಕಸಿದುಕೊಂಡಿದೆ ಇದರ ಭೀಕರತೆಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಪೂರ್ಣವಾಗಿ ವಿನಾಶಕಾರಿಯಾಗಿ ಪರಿಣಮಿಸಲಿದೆ ಮತ್ತು ಅವರು ವಾಸಿಸುವ ಇಡೀ ಸಮುದಾಯದಲ್ಲಿ ಸುಸ್ಥಿರ ಶಾಂತಿಯ ವಾತಾವರಣವನ್ನು ನಾಶಪಡಿಸುವುದು ಕ್ರೂರತೆಯು ತಲೆದೋರುವುದು ಎಂದು ಹೇಳಿದರು.


ಸಾಧಿಸಲಾದ ಪ್ರಗತಿ


ಚಕಿತಗೊಳಿಸುವ ಅಂಕಿ-ಅಂಶಗಳ ನಡುವೆಯೂ ಅಫ್ಘಾನಿಸ್ತಾನ, ಮಧ್ಯ ಆಫ್ರಿಕಾದ ಗಣರಾಜ್ಯ, ನೈಜೀರಿಯಾ, ಫಿಲಿಫೈನ್ಸ್, ದಕ್ಷಿಣ ಸುಡಾನ್ ಮತ್ತು ಸಿರಿಯಾದಲ್ಲಿ ಹೋರಾಡುವ ಪಕ್ಷಗಳೊಂದಿಗಿನ ಸಂವಾದಗಳಲ್ಲಿ ನಿಶ್ಚಿತ ಹಾಗೂ ಸಾಕಾರ ಪ್ರಗತಿಯನ್ನು ವರದಿಯು ತೋರಿಸುತ್ತದೆ. ಯು.ಎನ್. ಹಸ್ತಕ್ಷೇಪದ ನಂತರ ಸಶಸ್ತ್ರ ಗುಂಪುಗಳು ಮತ್ತು ಪಡೆಗಳು 12643ಕ್ಕೂ ಹೆಚ್ಚು ಮಕ್ಕಳನ್ನು ತಮ್ಮ ಶ್ರೇಣಿಯಿಂದ ಮುಕ್ತಗೊಳಿಸಬೇಕು ಎಂದು ಮೂಲಗಳು ತಿಳಿಸಿವೆ. ಈ ಮಕ್ಕಳ ಹಿತರಕ್ಷಣೆ ಕಾಪಾಡುವಲ್ಲಿ ಹಾಗೂ ಅವರ ಅಸ್ತಿತ್ವವನ್ನು ಭದ್ರಪಡಿಸುವಲ್ಲಿ ಮಕ್ಕಳ ಸಂರಕ್ಷಣಾ ಸಾಮರ್ಥ್ಯಗಳು ವಿಸ್ತರಿಸಲ್ಪಟ್ಟಿದೆ ಮತ್ತು ಅನುದಾನಗಳು ದೊರಕಿರುವುದರಿಂದ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ವರದಿ ಹೇಳಿದೆ.


ವಿಶ್ವಗುರು ಫ್ರಾನ್ಸಿಸ್ ರವರ ಕರೆ


2016ರಲ್ಲಿ ಬಾಲ ಸೈನಿಕರ ವಿಷಯದ ಕುರಿತು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ರವರು ಮಕ್ಕಳ ಗಣತಿಯನ್ನು ಗೌರವಿಸಲು ನಾವು ಎಲ್ಲಾ ರೀತಿಯಲ್ಲೂ ಶ್ರಮಿಸಬೇಕು ಮತ್ತು ಮಕ್ಕಳ ಗುಲಾಮಗಿರಿಯನ್ನು ಕೊನೆಗೊಳಿಸಬೇಕು ಎಂದು ಹೇಳಿದರು.


22 ಜೂನ್ 2021, 13:58


ಕನ್ನಡಕ್ಕೆ ಮೇರಿ ಲತಾ.ಎ

32 views0 comments

Comments


bottom of page