top of page

ಶಾಂತಿಯ ನಾಯಕರು: ಸಾಂಕ್ರಾಮಿಕದ ನಂತರದ ಜಗತ್ತನ್ನು ನೋಡುವ ಅಭಿಯಾನವು ಪ್ರಾರಂಭವಾಗುತ್ತಿದೆ.


ಇಟಲಿಯ ರಾಯಭಾರವು ವಿಶ್ವಗುರುಗಳ ಅಧಿಕಾರ ಪೀಠಕ್ಕೆ ಶಾಂತಿಯ ನಾಯಕರ ಜಾಗತಿಕ ಅಭಿಯಾನವು ರಾಜತಾಂತ್ರಿಕ ದಳದ ಮಾನ್ಯತೆಯೊಂದಿಗೆ ಅನುಮೋದಿಸಿತು. ಸಾಂಕ್ರಾಮಿಕದ ನಂತರದ ಚೇತರಿಕೆ ಹಾಗು ಪುನಃರಾರಂಭದ ನಿಲುವಿನಲ್ಲಿ ಶ್ರಮಿಸುವ ಶಾಂತಿಯ ನಾಯಕರಿಗಾಗಿ ಮೊದಲ ಹೆಜ್ಜೆಯಂತೆ ಬದ್ಧತೆ ಹಾಗು ತರಬೇತಿಯ ವಿಷಯವನ್ನು ಅನುಮೋದಿಸಲಾಯಿತು.


ವ್ಯಾಟಿಕನ್ ನ್ಯೂಸ್‌ ಸಿಬ್ಬಂದಿ ಬರಹಗಾರರಿಂದ.


ಕೋವಿಡ್ ಸಾಂಕ್ರಾಮಿಕದ ನಂತರದ ಪುನಃರಾರಂಭದ ಅಭಿಯಾನವನ್ನು ಇಟಲಿಯ ಶಾಂತಿಯ ನಾಯಕರು ರೋಂಡೈನ್ ಸಿಟಡೆಲ್ಲಾ ಡೆಲ್ಲಾ ಪೇಸ್‌ನ ಯುವ ವಿಧ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ್ದಾರೆ.


ಈ ಜಾಗತಿಕ ಅಭಿಯಾನವನ್ನು, ಮಾನ್ಯತೆ ಪಡೆದಿರುವ ರಾಜತಾಂತ್ರಿಕ ದಳಗಳಿಗೆ ನೀಡಲಾಯಿತು.

ಉಮಕ್ರಮ


ರೋಂಡೈನ್ ಸಿಟಡೆಲ್ಲಾ ಡೆಲ್ಲಾ ಪೇಸ್ ಹಾಗು ಇಟಲಿಯ ರಾಯಭಾರವು ವಿಶ್ವಗುರುಗಳ ಅಧಿಕಾರ ಪೀಠದೊಂದಿಗೆ ಪ್ರಾರಂಭಿಸಿರುವ ಈ ಅಭಿಯಾನವು ಶಾಂತಿಯ ಸಂಸ್ಕೃತಿಯನ್ನು ಭದ್ರ ಬುನಾದಿಯಾಗಿಸಿ, ಸಶಸ್ತ್ರ ಸಂಘರ್ಷಗಳಲ್ಲಿ ದ್ವೇಶದಿಂದ ಹಾಗೂ ವೈರತ್ವದಿಂದ ನೋವು ಅನುಭವಿಸಿದ ಯುವಜನರಿಗೆ ಶಾಂತಿಯ ಸಂದೇಶದತ್ತ ಗಮನ ಸೆಳೆಯುವ ಗುರಿಯನ್ನು ಹೊಂದಿದೆ. ಸಾಂಕ್ರಾಮಿಕವಾಗಿ ಇಡೀ ವಿಶ್ವವನ್ನೇ ಅಪಾಯಕಾರಿ ಮಟ್ಟಕ್ಕೆ ತಂದಿರುವ ಈ ವಿಶಯವಲ್ಲದೇ, ಜಾಗತಿಕ ವಿಧ್ಯಮಾನದಲ್ಲಿ ನಡೆಯುತ್ತಿರುವ ಎಲ್ಲಾ ಸಂಘರ್ಷಗಳಿಗೂ ಕೂಡ ಈ ಅಭಿಯಾನವು ಸಹಕಾರಿಯಾಗುತ್ತದೆ.


ಈ ಕಾರಣವಾಗಿ ರೋಂಡೈನ್‌ನ ಯುವಜನರು ಶಾಂತಿಯ ನಾಯಕರೊಂದಿಗೆ ಶಾಂತಿಯ ಅಭಿಯಾನಕ್ಕಾಗಿ ಒಮ್ಮತದ ನಿಲುವಿನೊಂದಿಗೆ ಕಾರ್ಯಪ್ರವೃತ್ತರಾಗಲು ಅಪೇಕ್ಷಿಸಿದ್ದಾರೆ. ಯುವ ಶಾಂತಿಯ ನಾಯಕರಿಗೆ ಸಮರ್ಪಕ ತರಬೇತಿ, ರಾಷ್ಟಿçÃಯ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಅರಿವು, ಹಾಗೂ ರೋಂಡೈನ್‌ನ ಸೃಜನಾತ್ಮಕ ವಿಧಾನಗಳೊಂದಿಗೆ ಜಗತ್ತಿನ ಯಾವುದೇ ಸಂಘರ್ಷಗಳಲ್ಲಿ ಮಧ್ಯಪ್ರವೇಶಿಸಿ ಅವುಗಳನ್ನು ಇತ್ಯರ್ಥಗೊಳಿಸುವಲ್ಲಿ ಸಶಕ್ತರಾಗಿ ಶಾಂತಿಯ ರಾಯಭಾರಿಗಳಾಗುತ್ತಾರೆ.


ಕಥೋಲಿಕ ದೇವಾಲಯಗಳ ಬೆಂಬಲ ಹಾಗೂ ನೆರವು.

ಹಲವಾರು ನಾಯಕರನ್ನೊಳಗೊಂಡಿರುವ ಮೆಡಿಟರೇನಿಯನ್ ಫ್ರಂಟಿಯರ್ ಆಫ್ ಪೀಸ್ ಎಂಬ ಯೋಜನೆಯಲ್ಲಿ, ಇಟಲಿಯ ಹಲವಾರು ರ‍್ಮಾಧ್ಯಕ್ಷರುಗಳು ನಡೆಸಿದ ಸಮ್ಮೇಳನಗಳು ಕೂಡ ಬೆಂಬಲ ನೀಡುತ್ತಿವೆ. ಕ್ಯಾಟಿರಾಸ್ ಇಟಾಲಿಯಾನಾ ಹಾಗೂ ರೋಂಡೈನ್ ಸಿಟಡೆಲ್ಲಾ ಡೆಲ್ಲಾ ಪೇಸ್ ಎವರೆಲ್ಲರ ಸಹಯೋಗವು ಕೂಡ ಮಹತ್ವದ ಬೆಂಬಲ ನೀಡುತ್ತಿದೆ. ಮೆಡಿಟರೇನಿಯನ್‌ನಲ್ಲಿ ಸಂಪೂರ್ಣವಾಗಿ ಯೋಜನೆಗಳನ್ನು ರೂಪಿಸುವದಲ್ಲದೇ ಅವುಗಳನ್ನು ಮಾಧ್ಯಮ ಹಾಗೂ ತಂತ್ರಜ್ಞಾನಗಳ ಮೂಲಕ ಅಬಿವೃಧ್ದಿ ಪಡಿಸಲು ನೆರವಾಗುತ್ತಿದೆ.


ರೋಂಡೈನ್ ಸಿಟಡೆಲ್ಲಾ ಡೆಲ್ಲಾ ಪೇಸ್

ಫ್ರಾಂಕೊ ವಕ್ಕಾರಿ ಎನ್ನುವವರು ೧೯೯೮ರಲ್ಲಿ ಸ್ಥಾಪಿಸಿದ ಒಂದು ಸಂಸ್ಥೆಯಾಗಿದ್ದು, ಜಗತ್ತಿನಲ್ಲಿ ನಡೆಯುವ ಎಲ್ಲಾ ಸಶಸ್ತç ಸಂಘರ್ಷಗಳಲ್ಲಿ ಮಧ್ಯಪ್ರವೇಶಿಸಿ ಅವುಗಳನ್ನು ಇತ್ಯರ್ಥಗೊಳಿಸುವ ಸೃಜನಶೀಲ ರೂಪಾಂತರ ಯೋಜನೆಯನ್ನೊಳಗೊಂಡಿರುತ್ತದೆ. ಈ ಯೋಜನೆಯನ್ನು ರಾಂಡೈನ್ ಮಾದರಿಯೆಂದು ಕರೆಯಲಾಗುತ್ತದೆ.


ಇಂಟರ್ನ್ಯಾಶ್ನಲ್ ಸ್ಟುಡೆಂಟ್ ವರ್ಲ್ಡ ಹೌಸ್‌ನ ಸಂಘಗಳ ಮೂಲಕ, ಜಗತ್ತಿನಲ್ಲಿ ನಡೆಯುವ ಎಲ್ಲಾ ಸಶಸ್ತ್ರ ಸಂಘರ್ಷಗಳು ಹಾಗು ಯುಧ್ದಗಳಲ್ಲಿ ನೋವು ಅನುಭವಿಸುತ್ತಿರುವ ಹಾಗೂ ಆಂತಹ ಕಠಿಣ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಮತ್ತು ಶತ್ರುತ್ವವನ್ನು ತಮ್ಮಲ್ಲಿ ಅಳವಡಿಸಿಕೊಂಡಿರುವ ಯುವಜನರನ್ನು ಪರಿಗಣಿಸಿ ೨ ವರ್ಷಗಳ ತರಬೇತಿ ನೀಡಿ ಅವರನ್ನು ದೇಶಗಳಲ್ಲಿ ಶಾಂತಿದೂತರನ್ನಾಗಿ ಪರಿವರ್ತನೆ ಮಾಡಲಾಗುತ್ತದೆ.


ರಾಂಡೈನ್ ಸಂಸ್ಥೆಯು ತನ್ನ ಶೈಕ್ಷಣಿಕ ತರಬೇತಿಗಳಿಂದ ಯುವಜನರನ್ನು ಸಾಮಾಜಿಕ ಕಳಕಳಿ ಹೊಂದಿರುವ, ತಮ್ಮ ಸಮುದಾಯದಲ್ಲಿ ಶಾಂತಿ ನೆಲೆಸುವಂತೆ ಮಾಡುವ, ಸಾಮಾಜಿಕವಾಗಿ ಒಳ್ಳೆಯ ವಿಚಾರಗಳನ್ನು ಹರಡುವ ನಾಯಕರಾಗುವಂತೆ ಪರಿವರ್ತಿಸುತ್ತದೆ. ಸಶಸ್ತ್ರ ಸಂಘರ್ಷಗಳನ್ನು ಹಾಗು ಸಾಮಾಜಿಕ ಭಾದೆ ಉಂಟುಮಾಡುವ ಕೃತ್ಯಗಳನ್ನೆಲ್ಲ ಬಿಟ್ಟು, ಶಾಂತಿಧೂತರಾಗಿ, ಸಮಾಜ ಹಾಗೂ ಸಮುದಾಯದಲ್ಲಿ ಉತ್ತಮ ಸಂಬಂದಗಳನ್ನು ಬೆಳೆಸುವ ವ್ಯಕ್ತಿಗಳನ್ನಾಗುವಂತೆ ಮಾಡುತ್ತದೆ. ಅದಕ್ಕಾಗಿ ರೋಂಡೈನ್ ಸಿಟಡೆಲ್ಲಾ ಡೆಲ್ಲಾ ಪೇಸ್ ಸಂಸ್ಥೆಯು ನೋಬೆಲ್ ಪ್ರಶಸ್ತಿಗಾಗಿ ನಾಮ ನಿರ್ದೇಶನ ಗೊಂಡಿದೆ.


14 ಜೂನ್ 2021, 13:13


ಕನ್ನಡಕ್ಕೆ ಅನುವಾದ: ಆನಂದಕುಮಾರ ದೊಡ್ಡಮನಿ.

27 views0 comments
bottom of page