top of page

ವಿಶ್ವಗುರು ಫ್ರಾನ್ಸಿಸ್ ಮಧ್ಯ ಪೂರ್ವದಲ್ಲಿನ ಶಾಂತಿ ನೆಲೆಗಾಗಿ ಪ್ರಾರ್ಥನೆಯ ಒತ್ತಾಯ


ವಿಶ್ವಗುರು ಫ್ರಾನ್ಸಿಸ್ ರವರು ಮಧ್ಯೆ ಪೂರ್ವ ದೇಶಗಳ ಕಥೋಲಿಕ ಪ್ರಧಾನ ಯಾಜಕರುಗಳಿಗೆ ಪತ್ರ ಬರೆದು ಒಟ್ಟಾಗಿ ಸೇರಿ ಆ ಪ್ರಾಂತ್ಯದ ಶಾಂತಿ ನೆಲೆಗಾಗಿ ದಿವ್ಯ ಪೂಜಾ ವಿಧಿಯೊಂದಿಗೆ ಆಧ್ಯಾತ್ಮಿಕತೆಯನ್ನು ಸಂಭ್ರಮಿಸಲು ತಿಳಿಸಿದ್ದಾರೆ.


ವರದಿ: ಡೆವಿನ್ ವಾಟ್ಕಿನ್ಸ್


ಮಧ್ಯ ಪೂರ್ವ ನಾಡಿನ ಕಥೋಲಿಕರೆಲ್ಲರೊ ಭಾನುವಾರದ ದಿವ್ಯ ಬಲಿಪೂಜಾ ವಿಧಿಗಳಲ್ಲಿ ಭಾಗವಹಿಸಿ, ಶಾಂತಿಯ ತಾಣವಾಗಿಸಲು ಮೊರೆಯಿಡುವ ಪ್ರಾರ್ಥನೆಯೊಂದಿಗೆ, ಅಲ್ಲಿನ ಗುರುವರ್ಯರುಗಳಿಗೆ, ಪತ್ರದ ಮುಖೇನ

ವಿಶ್ವ ಗುರುಗಳು ಧನ್ಯವಾದಗಳನ್ನು ತಿಳಿಸಿದ್ದಾರೆ ' ಮಧ್ಯಪೂರ್ವ ನಾಡಿನ ಕಥೋಲಿಕ ಪ್ರಧಾನ ಯಾಜಕರುಗಳು ಈ ಮೂಲಕ ಈ ನೆಲವನ್ನು

"ಪವಿತ್ರ ಕುಟುಂಬ' ವಾಗಿ ಪಾವನಗೊಳಿಸಿದ್ದಾರೆ' ಎಂದು ಬರೆದಿದ್ದಾರೆ.


ಭಾನುವಾರದ ತ್ರಿಕಾಲ ಪ್ರಾರ್ಥನೆಯಲ್ಲಿ, ವಿಶ್ವಗುರುಗಳು ಮಾತನಾಡುತ್ತಾ, ಸಂಪೂರ್ಣ ವಿಶ್ವವು ಈ ಪ್ರಾಂತ್ಯದ ಶಾಂತಿ ನೆಲೆಗಾಗಿ ಪ್ರಾರ್ಥಿಸಬೇಕೆಂದರು.


ಪ್ರತ್ಯೇಕವಾಗಿ, ಪತ್ರದ ಮುಖೇನ ವಿಶ್ವಗರುಗಳು ಮಧ್ಯ ಪೂರ್ವ ನಾಡಿಗೆ, ತಾವು ಯಾತ್ರಾರ್ಥಿಗಳಾಗಿ ಆರಂಭಿಸಿ, ಪವಿತ್ರನಾಡು ಜೆರುಸಲೇಮ್, ಈಜಿಪ್ಟ್, ಸಂಯುಕ್ತ ಅರಬ್ ದೇಶಗಳು, ಮತ್ತು ಇರಾಕ್ ಗಳತ್ತ ಸಾಗಿ, ಮಧ್ಯ ಪೂರ್ವ ಪ್ರಾಂತ್ಯವನ್ನು ಭೇಟಿ ಮಾಡಿದ ಸನ್ನಿವೇಶಗಳನ್ನು ಮೆಲುಕು ಹಾಕಿದರು.


' ಸರ್ವೇಶ್ವರರು, ಈ ನಾಡುಗಳಲ್ಲಿ ಕ್ರೈಸ್ತ ವಿಶ್ವಾಸ ಉಗಮವಾಗಿ, ಯಾತನೆಗಳ ಕಗ್ಗಂಟುಗಳ ಹೊರತಾಗಿಯೂ, ಸಜೀವಗೊಳಿಸಿದ್ದಾರೆ'.. ಈಗ ಇಲ್ಲಿನ ಶಾಂತಿ ನೆಲೆಗಾಗಿ ಮಾತುಕತೆ ಮತ್ತು ಭ್ರಾತೃತ್ವತೆಗಳ ಸಹಬಾಳ್ವೆಯನ್ನು, ಉಳಿಸಿ ಬೆಳಸುವ ಶ್ರಮಿಕರೆಲ್ಲರ ಪರಿಶ್ರಮವನ್ನು ಹರಸಲಿ' ಎಂದರು."

" ಅಂಥಾ ನಲ್ಮೆಯ ಜನರೇ, ನಿಮಗೆ ಸರ್ವಶಕ್ತ ದೇವರು, ಶಕ್ತಿಯನ್ನು, ನಿರಂತರ ಪರಿಶ್ರಮ ಭಾವವನ್ನೂ, ಧೈರ್ಯವನ್ನೂ ದಯಪಾಲಿಸಲಿ"

ಎಂದು ಬರೆದಿದ್ದಾರೆ..


" ನಾನು ವಿಶ್ವಗುರುವಾದಾಗಿನಿಂದಲೂ, ನಿಮ್ಮ ಎಲ್ಲಾ ಸಂಕಷ್ಟಗಳಲ್ಲಿ ನಿಮ್ಮೊಂದಿಗಿರುವ ಪ್ರಮಾಣಗೈದಿರುವೆ." ಎಂದಿರುವ ಅವರು ಸಿರಿಯಾ, ಲೆಬನಾನ್ ದೇಶಗಳಿಗಾಗಿ ಪ್ರಾರ್ಥಿಸಲು, ಆಗ್ಗಾಗ್ಗೆ

ಆಹ್ವಾನಿಸಿರುವ ಅಂಶವನ್ನು ಹೊರತಂದಿದ್ದಾರೆ.


ಪವಿತ್ರ ಕುಟುಂಬ: ಗುರುತು ಮತ್ತು ಗುರಿ


ವಿಶ್ವಗುರು ಫ್ರಾನ್ಸಿಸ್ ರವರು, ಯೇಸು, ಮರಿಯಾ ಮತ್ತು ಜೋಸೆಫ್ ರ ಪವಿತ್ರ ಕುಟುಂಬವನ್ನು ಪ್ರತಿಬಿಂಬಿಸುತ್ತಾ, ಇದರಿಂದಾಗಿ ಮಧ್ಯ ಪೂರ್ವ ನಾಡು ಪಾವನಗೊಂಡಿದೆ ಎಂದರು


ಅವರು ಮುಂದುವರೆದು, 'ಪವಿತ್ರ ಕುಟುಂಬವು,

ಮಧ್ಯವೂರ್ವ ದೇಶಗಳ ಕಥೋಲಿಕರ ಹೆಗ್ಗುರುತು ಮತ್ತು ಗುರಿಯ ಪ್ರತಿ ಛಾಯೆ' ಎಲ್ಲಕ್ಕಿ೦ತ ಮಿಗಿಲಾಗಿ ಅವರು 'ದೈವಮಾನವಾತಾರದ, ರಹಸ್ಯವನ್ನು ಕ್ರಿಸ್ತರ ಸುತ್ತ ಕಟ್ಟಲಾದ ಬದುಕು, ಮತ್ತು ಕ್ರಿಸ್ತರಿಗಾಗಿ ಜೀವಿಸಿದ ಬದುಕನ್ನು, ಸಂರಕ್ಷಿಸಿದೆ' ಎಂದರು.


ವಿಶ್ವಗುರುಗಳು ಪವಿತ್ರ ಕುಟುಂಬವನ್ನು, ' ದೀನತೆ

ಮತ್ತು ಸಮರ್ಪಣೆಯ ಪ್ರತೀಕವಾದ ರಹಸ್ಯ',

ಇದೊಂದು ಮಹತ್ತರವಾದದ್ದೂ ಹಾಗೂ ಚಿಕ್ಕದಾದದ್ದು, ಆದರೆ ಲೌಕಿಕ ಅಧಿಕಾರ ದಾಹತ್ವವನ್ನು ಅರಸುವವರು ಇದನ್ನು ಪೀಡಿಸುತ್ತಿದ್ದಾರೆ' ಎಂದು ಆರುಹಿದ್ದಾರೆ.


ದೈವೀಕರೆ ಪವಿತ್ರಾತ್ಮರ ಪ್ರೇರಣೆಯಿಂದಾಗಿ;


ವಿಶ್ವಗುರು ಫ್ರಾನ್ಸಿಸ್ ರವರು, ಮಧ್ಯ ಪೂರ್ವ ಪ್ರಾಂತಿಯ ಕಥೋಲಿಕರ ಪ್ರತಿಯೊಂದು ಸಮೂಹ ಸಮುದಾಯಗಳೂ ಪವಿತ್ರ ಕುಟುಂಬವನ್ನು ಪವಿತ್ರೀಕರಿಸುವತ್ತ, ತಮ್ಮ ದೈವೀ ಕರೆಯನ್ನು

ಈಡೇರಿಸಬೇಕೆಂಬುದಾಗಿ ಒತ್ತಾಯ ಪೂರ್ವಕವಾಗಿ ತಿಳಿಸಿದ್ದಾರೆ.


ಅವರು ತಮ್ಮ ಬರವಣಿಗೆ ಮುಂದುವರೆಸಿ," ಈ

ಪ್ರೀತಿ ತುಂಬಿದ ನಾಡಿನಲ್ಲಿ, ಕೇವಲ ತಮ್ಮ ನಾಗರೀಕತೆಯ ಹಕ್ಕುದಾರತೆಯ ಗುರುತಿಗಾಗಿ

ಸೆಣಸಾಡುವುದಷ್ಟೇ ಅಲ್ಲ,' ನಿಮ್ಮ ಜೀವನದ ಗುರಿಯು, ನಿಮ್ಮ ಪ್ರೇಷಿತ ಮೂಲದ ಸಾಕ್ಷಿಯಾಗಿರಬೇಕೆಂಬ ಮಾತನ್ನು ವ್ಯಕ್ತಪಡಿಸಿದ್ದಾರೆ.


ವಿಶ್ವಗುರುಗಳು ಈ ಪ್ರಾಂತ್ಯದಲ್ಲಿ ನಡೆದ, ಅಹಿಂಸಾತ್ಮಕ ಪಿಡಗನ್ನು ವಿಷಾದಿಸುತ್ತಾರೆ . ಮಾನವೀಯ ಯೋಜನೆಗಳು, ' ದೈವೀ ಬಲದ ಗುಣಾತ್ಮಕತೆ' ಯನ್ನು ಅವಲಂಬಿಸಿರಬೇಕು ಎಂಬ ವಿಷಯವನ್ನು ನೆನಪಿಸಿಕೊಂಡಿದ್ದಾರೆ.


" ವಿಷಮಯ ,ವೈಷಮ್ಯದ ಒರತೆಬಾವಿಗಳಲ್ಲಿ, ದಾಹವನ್ನು ತಣಿಸದಿರಿ" ಎಂದು ಹೇಳಿದ ಅವರು ಕಾಪ್ಟರ್ ಗಳು, ಮರೋನೈಟರುಗಳು, ಮೆಲಿ ಕೈಟರುಗಳು, ಸಿರಿಯಾಕರುಗಳು, ಅರ್ಮೆನಿಯನ್ನರು, ಚಾಲ್ಡೇನಿಯನ್ನರುಗಳು, ಮತ್ತು

ಲಾಟೀನರ್ ಗಳ ಮಹಾ ಸಂತರುಗಳು ತಮ್ಮ ಸಾಂಪ್ರದಾಯಕ್ಕನುಗುಣವಾಗಿ, ಆತ್ಮರ ಕಿರಣಗಳಿಂದ ತಮ್ಮ ಹೃದಯದ ನೆಲಗಟ್ಟನ್ನು, ಫಲಭರಿತ ನೀರಾವರಿಗೊಳಿಸಲಿ" ಎಂದಿದ್ದಾರೆ..


ವಿಶ್ವಾಸದ ಬೆಳಕು


ವಿಶ್ವಗುರುಗಳು ತಮ್ಮ ಸಂದೇಶವನ್ನು ಮುಕ್ತಾಯಗೊಳಿಸುತ್ತಾ, ಅನೇಕ ನಾಗರೀಕತೆಗಳ ತೊಟ್ಟಿಲಾದ ಮಧ್ಯಪೂರ್ವ ದೇಶಗಳು, ಅವುಗಳ ಹುಟ್ಟು ಹಾಗೂ ಅಂತ್ಯವನ್ನು ಜ್ಞಾಪಕಕ್ಕೆ ತಂದಿದ್ದಾರೆ. " ಹೀಗಿದ್ದರೂ, ಪಿತಾಮಹ ಅಬ್ರಹಾಂರಿಂದ ಆದಿಯಾದ ದೈವ ಸ್ವರವು ದೀಪವಾಗಿ ಬೆಳಗುತ್ತಾ, ಮತ್ತು ನಮ್ಮ ಪ್ರತಿ ಹೆಜ್ಜೆಯತ್ತ ಪ್ರಕಾಶಿಸುತ್ತಾ ಸಾಗಿದೆ" ಎಂದಿದ್ದಾರೆ.


ಅವರು ಮಧ್ಯ ಪೂರ್ವದ ಕಥೋಲಿಕರಲ್ಲಿ, 'ಮಾನವೀಯತೆಯ ಭ್ರಾತೃತ್ವ' ಪತಾಕೆಯೊಂದಿಗೆ ನಿರಂತರ ವಿಶ್ವಾಸದಿಂದ ಶಾಂತಿಗಾಗಿ ಪ್ರಾರ್ಥಿಸಲು ತಿಳಿಸಿದ್ದಾರೆ. 'ನೀವು ನಿಮ್ಮ ನೆಲದ ಉಪ್ಪು ಆಗಿರಿ' ಎಂದು ನುಡಿದ ವಿಶ್ವಗುರು ಧರ್ಮಸಭೆಯ ಸಾಮಾಜಿಕ ಧರ್ಮೋಪದೇಶದಂತೆ, 'ಸಮಾಜದ ಬದುಕಿನ ಸ್ವಾದವಾಗಿರಿ. ಸಾಮಾನ್ಯ ಒಳಿತನ್ನು ನಿರ್ಮಿಸಲು ನಿಮ್ಮ ಕಾಣಿಕೆಗಾಗಿ ಅರಸಿರಿ' ಎಂದು ಮಂಗಳ ಹಾಡಿದ್ದಾರೆ.


ಕನ್ನಡಕ್ಕೆ: ಮೇರಿ ಎಲಿಜಬೇತ್


27 ಜೂನ್ 2021, 12:48

204 views0 comments
bottom of page