top of page
Writer's pictureBangaloreArchdiocese

ಯುಎನ್: ಕೊವಿಡ್ 19 - 100 ಮಿಲ್ಲಿಯನ್ ಗಿಂತಲೂ ಹೆಚ್ಚು ಕಾರ್ಮಿಕರನ್ನು ಬಡತನಕ್ಕೆ ತಳ್ಳಿದೆ.



ವಿಶ್ವ ಉದ್ಯೋಗ ಮತ್ತು ಸಾಮಾಜಿಕ ದೃಷ್ಟಿಕೋನದ ಕುರಿತಾಗಿ ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) 2021ನೇ ವರದಿಯು ಕಾರ್ಮಿಕ ಮಾರುಕಟ್ಟೆಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಒಳಗೊಂಡಿದೆ. ಇತ್ತೀಚಿಗೆ ಬಿಡುಗಡೆಯಾದ ವರದಿಯ ಸೂಚನೆಯಂತೆ ಸಾಂಕ್ರಮಿಕ ರೋಗ ಸಂಭವಿಸದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಇಡೀ ವಿಶ್ವದಲ್ಲಿ ಉದ್ಯೋಗಗಳ ಏರಿಕೆ ಕಂಡು ಬರುತ್ತಿತ್ತು.


ವಾಟಿಕನ್ ವಾರ್ತೆ ಸಿಬ್ಬಂದಿ ಬರಹಗಾರರಿಂದ


ಕೋವಿಡ್-19 ಸಾಂಕ್ರಮಿಕ ರೋಗದಿಂದ ಉಂಟಾದ ಅಡೆತಡೆಗಳು ವಿಶ್ವದಾದ್ಯಂತ 100 ಮಿಲ್ಲಿಯನ್ ಹೆಚ್ಚು ಕಾರ್ಮಿಕರನ್ನು ಬಡತನಕ್ಕೆ ತಳ್ಳಿದೆ, ಎಂದು ಯುಎನ್ ಕಾರ್ಮಿಕ ಸಂಸ್ಥೆ ಬುಧವಾರ ಬಿಡುಗಡೆಯಾದ ವರದಿಯಲ್ಲಿ ತಿಳಿಸಿದೆ. 2019ಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅಂದಾಜು 108 ಮಿಲಿಯನ್ ಕಾರ್ಮಿಕರನ್ನು ಮಧ್ಯಮ ಮತ್ತು ಕಡುಬಡವರು ಎಂದು ವರ್ಗೀಕರಿಸಲಾಗಿದೆ. ಇದು ಅವರ ಕುಟುಂಬಗಳಲ್ಲಿ ದಿನಕ್ಕೊಬ್ಬ ವ್ಯಕ್ತಿಗೆ 3.20 ಡಾಲರ್ ಕಿಂತ ಕಡಿಮೆ ವೆಚ್ಚದಲ್ಲಿ ಬದುಕುಳಿಯುತ್ತಿದ್ದಾರೆ ಎಂದು ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವಾರ್ಷಿಕ ವಿಶ್ವ ಉದ್ಯೋಗ ಮತ್ತು ಸಾಮಾಜಿಕ ದೃಷ್ಟಿಕೋನದ ವರದಿ ಈ ರೀತಿ ಉಲ್ಲೇಖಿಸಿದೆ.


ಸಾಂಕ್ರಮಿಕ ರೋಗದ ಸಮಯದಲ್ಲಿ ಕಾರ್ಯಗತಗೊಳಿಸಿದ ಲಾಕ್ಡೌನ್ ಕ್ರಮಗಳ ಮೂಲಕ ಕಳೆದು ಹೋದಂತಹ ಕೆಲಸಗಳ ಸಮಯ ಹಾಗೂ ಸಂಪೂರ್ಣ ಉದ್ಯೋಗ ನಷ್ಟಗಳು ಹಾಗೂ ಉತ್ತಮ ಗುಣಮಟ್ಟದ ಉದ್ಯೋಗಗಳ ಕುಸಿತ ಇವೆಲ್ಲವೂ ಮಾರ್ಮಿಕ ಬಡತನದ ಏರಿಕೆಯ ಕಾರಣಗಳಾಗಿವೆ.


ದುಡಿಯುವ ಬಡತನದ ನಿರ್ಮೂಲನೆಗೆ ಐದು ವರ್ಷ ಪ್ರಗತಿ ರದ್ದುಗೊಳಿಸಲಾಗಿದೆ, ಏಕೆಂದರೆ ಕೆಲಸಮಾಡುವ ಬಡತನದ ದರಗಳು ಈಗ 2015ಕ್ಕೆ ಮರಳಿದೆ ಎಂದು ವರದಿ ತಿಳಿಸಿದೆ.


ಕಾರ್ಮಿಕರ ಮಾರುಕಟ್ಟೆಗೆ ತೀವ್ರ ನಷ್ಟ


ಸಾಂಕ್ರಮಿಕ ರೋಗದಿಂದ ಉಂಟಾದ ಕಾರ್ಮಿಕರ ಮಾರುಕಟ್ಟೆಯ ಬಿಕ್ಕಟ್ಟು ಇನ್ನು ಮುಗಿಯುವುದಿಲ್ಲ ಮತ್ತು ಉದ್ಯೋಗವೂ 2023 ರವರೆಗೆ ಪೂರ್ವ ಸಾಂಕ್ರಮಿಕ ಮಾರುಕಟ್ಟೆ ಮರಳುವ ನಿರೀಕ್ಷೆ ಇಲ್ಲವೆಂದು ಐ.ಎಲ್.ಒ (ILO) ಎಚ್ಚರಿಸಿದೆ.


ಸಾಂಕ್ರಮಿಕ ರೋಗವು ಸಂಭವಿಸಿದ್ದಲ್ಲಿ ಈ ಪ್ರಕ್ರಿಯೆಯನ್ನು ಹೋಲಿಸಿದರೆ 2021ರ ಕೊನೆಯಲ್ಲಿ ಗ್ರಹವು ಇನ್ನೂ 75 ಮಿಲ್ಲಿಯನ್ ಉದ್ಯೋಗಗಳನ್ನು ಕ್ಷೀಣಿಸುತ್ತದೆ. ಹಾಗೂ ಮುಂದಿನ ವರ್ಷದ ಅಂತ್ಯದವರೆಗೆ ಅಂದಾಜು 23 ಬಿಲ್ಲಿಯನ್ ಉದ್ಯೋಗಗಳು ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತದೆ.


ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮತ್ತು ದೊಡ್ಡ ಪ್ರಮಾಣ ಹಣಕಾಸಿನ ಕರ್ಚಿನ ಪ್ರಗತಿಯೊಂದಿಗೆ ಅಸಮ ಆರ್ಥಿಕ ಚೇತರಿಕೆಯ ಪ್ರಕ್ರಿಯೆಯು 2021ರ ವಿಧಿಯ ಭಾಗದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ.


ಮೊದಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳು ಇನ್ನು ಹದಗೆಡುತ್ತಿದೆ.


ಕೋವಿಡ್ 19 ಸಾಂಕ್ರಮಿಕ ಕಾರ್ಮಿಕ ಮಾರುಕಟ್ಟೆಯಲ್ಲಿ, ಮೊದಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳು ಉಲ್ಬಣಗೊಳಿಸಿದೆ ಎಂದು ವರದಿ ಮತ್ತಷ್ಟು ತಿಳಿಸಿದೆ. ತಮ್ಮಲ್ಲಿ ಕಡಿಮೆ ಜಾಣ್ಮೆ ಉಳ್ಳಂತಹ ಕಾರ್ಮಿಕರು,ಯುವಕರು, ಮಹಿಳೆಯರು ಮತ್ತು ವಲಸಿಗರು ಹೆಚ್ಚು ಬಾಧಿತರಾಗಿದ್ದಾರೆ. ಅನೇಕ ಸೂಕ್ಷ್ಮಯುಳ್ಳ ಮತ್ತು ಸಣ್ಣದಾದ ಉದ್ಯೋಗಗಳು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತವೆ.


ವಾಸ್ತವವಾಗಿ ಸರಿಸುಮಾರು ಎರಡು ಶತಕೋಟಿ ಕಾರ್ಮಿಕರು ಜಾಗತಿಕ ಉದ್ಯೋಗಿಗಳ ಪೈಕಿ 60.1 ಪ್ರತಿಶತದಷ್ಟು ಜನರು ಅನೌಪಚಾರಿಕವಾಗಿ 2019ರಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಅನೌಪಚಾರಿಕ ಉದ್ಯೋಗಿಗಳು ತಮ್ಮ ಪಚಾರಿಕ ಪ್ರತಿರೂಪಗಳಿಗಿಂತ ಮೂರು ಪಟ್ಟು ಹೆಚ್ಚು ಮತ್ತು ಸ್ವಯಂ ಉದ್ಯೋಗಿ ಗಳಿಗಿಂತ 1.6ಗಿಂತಲೂ ಹೆಚ್ಚು ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹಲವರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ.


ಈ ಬಿಕ್ಕಟ್ಟು ಲಿಂಗ ಸಮಾನತೆಯ ಪ್ರಗತಿಯನ್ನು ಅಪಾಯಕ್ಕೆ ತಳ್ಳುವ ಸಂಕಷ್ಟವನ್ನು ಉಂಟುಮಾಡಿದೆ, ಏಕೆಂದರೆ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ದರದಲ್ಲಿ ಕಾರ್ಮಿಕ ಮಾರುಕಟ್ಟೆಯಿಂದ ಹೊರಗುಳಿದಿದ್ದಾರೆ, ಮತ್ತು ಅನೇಕರು ಶಾಲೆಯಿಂದ ಹೊರಗಿರುವ ಮಕ್ಕಳನ್ನು ನೋಡಿಕೊಳ್ಳುವ ಪಾತ್ರವನ್ನು ವಹಿಸಿಕೊಂಡಿದ್ದಾರೆ, ಇದರ ಪರಿಣಾಮವಾಗಿ ಅವರು ಪಾವತಿಸದ ಕೆಲಸದ ಸಮಯ ಹೆಚ್ಚಳವಾಗಿದೆ .


ಅದೇ ಸಮಯದಲ್ಲಿ, ಅನೇಕ ವಲಸೆ ಕಾರ್ಮಿಕರು ತಮ್ಮ ಉದ್ಯೋಗದ ಮುಕ್ತಾಯವನ್ನು ಅನುಭವಿಸಿದ್ದಾರೆ, ಜೊತೆಗೆ ವೇತನವನ್ನು ಪಾವತಿಸದಿರುವುದು ಅಥವಾ ಅವರ ವೇತನವನ್ನು ವಿಳಂಬವಾಗಿ ಪಾವತಿಸುವುದು. ಅವರಲ್ಲಿ ಅನೇಕರು ತಮ್ಮ ಆದಾಯ ನಷ್ಟಕ್ಕೆ ಕಾರಣವಾಗುವ ಸಾಮಾಜಿಕ ಸಂರಕ್ಷಣಾ ಪ್ರಯೋಜನಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ.



ಮಾನವ ಕೇಂದ್ರಿತ ನೀತಿ ಕಾರ್ಯಸೂಚಿ ಅಗತ್ಯವಿದೆ.


ಸಂದಿಗ್ಧ ಪರಿಸ್ಥಿತಿಯ ಬೆಳಕಿನಲ್ಲಿ, ವರದಿಯು ನಾಲ್ಕು ಅಂಶಗಳೊಂದಿಗೆ ರಚಿಸಲಾದ ಸಮಗ್ರ ಮತ್ತು ಏಕೀಕೃತ ಮಾನವ ಕೇಂದ್ರಿತ ನೀತಿ ಕಾರ್ಯಸೂಚಿಯನ್ನು ಶಿಫಾರಸು ಮಾಡುತ್ತದೆ:


ಮೊದಲನೆಯದಾಗಿ, ವಿಶಾಲ ಆಧಾರಿತ ಆರ್ಥಿಕ ಬೆಳವಣಿಗೆಯ ಉತ್ತೇಜನ ಮತ್ತು ಉತ್ತಮ ಉದ್ಯೋಗಗಳನ್ನು ಒದಗಿಸಬಲ್ಲ ಮತ್ತು ಲಿಂಗ ಸಮಾನತೆ ಮತ್ತು ಕಂಪನಶೀಲ ಕಾರ್ಮಿಕ ಮಾರುಕಟ್ಟೆಯನ್ನು ಬೆಂಬಲಿಸುವಂತಹ ಕ್ಷೇತ್ರಗಳ ಹೂಡಿಕೆಯ ಮೂಲಕ ಉತ್ಪಾದಕ ಉದ್ಯೋಗವನ್ನು ಸೃಷ್ಟಿಸುವುದು.


ಹೆಚ್ಚುವರಿಯಾಗಿ, ಕಾರ್ಮಿಕ ಮಾರುಕಟ್ಟೆ ನೀತಿಗಳು ಮತ್ತು ಸಾರ್ವಜನಿಕವಾಗಿ ಒದಗಿಸಿದ ಗುಣಮಟ್ಟದ ಆರೈಕೆ ಸೇವೆಗಳ ಮೂಲಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚು ಬಾಧಿತರಾದವರಿಗೆ ಮನೆಯ ಆದಾಯ ಮತ್ತು ಕಾರ್ಮಿಕ ಮಾರುಕಟ್ಟೆ ಪರಿವರ್ತನೆಗಳನ್ನು ಬೆಂಬಲಿಸುವ ಅವಶ್ಯಕತೆಯಿದೆ.


ಮಾನವ ಕೇಂದ್ರಿತ ಚೇತರಿಕೆ ಸಾಮಾಜಿಕ ಸಂರಕ್ಷಣಾ ವ್ಯವಸ್ಥೆಗಳನ್ನು ಹೆಚ್ಚಿಸುವ ಮೂಲಕ ಮತ್ತು ಎಲ್ಲಾ ಕಾರ್ಮಿಕರಿಗೆ ಸುರಕ್ಷಿತ ಮತ್ತು ಆರೋಗ್ಯ ಕೆಲಸದ ಪರಿಸ್ಥಿತಿಗಳನ್ನು ಖಾತರಿಪಡಿಸುವ ಮೂಲಕ ಅಂತರ್ಗತ, ಸುಸ್ಥಿರ ಮತ್ತು ಸ್ಥಿತಪ್ರಜ್ಞ ಆರ್ಥಿಕ ಬೆಳವಣಿಗೆಯ ಸಾಂಸ್ಥಿಕ ಅಡಿಪಾಯವನ್ನು ಬಲಪಡಿಸಬೇಕು.


ಕೊನೆಯದಾಗಿ, ಮಾನವ ಕೇಂದ್ರಿತ ಚೇತರಿಕೆ ಕಾರ್ಯತಂತ್ರಗಳ ಪರಿಣಾಮಕಾರಿ ಅನುಷ್ಠಾನವನ್ನು ಉತ್ತೇಜಿಸಲು ಸರ್ಕಾರಗಳು, ಉದ್ಯೋಗದಾತರು ಮತ್ತು ಕಾರ್ಮಿಕರ ಸಂಘಗಳ ನಡುವಿನ ಸಾಮಾಜಿಕ ಸಂವಾದವು ಹೆಚ್ಚಿನ ರೀತಿಯಲ್ಲಿ ನಡೆಯಬೇಕೆಂದು ವರದಿ ಹೇಳುತ್ತದೆ.


೩ ಜೂನ್ ೨೦೨೧

ಕನ್ನಡಕ್ಕೆ: ರಾಬರ್ಟ್ ಕೆನಡಿ

20 views0 comments

Comments


bottom of page