top of page

ಕೋವಿಡ್ ಪೀಡಿತ ದೇಶಗಳಿಗೆ ವಿಶ್ವಗುರುಗಳ ದಾನ ದೇಣಿಗೆ

  • Writer: BangaloreArchdiocese
    BangaloreArchdiocese
  • Jun 19, 2021
  • 1 min read

ree

ವಿಶ್ವಗುರು ಫ್ರಾನ್ಸಿಸ್ ಸಾಂಕ್ರಾಮಿಕ ರೋಗದೊಂದಿಗೆ ಹೋರಾಡುತ್ತಿರುವ ರಾಷ್ಟ್ರಗಳಿಗೆನೀಡುತ್ತಿರುವ ನೆರವಿನ ಗುರುತಾಗಿ ವಿಶ್ವಗುರುಗಳ ಧಾನ ಧರ್ಮ- ದೇಣಿಗೆಗಳ ಕಚೇರಿಯು 9 ದೇಶಗಳಿಗೆ ವೆಂಟಿಲೇಟರ್ ಮತ್ತು ವೈದ್ಯಕೀಯ ಉಪಕರಣಗಳನ್ನು ಕಳುಹಿಸಿದೆ.


ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ


ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದಲೂ ವಿಶ್ವದ ರಾಷ್ಟ್ರಗಳನ್ನು, ಜೀವಗಳನ್ನು, ಆರ್ಥಿಕತೆಯನ್ನು ಅದರಲ್ಲೂ ಕಡು ಬಡವರನ್ನು ಕಾಡುತ್ತಾ ಮುಂದುವರಿದಿರುವ ಕೋವಿಡ್-19, 178 ದಶಲಕ್ಷ ಕ್ಕೂ ಹೆಚ್ಚು ಜನರನ್ನು ಸೋಂಕಿತರನ್ನಾಗಿಸಿದೆ ಹಾಗೂ 3.8 ದಶಲಕ್ಷ ಜನರ ಸಾವಿಗೆ ಕಾರಣವಾಗಿದೆ

ಅತ್ತ ಶ್ರೀಮಂತ ದೇಶಗಳಲ್ಲಿ ಲಸಿಕೆ ಅಭಿಯಾನವು ತೀವ್ರತೆ ಪಡೆಯುತ್ತಾ ಸಾಗುತ್ತಿರುವಂತೆ, ಇತ್ತ ಸೃಷ್ಟಿಯಾಗಿರುವ ಆರೋಗ್ಯ ಬಿಕ್ಕಟ್ಟು ಅನೇಕ ಬಡ ಪ್ರದೇಶಗಳ ಜನಸಂಖ್ಯೆಯನ್ನು ಕಂಗೆಡಿಸಿದೆ.


ಮತ್ತೊಮ್ಮೆ ವಿಶ್ವಗುರು ಫ್ರಾನ್ಸಿಸ್ ಅವರ ಹೃದಯವು ಕಟ್ಟ ಕಡೆಯ, ಕನಿಷ್ಠವೆಂದೆನಿಸಿರುವ ಹಾಗೂ ಲೋಕದ ದೃಷ್ಟಿಯಲ್ಲಿ ಕಳೆದುಹೋದವುಗಳತ್ತ ಚಾಚಿದೆ .


ವಿಶ್ವಗುರುಗಳ ಕಾಳಜಿ ಹಾಗೂ ಆರೈಕೆ

ವಿಶ್ವಗುರುಗಳ ಧಾನ ಧರ್ಮ- ದೇಣಿಗೆಗಳ ಕಚೇರಿಯು ಇದೇ ಗುರುವಾರ ಮತ್ತೊಮ್ಮೆ ವೆಂಟಿಲೇಟರ್ ಗಳನ್ನು ಖರೀದಿಸಿ ಮತ್ತು ಇತರ ಜೀವ ರಕ್ಷಕ ವೈದ್ಯಕೀಯ ಸಲಕರಣೆಗಳನ್ನು ಹಲವಾರು ಬಡ ದೇಶಗಳಿಗೆ ರವಾನಿಸಿತು ಎಂಬ ಮಾಹಿತಿಯನ್ನು ವಿಶ್ವಗುರುಗಳ ಅಧಿಕೃತ ದಾನ ಧರ್ಮಾಧಿಕಾರಿಗಳಾಗಿರುವ ಕಾರ್ಡಿನಲ್ ಕೊನ್ರಾಡ್ ಕ್ರಜೆವ್ಸ್ಕಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಈ ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ಸಲಕರಣೆಗಳನ್ನು ರಾಜತಾಂತ್ರಿಕ ಅಂಚೆಗಳ ಕೊರಿಯರ್ ಮೂಲಕ 9 ದೇಶಗಳ ಪ್ರೇಷಿತ ರಾಯಭಾರ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಆ ಪ್ರೇಷಿತ ರಾಯಭಾರಿಗಳು ಸ್ಥಳೀಯ ಧರ್ಮಸಭೆಗಳ ಅಗತ್ಯಗಳ ಅನುಗುಣವಾಗಿ ಅವುಗಳನ್ನು ಅಲ್ಲಿನ ಆಸ್ಪತ್ರೆಗಳಿಗೆ ವಿತರಿಸುತ್ತಾರೆ.


ನೆರವಿನ ಅಗತ್ಯವಿರುವ ರಾಷ್ಟ್ರಗಳು

ವೆಂಟಿಲೇಟರ್‌ಗಳನ್ನು ಕಳುಹಿಸಲಾದ ರಾಷ್ಟ್ರಗಳು ಹಾಗೂ ಸಂಖ್ಯೆ: ಬ್ರೆಜಿಲ್ - 6, ಕೊಲಂಬಿಯಾ - 5, ಅರ್ಜೆಂಟೀನಾ - 5, ಭಾರತ - 6, ಚಿಲಿ - 4, ದಕ್ಷಿಣ ಆಫ್ರಿಕಾ - 4, ಬೊಲಿವಿಯಾ - 3, ಸಿರಿಯಾ -3, ಮತ್ತು ಪಪುವಾ ನ್ಯೂಗಿನಿಯಾ -2.


ಏಪ್ರಿಲ್ ತಿಂಗಳಲ್ಲಿ ಕೊಲಂಬಿಯಾ ಮತ್ತು ಆಗಸ್ಟ್ ತಿಂಗಳಲ್ಲಿ ಬ್ರೆಜಿಲ್ ದೇಶಕ್ಕೆ ಹಣಕಾಸಿನ ನೆರವು ನೀಡಿದಂತೆ ವಿಶ್ವದ ಅನೇಕ ಕಡೆಗಳಿಗೆ ಆರ್ಥಿಕ ಮತ್ತು ವೈದ್ಯಕೀಯ ಸಲಕರಣೆಗಳ ದೇಣಿಗೆಯ ನೆರವನ್ನು ವಿಶ್ವ ಗುರು ಫ್ರಾನ್ಸಿಸ್ ನೀಡಿದ್ದಾರೆ.


ಸದ್ಯದ ಕೋವಿಡ್ -19 ಪರಿಸ್ಥಿತಿಯಲ್ಲಿ ವಿಶ್ವದ 3.8 ದಶ ಲಕ್ಷ ಸಾವುಗಳಲ್ಲಿ 879,000 ಕ್ಕೂ ಹೆಚ್ಚು ಸಾವುಗಳು ಬ್ರೆಜಿಲ್ ಮತ್ತು ಭಾರತದಲ್ಲಿ ಜಂಟಿಯಾಗಿ ಸಂಭವಿಸಿದೆ.


ಆದರೆ 34 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 616,000 ಕ್ಕೂ ಹೆಚ್ಚು ಸಾವುಗಳನ್ನು ಕಂಡ ಅಮೆರಿಕವು ಈ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.


18 ಜೂನ್ 2021, 13:47


ಕನ್ನಡಕ್ಕೆ: ಪ್ರಶಾಂತ್ ಇಗ್ನೇಷಿಯಸ್

Comments


ADDRESS

Archbishop’s House

75 Millers Road,

Bengaluru – 560 046

Karnataka

India

JOIN THE ARCHDIOCESAN 
MAILING LIST
  • Grey Facebook Icon
  • Grey Instagram Icon

QUICK LINKS : CCBI | VATICAN 

© 2025 ALL RIGHTS RESERVED ARCHDIOCESE OF BANGALORE (ARCHDIOCESAN COMMUNICATIONS CENTER & AVE STUDIOS) | DESIGNED BY WISE MEDIA 

bottom of page