top of page

ಕಥೋಲಿಕ ಸಂಸ್ಥೆಗಳು ಧರ್ಮಾಧ್ಯಕ್ಷರುಗಳ ಪಾಲನಾ ನೈತಿಕ ನಾಯಕತ್ವವನ್ನು ಅಪೇಕ್ಷಿಸುತ್ತವೆ.


ಯು.ಎಸ್, ಮೆಕ್ಸಿಕೊ ಮತ್ತು ಮಧ್ಯ ಅಮೇರಿಕದಲ್ಲಿನ ಜನರ ವಲಸೆಯ ವಿಚಾರವಾಗಿ ಹಲವಾರು ಕಥೋಲಿಕ ಸಂಸ್ಥೆಗಳು ಕಥೋಲಿಕ ಧರ್ಮಾಧ್ಯಕ್ಷರುಗಳು ತುರ್ತು ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸುತ್ತಿವೆ.


ವ್ಯಾಟಿಕನ್ ನ್ಯೂಸ್‌ನ ಸಿಬ್ಬಂದಿ ಬರಹಗಾರರಿಂದ.


ಯು.ಎಸ್, ಮೆಕ್ಸಿಕೊ ಮತ್ತು ಮಧ್ಯ ಅಮೇರಿಕದಲ್ಲಿನ ಸುಮಾರು ೧೬೨ ಕಥೋಲಿಕ ಸಂಸ್ಥೆಗಳು, ತಮ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ವಲಸೆ ಹಾಗು ಪಲಾಯನದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲಾ ಕಥೋಲಿಕ ಧರ್ಮಾಧ್ಯಕ್ಷರುಗಳಿಗೆ ನಮ್ಮ ಸಹೋದರ ಸಹೋದರಿಯರ ಕೂಗಿಗೆ ತಮ್ಮ ದಿಟ್ಟ ನಾಯಕತ್ವದೊಂದಿಗೆ ಪ್ರತಿಕ್ರಿಯಿಸುವಂತೆ ಕೇಳಕೊಳ್ಳುತ್ತಿವೆ.


ಹಲವಾರು ಸಂಸ್ಥೆಗಳ ಒಕ್ಕೂಟವು ಒಮ್ಮತದಿಂದ ಸಹಿಮಾಡಿದ ಪತ್ರದಲ್ಲಿ, ಯು.ಎಸ್ ನ ಧರ್ಮಾಧ್ಯಕ್ಷರುಗಳು, ಮೆಕ್ಸಿಕೊದ ಕಾರ್ಡಿನಲ್ ರೊಗೇಲಿಯೊ ಕ್ಯಾಬ್ರೆರಾ ಲೊಪೇಜ್ ಗ್ವಾಟೆಮಾಲದ ಮಹಾಧರ್ಮಾಧ್ಯಕ್ಷ ಗುನ್ಸಾಲೋ ಡೆ ವಿಲ್ಲಾ ವ್ಯಾಸ್ಕೇಜ, ಹೊಂದುರಸ್‌ನ ಮಹಾಧರ್ಮಾಧ್ಯಕ್ಷ ಏಂಜೆಲ್ ಗರಾಚನಾ ಪರೇಜ ಮತ್ತು ಎಲ್ ಸೆಲ್ವಡೋರ್‌ನ ಮಹಾಧರ್ಮಾಧ್ಯಕ್ಷ ಜೋಸ್ ಲುಯೀಸ್ ಎಸ್ಕೋಬರ್ ಅಲಾಸ್ ಹಾಗು ಹಲವಾರು ಧರ್ಮಾಧ್ಯಕ್ಷರಲ್ಲಿ ಮನವಿ ಸಲ್ಲಿಸಲಾಯಿತು.


ಯು.ಎಸ್‌ನಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ವಲಸಿಗರ ನೋವು ಹಾಗು ದುಖ಼ವನ್ನು ನಿವಾರಿಸುವ ನಿಟ್ಟಿನಲ್ಲಿ, ವಲಸೆಯ ಮೂಲ ಕಾರಣಗಳನ್ನು ಮಾನವೀಯವಾಗಿ ಪರಿಹರಿಸಿ ಅವರನ್ನು ಪೌರತ್ವವದ ಹಾದಿಯಲ್ಲಿ ನಡೆಯುವಂತೆ ಮಾಡುವ ಯು.ಎಸ್‌ನ ಗುರಿಯನ್ನು ಸಂಸ್ಥೆಗಳು ಎತ್ತಿ ತೋರಿಸುತ್ತಿವೆ.


ಈ ಬೇಸಿಗೆ ಹಾಗು ಶರತ್ಕಾಲದಲ್ಲಿ ಕಥೋಲಿಕ ವಲಸೆಯ ಆಧ್ಯತೆಗಳಲ್ಲಿ ಪ್ರಗತಿ ಸಾಧಿಸುವ ಒಂದು ಉತ್ತಮ ಅವಕಾಶವಿದೆ, ಈ ಮಹತ್ವದ ಕಾರ್ಯಕ್ಕೆ ಪಾಲನೆಯುಳ್ಳ ಹಾಗು ನೈತಿಕ ನಾಯಕತ್ವದ ಬೆಂಬಲ ಅವಶ್ಯಕ ಮತ್ತು ಈ ಯೋಜನೆಯ ನಿಟ್ಟಿನಲ್ಲಿ ದೇವಾಲಯಗಳ ಪ್ರಾದೇಶಿಕ, ಜಾಗತಿಕ ಐಕ್ಯತೆಯ ಅವಶ್ಯಕತೆಯೂ ಇದೆಯೆಂದು ವಿಶ್ಲೇಶಿಸಲಾಗಿದೆ.


ವಲಸೆಗೆ ಪಾಲನೆ ಹಾಗೂ ಮಾನವೀಯತೆಯ ಪ್ರತಿಕಿಯೆ ಬೇಕು.


ಮಧ್ಯ ಅಮೇರಿಕ ಹಾಗು ಯು.ಸ್ ನ ಕಡೆಗೆ ವಲಸೆ ಬರುತ್ತಿರುವ, ಬರಗಾಲ, ಹವಾಮಾನ ವೈಪರಿತ್ಯ, ರಾಜಕೀಯ ಅಸ್ಥಿರತೆ, ಬಡತನ ಹಾಗೂ ಸಾಂಕ್ರಾಮಿಕ ರೋಗಗಳ ಪರಿಣಾಮಗಳಿಂದ ಉಂಟಾದ ವಲಸಿಗ ಜನರನ್ನು, "ತುರ್ತು ಪರಿಸ್ಥಿತಿ ಮತ್ತು ಅವಕಾಶಗಳನ್ನರಿಸಿದಂತೆ" ಪರಿಗಣಿಸಿ ಮಾನವೀಯ ಪ್ರತಿಕ್ರಿಯೆಯಲ್ಲಿ ಪಾಲನೆ ಮಾಡುವಂತೆ ಈ ಪತ್ರದಲ್ಲಿ ಅಪೇಕ್ಷಿಸಲಾಗಿದೆ.


ವಲಸಿಗರು ತಮ್ಮ ಅಗತ್ಯತೆಗಳಿಗಾಗಿ ಎಲ್ಲಾ ಪ್ರದೇಶಗಳಲ್ಲಿ ಅಲೆಯುತ್ತಿದ್ದಾರೆ, ಅವರಿಗೆ ಪಾಲನೆ, ಆರೈಕೆ ಹಾಗು ಆಶ್ರಯದ ಅತ್ಯಾವಶ್ಯಕತೆ ಇರುತ್ತದೆ, ಅದಲ್ಲದೆ ಅವರು ಮರಳಿ ತಮ್ಮ ಸಮುದಾಯದಲ್ಲಿ ಮಕ್ಕಳು ಮತ್ತು ಪರಿವಾರದೊಂದಿಗೆ ಪುನ಼ ಹೊಸ ಜೀವನವನ್ನು ಪ್ರಾರಂಭಿಸಲು ಪ್ರೇರೇಪಿಸಬೇಕೆಂದು ಕೂಡ ಒಕ್ಕೂಟವು ಪತ್ರದಲ್ಲಿ ಅಪೇಕ್ಷಿಸಿದೆ.


ಈ ನಿಟ್ಟಿನಲ್ಲಿ ಕ್ರೈಸ್ತ ದೇವಾಲಯಗಳು, ವಲಸಿಗರನ್ನು ರಕ್ಷಿಸಿ, ಕಾನೂನಾತ್ಮಕ ಮಾರ್ಗಗಳಿಂದ ಅವರಿಗೆ ನ್ಯಾಯಭಧ್ಧ ಹಕ್ಕುಗಳ ಭೋದನೆ ನೀಡಿ, ಸುಸಂಭಧ್ಧಿತ ಪ್ರಾದೇಶಿಕ ವಲಸೆಯ ವ್ಯವಸ್ಥೆಯನ್ನು ಅಭಿವೃಧ್ಧಿ ಪಡಿಸುವುದರ ಮೂಲಕ ಅವರು ತಮ್ಮ ಪರಿವಾರದೊಂದಿಗೆ ಒಂದಾಗಿ ಕೆಲಸ ಕಾರ್ಯಕಳಲ್ಲಿ ತೊಡಗಿ ಜೀವನವನ್ನು ಪುನಾರಂಭಿಸಲು ನೆರವು ನೀಡುತ್ತವೆ.


ವಲಸಿಗರನ್ನು ಪೌರತ್ವದ ಹಾದಿಯಲ್ಲಿ ನಡೆಸುವುದು.

ಯು.ಎಸ್‌ನ ಇತ್ತೀಚಿನ ರಾಜಕೀಯ ನಡೆಗಳನ್ನು ಗಮನದಲ್ಲಿಟ್ಟುಕೊಂಡು, ದಾಖಲೆರಹಿತ ವಲಸಿಗರಿಗೆ ಪೌರತ್ವದ ಮಾರ್ಗದರ್ಶನವನ್ನು ನೀಡುವ ಧೀರ್ಘಕಾಲದ ಗುರಿಯಲ್ಲಿ ಪ್ರಗತಿಯನ್ನು ಸಾಧಿಸಲು ಲಭ್ಯವಿರುವ ಎಲ್ಲಾಸಾಧನಗಳನ್ನು ಬಳಸುವ ಮಹತ್ವದ ವಿಷಯಗಳನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.


ನಮ್ಮ ಧರ್ಮಸಭೆಗಳಲ್ಲಿ ಅನೇಕ ಕುಟುಂಬಗಳು ಯು.ಎಸ್ ನ ಕಾನೂನಿನಡಿ ಯಾವುದೇ ಸ್ಥಾನಮಾನವಿಲ್ಲದೆ ಅಭದ್ರತೆಯನ್ನು ಅನುಭವಿಸುತ್ತಿವೆ ಎಂದು ಕಥೋಲಿಕ ಗುಂಪುಗಳು ತಿಳಿಸಿವೆ.


ಆಲ್ಲದೆ, ಈ ಪತ್ರದಲ್ಲಿ ಎಲ್ಲಾ ಧರ್ಮಾಧ್ಯಕ್ಷರುಗಳನ್ನು ಉದ್ದೇಶಿಸಿ, ಧರ್ಮಾಧ್ಯಕ್ಷರುಗಳ ನಾಯಕತ್ವವು ವಲಸಿಗರಲ್ಲಿರುವ ವೈರತ್ವ ಹಾಗೂ ರಾಕ್ಷಸೀಯ ಗುಣಗಳನ್ನು ಪರಿಹಿರಿಸಿ, ಅವರು ಸ್ವಸಮುದಾಯದವರೊಂದಿಗೆ, ಸ್ನೇಹಿತರೊಂದಿಗೆ, ನೆರೆಹೊರೆಯವರೊಂದಿಗೆ ಮತ್ತು ತಮ್ಮ ಕುಟುಂಬಗಳಲ್ಲಿ ಅನ್ಯೋನ್ಯವಾಗಿ ಸಂಪೂರ್ಣ ಸಾಮಾಜಿಕವಾಗಿ ಬಾಳುವಂತೆ ಮಾಡಲು ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಉಲ್ಲೇಖಿಸಲಾಗಿದೆ.


ಜನರನ್ನು ವಲಸೆಹೋಗುವಂತೆ ಒತ್ತಾಯಿಸುವ ಪರಿಸ್ಥಿತಿಗಳನ್ನು ನಿಭಾಯಿಸುವುದು.

ಜನರಿಗೆ ವಲಸೆಹೋಗುವಂತೆ ಒತ್ತಾಯಿಸುವ ಪರಿಸ್ಥಿತಿಗಳನ್ನು ನಿಭಾಯಿಸುವ ಕುರಿತಂತೆ, ವಲಸೆಯ ಮೂಲಕಾರಣಗಳನ್ನು ನಿಭಾಯಿಸಲು ಮುಂಬರುವ ಐದು ವರ್ಷಗಳಲ್ಲಿ ಸುಮಾರು ನಾಲ್ಕು ಬಿಲಿಯನ್ ಡಾಲರಗಳಷ್ಟು ಮೊತ್ತವನ್ನು ಯು.ಎಸ್ ಕಾಯ್ದಿರಿಸಿದೆ.


ಸ್ಥಳೀಯ ಕಥೋಲಿಕ ಸಂಸ್ಥೆಗಳು ಹಾಗು ಅದರ ಪಾಲುದಾರರು ಈ ಎಲ್ಲಾ ಸವಲತ್ತು ಮತ್ತು ಸಂಪನ್ಮೂಲಗಳನ್ನು ಅಗತ್ಯವಿರುವ ಜನರು ಮತ್ತು ಸಮುದಾಯಗಳಿಗೆ ತಲುಪುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೊ, ಹೊಂಡುರಾಸ್ಗಳಲ್ಲಿ ಈ ಎಲ್ಲಾ ಸಂಸ್ಥೆಗಳು ಕಾರ್ಯನಿರ್ವಹಿಸತ್ತಿವೆ. ಗ್ವಾಟೆಮಾಲಾ ಮತ್ತು ಸಾಲ್ವಡಾರ್‌ಗಳು ಈ ಯೋಜನೆಗಳಿಗೆ ಸಾಕಷ್ಟು ಉತ್ತೇಜಿಸುತ್ತಿವೆ.


ಧರ್ಮಾಧ್ಯಕ್ಷರುಗಳ ನಾಯಕತ್ವ.

ನಿಯಮ ಉಲ್ಲಂಘಿಸಿ ವೇತನ ಮತ್ತು ಉದ್ಯೋಗ ಕಡಿತ ಗೊಳಿಸುವ, ಉಧ್ಯಮಗಳಿಂದ ವಲಸಿಗರನ್ನು ದೂರವಿಟ್ಟು, ಯು.ಎಸ್ ನಿಯಮಾವಳಿಗಳನ್ನು ಮಾನವ ಹಕ್ಕುಗಳ ಮಾದರಿಯಲ್ಲಿ ಮಧ್ಯ ಅಮೇರಿಕದಲ್ಲಿ ಅನ್ವಯಿಸಿವಂತೆ ಮಾಡಲು ಧರ್ಮಾಧ್ಯಕ್ಷರುಗಳ ನಾಯಕತ್ವ ಹಾಗು ದೇವಾಲಯಗಳ ನೆರವು ಬಹು ಮುಖ್ಯ ಎಂದು ಕಥೋಲಿಕ ಗುಂಪುಗಳು ಸಮರ್ಥಿಸಿದವು.


ಈ ನಿರ್ಣಾಯಕ ಕ್ಷಣಗಳಲ್ಲಿ ಕಥೋಲಿಕ ದೇವಾಲಯಗಳು ಸಾಕ್ಷಿಯಾಗುವಂತೆ ಪಾಲನೆ ಹಾಗು ನೈತಿಕ ಶಕ್ತಿ ತುಂಬಲು ಸಂಸ್ಥೆಗಳು ಸಿಧ್ದ ಎಂದು ತಿಳಿಸಿವೆ.


ಸಂತ ಆಸ್ಕರ್ ರೊಮರೊರವರು ಹೇಳಿದಂತೆ ಸಮುದಾಯದಲ್ಲಿ ಎರಡು ವರ್ಗದ ಜನರು, ಕೆಲವರು ಎಲ್ಲವನ್ನು ಅನುಭವಿಸಲು ಜನಿಸಿದ್ದರೆ ಇನ್ನು ಕೆಲವರು ದೇವರು ಸೃಷ್ಟಿಸಿದ ಎಲ್ಲವನ್ನು ಆನಂದಿಸಲು ಆಗುವುದಿಲ್ಲ.


ಗಡಿಯಾಚೆಗಿರುವ ಎಲ್ಲಾ ವಿಧ್ಯಮಾನಗಳಲ್ಲಿ ಪ್ರಭು ಯೇಸುವಿನ ಅಸ್ತಿತ್ವ ಇರುತ್ತದೆ, ಮುಖ್ಯವಾಗಿ ರಕ್ಷಣೆಯನ್ನು ಮತ್ತು ಘನತೆಯ ಜೀವನವನ್ನು ಬಯಸುವ ಜನರಿದ್ದಾರೆ ಎಂದು ಹೇಳಿ ಈ ಸೇವೆಗೆ ಹಾಗೂ ನಾಯಕತ್ವಕ್ಕಿರುವ ದೈವೀಕ ಆಮಂತ್ರಣವನ್ನು ಕಡೆಗಣಿಸದೆ ಶೃಮಿಸೋಣವೆಂದು ಪತ್ರವನ್ನು ಮುಗಿಸಿದರು.


21 ಜೂನ್ 2021, 12:55


ಕನ್ನಡಕ್ಕೆ: ಆನಂದಕುಮಾರ ದೊಡ್ಡಮನಿ.

20 views0 comments
bottom of page