top of page

ಜಿಂಬಾಬ್ವೆ : ಸ್ವಚ್ಛ ಪರಿಸರಕ್ಕೆ ಲೌದಾತೋ ಸೀ ಅಭಿಯಾನ


ಕ್ಯಾಥೋಲಿಕ್ ಪ್ರೊಫೆಷನಲ್ ನೆಟ್ವರ್ಕ್ ಜಿಂಬಾಬ್ವೆ ಮೂಲಕ ಜಿಂಬಾಬ್ವೆ ಕಥೋಲಿಕ ಶ್ರೀಸಾಮಾನ್ಯರ ಆಯೋಗ ಲೌದಾತೋ ಸೀ ಯಿಂದ ಪ್ರೇರಣೆಗೊಂಡು ಪರಿಸರ ಸಂರಕ್ಷಣೆಯ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.


ವರದಿ: ಬ್ರದರ್ ಆಲ್ಫೋನ್ಸ್ ಕುಗ್ವಾ


ಜಿಂಬಾಬ್ವೆಯಲ್ಲಿ ಪರಿಸರದ ಅವನತಿ ಉಲ್ಬಣಗೊಳ್ಳುತ್ತಿದೆ ಹಾಗೂ ಇದರ ಪರಿಣಾಮ ಸಸ್ಯ, ಪ್ರಾಣಿ, ಸಮುದ್ರದ ಜೀವ ರಾಶಿಗಳ ಮೇಲೆ ಬೀರುತ್ತಿದೆ. ಮಾನವೀಯತೆ ನಮ್ಮೆಲ್ಲರ ತವರು ನೆಲೆಯ ಮೇಲೆ ಆಗಿರುವ ಪರಿಣಾಮಗಳನ್ನು ರಕ್ಷಿಸಲು ತರ‍್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಶ್ವಗುರು ಫ್ರಾನ್ಸಿಸ್ ತಮ್ಮ ಲೌದಾತೋ ಸೀ ಪರಿಪತ್ರದಲ್ಲಿ ಹೀಗೆ ಹೇಳಿದ್ದಾರೆ: " ಪರಿಸರದ ಸವಾಲುಗಳಿಂದ ನಾವು ಅನುಭವಿಸುತ್ತಿರುವ ಹಾಗೂ ಮಾನವನ ಮೂಲಬೇರಿಗೆ ಆಗುವ ಪರಿಣಾಮಗಳು ಹಾಗೂ ಕಾಳಜಿಯಿಂದ ನಾವು ಎಲ್ಲರ ಜೊತೆ ಸಂಭಾಷಿಸಬೆಕಾಗಿದೆ." ವಿಶ್ವಗುರು ಫ್ರಾನ್ಸಿಸ್ ರವರ ಸಂದೇಶ, ಪರಿಸರಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡ ಬೇಕೆಂದು ಕ್ಯಾಥೋಲಿಕ್ ಪ್ರೊಫೆಷನಲ್ ನೆಟ್ವರ್ಕ್ ಜಿಂಬಾಬ್ವೆ ಅವರನ್ನು ಹುರಿದುಂಬಿಸಿದೆ.


ಕಥೋಲಿಕ ಶ್ರೀಸಾಮಾನ್ಯರ ಆಯೋಗ ಮತ್ತು ಪರಿಸರ ನಿರ್ವಹಣೆ


ವಿಶ್ವಗುರು ಪೋಪ್ ಫ್ರಾನ್ಸಿಸ್ ಅವರ ಯೋಜನೆಯ ಪ್ರಕಾರ ಪರಿಸರ ವಿನಾಶಕ್ಕೆ ಮಾನವೀಯತೆಯೇ ಕಾರಣವಾಗಿದೆ ಹಾಗೂ ಮಾನವನ ಪ್ರಯತ್ನದಿಂದಲೇ ಪರಿಸರವನ್ನು ಸಂರಕ್ಷಿಸಬಹುದಾಗಿದೆ ಎಂದು ಬಹಿರಂಗಪಡಿಸಿದ್ದಾರೆ.


ಪರಿಸರ ನಿರ್ವಹಣೆಗೆ ತಮ್ಮ ಕೊಡುಗೆಯಾಗಿ ಕ್ಯಾಥೋಲಿಕ್ ಪ್ರೊಫೆಷನಲ್ ನೆಟ್ವರ್ಕ್ ಆಫ್ ಜಿಂಬಾಬ್ವೆ ಮೂಲಕ ಜಿಂಬಾಬ್ವೆ ಕಥೋಲಿಕ ಶ್ರೀಸಾಮಾನ್ಯರ ಆಯೋಗದವರು ಪರಿಸರ ರಕ್ಷಣೆಗೆ ಸಮಾಜವನ್ನು ಪ್ರೋತ್ಸಾಹಿಸಲು ಲೌದಾತೋ ಸೀ ಅಭಿಯಾನವನ್ನು ಪ್ರಾರಂಭಿಸಿದರು. ಯೋಜನೆಯನ್ನು ಪ್ರೇಷಿತ ಧರ್ಮಸಭೆ ಬೆಂಬಲಿಸಿತು ಹಾಗು ವ್ಯಾಪಾರೋದ್ಯಮದಲ್ಲಿ ಪರಿಸರಸ್ನೇಹಿ ಮಾರ್ಗಗಳನ್ನು ಅಭ್ಯಾಸ ಮಾಡುವಂತೆ ಜನರನ್ನು ಪ್ರೋತ್ಸಾಹಿಸಿದೆ.


ಇದೇ ಲೌದಾತೋ ಸೀ, ಉತ್ಸಾಹದಲ್ಲಿದ್ದ ಜಿಂಬಾಬ್ವೆ ಕಥೋಲಿಕ ಶ್ರೀಸಾಮಾನ್ಯರ ಆಯೋಗ, ಲೌದಾತೋ ಸೀ ಯ ಸ್ಮರಣಾರ್ಥ ಹಾಗೂ ಪ್ರಚಾರ ಅದೇ ಸಮಯದಲ್ಲಿ ಪರಿಸರ ನಿರ್ವಹಣೆ ಬಗ್ಗೆ ಗಮನಹರಿಸಲು ಯೋಜನೆಯನ್ನು ರೂಪಿಸಿತು. ಜಿಂಬಾಬ್ವೆ ನಾಗರಿಕರನ್ನು ಮುಖ್ಯವಾಗಿ ಚಿಕ್ಕಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಯುವಜನತೆ ಜಿಂಬಾಬ್ವೆಯಲ್ಲಿ ಎಲ್ಲೆ ಇದ್ದರೂ ತಮ್ಮ ಸಮುದಾಯಗಳಲ್ಲಿ ಪರಿಸರವನ್ನು ಆರೈಕೆ ಮಾಡುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮುನ್ನಡೆಸುವ ಉದ್ದೇಶವನ್ನು ಯೋಜನೆ ಒಳಗೊಂಡಿರುತ್ತದೆ. ಮರಗಳನ್ನು ಕಡಿಯುವುದು, ಆಕ್ರಮಣ ಗಣಿಗಾರಿಕೆ, ಪೊದೆಗಳನ್ನು ಸುಡುವುದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಪೇಪರ್ ಕಸ ಹಾಕುವ ನಮ್ಮ ಈ ಅಭ್ಯಾಸಗಳು ಪರಿಸರವನ್ನು ನಾಶ ಮಾಡುತ್ತಿದೆ. ಈ ಅಭಿಯಾನವು ಇದನ್ನು ಖಂಡಿಸುತ್ತದೆ.ಈ ಅಭಿಯಾನದ ಮೂಲಕ ಯುವಜನತೆಯನ್ನು ಇತರರು ಪರಿಸರವನ್ನು ಹಾಳು ಮಾಡಿದರು, ತಾವು ತಮ್ಮ ಕೈಲಾದಷ್ಟು ಪರಿಸರವನ್ನು ಸ್ವಚ್ಛವಾಗಿಡುವಂತೆ ಪ್ರೋತ್ಸಾಹಿಸಲಾಯಿತು.


ಪರಿಸರದ ಜೊತೆ ಶುಭಸಂದೇಶ


ಲೌದಾತೋ ಸೀ ಬಗ್ಗೆ ಅರಿವು ಮೂಡಿಸಲು ಹಾಗೂ ಶುಭಸಂದೇಶ ಹಾಗೂ ಪರಿಸರದ ನಡುವೆ ಜೀವಿಸಲು ಅಭಿಯಾನದ ಉದ್ದೇಶ ಎಂದು ಕಥೋಲಿಕ ಶ್ರೀಸಾಮಾನ್ಯರ ಆಯೋಗ ಸಂಯೋಜಕರಾದ ಫಾ. ಜೋಹಾನ್ ಮಾಸಿಕೊ ಹೇಳಿದ್ದಾರೆ. ನಿರಂತರವಾಗಿ, ಯೋಜನೆಯನ್ನು ಲೌದಾತೋ ಸೀ ಯೋಂದಿಗೆ ಜೋಡಿಸುವ ಮೂಲಕ ದಾಖಲೆಗಳು ಬೆಳೆಯುತ್ತವೆ ಹಾಗೂ ಜನರು ಈ ದಾಖಲೆಗಳನ್ನು ಓದುವುದಕ್ಕೆ ಉತ್ಸುಕರಾಗಿರುತ್ತಾರೆ.


ಜನರಿಗೆ ಪರಿಸರವನ್ನು ಸ್ವರ್ಗವನ್ನಾಗಿಸುವ ತನಕ ಬಲಗೊಳಿಸಬೇಕು. ಪರಿಸರ ಸಂರಕ್ಷಣೆ ಹಾಗೂ ವಿಶ್ವಗುರು ಗಳು ಹೇಳಿದ ಪ್ರಾರ್ಥನೆ: "ಪ್ರಪಂಚದ ವಿರುದ್ಧ ಅಪರಾಧ ಮಾಡುವುದು ನಮ್ಮ ಹಾಗೂ ದೇವರ ವಿರುದ್ಧ ಪಾಪ ಮಾಡಿದ ಹಾಗೆ" ಎಂದು ಅರ್ಥಮಾಡಿಸುವುದು ಯೋಜನೆಯ ಉದ್ದೇಶವಾಗಿದೆ.


ಆಕ್ರಮಣ ಗಣಿಗಾರಿಕೆಯಿಂದ ಅರಣ್ಯ ನಾಶ


ಬಡತನ ಮತ್ತು ನಿರುದ್ಯೋಗ ಯುವಜನರನ್ನು ಅಕ್ರಮ ಗಣಿಗಾರಿಕೆಗೆ ಹಾಗೂ ಅನ್ಯಾಯದ ದುಡಿಮೆಯ ಕಡೆಗೆ ಕರೆದೊಯ್ಯುತ್ತಿದೆ. ಆಕ್ರಮಣ ಗಣಿಗಾರಿಕೆ ಹಾಗೂ ಅರಣ್ಯ ನಾಶದಿಂದ ಪರಿಸರ ಹಾನಿಯಾಗಿದೆ. ಅರಣ್ಯವನ್ನು ಚಿನ್ನ ಸಿಗುವ ಗಣಿಗಾರಿಕೆಯಾಗಿ ಮಾರ್ಪಡಿಸಿದ್ದಾರೆ. ಎಲ್ಲೆಲ್ಲಿ ಚಿನ್ನ ಸಿಗುತ್ತೆ ಅಂದುಕೊಳ್ಳುತ್ತಾರೋ ಅಲ್ಲಲ್ಲಿ ಅಗೆಯುತ್ತಾರೆ. ಕ್ವೆಕ್ವೆ, ಗೋಕ್ವೆ, ಕಡೋಮಾ, ಬಿಂದುರಾ, ಮಜೋವ್, ಎಂಬೆರೆಂಗ್ವಾ ಹಾಗೂ ಇತರ ಸ್ಥಳಗಳನ್ನು ನೋಡಿದಾಗ ಪರಿಸರ ವಿನಾಶದ ಬಗ್ಗೆ ನಮ್ಮ ಕಣ್ತೆರೆಯುತ್ತದೆ. ಇಲ್ಲಿ, ಇನ್ನೂ ಭವಿಷ್ಯವಿದೆಯೆ ಎಂದು ಆಶ್ಚರ್ಯವಾಗುತ್ತದೆ.


"ಬಡತನದಿಂದ ನಮ್ಮನ್ನು ಈ ಪರಿಸ್ಥಿತಿಗೆ ನೂಕಲ್ಪಟ್ಟಿದೆ. ನಾವು ನಿರುದ್ಯೋಗಿಗಳು, ನಿಜವಾಗಿ ಹೇಳಬೇಕಾದರೆ ಉದ್ಯೋಗ ಇಲ್ಲದವರು. ನಮ್ಮ ಕುಟುಂಬಗಳ ಹೊಟ್ಟೆ ತುಂಬಿಸಲು ಇರುವುದೊಂದೇ ದಾರಿ ಆಕ್ರಮಣ ಗಣಿಗಾರಿಕೆ, ಚಿನ್ನಕ್ಕಾಗಿ ಬೇಟೆ. ನಮಗೆ ಪರಿಸರದ ಬಗ್ಗೆ ಕಾಳಜಿ ಇದೆ ಆದರೆ ನಾವು ಏನು ಮಾಡಲು ಸಾಧ್ಯವಿಲ್ಲ" ಎಂದು ಕಡೋಮಾದ ಹೊರವಲಯದಲ್ಲಿರುವ ಕುಶಲಕರ್ಮಿ ಗಣಿಗಾರ ನುಡಿದಿದ್ದಾನೆ.


ಹೆಚ್ಚು ಜನಸಂಖ್ಯೆ ನಗರಗಳಲ್ಲಿ ಹೆಚ್ಚು ಪರಿಣಾಮ


ಹಣದ ವ್ಯಾಮೋಹ, ಅರಣ್ಯ ವಿನಾಶಕ್ಕೆ ಕೊಡುಗೆಯಾಗಿದೆ. ವ್ಯಾಪಾರಕ್ಕಾಗಿ ಭೂ -ಧಣಿಗಳು ಭೂಮಿಯನ್ನು ವಿಭಾಗಿಸುವುದು ಹಾಗೂ ನಗರ ಪ್ರದೇಶದಲ್ಲಿ ವಸತಿಗೃಹಗಳು ಒಂದೇ ನೆಲದಲ್ಲಿ ಅಣಬೆ ಬೆಳೆಯುವ ಹಾಗೆ ಬೆಳೆದಿದೆ.


ವಲಸೆಗಾರರಿಂದ ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಇದು ಅನೇಕ ನಗರ ಪ್ರದೇಶದಲ್ಲಿ ನೈರ್ಮಲ್ಯ ವಿಷಯದಲ್ಲಿ ರಾಜಿಗೋಳಿಸಿದೆ. ಮತ್ತು ನೈರ್ಮಲ್ಯವನ್ನು ನವೀಕರಿಸಲು ಕಡಿಮೆ ಪ್ರಯತ್ನವನ್ನು ಮಾಡಲಾಗುತ್ತಿದೆ. ಹೊಡೆದ ಒಳಚರಂಡಿ ಪೈಪ್ಗಳಿಂದ ಚಿಮ್ಮುವ ಕೊಳಚೆ ನೀರು, ನೀರಿನ ಪೂರೈಕೆಯಲ್ಲಿ ವ್ಯತ್ಯಯ, ಹಾಗೂ ಕಸವನ್ನು ಎಲ್ಲಾ ಕಡೆ ಬಿಸಾಡುವುದು ನಾಗರೀಕರ ಕಾಳಜಿಯಾಗಿದೆ. ಈ ಹಿನ್ನಲೆಯಿಂದಲೆ ಧರ್ಮಸಭೆ, ದೇಶದಲ್ಲಿ ಪರಿಸರದ ಮಾಲಿನ್ಯವನ್ನು ಪರಿಶೀಲಿಸಲು ಸಾಮಾನ್ಯ ಮನುಷ್ಯರಿಗೆ ಹೇಳುತ್ತಿದೆ.


ಲೌದಾತೋ ಸೀ ಅಭಿಯಾನ


ಅರಣ್ಯ, ಹೊಲಗದ್ದೆ, ಜಲರಾಶಿ, ಕಾಡುಪ್ರಾಣಿಗಳು ಹಾಗೂ ಓಝೋನ್ ಪದರಗಳನ್ನು ರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಎಂದು, ಅಭಿಯಾನದ ಮೂಲಕ ಹೇಳುತ್ತಿದೆ. ಮರಗಳನ್ನು ನೆಡುವುದು ಕಸವನ್ನು ಮರುಬಳಕೆ ಮಾಡುವುದು, ಎಲ್ಲೆಂದರಲ್ಲಿ ಬಿಸಾಡುವ ಪದ್ಧತಿಯನ್ನು ನಿಲ್ಲಿಸಬೇಕು. ಇದರಿಂದ ಪರಿಸರ ಕಲುಷಿತವಾಗುತ್ತದೆ ಹಾಗೂ ಅದು ವಾತಾವರಣದಲ್ಲಿ ಏರುಪೇರು ತರುತ್ತದೆ.


22 ಜೂನ್ 2021, 9:40


ಕನ್ನಡಕ್ಕೆ: ಅನಿಲ್ ಪ್ರಭು

36 views0 comments
bottom of page