top of page

ತ್ರಿಕಾಲ ಪ್ರಾರ್ಥನೆಯಲ್ಲಿ ವಿಶ್ವಗುರುಗಳ ಅಂಬೋಣ : ವಿಶ್ವಾಸದಿಂದಿದ್ದು, ನಿರಾಯಾಸತೆಯಲ್ಲಿ ಸರ್ವೇಶ್ವರರನ್ನು ಅರಸಿರಿ



ವಿಶ್ವಗುರು ಫ್ರಾನ್ಸಿಸ್ ಭಾನುವಾರದ ಶುಭಸಂದೇಶದ ವಾಕ್ಯವೃಂದದ ನಿರೂಪಣೆಯನ್ನು, 'ಕ್ರಿಸ್ತರು ಬಿರುಗಾಳಿಯನ್ನು ಶಾಂತಗೊಳಿಸಿದ ಭಾಗವನ್ನು ನಮ್ಮದೈನಂದಿನ ಜೀವನದ ಸಂಕಷ್ಟಗಳ ಅಬ್ಬರಿಸುವ ಅಲೆಗಳಿಗೂ, ಭರದಿಂದ ಬೀಸುವ ಬಿರುಗಾಳಿಗೂ' ಉಪಮೀಕರಿಸಿದರು. "ವಿಶ್ವಾಸವೆಂಬ ಅನುಗ್ರಹಕ್ಕಾಗಿ ಸರ್ವೇಶ್ವರರಲ್ಲಿ ಯಾಚಿಸಿರಿ, ಇದರಿಂದ ಅವರನ್ನು ಅರಸುವತ್ತ ನಿರಾಯಾಸರಾಗಿರಿ." ಎ೦ದರು. ಅವರು ಸರ್ವೆಶ್ವರರು ಸದಾ ನಮ್ಮ ಸನಿಹದಲ್ಲಿದ್ದು, ನಮಗಾಗಿ ಕಾದಿರುವುದಾಗಿ ಖಾತ್ರಿಪಡಿಸಿದರು.


ವ್ಯಾಟಿಕನ್ ವಾರ್ತಾ ಸಿಬ್ಬಂದಿ ಬರಹಗಾರರಿಂದ:


ವಿಶ್ವ ಗುರು ಫ್ರಾನ್ಸಿಸ್ ಭಾನುವಾರದ ಶುಭ ಸಂದೇಶ, 'ಕ್ರಿಸ್ತರು ತಮ್ಮ ಶಿಷ್ಯರೊಂದಿಗೆ ದೋಣಿಯಲ್ಲಿ ಸಮುದ್ರ ದಾಟುತ್ತಿರುವಾಗ, ಅಬ್ಬರಿಸುವ ಅಲೆಗಳನ್ನೂ, ಬಿರುಗಾಳಿಯನ್ನು ಶಾಂತಗೊಳಿಸಿದ' ಪ್ರಸಂಗದ ಕಥನವನ್ನು ತೇಜಕೇಂದ್ರವಾಗಿಸಿಕೊಂಡು ಅದಕ್ಕೆ ತಮ್ಮ ಪ್ರತಿಛಾಯೆಯನ್ನು ಬೀರಿದರು. ಎಚ್ಚರರಾಗಿದ್ದ ಶಿಷ್ಯರು, ನಿದ್ರಿಸುತ್ತಿದ್ದ ಕ್ರಿಸ್ತರನ್ನು ಎಬ್ಬಿಸಿ, ನಿಷ್ಟುರತೆಯಿಂದ ಸಹಾಯಕ್ಕಾಗಿ ಮೊರೆಯಿಟ್ಟರು ಎಂದು ನುಡಿದರು.


ವಿಶ್ವಗುರುಗಳು, ಶಿಷ್ಯರ ಭಯ ಮತ್ತು ಆತಂಕಭರಿತ ಗಾಬರಿಯನ್ನು ನಮ್ಮ ಸ್ವಂತ ಬದುಕಿಗೆ ಉಪಮೀಯುಸುತ್ತಾ, ನಾವು ನಮ್ಮ ಕಷ್ಟ ಕೋಟಲೆಗಳಲ್ಲಿ ಸರ್ವ ಶಕ್ತರಲ್ಲಿ ಮೊರೆದಾಗ 'ದೇವರೇಕೆ ಮೌನಿಯಾಗಿರುವರು? 'ಮತ್ತು 'ಏನನ್ನೂ ಮಾಡಲಾರರೇ?' ಎಂದೆಲ್ಲಾ ಭಾವಿಸುತ್ತೇವೆ. ಹಲವು ಸನ್ನಿವೇಶಗಳಲ್ಲಿ, ನಿರುದ್ಯೋಗ, ಆರೋಗ್ಯ ಸಮಸ್ಯೆಗಳು, ಸುರಕ್ಷತೆ ರಹಿತ ಬಾಳು, ಪಶ್ಚಾತಾಪರಹಿತ ಕಾರುಣ್ಯದ ಹಂಗಿನಲ್ಲಿ, ದಡವೇ ಗೋಚರಿಸದ ಆತಂಕಭರಿತ ಅಲೆಗಳ ಅಬ್ಬರದಲ್ಲಿ ಮುಳುಗುವ ಭಾವನೆ ಹೊಂದಿರುತ್ತೇವೆ ಎಂದು ನುಡಿದರು.


ಕೆಲವೊಂದು ವೇಳೆಯಲ್ಲಿ ಅತಿ ಪ್ರಮುಖ ವಿಚಾರವನ್ನು ದೃಶ್ಯೀಕರಿಸಲು ವ್ಯರ್ಥರಾಗಿ ಅಪಾಯಕ್ಕೀಡಾಗುತ್ತೇವೆ. ಅದು, 'ಕ್ರಿಸ್ತ ಅಲ್ಲಿರುವರು, ಅವರು ನಿದ್ರಿಸುತ್ತಿದ್ದರೂ, ಅಥವಾ ನಮ್ಮ ಮುಂದೆ ಅದೃಶ್ಯರಾಗಿದ್ದರೂ, ಅವರು ಅಲ್ಲಿ ನಡೆಯುವ ಎಲ್ಲಾ ವಿಷಯದಲ್ಲಿ ನಮ್ಮೊಂದಿಗೆ ತಮ್ಮಷ್ಟಕ್ಕೆ ಪಾಲುದಾರರಾಗಿರುವರು' ಎನ್ನುತ್ತಾ ಇದು 'ನಮ್ಮೆಲ್ಲರಿಗೂ ವಿಸ್ಮಯಕಾರಿ, ಆದರೆ ನಮ್ಮೆಲ್ಲರ ವಿಶ್ವಾಸದ ಪರೀಕ್ಷಕಾರಿ' ಎಂದರು.


ವಿಶ್ವ ಗುರುಗಳು ಮುಂದುವರೆದು ಸರ್ವೇಶ್ವರರು ಸದಾ ನಮ್ಮೊಡನಿರುವರು, ಮತ್ತು 'ತಮ್ಮನ್ನು

ಕಾರ್ಯನಿಮಿತ್ತ ಗೊತ್ತುಪಡಿಸಿಕೊಳ್ಳಲೂ, ತಮ್ಮತ್ತ ಮೊರೆಯಲೂ, ತಮ್ಮನ್ನು ನಮ್ಮ ಅನುಭವಗಳ ಕೆಂದ್ರ ಬಿಂದುವಾಗಿರಿಸಲೂ ಸದಾ ಕಾದಿರುವರು. 'ಮತ್ತು ನಾವು ಕೇವಲ ದೈವನಂಬಿಕೆಯಲ್ಲಿ ಬಾಳಿದರೆ ಸಾಲದು. ಅವರಿಗೆ ಸಾಂಪ್ರತವಾಗಿರಬೇಕು. ಮತ್ತು ಅವರ ಧ್ವನಿಯೊಂದಿಗೆ, ನಮ್ಮ ಕಂಠಸಿರಿಯನ್ನು ಎತ್ತರಿಸಿ, ಅವರತ್ತ ಕೂಗುವ ಸ್ವರಧಾರೆಯಾಗಿರಬೇಕು'. ಎ೦ದು ಆರುಹಿದರು. ಇದೇ ಸಂದರ್ಭದಲ್ಲಿ, ವಿಶ್ವಗುರುಗಳು ಸ್ಥಾನಾಂತರಿಗಳು ಸಮುದ್ರ ದಾಟುವ ದಿಸೆಯಲ್ಲಿ ಯಾತನೆಗೀಡಾದಾಗ, ದೇವರತ್ತ ನೆರವಿಗಾಗಿ ಮೊರೆಯಿಡುವ ದಾರುಣ ದೃಶ್ಯವನ್ನು ಜ್ಞಾಪಕಕ್ಕೆ ತಂದರು.


ನಮ್ಮ ಬಾಳ ನೌಕೆಯಲ್ಲಿ, ನಾವು ಎದುರಿಸುತ್ತಿರುವ ಅಲೆಗಳ ಅಬ್ಬರವನ್ನೂ, ಬಿರುಗಾಳಿಯ ಬಿರುಸನ್ನೂ, ಅವಲೋಕಿಸುವುದು ಬದುಕಿನ ಹಸನತೆಗೆ ನೆರವಾಗುವುದೆಂದು ವಿಶ್ವ ಗುರುಗಳು ಉಪದೇಶಿಸಿದರು. ಸರ್ವೆಶ್ವರರಿಗೆ ಇವೆಲ್ಲದರ ಭಾಗಿದಾರತ್ವ ನೀಡಬೇಕು ಮತ್ತು 'ಎಲ್ಲವನ್ನು ಅವರಲ್ಲಿ ನಿವೇದಿಸಿರಿ.' ಮತ್ತು ನಾವು 'ಆಶ್ರಯ ಪಡೆದುಕೊಳ್ಳುವುದು, ಸಾಂತ್ವನ ಹಾಗೂ ಬೆಂಬಲ ಹೊಂದಿರುವುದು, ಜೀವನದ ಅನಿರೀಕ್ಷಿತ ಅಲೆಗಳಿಂದಾಗಿಯೇ. ಇದೇ ಕೂಡ ಸರ್ವೇಶ್ವರರಿಗೂ ಬೇಕಾಗಿರುವಂತಹದು ಎನ್ನುತ್ತಾ 'ಕ್ರಿಸ್ತರನ್ನು ಎಬ್ಬಿಸಿ, ನಿವೇದಿಸಿದ ಅನುಸಂಧಾನವನ್ನೇ ನಾವು ಕೂಡ ಅನುಸರಿಸಬೇಕಾಗಿದೆ. ಹಾಗೂ ' ನಾವು ಒಂಟಿಯಾಗಿ ಸಮುದ್ರಯಾನ ಅಸಾಧ್ಯ.' ನಾವಿಕರು ಆಗಸದ ತಾರೆಯನ್ನು ಮಾರ್ಗಸೂಚಿಯಂತೆ ಎತ್ತರಿಸಿ ನೋಡುವಂತೆ, ನಾವೂ ಸಹ ಬಾಳ ನೌಕೆ ನಡೆಸಲು ದೇವರತ್ತ ನೋಡಬೇಕು ಎಂದು ವಿವರಣೆ ಇತ್ತರು.

ವಿಶ್ವ ಗುರುಗಳು ಮುಂದುವರೆದು, ನಾವೆಲ್ಲರೂ ಸರ್ವೇಶ್ವರದಲ್ಲಿ ಹಾಗೂ ಅವರ ಅನುಗ್ರಹಗಳನ್ನು ಅವಲಂಬಿಸಿದ್ದು, ನಂಬಿಕೆಯ ಮೂಲ ಮಂತ್ರವನ್ನು ಅರಿತಿರುವೆವು. ಆದರೂ, ತಂದೆ ದೇವರನ್ನು ಭಗ್ನ

ಗೊಳಿಸದೆ 'ನಮ್ಮಷ್ಟಕ್ಕೇ ನಾವೆ ನಿಭಾಯಿಸಬಲ್ಲೆವು '

ಎಂಬ ಶೋಧನೆಯತ್ತ ಎಚ್ಚರಿಕೆ! ಬದಲಾಗಿ

' ಸರ್ವೇಶ್ವರನಲ್ಲಿ ಮೊರೆದಾಗಲೆಲ್ಲಾ ನಮ್ಮಲ್ಲವರು

ಮಹಾತ್ಕಾಯ೯ಗಳನ್ನೆಸಗುವರು ' ಎಂದು ಹೇಳುತ್ತಾ, 'ಸೌಮ್ಯತೆ ಹಾಗೂ ಪ್ರಾರ್ಥನೆಗಳ ವಿಶೇಷ ಶಕ್ತಿಗಳು' ಪವಾಡಗಳನ್ನೆಸಗಬಲ್ಲವು ಎಂದು ಕೇಳುಗರಿಗೆ ಖಾತ್ರಿಯಾಗಿ ಹೇಳಿದರು.


ಅಂತಿಮವಾಗಿ ವಿಶ್ವ ಗುರು ಫ್ರಾನ್ಸಿಸ್ರು, ಕ್ರಿಸ್ತರು ತಮ್ಮ ಶಿಷ್ಯರಿಗೆ ಕೇಳಿದ ಪ್ರಶ್ನೆಯನ್ನೇ ಕೇಳುತ್ತಾ 'ಏಕೆ ನೀವು ಗಾಬರಿಗೊಂಡಿರುವಿರಿ? ನಿಮಗೆ ಇನ್ನೂವಿಶ್ವಾಸವಿಲ್ಲವೇ?' ಎಂದಾಗ, ಇದು ನಮ್ಮೆಡೆಗೂ ತಿರುಗಿದ ಮಾತಾಗಿದೆ. ವಿಶೇಷವಾಗಿ, ನಮ್ಮಸಮಸ್ಯೆಗಳನ್ನಷ್ಟೇ ಕೇಂದ್ರೀಕರಿಸಿ , ಮರಗಟ್ಟಿಹೋಗಿದ್ದೇವೆ. ಹೃದಯ ಪರಿವತ೯ನೆ ಮತ್ತು ದೈವ ನಂಬುಗೆಗಳಿಗೆ ನಕಾರಾತ್ಮಕ ಸ್ಪಂದನೆ, ಇಲ್ಲವೇ, 'ಅವಶ್ಯಕತೆಗಳಲ್ಲಿ ದೇವರನ್ನು ಎಚ್ಚರಿಸು' ವ ಕೆಲಸ ಮಾಡುತ್ತೇವೆ. ಸರ್ವೇಶ್ವರರನ್ನು ಎಂದೆಂದೂ ನಿರಾಯಾಸದಿಂದ ಅರಸುವ ಮತ್ತು ಅವರ ಹೃದಯದ್ವಾರವನ್ನು ತಟ್ಟುವಂತ, ವಿಶ್ವಾಸವೆಂಬ ದೈವಾನುಗ್ರಹದ ಅವಶ್ಯಕತೆಗಾಗಿ

ಪ್ರಾಥಿ೯ಸಬೇಕು'. ಎಂದರು


ವಿಶ್ವ ಗುರುಗಳು ತಮ್ಮ ಉಲ್ಲೇಖನಗಳನ್ನು ಮುಕ್ತಾಯಗೊಳಿಸುತ್ತಾ, ಪರಿಶುದ್ಧ ಕನ್ಯಾ ಮರಿಯಳ, ದೇವರಲ್ಲಿನ ಅಚಲ ನಂಬಿಕೆಯು, ನಮ್ಮೆಲ್ಲರಲ್ಲಿ ಪ್ರತಿ ದಿನವೂ ನಮ್ಮನ್ನು ನಾವು ದೇವರಿಗೆ ಒಪ್ಪಿಸಿಕೊಳ್ಳುವಂತ ಮೂಲ ಅಗತ್ಯತೆಯನ್ನು ಪುನರುಜ್ಜೀವಗೊಳಿಸುವುದು ಎಂದು ಪ್ರಾರ್ಥಿಸಿದರು.


20 ಜೂನ್ 2021, 12:13


ಕನ್ನಡಕ್ಕೆ: ಮೇರಿ ಎಲಿಜಬೇತ್

19 views0 comments
bottom of page