top of page

ಪವಿತ್ರ ನಾಡಿನತ್ತ ROACO ಅಧಿವೇಶನದ ಒಲವು


ಓರಿಯೆಂಟಲ್ ಧರ್ಮಸಭೆಗಳಿಗೆ ಮೀಸಲಿರುವ ಪವಿತ್ರ ಪೀಠದ ಮಾನವೀಯ ವಿಭಾಗದ ಅಂಗವಾದ ROACO ಸೋಮವಾರ ತನ್ನ ಸಮಗ್ರ ಸಭೆಯನ್ನು ಪ್ರಾರಂಭಿಸುತ್ತಿದೆ. ಈ ಬಾರಿಯ ಅಧಿವೇಶನದ ಗಮನದ ಕೇಂದ್ರಬಿಂದು ಪವಿತ್ರ ನಾಡು, ಇಥಿಯೋಪಿಯಾ, ಅರ್ಮೇನಿಯಾ ಮತ್ತು ಜಾರ್ಜಿಯಾಗಳಾಗಿವೆ.


ವರದಿ: ಡೆವಿನ್ ವಾಟ್ಕಿನ್ಸ್


ಸೋಮವಾರ ಮಧ್ಯಾಹ್ನ ರೋಮ್ ನ ಕಾಸಾ ಬೋನಸ್ ಪಾಸ್ಟರ್ನಲ್ಲಿ "ರಿಯೂನಿಯನ್ ಆಫ್ ಏಡ್ ಏಜೆನ್ಸಿಸ್ ಫಾರ್ ಓರಿಯೆಂಟಲ್ ಚರ್ಚಸ್" (ROACO) (ಓರಿಯಂಟಲ್ ಚರ್ಚುಗಳಿಗೆ ಸಹಾಯ ಇಲಾಖೆಗಳ ಪುನರ್ಮಿಲನ ಸಂಸ್ಥೆ) ತನ್ನ 94 ನೇ ಸಮಗ್ರ ಸಭೆಯನ್ನು ಪ್ರಾರಂಭಿಸಿದೆ. ಈ ವಾರ್ಷಿಕ ಸಭೆಯು ಗುರುವಾರದವರೆಗೂ ನಡೆಯುತ್ತದೆ.


ದಾನಿಗಳಿಗೆ ಬಲಿಪೂಜೆ


ಪತ್ರಿಕಾ ಪ್ರಕಟಣೆಯಲ್ಲಿ, ಓರಿಯಂಟಲ್ ಚರ್ಚುಗಳ ಅನುಯಾಯಿಗಳ 4 ದಿನಗಳ ಈ ಸಭೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಸಭೆಯ ಮೇಲ್ವಿಚಾರಕ ಮತ್ತು ROACOನ ಅಧ್ಯಕ್ಷ ಕಾರ್ಡಿನಲ್ ಲಿಯೊನಾರ್ಡೊ ಸಾಂಡ್ರಿ ಅವರು ಮಂಗಳವಾರ ಉದ್ಘಾಟನಾ ಬಲಿಪೂಜಾ ಸಂಸ್ಕಾರದ ಅಧ್ಯಕ್ಷತೆ ವಹಿಸಲಿದ್ದು, ಈ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳ ದಾನಿಗಳಿಗಾಗಿ ಪ್ರಾರ್ಥಿಸಲಾಗುವುದು. ಈ ಬಲಿಪೂಜೆಯ ವಿಧಿಯನ್ನು "ನಿಗದಿತ ಅಧಿವೇಶನಗಳ ಪ್ರಗತಿಗಾಗಿ, ವಿಶೇಷವಾಗಿ ಈ ಬರ್ಬರ ಸಾಂಕ್ರಾಮಿಕದಿಂದ ಅನೇಕ ಹಿಂಸಾಚಾರ, ಸಾಮಾಜಿಕ ಮತ್ತು ರಾಜಕೀಯ ಅಸ್ಥಿರತೆಯಿಂದ ಇನ್ನೂ ಹೆಚ್ಚಾಗಿ ಬಳಲುತ್ತಿರುವ ರಾಷ್ಟ್ರಗಳಿಗೆ, ಆ ಭಗವಂತನ ಮತ್ತು ದೇವರ ಪೂಜ್ಯ ತಾಯಿಯ ಮಧ್ಯಸ್ಥಿಕೆಗಾಗಿ " ಒಪ್ಪಿಸಲಾಗಿದೆ.


ಪವಿತ್ರ ನಾಡಿನ ಬಗೆಗಿನ ಕಾಳಜಿ


ಮಂಗಳವಾರ ಬೆಳಗ್ಗೆಯ ಅಧಿವೇಶನಗಳು ಪವಿತ್ರ ನಾಡಿಗೆ , ಅದರ ಪರಿಸ್ಥಿತಿ ಚರ್ಚೆಗೆ ಮತ್ತು ಆ ಪ್ರದೇಶದ ಜನರಿಗೆ ಸಹಾಯ ಮಾಡುವ ROACO ವಿನ ಕಾರ್ಯಗಳಿಗೆ ಮೀಸಲು.

ಈ ವಿಷಯದ ಬಗ್ಗೆ ವಿಚಾರ ಪ್ರಸ್ತುತಿ ಮಾಡುವ ಧರ್ಮಸಭೆಯ ನಾಯಕರುಗಳು ಜೆರುಸಲೇಮ್ ನ ಲ್ಯಾಟಿನ್ ಪೂರ್ವಜರಾದ, ಮಹಾಧರ್ಮಾಧ್ಯಕ್ಷ ಪಿಯರ್ಬಟಿಸ್ಟಾ ಪಿಜ್ಜಾಬಲ್ಲಾ, ಪವಿತ್ರ ಭೂಮಿಯ ಪಾಲಕ, ಫ್ರಾ. ಫ್ರಾನ್ಸೆಸ್ಕೊ ಪ್ಯಾಟನ್, ಮತ್ತು ಬೆಥ್ ಲೆಹೆಮ್ ವಿಶ್ವವಿದ್ಯಾಲಯದ ಉಪಕುಲಪತಿ, ಬ್ರ. ಪೀಟರ್ ಬ್ರೇ. ಭಾಗವಹಿಸುವವರಿಗೆ 2020 ರ ಪ್ರೊ ಟೆರ್ರಾ ಸ್ಯಾಂಕ್ಟಾ (ಇದು ಪವಿತ್ರ ಸ್ಥಳಗಳನ್ನು ಸಂರಕ್ಷಿಸಲು, ಸ್ಥಳೀಯ ಸಮುದಾಯಗಳನ್ನು ಬೆಂಬಲಿಸಲು ಮತ್ತು ಸಹಾಯ ಹಸ್ತವನ್ನು ಚಾಚುವ ಯೋಜನೆಗಳನ್ನು ನಿರ್ವಹಿಸುವ ಲಾಭರಹಿತ ಸಂಸ್ಥೆ ಬಗ್ಗೆ ತಿಳಿಸಲಾಗುವುದು.


ಇಥಿಯೋಪಿಯಾ, ಅರ್ಮೇನಿಯಾ, ಜಾರ್ಜಿಯಾ


ಮಧ್ಯಾಹ್ನ, ROACO ನ ಗಮನವು ಇಥಿಯೋಪಿಯಾದ ಪರಿಸ್ಥಿತಿಯ ಕಡೆಗೆ ತಿರುಗುತ್ತದೆ. ಇದನ್ನು ದೈವಿಕ ರಾಯಭಾರಿಯಾದ, ಮಹಾಧರ್ಮಾಧ್ಯಕ್ಷ ಆಂಟೊಯಿನ್ ಕ್ಯಾಮಿಲ್ಲೆರಿ ಪ್ರಸ್ತುತಪಡಿಸುತ್ತಾರೆ. ಇಥಿಯೋಪಿಯಾದ ಟೈಗ್ರೇ ಪ್ರದೇಶವು 2020 ರ ಕೊನೆಯಲ್ಲಿ ಮತ್ತು ಈಗ ಪ್ರಸ್ತುತ ವರ್ಷದಲ್ಲಿ ವಿನಾಶಕಾರಿ ಸಂಘರ್ಷವನ್ನು ಕಂಡಿತು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಸುಮಾರು 30,000 ಮಕ್ಕಳಿಗೆ ಟೈಗ್ರೇ ನೆಲೆಯಾಗಿದೆ ಎಂದು ಯು.ಎನ್ ಇತ್ತೀಚೆಗೆ ವರದಿ ಮಾಡಿದೆ, ಈ ಪ್ರದೇಶದಲ್ಲಿ 400,000 ಕ್ಕೂ ಹೆಚ್ಚು ಜನರು ಬರಗಾಲವನ್ನು ಎದುರಿಸುತ್ತಿದ್ದಾರೆ. ಮಧ್ಯಾಹ್ನ ಅಧಿವೇಶನವು ಅರ್ಮೇನಿಯಾ ಮತ್ತು ಜಾರ್ಜಿಯಾಗಳ ಕಡೆಗೆ ಸಹ ಗಮನ ಹರಿಸಲಿದೆ. ಈ ಎರಡೂ ರಾಷ್ಟ್ರಗಳ ರಾಯಭಾರಿಯಾದ ಮಹಾಧರ್ಮಾಧ್ಯಕ್ಷ ಜೋಸ್ ಅವೆಲಿನೊ ಬೆಟೆನ್ಕೋರ್ಟ್ ರವರ ಹಸ್ತಕ್ಷೇಪದಿಂದ ಈ ಕಾರ್ಯಕ್ರಮ ನಡೆಯಲಿದೆ.


ಮಧ್ಯಪ್ರಾಚ್ಯ ಪ್ರದೇಶ


ಬುಧವಾರ, ಸಮಗ್ರ ಅಧಿವೇಶನದಲ್ಲಿ ಭಾಗವಹಿಸುವವರು ತಮ್ಮ ಗಮನವನ್ನು ಮಧ್ಯಪ್ರಾಚ್ಯದೆಡೆಗೆ ಕೇಂದ್ರೀಕರಿಸುತ್ತಾರೆ. ವಿಶೇಷವಾಗಿ ಸಿರಿಯಾ ಮತ್ತು ಇರಾಕ್ನತ್ತ ಗಮನ ಹರಿಸುತ್ತಾರೆ. ಈ ರಾಷ್ಟ್ರಗಳ ವ್ಯಾಟಿಕನ್ ಕಾರ್ಯದರ್ಶಿ ಮಹಾಧರ್ಮಾಧ್ಯಕ್ಷ ಪಾಲ್ ರಿಚರ್ಡ್ ಗಲ್ಲಾಘರ್ ಅವರು ಸಿರಿಯಾದಲ್ಲಿ ವಿಶ್ವಗುರುಗಳ ಪ್ರತಿನಿಧಿಗಳಾದ ಕಾರ್ಡಿನಲ್ ಮಾರಿಯೋ ಜೆನಾರಿ, ಲೆಬನಾನ್ ನ ಮಹಾಧರ್ಮಾಧ್ಯಕ್ಷರಾದ ಜೋಸೆಫ್ ಸ್ಪಿಟೆರಿ ಮತ್ತು ಇರಾಕ್ನ ಮಹಾಧರ್ಮಾಧ್ಯಕ್ಷರಾದ ಮಿಟ್ಜಾ ಲೆಸ್ಕೋವರ್ ವರೊಂದಿಗೆ ಮಾತನಾಡಲಿದ್ದಾರೆ.


21 ಜೂನ್ 2020, 11:25


ಕನ್ನಡಕ್ಕೆ: ಸೌಮ್ಯ ಗಾಯತ್ರಿ

18 views0 comments
bottom of page