top of page

ಬೌದ್ಧರು ಮತ್ತು ಕ್ರೈಸ್ತರು ಆರೈಕೆ ಮತ್ತು ಒಗ್ಗಟ್ಟಿನ ಸಂಸ್ಕøತಿಯನ್ನು ಅಳವಡಿಸಿಕೊಳ್ಳಲು ವ್ಯಾಟಿಕನ್ ಕರೆ.


ಮೇ 26 ರಂದು ಜರುಗಲಿರುವ ಬೌದ್ಧರ ‘ವೆಸಖ್’ ಉತ್ಸವಕ್ಕೆ ವ್ಯಾಟಿಕನ್‍ನ ಅಂತರ್‍ಧರ್ಮೀಯ ಸಂವಾದದ ಪೊಂಟಿಫಿಕಲ್ ಸಮಿತಿಯು (ಪೊಂಟಿಫಿಕಲ್ ಕೌನ್ಸಿಲ್ ಫಾರ್ ಇಂಟರ್‍ರಿಲಿಜಿಯಸ್ ಡೈಲಾಗ್ - ಪಿಸಿಐಡಿ) ಸಂದೇಶ ಬಿಡುಗಡೆ ಮಾಡಿದ್ದಾರೆ.

ವರದಿ: ರಾಬಿನ್ ಗೋಮ್ಸ್

ಕೋವಿಡ್-19 ಸಾಂಕ್ರಾಮಿಕ ಪ್ರಹಸÀನಾತ್ಮಕ ಪರಿಸ್ಥಿತಿಯು ಬೌದ್ಧರ ಮತ್ತು ಕ್ರೈಸ್ತರ ನಡುವಿನ ಸ್ನೇಹವನ್ನು ಬಲಪಡಿಸುತ್ತಾ, ಆರೈಕೆ ಮತ್ತು ಒಗ್ಗಟ್ಟಿನ ಸಂಸ್ಕøತಿಯೆಡೆಗೆ ಇಡೀ ಮಾನವ ಕುಟುಂಬವನ್ನು ಕೊಂಡೊಯ್ಯುತ್ತದೆ ಎಂದು ವ್ಯಾಟಿಕನ್ ಹೇಳಿದೆ.

‘ವೆಸಖ್’ನ ಬೌದ್ಧ ಉತ್ಸವದ ಸಂದರ್ಭದಲ್ಲಿ ಕಳೆದ ಬುಧವಾರ ಬಿಡುಗಡೆಯಾದ ಸಂದೇಶದಲ್ಲಿ ಜಗದ್ಗುರುಗಳಿಗೆ ಸಂÀಬಂಧಿಸಿದ ಅಂತರ್ ಧರ್ಮೀಯ ಸಂವಾದದ ಪೊಂಟಿಫಿಕಲ್ ಸಮಿತಿಯಿಂದ (ಪಿಸಿಐಡಿ) ಅವರಿಗೆ ಆಹ್ವಾನ ನೀಡಲಾಗಿದೆ. ವಿಶ್ವದಾದ್ಯಂತ ಅನೇಕ ಬೌದ್ಧರು ಮೇ 26 ರಂದು ‘ವೆಸಖ್’ ಉತ್ಸವವನ್ನು ಆಚರಿಸುತ್ತಾರೆ. ಕೆಲವೊಮ್ಮೆ ಅನೌಪಚಾರಿಕವಾಗಿ ‘ಬುದ್ಧನ ಜನ್ಮ ದಿನ’ ಎಂದು ಕರೆಯಲಾಗುವ ಈ ‘ವೆಸಖ್’ ಉತ್ಸವ ವಾಸ್ತವವಾಗಿ ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ನಿಧನವನ್ನು ಸ್ಮರಿಸುವ ದಿನವಾಗಿದ್ದು, ಇದನ್ನು ವಿವಿಧ ದೇಶಗಳಲ್ಲಿ, ವಿವಿಧ ದಿನಗಳಲ್ಲಿ ಆಚರಿಸುತ್ತಾರೆ.

ಬೌದ್ಧರು ಮತ್ತು ಕ್ರೈಸ್ತರು “ಆರೈಕೆ ಮತ್ತು ಸೌಹಾರ್ದತಾ ಸಂಸ್ಕøತಿಯನ್ನು ಉತ್ತೇಜಿಸುವುದು’ ಎಂಬ ಶೀರ್ಷಿಕೆಯೊಂದಿಗೆ ಅಂತರ್ ಧರ್ಮೀಯ ಸಂವಾದದ ಪೊಂಟಿಫಿಕಲ್ ಸಮಿತಿ ಅಧ್ಯಕ್ಷ ಕಾರ್ಡಿನಾಲ್ ಮಿಗುಯೆಲ್ ಏಂಜಲ್ ಆಯುಸೋ ಗುಯಕ್ಸಾಟ್, ಎಂಸಿಸಿಜೆ ಹಾಗು ಕಾರ್ಯದರ್ಶಿ ಮೊನ್ಸಿಜ್ಞೊರ್ ಇಂದು ನಿಲ್ ಕೊಡತುವಾಕ್ಕೂ ಅವರ ಸಂದೇಶವು ವಿಶ್ವದಾದ್ಯಂತ ಇರುವ ಬೌದ್ಧರಿಗೆ ಸಂತೋಷ, ಸಮಾಧಾನ ಮತ್ತು ಆಶಯವನ್ನು ಹಾರೈಸುತ್ತದೆ.

ಸಾಂಕ್ರಾಮಿಕದ ನಡುವೆ ಜಾಗತಿಕ ಐಕ್ಯತೆ

“ಕೋವಿಡ್-19 ಸಾಂಕ್ರಮಿಕದಿಂದ ಗುರುತಿಸಲ್ಪಟ್ಟಿರುವುದು ಪ್ರಸ್ತುತ ವಿಶ್ವದ ದುರಂತ ಪರಿಸ್ಥಿತಿ. ಎಲ್ಲಾ ಧರ್ಮಗಳ ಅನುಯಾಯಿಗಳು ಮಾನವ ಸಮುದಾಯದ ಸೇವೆಯಲ್ಲಿ ಹೊಸ ರೀತಿಯಲ್ಲಿ ಸಹಕರಿಸುವಂತೆ ಸವಾಲು ಹಾಕಿದೆ” ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿ ಅವರು ತಮ್ಮ ಪ್ರೇಷಿತಪತ್ರ “ಫ್ರ್ರತೆಲ್ಲಿ ತುತ್ತಿ’ಯಲ್ಲಿ ಜಾಗತಿಕ ಐಕ್ಯತೆಯ ತುರ್ತು ಸ್ಥಿತಿಯನ್ನು ಪುನರುಚ್ಛರಿಸುತ್ತದೆ. ಮಾನವೀಯತೆಗೆ ಬೆದರಿಕೆ ಒಡ್ಡುವ ಕಷ್ಟಕರವಾದ ಬಿಕ್ಕಟ್ಟುಗಳನ್ನು ಒಟ್ಟಿಗೆ ಜಯಿಸಲು ಅನುವು ಮಾಡಿಕೊಡುತ್ತದೆ. ಏಕೆಂದರೆ, ‘ಯಾರೂ ಉಳಿಸಲ್ಪಟ್ಟವರಲ್ಲ.’

ಕಳೆದ ವರ್ಷ ಜರುಗಿದ ‘ವೆಸೆಖ್’ ಶುಭಾಶಯಗಳಲ್ಲಿ ಸಾಂಕ್ರಾಮಿಕ ರೋಗದಿಂದ ಉಂಟಾಗುವ ಕಠಿಣ ಸಮಯವನ್ನು ಪರಿಹರಿಸುವ ಸಹಯೋಗಕ್ಕಾಗಿ ಕರೆ ನೀಡುವ ಎರಡು ಧಾರ್ಮಿಕ ನಂಬಿಕೆಗಳ ಸಾಮಾನ್ಯ ಮೌಲ್ಯಗಳು ಮತ್ತು ಬುದ್ಧಿವಂತಿಕೆಯನ್ನು ಈ ಸಮಿತಿಯು ಒತ್ತಿ ಹೇಳಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗುವ ಯಾತನೆ ನಮ್ಮ ಹಂಚಿಕೆಯ ದುರ್ಬಲತೆ ಮತ್ತು ಪರಸ್ಪರ ಅವಲಂಬನೆಯ ಬಗ್ಗೆ ನಮಗೆ ಅರಿವು ಮೂಡಿಸಿದೆ” ಎಂದಿವೆ. “ನಮ್ಮ ಧಾರ್ಮಿಕ ಸಂಪ್ರದಾಯಗಳಲ್ಲಿ ಪ್ರತಿಪಾದಿಸಿರುÀವ ಐಕ್ಯತೆ ಕಂಡುಕೊಳ್ಳಲು ಮತ್ತು ಪಾಲಿಸಲು ನಾವು ಕರೆ ಹೊಂದಿದ್ದೇವೆ.”

ಇದು ಪೋಪ್ ಫ್ರಾನ್ಸಿಸ್ ಅವರ 2021ರ ವಿಶ್ವ ಶಾಂತಿ ದಿನದ ಸಂದೇಶವನ್ನು ನೆನಪಿಸುತ್ತದೆ. ಅಲ್ಲಿ ಅವರು “ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ ಮತ್ತು ನಮ್ಮ ಜೀವನ ಪ್ರಕೃತಿಯೊಂದಿಗಿನ ನಮ್ಮ ಸಂಬಂಧದ ಬಗ್ಗೆ ನಿಜವಾದ ಕಾಳಜಿ, ಭ್ರಾತೃತ್ವ, ನ್ಯಾಯ ಮತ್ತು ಇತರರ ಮೇಲಿರುವ ನಿಷ್ಠೆ”ಯನ್ನು ಬೇರ್ಪಡಿಸಲಾಗದು” ಎಂದು ಒತ್ತಿ ಹೇಳಿದೆ.

ಎಲ್ಲರಿಗೂ ಮಿತಿಯಿಲ್ಲದ ಪ್ರೀತಿ

‘ಒಗ್ಗಟ್ಟು ಮತ್ತು ಸಕ್ರಿಯ ಆರೈಕೆ’ ಕುರಿತು ಮಾತನಾಡುತ್ತ ಕಾರ್ಡಿನಾಲ್ ಆಯುಸೋ ಮತ್ತು ಮೊನ್ಸಿಜ್ಞೊರ್ “ಎಲ್ಲರಿಗೂ ಮಿತಿಯಿಲ್ಲದ ಪ್ರೀತಿ’ ಯನ್ನು ವಿಸ್ತರಿಸಲು ಬೌದ್ಧರಿಗೆ ಸೂಚಿಸುವ ‘ಮೆಟ್ಟಾ’ (ಪ್ರೀತಿ ಮತ್ತು ದಯೆ) ಯ ಬೌದ್ಧ ಬೋಧನೆಯನ್ನು ಇಂದುನಿಲ್ ನೆನಪಿಸಿಕೊಳ್ಳುತ್ತಾರೆ. ‘ಮೆಟ್ಟಾ ಸುಟ್ಟಾ’ ಪ್ರಕಾರ “ತಾಯಿಯು ತನ್ನ ಜೀವಿತಾವಧಿಯೊಂದಿಗೆ ತನ್ನ ಏಕೈಕ ಮಗುವನ್ನು ರಕ್ಷಿಸಿ ಕಾಪಾಡುತ್ತಾಳೆ. ಆದ್ದರಿಂದ ಎಲ್ಲರೂ ಎಲ್ಲಾ ಜೀವಿಗಳ ಬಗ್ಗೆ ಅಗಾಧ ಪ್ರೀತಿ-ಅನುಕಂಪವನ್ನು ಬೆಳೆಸಿಕೊಳ್ಳಲಿ”

ಬುದ್ಧನು ತನ್ನ ಅನುಯಾಯಿಗಳನ್ನು ‘ಶುಭ ಕಾರ್ಯಗಳನ್ನು ಮಾಡಲು ಪ್ರೇರೇಪಿಸು’ ಎಂದು ಒತ್ತಾಯಿಸಿದ. “ಒಬ್ಬರ ಮನಸ್ಸನ್ನು ಕೆಟ್ಟ ಕಾರ್ಯಗಳಿಂದ ತಡೆಯಬೇಕು; ಒಳ್ಳೆಯದನ್ನು ಮಾಡುವಲ್ಲಿ ಸಂಕುಚಿತÀವಾಗಿರುವ ವ್ಯಕ್ತಿಯ ಮನಸ್ಸು ಕೆಟ್ಟದ್ದನ್ನು ಮಾಡುವುದರಲ್ಲಿ ಸಂತೋಷ ಪಡುತ್ತದೆ’ ಎಂದು ಬುದ್ದ ಎಚ್ಚರಿಸುತ್ತಾನೆ.

ಒಟ್ಟಾಗಿ ಮಾನವ ಕುಲದ ಸೇವೆ

ಸಾಂಕ್ರಾಮಿಕ ಬಿಕ್ಕಟ್ಟನ್ನು ಮನಕುಲದ ಸೇವೆಯಲ್ಲಿ ಬೌದ್ಧರ ಮತ್ತು ಕ್ರೈಸ್ತರ ನಡುವಿನ ಸ್ನೇಹ ಸಂಬಂಧವನ್ನು ಬಲಪಡಿಸುತ್ತದೆ ಎಂದು ಪಿಸಿಐಡಿ ಹೇಳಿದೆ. ‘ಸಂವಾದ ಸಂಸ್ಕøತಿ ಮಾರ್ಗವಾಗಿ ಪರಸ್ಪರ ಸಹಕಾರವನ್ನು ನೀತಿ ಸಂಹಿತೆಯಾಗಿ ಅಳವಡಿಸಿಕೊಳ್ಳುವ ಮೂಲಕ ಅವರು ಇದನ್ನು ಮಾಡಬಹುದು. ‘ಫ್ರತೆಲ್ಲೊ ತುತ್ತಿ’ಯಲ್ಲಿ ಪೋಪರು ಒತ್ತಾಯಿಸಿರುವಂತೆ ವಿಧಾನ ಮತ್ತು ಮಾನದಂಡವಾಗಿ ಪರಸ್ಪರ ಅರ್ಥಮಾಡಿಕೊಳ್ಳುವುದು ಅಗತ್ಯ.

‘ರಂಜಾóನ್’ (ಇಸ್ಲಾಂ) ‘ವೆಸಖ್’ (ಬೌದ್ಧ ಧರ್ಮ) ‘ದೀಪಾವಳಿ (ಹಿಂದು ಧರ್ಮ) ‘ಗುರುನಾನಕ್ ಪ್ರಕಾಶ್ ದಿವಸ್’(ಸಿಖ್ ಧರ್ಮ) ಮತ್ತು ‘ಮಹಾವೀರ್ ಜನುವಾ ಕಲ್ಯಾಣಕ್ ದಿವಸ್’(ಜೈನ ಧರ್ಮ) ದಂತಹ ವಿವಿಧ ಧಾರ್ಮಿಕ ಸಂಪ್ರದಾಯಗಳ ಪ್ರಮುಖ ಹಬ್ಬಗಳಿಗೆ ಪಿಸಿಐಡಿ ಸಂದೇಶಗಳನ್ನು ನೀಡುತ್ತದೆ. ಯೆಹೂದ್ಯ ಧರ್ಮದೊಂದಿಗೆ ಕಥೋಲಿಕ ಧರ್ಮಸಭೆಯ ಸಂಬಂಧವನ್ನು ಕ್ರೈಸ್ತ ಐಕ್ಯತಾ ಪ್ರತಿಪಾದನೆಯ ಪೊಂಟಿಫಿಕಲ್ ಸಮಿತಿಯು ನಿರ್ವಹಿಸುತ್ತದೆ.

26 ಮೇ 2021, 12:39

ಕನ್ನಡಕ್ಕೆ: ಎಲ್. ಚಿನ್ನಪ್ಪ


34 views1 comment
bottom of page